Health Tips : ನೀವೂ ಮಧ್ಯರಾತ್ರಿ ಎದ್ದು ಕದ್ದು ತಿಂತೀರಾ ? ತಪ್ಪು ಮಾಡುವ ಮುನ್ನ ಇದನ್ನೋದಿ

By Suvarna News  |  First Published Jun 13, 2022, 1:36 PM IST

ಮಧ್ಯರಾತ್ರಿ ಕದ್ದು ಮುಚ್ಚಿ ಅಡುಗೆ ಮನೆಗೆ ಹೋಗೋರನ್ನು ನೀವು ನೋಡಿರಬಹುದು. ಅವರು ಸಕ್ಕರೆ ಡಬ್ಬಕ್ಕೆ ಕೈ ಹಾಕೋದು ಹೆಚ್ಚು. ಇದಲ್ಲದೆ  ಚಿಪ್ಸ್ ತಿನ್ನೋರನ್ನು ನೀವು ನೋಡಿರ್ಬಹುದು. ಈ ಮಧ್ಯರಾತ್ರಿ ಯಾಕೆ ಹಸಿವಾಗುತ್ತೆ  ಎಂಬ ಅನೇಕರ ಪ್ರಶ್ನೆಗೆ ಉತ್ತರ ಇಲ್ಲಿದೆ. 
 


ರಾತ್ರಿ (Night) ಊಟ ಮಾಡಿರ್ತೇವೆ ನಿಜ, ಆದ್ರೆ ಮಧ್ಯ ರಾತ್ರಿ ಹಸಿವಾಗುತ್ತೆ. ಹೊಟ್ಟೆ (Stomach) ಹಸಿದಿದೆ ಎನ್ನುವ ಕಾರಣಕ್ಕೆ ಆಹಾರ ತಿನ್ನುತ್ತೇವೆ. ಮಧ್ಯರಾತ್ರಿ ಊಟ ಮಾಡಲು ಯಾರಿಗೂ ಇಷ್ಟವಿರುವುದಿಲ್ಲ. ಹೊಟ್ಟೆ ತುಂಬಲಿ ಎಂಬ ಕಾರಣಕ್ಕೆ ಅನಾರೋಗ್ಯಕ ಆಹಾರ ಸೇವನೆ ಮಾಡೋದು ಹೆಚ್ಚು. ಮಧ್ಯರಾತ್ರಿ ಎಚ್ಚರವಾದಾಗ ಬಹುತೇಕರು ಹೊಟ್ಟೆ ಹಸಿದ ಕಾರಣ ನಿದ್ರೆ ಬರ್ತಿಲ್ಲ ಎಂದೇ ಭಾವಿಸ್ತಾರೆ. ಹೊಟ್ಟೆ ತುಂಬಿದ್ರೆ ನಿದ್ರೆ ಬರಬಹುದು ಅಂದ್ಕೊಂಡೆ ಅಡುಗೆ ಮನೆಗೆ ಹೋಗ್ತಾರೆ. ನೀವೂ ಮಧ್ಯರಾತ್ರಿ ಆಹಾರ ಸೇವನೆ ಮಾಡ್ತಿದ್ದರೆ ಅದನ್ನು ಸಾಮಾನ್ಯವೆನ್ನುವಂತೆ ಭಾವಿಸ್ಬೇಡಿ. ಇದನ್ನು ನೈಟ್ ಈಟಿಂಗ್ ಸಿಂಡ್ರೋಮ (Night  Eting Syndrome) ಎಂದು ಕರೆಯಲಾಗುತ್ತದೆ.

ವರದಿಯೊಂದರ ಪ್ರಕಾರ, ನೈಟ್ ಈಟಿಂಗ್ ಸಿಂಡ್ರೋಮ ಒಂದು ರೀತಿ ಅಸ್ವಸ್ಥತೆ ಎನ್ನಬಹುದು. ಮಧ್ಯರಾತ್ರಿ ಜನರು ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡ್ತಾರೆ. ಇದ್ರಿಂದ ತೂಕ ಅಂತೂ ಹೆಚ್ಚಾಗೇ ಹೆಚ್ಚಾಗುತ್ತೆ. ಅದ್ರ ಜೊತೆ ಮಧುಮೇಹ, ಹೃದಯ ಸಂಬಂಧ ಸಮಸ್ಯೆ ನಿಮ್ಮನ್ನು ಕಾಡಲು ಶುರುವಾಗುತ್ತದೆ.  ಇಂದು ನಾವು ನೈಟ್ ಈಟಿಂಗ್ ಸಿಂಡ್ರೋಮದ ಬಗ್ಗೆ ಒಂದಿಷ್ಟು ಮಾಹಿತಿ ನೀಡ್ತೇವೆ.

