ಪಾರ್ಟಿ ಅಂದ ತಕ್ಷಣ ಮದ್ಯ ಬೇಕು. ಅದ್ರಲ್ಲೂ ಹೊಸ ವರ್ಷದ ಸಂಭ್ರಮದಲ್ಲಿ ವೀಕೆಂಡ್ ಪಾರ್ಟಿಯದ್ದೇ ಅಬ್ಬರ. ನೀವೂ ಕುಡಿದು ಎಂಜಾಯ್ ಮಾಡಿದ್ರೆ ಅದ್ರಿಂದ ಕಾಡುವ ಅನಾರೋಗ್ಯದ ಬಗ್ಗೆ ಗಮನಹರಿಸಿ.
ಹೊಸ ವರ್ಷ (New Year ) ದ ಮೊದಲ ವೀಕೆಂಡ್ (Weekend) ಮುಗಿಸಿದೆ. ಆದ್ರೂ ಜನರು ಹೊಸ ವರ್ಷಾಚರಣೆ ಸಂಭ್ರಮದಲ್ಲಿಯೇ ಇದ್ದಾರೆ. ವೀಕೆಂಡ್ ನಲ್ಲಿ ಪಾರ್ಟಿಗಳು ಜೋರಾಗಿ ನಡೆದಿವೆ. ಜನರು ಮೈಂಡ್ ಫ್ರೆಶ್ ಮಾಡ್ಕೊಳ್ಳಲು, ರಿಲ್ಯಾಕ್ಸ್ ಆಗಲು ವೀಕೆಂಡ್ ಪಾರ್ಟಿಗಳನ್ನು ಮಾಡ್ತಾರೆ. ಈ ಪಾರ್ಟಿ ಮುಗಿದ ಮರುದಿನ ಖುಷಿಯಾಗಿ ಕೆಲಸ ಮಾಡ್ಬಹುದು ಎಂಬ ನಂಬಿಕೆ ಅವರದ್ದು. ಆದ್ರೆ ಇದು ಸಂಪೂರ್ಣ ಸತ್ಯವಲ್ಲ. ನೀವು ಮದ್ಯಪಾನ, ಕೋಲ್ಡ್ ಡ್ರಿಂಕ್ಸ್, ಫಾಸ್ಟ್ ಫುಡ್ ಗಳನ್ನು ಪಾರ್ಟಿ ಸಮಯದಲ್ಲಿ ತಿನ್ನೋದ್ರಿಂದ ನಿಮ್ಮ ಆರೋಗ್ಯ ಹದಗೆಡುತ್ತದೆ. ಬಹುತೇಕರು ವೀಕೆಂಡ್ ಹಾರ್ಟ್ ಸಿಂಡ್ರೋಮಾದಿಂದ ಬಳಲುವ ಸಾಧ್ಯತೆ ಇರುತ್ತದೆ. ನಾವಿಂದು ಹಾಲಿಡೇ ಹಾರ್ಟ್ ಸಿಂಡ್ರೋಮಾ (Holiday Heart Syndrome) ಅಂದ್ರೇನು ಎಂಬ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಹಾಲಿಡೇ ಹಾರ್ಟ್ ಸಿಂಡ್ರೋಮಾ ಅಂದ್ರೇನು? : ಹಾಲಿಡೇ ಹಾರ್ಟ್ ಸಿಂಡ್ರೋಮ್ ಸಾಮಾನ್ಯವಾಗಿ ದೀರ್ಘ ವಾರಾಂತ್ಯದ ನಂತರ ಕಂಡುಬರುತ್ತವೆ. ಹೆಸರೇ ಸೂಚಿಸುವಂತೆ, ರಜಾದಿನಗಳಲ್ಲಿ ಹಾರ್ಟ್ ಸಿಂಡ್ರೋಮದ ಹೆಚ್ಚು ಅಪಾಯವಿದೆ. ಈ ರೋಗಲಕ್ಷಣ ಹೊಸ ವರ್ಷದ ಸಮಯದಲ್ಲಿ ಸಾಮಾನ್ಯವಾಗಿದೆ. ಇದು ಒಂದು ರೀತಿಯ ಹೃದ್ರೋಗ. ಅತಿಯಾದ ಮದ್ಯಪಾನದಿಂದ ಉಂಟಾಗುತ್ತದೆ. ಇದರಲ್ಲಿ ಹೃದಯ ಬಡಿತ ಅನಿಯಮಿತವಾಗುತ್ತದೆ. ಅಲ್ಲದೆ ವ್ಯಕ್ತಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾನೆ. ಮೈ ಕೊರೆಯುವ ಈ ಚಳಿಗಾಲದಲ್ಲಿ ಅತಿಯಾದ ಆಲ್ಕೊಹಾಲ್ ಸೇವನೆಯಿಂದ ಹಾಲಿಡೇ ಹಾರ್ಟ್ ಸಿಂಡ್ರೋಮ್ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.
