ಚಳಿಗಾಲದಲ್ಲಿ ಬೆಚ್ಚಗಿರಲು ಸಾಕ್ಸ್ ಧರಿಸಿ ಮಲಗಿದ್ರೆ ಆರೋಗ್ಯಕ್ಕೆ ಅಪಾಯ! ಇದು ನಿಜಾನ?

By Pavna Das  |  First Published Dec 23, 2024, 2:20 PM IST

ಚಳಿಗಾಲ ಆಗಿರೋದ್ರಿಂದ ಸಾಕ್ಸ್ ಧರಿಸಿ, ಮಕ್ಕಳು ಮತ್ತು ವಯಸ್ಕರು ಮಲಗುತ್ತಾರೆ. ಆದರೆ ಹಾಗೆ ಮಾಡುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಹಾನಿಯಾಗಬಹುದು ಎನ್ನುವ ವಿಡೀಯೋ ವೈರಲ್ ಆಗ್ತಿದೆ. ನಿಜವಾಗಿಯೂ ಸಾಕ್ಸ್ ಧರಿಸಿ ಮಲಗೋದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ? ನೋಡೋಣ. 
 


ಚಳಿಗಾಲ ಬಂದಾಗ, ದೇಹವು ತಂಪಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸ್ವೆಟರ್ ಜೊತೆಗೆ ಪಾದಗಳಿಗೆ ಸಾಕ್ಸ್ ಧರಿಸುವುದು (socks on foot) ಅವಶ್ಯಕ. ಮತ್ತು ಎಚ್ಚರವಾಗಿರುವಾಗ ಮಾತ್ರವಲ್ಲದೆ ಮಲಗುವಾಗಲೂ ಪಾದಗಳನ್ನು ಬೆಚ್ಚಗಾಗಿಸಲು ಸಾಕ್ಸ್ ಧರಿಸುವುದು ಸಾಮಾನ್ಯವಾಗಿದೆ. ಆದರೆ ಯೂಟ್ಯೂಬ್ ವೀಡಿಯೊವೊಂದರಲ್ಲಿ ಸಾಕ್ಸ್ ಧರಿಸಿ ಮಲಗೋದು ಆರೋಗ್ಯಕ್ಕೆ ಅಪಾಯಕಾರಿ ಎಂದಿದೆ. ಆದರೆ ಇದೆಷ್ಟು ನಿಜ ಅನ್ನೋದನ್ನು ನೋಡೋಣ. ಫ್ಯಾಕ್ಟ್ ಚೆಕ್ ವರದಿ ಇಲ್ಲಿದೆ. 

ವೈರಲ್ ಆಗಿರೋ ವಿಡಿಯೋದಲ್ಲಿ, (viral video)ರಾತ್ರಿಯಿಡೀ ಸಾಕ್ಸ್ ಧರಿಸಿ ಮಲಗುವವರ ದೇಹವು ಅತಿಯಾಗಿ ಬಿಸಿಯಾಗುತ್ತದೆ ಎಂದು ಹೇಳಲಾಗಿದೆ. ಶಾಖವು ಮೆದುಳನ್ನು ತಲುಪಬಹುದು ಎಂದು ಸಹ ಹೇಳಲಾಯಿತು. ರಕ್ತ ಪರಿಚಲನೆ ನಿಲ್ಲುತ್ತದೆ ಅಥವಾ ರಕ್ತದ ಹರಿವು ಕಡಿಮೆಯಾಗುತ್ತದೆ ಎಂದು ಅದು ತಿಳಿಸಿದೆ. ಆದರೆ ಮಲಗುವಾಗ ಸಾಕ್ಸ್ ಧರಿಸುವುದು ನಿಜವಾಗಿಯೂ ಅಪಾಯವನ್ನುಂಟು ಮಾಡುತ್ತದೆಯೇ ಬನ್ನಿ ನೋಡೋಣ. 

Tap to resize

Latest Videos

undefined

ಚಳಿಗಾಲದಲ್ಲಿ ಈ ಸಮಸ್ಯೆ ಇರೋರು ಸ್ವೆಟರ್, ಸಾಕ್ಸ್ ಹಾಕಿ ಮಲಗಬಾರದು ಏಕೆ?