Tap to resize

Latest Videos

ನೈಟ್ ಈಟಿಂಗ್ ಸಿಂಡ್ರೋಮದ ಲಕ್ಷಣಗಳು : 

ನೈಟ್ ಈಟಿಂಗ್ ಸಿಂಡ್ರೋಮ ಹೆಸರು ಹೇಳುವಂತೆ ಮಧ್ಯರಾತ್ರಿ ಆಹಾರ ಸೇವನೆ ಮಾಡೋದು. ಒಂದು ಬಾರಿಯಲ್ಲ ಪದೇ ಪದೇ ಎದ್ದು ಆಹಾರ ಸೇವನೆ ಮಾಡ್ತಿದ್ದರೆ ಅದನ್ನು ನೈಟ್ ಈಟಿಂಗ್ ಸಿಂಡ್ರೋಮದ ಲಕ್ಷಣ ಅಂತ ಆರಾಮವಾಗಿ ಹೇಳ್ಬಹುದು. ಈ ಮಧ್ಯರಾತ್ರಿ ಆಹಾರ ಸೇವನೆ ಬಯಕೆ ನಿಯಂತ್ರಣ ಕಷ್ಟ. ರಾತ್ರಿಯಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ಆಹಾರ ತಿನ್ನುವುದನ್ನು ನೀವು ಇದ್ರ ಲಕ್ಷಣ ಎನ್ನಬಹುದು. ಸಕ್ಕರೆ ಹೆಚ್ಚಿರುವ ಹಾಗೂ ಕಾರ್ಬೋಹೈಡ್ರೇಟ್ ನಿಂದ ಕೂಡಿರುವ ಆಹಾರ ತಿನ್ನಲು ಬಯಕೆಯಾಗುತ್ತದೆ.  ಮಧ್ಯರಾತ್ರಿ ಆಹಾರ ಸೇವನೆ ಮಾಡುವ ಜನರಿಗೆ ಹಗಲಿನಲ್ಲಿ ಆಹಾರ ಸೇವನೆ ಮಾಡಲು ಇಷ್ಟವಿರುವುದಿಲ್ಲ. ಹಸಿವಿನ ನಷ್ಟವನ್ನು ಅವರು ಅನುಭವಿಸುತ್ತಾರೆ.  

ಅನ್ನ ಬಿಟ್ಟು ಚಪಾತಿ ತಿನ್ತಿದ್ರೂ ಸಣ್ಣಗಾಗ್ತಿಲ್ವಾ ? ಹಿಟ್ಟನ್ನು ಹೀಗೆ ತಯಾರಿಸಿ, ಒಂದೇ ವಾರದಲ್ಲಿ ತೂಕ ಇಳಿಯುತ್ತೆ

ನೈಟ್ ಈಟಿಂಗ್ ಸಿಂಡ್ರೋಮ ಕಾರಣ : 

ಕೆಲಸ : ಅನೇಕರು ಕೆಲಸ ಹಾಗೂ ಬೇರೆ ಕಾರಣಕ್ಕೆ ತಡರಾತ್ರಿ ಆಹಾರ ಸೇವನೆ ಅಭ್ಯಾಸ ಮಾಡಿಕೊಳ್ತಾರೆ. ಆರಂಭದಲ್ಲಿ ಇದು ಏನೂ ಪರಿಣಾಮ ಬೀರುವುದಿಲ್ಲ. ಆದ್ರೆ ಒಮ್ಮೆ ಅಭ್ಯಾಸವಾದ್ರೆ ಬಿಡೋದು ಕಷ್ಟವಾಗುತ್ತದೆ. ಇದೇ ಆಹಾರ ಪದ್ಧತಿಗೆ ದೇಹ ಒಗ್ಗಿಕೊಳ್ಳುತ್ತದೆ. ಸಿರ್ಕಾಡಿಯಂ ರಿದಮ್‌ಗಳು ಹಗಲಿನ ಬದಲು ರಾತ್ರಿ ಹಸಿವಿನ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಕಾರಣವಾಗುತ್ತದೆ. ಸಿರ್ಕಾಡಿಯಂ ರಿದಮ್ ದೇಹದ ನೈಸರ್ಗಿಕ ಗಡಿಯಾರವಾಗಿದೆ. ಇದು ಹಸಿವು ಮತ್ತು ನಿದ್ರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಒತ್ತಡ : ಮಾನಸಿಕ ಆರೋಗ್ಯ ಸಮಸ್ಯೆಗಳಾದ ಒತ್ತಡ ಮತ್ತು ಖಿನ್ನತೆ ಸಹ   ನೈಟ್ ಈಟಿಂಗ್ ಸಿಂಡ್ರೋಮಕ್ಕೆ ಕಾರಣವಾಗುತ್ತದೆ. ಒತ್ತಡ, ಖಿನ್ನತೆಯಿಂದ ರಾತ್ರಿ ನಿದ್ರೆ ಬರುವುದಿಲ್ಲ. ಆಗ ಹಸಿವಾದ ಅನುಭವವಾಗುತ್ತದೆ.  