2025 ಬಂತು, ಕೋಟಿ ಕೋಟಿ ಎಣ್ಣೆಹೊಳೆ ಹರಿಸಿತು: ಮದ್ಯದ ನಶೆಯಲ್ಲಿ ತೇಲಾಡಿದ ಪಾನಪ್ರಿಯರು!
50 ವರ್ಷಗಳ ಹಿಂದೆಯೇ ಅಮೆರಿಕಾದಲ್ಲಿ ಈ ಹಾಲಿಡೇ ಹಾರ್ಟ್ ಸಿಂಡ್ರೋಮವನ್ನು ಪತ್ತೆ ಮಾಡಲಾಗಿತ್ತು. ವೀಕೆಂಡ್ ಸಮಯದಲ್ಲಿ ಹೆಚ್ಚಿದ ಆಲ್ಕೋಹಾಲ್ ಸೇವನೆ ಮಾಡಿದಾಗ, ಹೃದಯದೊಳಗೆ ಕ್ಯಾಲ್ಸಿಯಂ ನಿರ್ವಹಣೆಗೆ ತೊಂದರೆಯಾಗುತ್ತದೆ. ಪ್ರತಿ ಹೃದಯ ಬಡಿತದೊಂದಿಗೆ ಕ್ಯಾಲ್ಸಿಯಂ ಹೃದಯವನ್ನು ಪ್ರವೇಶಿಸುತ್ತದೆ. ಇದ್ರಿಂದ ಹೃದಯ ಬಡಿತ ಹೆಚ್ಚಾಗುತ್ತದೆ. ಆಲ್ಕೊಹಾಲ್ ಎಲೆಕ್ಟ್ರೋಲೈಟ್ ಅಡಚಣೆಯುಂಟು ಮಾಡುತ್ತದೆ. ಸ್ವನಿಯಂತ್ರಿತ ನರಮಂಡಲದಲ್ಲಿ ಬದಲಾವಣೆಯಾಗುತ್ತದೆ.
