
ದೇಹದಲ್ಲಿ ಕೊಬ್ಬು( Cholesterol)ಹೆಚ್ಚಾಗಲು ನಮ್ಮ ಜೀವನಶೈಲಿಯೇ ಪ್ರಮುಖ ಕಾರಣವಾಗಿದೆ. ದೇಹದಲ್ಲಿ ಇರುವ ಕೆಲವೊಂದು ಅಂಶಗಳು ನಮ್ಮ ಆರೋಗ್ಯಕ್ಕೆ ಅಗತ್ಯವಾಗಿರುವುದು. ಆದರೆ ಇದರಿಂದ ಅನಾರೋಗ್ಯಗಳು ಕೂಡ ಬರಬಹುದು. ದೇಹದಲ್ಲಿನ ಹೆಚ್ಚಿನ ಕೊಲೆಸ್ಟ್ರಾಲ್ ಹೃದಯರಕ್ತನಾಳದ ಕಾಯಿಲೆ, ಪರಿಧಮನಿಯ ಕಾಯಿಲೆ (Disease) ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಅಧಿಕ ಕೊಲೆಸ್ಟ್ರಾಲ್ ರೋಗಲಕ್ಷಣಗಳ ಕೊರತೆಯನ್ನು ಹೊಂದಿದೆ, ಈ ಕಾರಣದಿಂದಾಗಿ ಇದನ್ನು ಹೆಚ್ಚಾಗಿ ಮೂಕ ಕೊಲೆಗಾರ ಎಂದು ಕರೆಯಲಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಗುರುತಿಸಲು ರಕ್ತ ಪರೀಕ್ಷೆ (Blood test) ಅಗತ್ಯವಿದೆ.
ಕೊಲೆಸ್ಟ್ರಾಲ್ಗಳು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು, ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುವುದು. ಅಧಿಕ ಕೊಲೆಸ್ಟ್ರಾಲ್ ಮತ್ತು ಅಪಧಮನಿ ಸಮಸ್ಯೆಯ ಅಪಾಯವು ಒಂದಕ್ಕೊಂದು ಸಂಬಂಧಿಸಿದ್ದಾಗಿದೆ. ಹೀಗಿದ್ದೂ ಜನರು ಸಾಮಾನ್ಯವಾಗಿ ಅಧಿಕ ತೂಕ ಅಥವಾ ದೇಹದ ಕೊಬ್ಬನ್ನು ಅಧಿಕ ಕೊಲೆಸ್ಟ್ರಾಲ್‌ನ ಸೂಚಕಗಳಾಗಿ ಕಾಣುತ್ತಾರೆ. ಆದರೆ ನಿಮ್ಮ ಕಾಲು ಮತ್ತು ದೇಹದ ಇತರ ಭಾಗಗಳಲ್ಲಿ ಕಾಣಿಸಿಕೊಳ್ಳಬಹುದಾದ ಕೆಲವು ಎಚ್ಚರಿಕೆ ಚಿಹ್ನೆಗಳು ಇವೆ. ಅವುಗಳು ಯಾವುವು ಎಂದು ತಿಳಿದುಕೊಳ್ಳೋಣ.
Kitchen Tips: ಅಡುಗೆಗೆ ಆವಕಾಡೊ ಎಣ್ಣೆ ಬಳಸಿ, ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ
ಕಾಲಿನಲ್ಲಿ ಕೆಲವೊಂದು ಲಕ್ಷಣಗಳು ಕಂಡು ಬಂದರೆ ಇದು ಕೊಲೆಸ್ಟ್ರಾಲ್ ಇರುವುದನ್ನು ಸೂಚಿಸುತ್ತದೆ. ಈ ರೀತಿಯ ಲಕ್ಷಣಗಳು ಕಂಡುಬಂದರೆ ಅಪ್ಪಿತಪ್ಪಿಯೂ ಕೂಡ ನಿರ್ಲಕ್ಷಿಸಬೇಡಿ. ಅಂಥಾ ರೋಗಲಕ್ಷಣಗಳು ಯಾವುದೆಂದು ತಿಳಿಯೋಣ.
ಪಾದಗಳು ತಂಪಾಗುವುದು: ಪಾದಗಳು ತಂಪಾಗುವುದು ಅಧಿಕ ಕೊಲೆಸ್ಟ್ರಾಲ್ ಲಕ್ಷಣವಾಗಿದೆ. ಚಳಿಗಾಲದಲ್ಲಿ ಪಾದಗಳು ತಂಪಾಗುವುದು ಸರ್ವೇಸಾಮಾನ್ಯ, ಆದರೆ ಸುಡುವ ಬೇಸಿಗೆ ಕಾಲದಲ್ಲಿಯೂ ಕೂಡ ಇದು ಸಂಭವಿಸುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ಏಕೆಂದರೆ ಇದು ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್‌ನ ಸಂಕೇತವಾಗಿರಬಹುದು. ಇಂತಹ ಸಂದರ್ಭಗಳಲ್ಲಿ, ತಕ್ಷಣ ತಪಾಸಣೆಗೆ ಒಳಪಡಬೇಕು.
