ಇದು ಟೈಪ್ 2 ಡಯಾಬಿಟಿಸ್‌ನಿಂದ ಬಳಲುತ್ತಿರುವ ವಯಸ್ಕರಿಗೆ ಔಷಧಿಯಾಗಿದ್ದು, ಆಹಾರ ಮತ್ತು ವ್ಯಾಯಾಮದ ಜೊತೆಗೆ ರಕ್ತದಲ್ಲಿನ ಸಕ್ಕರೆಯನ್ನು ಸುಧಾರಿಸಬಹುದು.
ನವದೆಹಲಿ (ಆಗಸ್ಟ್ 3, 2023): ಭಾರತದಲ್ಲಿ ಡಯಾಬಿಟಿಸ್ ಹೊಂದಿರುವವರ ಸಂಖ್ಯೆ ತುಂಬಾ ಹೆಚ್ಚಿದೆ. ದೇಶದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಈ ರೋಗಿಗಳ ಸಂಖ್ಯೆ ತುಂಬಾ ಇದೆ. ಈ ಡಯಾಬಿಟಿಸ್‌ಗೆ ಯಾವ ಮಾತ್ರೆನಪ್ಪಾ ತಗೊಳ್ಳೋದು ಅಂತ ಹಲವರ ಚಿಂತೆ. ಅಲ್ಲದೆ, ಶುಗರ್ ಲೆವೆಲ್ ಹೆಚ್ಚಿದ್ದಾಗ ತೂಕ ಇಳಿಸಲೂ ಹಲವರು ಪ್ರಯಾಸ ಪಡ್ತಿರ್ತಾರೆ. ಆದರೆ, ಡಯಾಬಿಟಿಸ್‌ನ ಈ ಔಷಧಿ ತಗೊಂಡ್ರೆ ನೀವು ಶುಗರ್ ಲೆವೆಲ್ ಮಾತ್ರವಲ್ಲದೆ ನಿಮ್ಮ ತೂಕವನ್ನೂ ಇಳಿಸಿಕೊಳ್ಳಬಹುದು.
ಹೌದು, ಟಿವಿ ಪರ್ಸನಾಲಿಟಿ ಶರೋನ್ ಓಸ್ಬೋರ್ನ್ ತೂಕ ಇಳಿಸಿಕೊಳ್ಳಲು ಬಳಸುವ ಟೈಪ್ 2 ಡಯಾಬಿಟಿಸ್ ಔಷಧಿ ಓಝೆಂಪಿಕ್ (Ozempic) ಬಗ್ಗೆ ಮಾತನಾಡಿದ್ದಾರೆ. ಈ ಮಾತ್ರೆ ನಿಮ್ಮ ಹೊಟ್ಟೆಯನ್ನು ಕರಗಿಸುತ್ತದೆ ಮತ್ತು "ನಿಮ್ಮನ್ನು ಬದಲಾಯಿಸುತ್ತದೆ" ಎಂದು ಅವರು ಹೇಳಿದರು.
undefined
ಇದನ್ನು ಓದಿ: ಹೇಗಿದ್ರು ಹೇಗಾದ್ರು ಗೊತ್ತಾ.. 15 ಕೆಜಿ ತೂಕ ಕಳ್ಕೊಂಡ Zomato ಸಿಇಒ: ಫಿಟ್‌ನೆಸ್ ಗುಟ್ಟು ಬಿಟ್ಕೊಟ್ಟ ದೀಪಿಂದರ್ ಗೋಯಲ್
Ozempic ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಹೀಗಿದೆ ನೋಡಿ..
ಇದು ಟೈಪ್ 2 ಡಯಾಬಿಟಿಸ್‌ನಿಂದ ಬಳಲುತ್ತಿರುವ ವಯಸ್ಕರಿಗೆ ಔಷಧಿಯಾಗಿದ್ದು, ಆಹಾರ ಮತ್ತು ವ್ಯಾಯಾಮದ ಜೊತೆಗೆ ರಕ್ತದಲ್ಲಿನ ಸಕ್ಕರೆಯನ್ನು ಸುಧಾರಿಸಬಹುದು. Ozempic ತೂಕ ನಷ್ಟಕ್ಕೆ ಉದ್ದೇಶಿಸಿಲ್ಲವಾದರೂ, ಜನರು ಸ್ವಲ್ಪ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. Ozempic ವಾರಕ್ಕೊಮ್ಮೆ ತೆಗೆದುಕೊಳ್ಳುವ ಚುಚ್ಚುಮದ್ದಿನ ಔಷಧಿಯಾಗಿದೆ. ಆದರೆ ತಜ್ಞರು ಇದು ಪವಾಡ ಔಷಧವಲ್ಲ ಎಂದು ಹೇಳುತ್ತಾರೆ.