ಹಾಲಿಡೇ ಹಾರ್ಟ್ ಸಿಂಡ್ರೋಮಾ ಲಕ್ಷಣಗಳು : ಹಾಲಿಡೇ ಹಾರ್ಟ್ ಸಿಂಡ್ರೋಮದಿಂದ ಬಳಲುವ ಜನರ ಹೃದಯ ಬಡಿತ ಅನಿಯಮಿತವಾಗುತ್ತದೆ. ಅತಿ ವೇಗದಲ್ಲಿ ನಿಮ್ಮ ಹೃದಯ ಬಡಿದುಕೊಳ್ಳಲು ಶುರು ಮಾಡುತ್ತದೆ. ಕೆಲವರು ತಲೆತಿರುಗುವಿಕೆ ಸಮಸ್ಯೆಯಿಂದ ಬಳಲುತ್ತಾರೆ. ರಜೆಯಲ್ಲಿ ಮೋಜು – ಮಸ್ತಿ ಮಾಡಿದ್ದ ಜನರಿಗೆ ಮರುದಿನ ಚಿಂತೆ ಕಾಡಲು ಶುರುವಾಗುತ್ತದೆ. ಈ ಸಿಂಡ್ರೋಮದಿಂದ ಬಳಲುವ ಜನರು ಉಸಿರಾಡಲು ಕಷ್ಟಪಡುತ್ತಾರೆ. ಎದೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಲಕ್ಷಣಗಳು ಕಾಣಿಸಿಕೊಳ್ತಿದ್ದಂತೆ ವೈದ್ಯರನ್ನು ಭೇಟಿಯಾಗುವುದು ಮುಖ್ಯ. ಸೂಕ್ತ ಪರೀಕ್ಷೆ ಮೂಲಕ ವೈದ್ಯರು ಚಿಕಿತ್ಸೆ ಶುರು ಮಾಡ್ತಾರೆ.
ಹೊಸ ವರ್ಷ ಎಣ್ಣೆ ಮತ್ತಿನಲ್ಲಿ ವಿದ್ಯುತ್ ಕಂಬ ಹತ್ತಿ ಗಡದ್ ನಿದ್ದೆ, ಈತ ಬದುಕುಳಿದಿದ್ದೆ ಪವಾಡ
ಹಾಲಿಡೇ ಹಾರ್ಟ್ ಸಿಂಡ್ರೋಮದಿಂದ ರಕ್ಷಣೆ ಹೇಗೆ? : ವೀಕೆಂಡ್ ಪಾರ್ಟಿ ಇರಲಿ ಇಲ್ಲ ವೀಕ್ ಮಧ್ಯೆ ಇರಲಿ, ಪಾರ್ಟಿ ಸಮಯದಲ್ಲಿ ಅತಿಯಾದ ಮದ್ಯಪಾನವನ್ನು ತಪ್ಪಿಸಬೇಕು. ಮಹಿಳೆಯರು ದಿನದಲ್ಲಿ ಒಂದು ಪೆಗ್ ಹಾಗೂ ಪುರುಷರು ಎರಡು ಪೆಗ್ ಮಾತ್ರ ಸೇವನೆ ಮಾಡ್ಬೇಕು. ಅದಕ್ಕಿಂತ ಹೆಚ್ಚು ಆಲ್ಕೋಹಾಲ್ ಸೇವನೆ ನಿಮ್ಮ ಜೀವಕ್ಕೆ ಅಪಾಯವುಂಟು ಮಾಡುವ ಸಾಧ್ಯತೆ ಇರುತ್ತದೆ. ಪಾರ್ಟಿ ನೆಪದಲ್ಲಿ ಕೊಬ್ಬು, ಸಿಹಿ ಮತ್ತು ಉಪ್ಪು ಆಹಾರಗಳನ್ನು ಮಿತಿಯಾಗಿ ಸೇವನೆ ಮಾಡಬಾರದು. ಮದ್ಯದ ಜೊತೆ ಆಹಾರ ಸೇವನೆಗೂ ಕಠಿವಾಣ ಹಾಕುವುದು ಮುಖ್ಯ. ಆಗಾಗ ನೀರು ಕುಡಿಯುತ್ತ ನಿಮ್ಮ ದೇಹವನ್ನು ಹೈಡ್ರೇಟೆಡ್ ಮಾಡಿಕೊಳ್ಳಬೇಕು. ರಜೆಯಲ್ಲಿ ಮಜಾ ಮಾಡುವುದು ಮಾತ್ರ ಮುಖ್ಯವಲ್ಲ. ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ಮುಖ್ಯ. ಹಾಗಾಗಿ ರಜಾ ದಿನಗಳಲ್ಲೂ ನೀವು ನಿಯಮಿತವಾಗಿ ವ್ಯಾಯಾಮ ಮಾಡಲು ಮರೆಯಬೇಡಿ.