ಕಾಲಿನ ಸೆಳೆತ: ರಾತ್ರಿ ಮಲಗುವಾಗ ಹಲವು ರೀತಿಯಲ್ಲಿ ಕಾಲು ನೋವು ಇರುವ ಸಾಧ್ಯತೆ ಇರುತ್ತದೆ, ಇದು ಅಧಿಕ ಕೊಲೆಸ್ಟ್ರಾಲ್‌ನ ಒಂದು ಸಾಮಾನ್ಯ ಲಕ್ಷಣವಾಗಿದೆ. ಅಂದರೆ ನಿಮ್ಮ ದೇಹದ ಕೆಳಭಾಗದಲ್ಲಿರುವ ನರಗಳು ಹಾನಿಗೊಳಗಾಗುತ್ತಿವೆ ಎಂಬುದು ಇದರರ್ಥ. ಪಾದದ ಹೊರತಾಗಿ, ತೋರುಬೆರಳು, ಹಿಮ್ಮಡಿ ಅಥವಾ ಕಾಲ್ಬೆರಳುಗಳಲ್ಲಿಯೂ ಸೆಳೆತವಿದ್ದರೆ, ಅದು ನಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ.
Coriander Benefits: ಚಳಿಗಾಲದಲ್ಲಿ ಕೊತ್ತಂಬರಿ ಸೊಪ್ಪಿನಿಂದ ಆರೋಗ್ಯ ಲಾಭ ಹೆಚ್ಚು..
ಪಾದದ ಚರ್ಮದ ಬಣ್ಣ ಬದಲಾವಣೆ: ದೇಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ಕಾರಣ, ಪಾದಗಳ ರಕ್ತ ಪೂರೈಕೆಯ ಮೇಲೆ ಪರಿಣಾಮವೂ ಉಂಟಾಗುತ್ತದೆ, ಈ ಪರಿಣಾಮವನ್ನು ನೀವು ಪಾದಗಳ ಮೇಲೆ ಸ್ಪಷ್ಟವಾಗಿ ಕಾಣಬಹುದು. ರಕ್ತದ ಕೊರತೆಯಿಂದಾಗಿ, ರಕ್ತದ ಮೂಲಕ ತಲುಪುವ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆಯಲ್ಲಿ ಅಡಚಣೆ ಉಂಟಾಗುವುದರಿಂದ ಚರ್ಮದ ಮತ್ತು ಕಾಲುಗಳ ಉಗುರುಗಳ ಬಣ್ಣವು ಬದಲಾಗಲಾರಂಭಿಸುತ್ತದೆ.
ವಾಸಿಯಾಗದ ಹುಣ್ಣುಗಳು: ಕೆಲವರಲ್ಲಿ ಕೊಲೆಸ್ಟ್ರಾಲ್ ಗುಣವಾಗದ ಪಾದದ ಹುಣ್ಣುಗಳಿಗೆ ಕಾರಣವಾಗಬಹುದು. ರಕ್ತಕೊರತೆಯ ಹುಣ್ಣುಗಳು ಎಂದು ಕರೆಯಲ್ಪಡುವ ಇವುಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡಬೇಕು ಎಂದು ವೈದ್ಯಗಳು ತಿಳಿಸುತ್ತಾರೆ. ಹುಣ್ಣುಗಳು ಕಂದು ಅಥವಾ ಕಪ್ಪು ಆಗಿರಬಹುದು, ಮತ್ತು ಅವು ಸಾಮಾನ್ಯವಾಗಿ ನೋವಿನಿಂದ ಕೂಡಿರುತ್ತವೆ. ಮಧುಮೇಹದ ಪಾದದ ಹುಣ್ಣುಗಳಿಗೆ ವಿರುದ್ಧವಾಗಿ, ಇದು ಮಧುಮೇಹ-ಸಂಬಂಧಿತ ನರ ಹಾನಿಯಿಂದಾಗಿ ನೋವುರಹಿತವಾಗಿರುತ್ತದೆ.
ಮರಗಟ್ಟುವಿಕೆ ಅಥವಾ ದೌರ್ಬಲ್ಯ: ನೀವು ವಿಶ್ರಾಂತಿ ಪಡೆಯುತ್ತಿರುವಾಗ ನಿಮ್ಮ ಕಾಲುಗಳು ಅಥವಾ ಪಾದಗಳು ಮರಗಟ್ಟುವಿಕೆ ಅಥವಾ ದೌರ್ಬಲ್ಯವನ್ನು ಅನುಭವಿಸಿದರೆ, ಅದು ಕೊಲೆಸ್ಟ್ರಾಲ್‌ನ ಸಂಕೇತವಾಗಿರಬಹುದು. ಕೆಲವು ರೋಗಿಗಳು ತಮ್ಮ ಕಾಲುಗಳು ದುರ್ಬಲಗೊಳ್ಳುವ, ಪಾದಗಳಲ್ಲಿ ಮರಗಟ್ಟುವಿಕೆಯ ಸಂವೇದನೆಯನ್ನು ಅನುಭವಿಸುತ್ತಾರೆ. ವಾಕಿಂಗ್ ಅಥವಾ ವ್ಯಾಯಾಮ ಮಾಡುವಾಗ ಮಾತ್ರವಲ್ಲದೆ ವಿಶ್ರಾಂತಿಯ ಸಂದರ್ಭದಲ್ಲೂ ಹೀಗಾದಾಗ ಎಚ್ಚರಿಕೆ ವಹಿಸಬೇಕಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.