ಓಝೆಂಪಿಕ್ ಔಷಧದಲ್ಲಿ ಸೆಮಾಗ್ಲುಟೈಡ್ ಎಂಬ ಕಾಂಪೌಂಡ್ ಸಕ್ರಿಯವಾಗಿದ್ದು, ಗ್ಲುಕಗನ್ ತರಹದ ಪೆಪ್ಟೈಡ್-1 (GLP-1) ರಿಸೆಪ್ಟರ್ ಅಗೋನಿಸ್ಟ್ ಅನ್ನು ಹೊಂದಿದೆ ಎಂದು ಈ ಔಷಧದ ಬಗ್ಗೆ ವಿವರವಾದ ಲೇಖನದಲ್ಲಿ, ಫೋರ್ಬ್ಸ್ ವರದಿ ಮಾಡಿದೆ. ದೇಹದಾದ್ಯಂತ GLP-1 ಗ್ರಾಹಕಗಳನ್ನು ಸಕ್ರಿಯಗೊಳಿಸುವ ಮೂಲಕ ಮತ್ತು ನೈಸರ್ಗಿಕವಾಗಿ ಸಂಭವಿಸುವ ಹಾರ್ಮೋನ್ GLP-1 ನ ಪರಿಣಾಮಗಳನ್ನು ಹೆಚ್ಚಿಸುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಇನ್ನು, ಓಝೆಂಪಿಕ್ ಮೆದುಳಿನಲ್ಲಿನ ಹಸಿವಿನ ಕೇಂದ್ರಗಳ ಮೇಲೆ ಪರಿಣಾಮ ಬೀರುವ ಮೂಲಕ ಮತ್ತು ಹೊಟ್ಟೆ ಖಾಲಿಯಾಗುವುದನ್ನು ನಿಧಾನಗೊಳಿಸುವ ಮೂಲಕ ತೂಕದ ಮೇಲೆ ಪರಿಣಾಮ ಬೀರುತ್ತದೆ ಎಂದು ಗ್ಯಾಸ್ಟ್ರೋಎಂಟರಾಲಜಿಸ್ಟ್ ಕ್ರಿಸ್ಟೋಫರ್ ಮೆಕ್‌ಗೋವಾನ್ ಫೋರ್ಬ್ಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಹಾರ್ಟ್ ಇಮೋಜಿ ಕಳಿಸೋರೇ ಎಚ್ಚರ: ನಿಮಗೆ ಜೈಲು ಶಿಕ್ಷೆಯಾಗ್ಬೋದು!
ಅಲ್ಲದೆ, ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು 2017 ರಲ್ಲಿ ಮಧುಮೇಹ ಚಿಕಿತ್ಸೆಗಾಗಿ ಚುಚ್ಚುಮದ್ದಿನ ಔಷಧಿಗಳನ್ನು ಮೊದಲು ಅನುಮೋದಿಸಿತು. ನಂತರ, 2021 ರಲ್ಲಿ ಸ್ಥೂಲಕಾಯತೆಯ ಚಿಕಿತ್ಸೆಗಾಗಿ ಹೆಚ್ಚಿನ ಪ್ರಮಾಣದ Ozempic ಅನ್ನು ಹೊಂದಿರುವ ಔಷಧವನ್ನು ಅನುಮೋದಿಸಲಾಗಿದೆ. ಅಂದಿನಿಂದ, ಇದು ಪ್ರಪಂಚದಾದ್ಯಂತ ಜನಪ್ರಿಯವಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ (NYT) ವರದಿ ಮಾಡಿದೆ.
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರು ಫಿಟ್ ಆಗಿರಲು ಮತ್ತು ಆರೋಗ್ಯಕರವಾಗಿರುವ ಗುಟ್ಟಿನ ಬಗ್ಗೆ ಕೇಳಿದಾಗ ಅವರು ಅಕ್ಟೋಬರ್ 2022 ರಲ್ಲಿ ಪೋಸ್ಟ್ ಮಾಡಿದ ಟ್ವೀಟ್‌ನಲ್ಲಿ ಅವರು ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟವಾಗುವ ಓಝೆಂಪಿಕ್ - ಒಳಗೊಂಡಿರುವ ಔಷಧಿಯನ್ನು ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದರು. ನಟರು ಮತ್ತು ನಿರ್ಮಾಪಕರು ಸಹ ಈ ಔಷಧದ ಬಗ್ಗೆ ಹೊಗಳಿದ್ದಾರೆ ಎಂದು ವೆರೈಟಿ ಕೂಡ ಒಂದು ಲೇಖನದಲ್ಲಿ ಹೇಳಿದೆ.
ಇದನ್ನೂ ಓದಿ: ಹಸಿವು, ಬಳಲಿಕೆಯಿಂದ ಮೃತಪಟ್ಟ ವೀಗನ್ ಇನ್ಫ್ಲುಯೆನ್ಸರ್: ಕಚ್ಚಾ ಆಹಾರ ಮಾತ್ರ ಸೇವಿಸ್ತಿದ್ದ ಮಹಿಳೆ
ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಎಂಡೋಕ್ರೈನಾಲಜಿಸ್ಟ್ ಡಾ. ದಿಶಾ ನಾರಂಗ್ ಅವರು ಓಝೆಂಪಿಕ್ ಬಗ್ಗೆ ಆಸಕ್ತಿ ಹೆಚ್ಚಾದಂತೆ, ಜನರು ಈ ಔಷಧ ರೆಕಮೆಂಡ್ ಮಾಡುವ ವೈದ್ಯರನ್ನು ಹುಡುಕಲು ಪ್ರಾರಂಭಿಸಿದರು ಅಥವಾ ಆನ್‌ಲೈನ್‌ನಲ್ಲಿ ಔಷಧವನ್ನು ಹುಡುಕಲು ಪ್ರಾರಂಭಿಸಿದರು ಎಂದೂ ನ್ಯೂಯಾರ್ಕ್ ಟೈಮ್ಸ್‌ಗೆ ಹೇಳಿದ್ದಾರೆ.
ಇದನ್ನೂ ಓದಿ: ತೋಳ ಆಗೋದೇ ಈತನ ಬಾಲ್ಯದ ಕನಸು: 20 ಲಕ್ಷ ರೂ. ಖರ್ಚು ಮಾಡಿ ಹೇಗೆ ಕಾಣ್ತಾನೆ ನೋಡಿ..!