ಇದು ನಿಜವಲ್ಲ ಸುಳ್ಳು
ಮಲಗುವಾಗ ಸಾಕ್ಸ್ ಧರಿಸುವುದು ಹೃದಯ ಅಥವಾ ರಕ್ತ ಪರಿಚಲನೆಯ (blood circulation) ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಅನ್ನೋದು ಮಿಥ್ಯೆ ಎಂದು ವೈದ್ಯರು ಹೇಳುತ್ತಾರೆ. ನೀವು ಸಡಿಲ ಮತ್ತು ಆರಾಮದಾಯಕ ಸಾಕ್ಸ್ ಧರಿಸಿದರೆ, ಅಂತಹ ಸಮಸ್ಯೆಗಳನ್ನು ಹೊಂದುವ ಸಾಧ್ಯತೆ ಇಲ್ಲ. ಆದರೆ ಬಿಗಿಯಾದ ಸಾಕ್ಸ್ ಧರಿಸುವುದರಿಂದ ರಕ್ತದ ಹರಿವನ್ನು ನಿಲ್ಲಿಸಬಹುದು, ಇದು ಸೌಮ್ಯ ರಕ್ತಪರಿಚಲನೆ ಸಮಸ್ಯೆಗಳಿಗೆ ಕಾರಣವಾಗಬಹುದು. ಈಗಾಗಲೇ ಅಂತಹ ಸಮಸ್ಯೆಗಳನ್ನು ಹೊಂದಿರುವವರಿಗೆ ಇದರಿಂದ ಮತ್ತಷ್ಟು ಅಪಾಯ ಉಂಟಾಗುವ ಸಾಧ್ಯತೆ ಇದೆ.

ಸಾಕ್ಸ್ ಚೆನ್ನಾಗಿ ಹೊಂದಿಕೊಳ್ಳುತ್ತಿದ್ದರೆ ಅಂತಹ ಅಪಾಯಗಳು ಇರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಬದಲಾಗಿ, ಆರಾಮದಾಯಕ ಫಿಟ್ ಸಾಕ್ಸ್ ಧರಿಸಿ ಮಲಗುವುದು ದೇಹದ ತಾಪಮಾನವನ್ನು ನಿಯಂತ್ರಿಸುತ್ತದೆ ಮತ್ತು ಉತ್ತಮ ನಿದ್ರೆಗೆ ಕಾರಣವಾಗುತ್ತದೆ.

ನಿದ್ರೆಯ ಸಮಯದಲ್ಲಿ ದೇಹವು ಅತಿಯಾಗಿ ಬಿಸಿಯಾಗುವುದು ಬಾಹ್ಯ ವಿಷಯಗಳೊಂದಿಗೆ ಸಂಬಂಧ ಹೊಂದಿದೆ. ಇದು ಸಾಕ್ಸ್ ಗಿಂತ ಕೋಣೆಯ ತಾಪಮಾನ ಮತ್ತು ಭಾರವಾದ ಹಾಸಿಗೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಆರಾಮದಾಯಕ ಸಾಕ್ಸ್ ಧರಿಸಿದರೆ ಉಷ್ಣ ನಿಯಂತ್ರಣವನ್ನು ಸುಧಾರಿಸುತ್ತದೆ, ಪ್ರಮುಖ ತಾಪಮಾನವನ್ನು ಸ್ಥಿರವಾಗಿರಿಸುತ್ತದೆ ಮತ್ತು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.

ಸಾಕ್ಸ್ ಇಲ್ಲದೆ ಶೂ ಹಾಕಿದ್ರೆ ಏನಾಗುತ್ತೆ?, ತಪ್ಪಿಯೂ ಹೀಗೆ ಮಾಡಬೇಡಿ!

ಫ್ಯಾಕ್ಟ್ ಚೆಕ್ ಏನು ಹೇಳಿದೆ
ವಿಜಿಲೆನ್ಸ್ ಫ್ಯಾಕ್ಟ್ ಚೆಕ್ (fact check) ತಂಡದ ತನಿಖೆಯಲ್ಲಿ, ಸಾಕ್ಸ್ ಧರಿಸಿ ಮಲಗೋದರಿಂದ ಆರೋಗ್ಯ ಸಮಸ್ಯೆ ಎನ್ನುವ ಹೇಳಿಕೆಯಲ್ಲಿ ಅರ್ಧ ಸತ್ಯ ಇದೆ ಎಂದು ತಿಳಿದು ಬಂದಿದೆ. ಏಕೆಂದರೆ ಸಾಕ್ಸ್ ಧರಿಸುವುದರಿಂದ ಹೆಚ್ಚಿನ ಸಮಸ್ಯೆಗಳು ಉಂಟಾಗುವುದಿಲ್ಲ. ಆದರೆ ಬಿಗಿಯಾದ ಸಾಕ್ಸ್ ಧರಿಸುವುದರಿಂದ ಅಂತಹ ಸಮಸ್ಯೆಗಳ ಸಾಧ್ಯತೆಗಳು ಸ್ವಲ್ಪ ಹೆಚ್ಚಾಗುತ್ತವೆ. ಯಾವುದೇ ರೀತಿಯ ಸಮಸ್ಯೆಯನ್ನು ತಪ್ಪಿಸಲು, ಮಲಗುವಾಗ ಗಾಳಿಯಾಡುವ ಮತ್ತು ಆರಾಮದಾಯಕ ಸಾಕ್ಸ್ ಧರಿಸಿ ಎನ್ನುತ್ತಾರೆ ತಜ್ಞರು. 

click me!