Weight Loss: ಒಂದು ತಿಂಗಳು ಸಕ್ಕರೆ ತಿನ್ನೋದು ಬಿಟ್ರೆ ಎಷ್ಟು ಕೆಜಿ ತೂಕ ಇಳಿಸಬಹುದು?

Published : May 29, 2026, 11:21 AM IST
Weight Loss How Many Kilos Can You Lose by Quitting Sugar for One Month

ಸಾರಾಂಶ

ಪಾನೀಯ ಮತ್ತು ಸಂಸ್ಕರಿಸಿದ ಆಹಾರಗಳಲ್ಲಿ ಸೇರಿಸುವ ಸಕ್ಕರೆಯಿಂದ ಹೊಟ್ಟೆ ತುಂಬಿದ ಅನುಭವ ಆಗುವುದಿಲ್ಲ, ಆದರೆ ಕ್ಯಾಲೋರಿ ಸೇವನೆ ಮಾತ್ರ ಹೆಚ್ಚುತ್ತೆ.. ಸಕ್ಕರೆ ಅತಿಯಾಗಿ ತಿಂದರೆ, ತೂಕ ಹೆಚ್ಚಳ, ಹೊಟ್ಟೆ ಭಾಗದಲ್ಲಿ ಕೊಬ್ಬು, ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆ ಮತ್ತು ಟೈಪ್ 2 ಡಯಾಬಿಟಿಸ್ ಬರುವ ಅಪಾಯ ಹೆಚ್ಚು

ಸಕ್ಕರೆಯನ್ನು ವೈಟ್ ಪಾಯ್ಸನ್(White Poison) ಎಂದೂ ಕರೆಯುತ್ತಾರೆ. ಅಂದರೆ 'ಬಿಳಿ ವಿಷ' ಇದ್ದಂತೆ. ನಮ್ಮ ದೈನಂದಿನ ಜೀವನದಲ್ಲಿ ಸಕ್ಕರೆಯನ್ನು ಸಂಪೂರ್ಣವಾಗಿ ಬಿಡುವುದು ಅಸಾಧ್ಯವಾದರೂ, ಅದರ ಅತಿಯಾದ ಸೇವನೆಯನ್ನು ಕಡಿಮೆ ಮಾಡುವುದರಿಂದ ತೂಕ ಇಳಿಸಬಹುದು ಮತ್ತು ಆರೋಗ್ಯವನ್ನು ಸುಧಾರಿಸಬಹುದು ಎಂದು ವೈದ್ಯರು ಹೇಳುತ್ತಾರೆ. ವಿಶೇಷವಾಗಿ, ಸಕ್ಕರೆ ಬೆರೆಸಿದ ಪಾನೀಯಗಳು, ಸಿಹಿತಿಂಡಿಗಳು, ಪ್ಯಾಕ್ ಮಾಡಿದ ಸ್ನ್ಯಾಕ್ಸ್ ಮತ್ತು ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳನ್ನು ನಿಯಮಿತವಾಗಿ ಸೇವಿಸುವವರಿಗೆ ಇದು ಹೆಚ್ಚು ಮುಖ್ಯ.

ಪಾನೀಯಗಳು ಮತ್ತು ಸಂಸ್ಕರಿಸಿದ ಆಹಾರಗಳಲ್ಲಿ ಸೇರಿಸುವ ಸಕ್ಕರೆಯಿಂದ ಹೊಟ್ಟೆ ತುಂಬಿದ ಹಾಗೆ ಅನಿಸುವುದಿಲ್ಲ, ಆದರೆ ಕ್ಯಾಲೋರಿ ಮಾತ್ರ ಹೆಚ್ಚಾಗುತ್ತಾ ಹೋಗುತ್ತದೆ. ಹೀಗೆ ಹೆಚ್ಚು ಸಕ್ಕರೆ ತಿಂದರೆ, ದೇಹದ ತೂಕ ಹೆಚ್ಚಾಗುತ್ತದೆ, ಹೊಟ್ಟೆಯ ಭಾಗದಲ್ಲಿ ಕೊಬ್ಬು ಬೆಳೆಯುತ್ತದೆ, ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆಯಾಗುತ್ತದೆ ಮತ್ತು ಟೈಪ್ 2 ಡಯಾಬಿಟಿಸ್ ಬರುವ ಅಪಾಯವೂ ಹೆಚ್ಚಾಗುತ್ತದೆ.

ದ್ರವರೂಪದಲ್ಲಿರುವ ಕ್ಯಾಲೋರಿಗಳಿಂದ ಹೊಟ್ಟೆ ತುಂಬಿದ ಅನುಭವ ಆಗುವುದು ಕಡಿಮೆ. ಅದಕ್ಕಾಗಿಯೇ, ಸಕ್ಕರೆ ಬೆರೆಸಿದ ಪಾನೀಯಗಳಿಂದ ದೇಹಕ್ಕೆ ಹೆಚ್ಚು ಕ್ಯಾಲೋರಿ ಸೇರುತ್ತದೆ. ಸಾಫ್ಟ್ ಡ್ರಿಂಕ್ಸ್, ಸಿಹಿತಿಂಡಿಗಳು, ಪ್ಯಾಕ್ ಮಾಡಿದ ಜ್ಯೂಸ್‌ಗಳು, ಕಾಫಿ, ಟೀ ಮತ್ತು ಡೆಸರ್ಟ್‌ಗಳನ್ನು ಸೇವಿಸುವುದರಿಂದ ಕ್ಯಾಲೋರಿ ಸೇವನೆ ಹೆಚ್ಚಾಗುತ್ತದೆ.

ಒಂದು ತಿಂಗಳ ಕಾಲ ಸಕ್ಕರೆ ತಿನ್ನುವುದನ್ನು ಬಿಟ್ಟರೆ, ನಿಮ್ಮ ದೇಹ ಮತ್ತು ಮನಸ್ಸಿನಲ್ಲಿ ದೊಡ್ಡ ಬದಲಾವಣೆಗಳಾಗುತ್ತವೆ. ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ. 30 ದಿನಗಳಲ್ಲಿ ನಿಮ್ಮ ಚರ್ಮ ಸುಧಾರಿಸುತ್ತದೆ, ತೂಕ ಇಳಿಯುತ್ತದೆ ಮತ್ತು ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ.

ಒಂದು ತಿಂಗಳು ಸಕ್ಕರೆ ಕಡಿಮೆ ಮಾಡಿದರೆ, ಎರಡೂವರೆಯಿಂದ ಮೂರು ಕೆಜಿವರೆಗೂ ತೂಕ ಇಳಿಸಬಹುದು. ನೀವು ಎಷ್ಟು ತೂಕ ಇಳಿಸುತ್ತೀರಿ ಎಂಬುದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಅವಲಂಬಿಸಿರುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Medicine Care: ಔಷಧಿ ತೆಗೆದುಕೊಳ್ಳುವಾಗ ಈ 3 ತಪ್ಪು ಮಾಡಲೇಬೇಡಿ, ಪ್ರಾಣಕ್ಕೇ ಕುತ್ತು ತರಬಹುದು: ಎಚ್ಚರ!
ಇನ್ನು ಬಿಳಿ ಗಡ್ಡದ ಚಿಂತೆ ಬಿಡಿ.. ಹೆಚ್ಚು ಹಣ ಖರ್ಚು ಮಾಡದೇ 'ಹೀಗೆ ಮಾಡಿ' ಲೈಫ್ ಎಂಜಾಯ್ ಮಾಡಿ!