ಹಗಲಿನಲ್ಲಿ ಆಹಾರ ಸ್ಕಿಪ್ : ಅನೇಕರು ಬೆಳಿಗ್ಗೆ ಸರಿಯಾಗಿ ಆಹಾರ ಸೇವನೆ ಮಾಡೋದಿಲ್ಲ. ಹಗಲಿನಲ್ಲಿ ಹೊಟ್ಟೆ ತುಂಬುವಷ್ಟು ಆಹಾರ ಸೇವನೆ ಮಾಡಿದ್ರೆ ರಾತ್ರಿ ಹಸಿವಾಗುವುದಿಲ್ಲ. ಹಗಲಿನಲ್ಲಿ ಆಹಾರ ಸ್ಕಿಪ್ ಮಾಡಿದ್ರೆ ರಾತ್ರಿ ಹಸಿವಾಗುವುದು ಮಾಮೂಲಿ.   

ಕುಟುಂಬದ ಹಿನ್ನಲೆ : ಕುಟುಂಬದಲ್ಲಿ ಯಾರಿಗಾದ್ರೂ ಈಗಾಗಲೇ ನೈಟ್ ಈಟಿಂಗ್ ಸಿಂಡ್ರೋಮ ಇದ್ದರೆ ಅದು ನಿಮಗೂ ಬರುವ ಸಾಧ್ಯತೆಯಿದೆ ಎನ್ನುತ್ತಾರೆ ವೈದ್ಯರು.   

ವರ್ಕ್‌ಔಟ್ ಮಾಡಿಯಾದ ಮೇಲೆ ಅಪ್ಪಿತಪ್ಪಿಯೂ ಇಂಥಾ ತಪ್ಪು ಮಾಡ್ಲೇಬೇಡಿ

ನೈಟ್ ಈಟಿಂಗ್ ಸಿಂಡ್ರೋಮಕ್ಕೂ ಇದೆ ಚಿಕಿತ್ಸೆ : ರಾತ್ರಿ ಆಹಾರ ಸೇವನೆ ಮಾಡಿ ಸುಸ್ತಾಗಿದೆ. ತೂಕ ಒಂದ್ಕಡೆ ಹೆಚ್ಚಾಗ್ತಿದೆ ಎನ್ನುವವರು ಚಿಂತಿಸ್ಬೇಕಾಗಿಲ್ಲ. ಚಿಕಿತ್ಸೆಯ ಸಹಾಯದಿಂದ  ನೀವು ಈ ಸಮಸ್ಯೆಯಿಂದ ಹೊರಗೆ ಬರಬಹುದು. ಥೆರಪಿ ಮೂಲಕ ನೀವು, ರಾತ್ರಿ ಅಡುಗೆ ಮನೆಗೆ ಹೋಗುವ ನಿಮ್ಮ ವಿಚಾರವನ್ನು ಬದಲಿಸಬಹುದು. ಇದಲ್ಲದೆ, ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಉತ್ತಮ ನಿದ್ರೆಗಾಗಿ ನೀವು ವೈದ್ಯರನ್ನು ಭೇಟಿಯಾಗಿ ಸರಿಯಾದ ಔಷಧಿ ಸೇವನೆ ಮಾಡ್ಬಹುದು. ಬಹುತೇಕರು ಈ ರೋಗವನ್ನು ನಿರ್ಲಕ್ಷ್ಯ ಮಾಡ್ತಾರೆ. ಅದು ತಪ್ಪು. 
 

click me!