Health Tips : ಬೇಸಿಗೆಯಲ್ಲಿ ಕಾಡುವ ಆಲಸ್ಯ, ನಿದ್ರೆಗೆ ಹೇಳಿ ಗುಡ್ ಬೈ

Published : Apr 13, 2022, 03:05 PM ISTUpdated : Apr 13, 2022, 03:06 PM IST
Health Tips : ಬೇಸಿಗೆಯಲ್ಲಿ ಕಾಡುವ ಆಲಸ್ಯ, ನಿದ್ರೆಗೆ ಹೇಳಿ ಗುಡ್ ಬೈ

ಸಾರಾಂಶ

ಒಂದ್ಕಡೆ ಸೆಕೆ, ಇನ್ನೊಂದು ಕಡೆ ಬಾಯಾರಿಕೆ. ಮತ್ತೊಂದು ಕಡೆ ಆಲಸ್ಯ. ಬೇಸಿಗೆಯಲ್ಲಿ ಕಾಡುವ ಸಾಮಾನ್ಯ ಸಮಸ್ಯೆಯಿದು. ಆಮೇಲೆ ಮಾಡೋಣ, ನಾಳೆ ಮಾಡೋಣ ಅಂತ ಕೆಲಸವನ್ನು ಮುಂದೂಡ್ತಾ ಬೇಸಿಗೆಯಲ್ಲಿ ನೀವೂ ಮಂಪರಿನಲ್ಲಿದ್ದರೆ ಈ ಟಿಪ್ಸ್ ಓದಿ.   


ಬೇಸಿಗೆ (Summer) ಬಂತೆಂದ್ರೆ ಆಲಸ್ಯ (Idleness) ದಿನವಿಡೀ ಕಾಡುತ್ತದೆ. ಮನೆ (Home) ಯಲ್ಲಿರಲಿ ಇಲ್ಲ ಕಚೇರಿ (Office) ಯಲ್ಲಿರಲಿ, ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ. ಮಧ್ಯಾಹ್ನ ಊಟದ ನಂತ್ರ ಬೇಡವೆಂದ್ರೂ ಕಣ್ಣು ಎಳೆಯುತ್ತಿರುತ್ತದೆ. ಸೂರ್ಯ ನೆತ್ತಿಗೆ ಬರ್ತಿದ್ದಂತೆ ನಿಶಕ್ತಿ, ಆಲಸ್ಯ, ನಿದ್ರೆ ಸಾಮಾನ್ಯ. ಕೆಲಸ ಮಾಡುವುದು ಅನಿವಾರ್ಯವಾದ ಕಾರಣ ಅನೇಕರು ಮನಸ್ಸಿಲ್ಲದ ಮನಸ್ಸಿನಲ್ಲಿ ಕೆಲಸ ಮಾಡ್ತಾರೆ. ಇದು ಕೆಲಸದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ನಮ್ಮನ್ನು ಚೈತನ್ಯದಿಂದ ಇಟ್ಟುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತದೆ. ಇದಕ್ಕೆ ಆರೋಗ್ಯಕರ ಆಹಾರ ಮತ್ತು ಸಾಕಷ್ಟು ಪ್ರಮಾಣದ ದ್ರವ ಆಹಾರ ತೆಗೆದುಕೊಳ್ಳುವುದು ಮುಖ್ಯ. ದೇಹದಲ್ಲಿ ನೀರಿನ ಪ್ರಮಾಣ  ಕಡಿಮೆಯಾದರೆ ದೇಹದ ಶಕ್ತಿ ಕಡಿಮೆಯಾಗುತ್ತದೆ. ಇದ್ರಿಂದ ಕೆಲಸ ಮಾಡಲು ಮನಸ್ಸಿರುವುದಿಲ್ಲ.  ಕಚೇರಿ ಸಮಯದಲ್ಲಿ ಆಲಸ್ಯ ಮತ್ತು ಸೋಮಾರಿತನ ಕಾಡುತ್ತದೆ. ಬೇಸಿಗೆಯಲ್ಲಿ ಸದಾ ಉತ್ಸಾಹದಿಂದಿರಬೇಕೆಂದ್ರೆ ಏನು ಮಾಡ್ಬೇಕು ಹಾಗೆ ಏನು ಮಾಡ್ಬಾರದು ಎಂಬುದನ್ನು ನಾವಿಂದು ಹೇಳ್ತೇವೆ.   

ಬೇಸಿಗೆಯಲ್ಲಿ ಆಲಸ್ಯ ದೂರ ಮಾಡಲು ಹೀಗೆ ಮಾಡಿ : 

ಆಹಾರ : ಕಚೇರಿ ಅಥವಾ ಮನೆಯಿಂದ ಕೆಲಸ ಮಾಡುತ್ತಿದ್ದರೆ  ಆಲಸ್ಯವನ್ನು ತೊಡೆದುಹಾಕಲು ಋತುಮಾನದ ಆಹಾರವನ್ನು ಸೇವಿಸಿ. ಬೇಸಿಗೆಯಲ್ಲಿ ಸಾಕಷ್ಟು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ. ಪೋಷಕಾಂಶಗಳಿಂದ ಕೂಡಿರುವ ಹಣ್ಣು,ತರಕಾರಿಗಳು ನಿಮ್ಮನ್ನು ಋತುವಿನಲ್ಲಿ ಕಾಡುವ ರೋಗದಿಂದ ರಕ್ಷಿಸುತ್ತವೆ. ಎಲ್ಲಾ ಬಣ್ಣಗಳ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಕಿಣ್ವಗಳು, ಆಂಟಿಆಕ್ಸಿಡೆಂಟ್‌ಗಳು, ಫೈಟೊಕೆಮಿಕಲ್‌ಗಳು, ವಿಟಮಿನ್‌ಗಳು, ಖನಿಜಗಳಂತಹ ವಿವಿಧ ಪೋಷಕಾಂಶಗಳನ್ನು ದೇಹ ಸೇರುತ್ತವೆ. ಇದು ದೇಹವನ್ನು ಒಳಗಿನಿಂದ ಶುದ್ಧೀಕರಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಇದ್ರಿಂದ ಆಲಸ್ಯ ಬರುವುದಿಲ್ಲ. 

Summer Health Tips: ಸನ್ ಬರ್ನ್ ಅನ್ನು ತೊಡೆದುಹಾಕಲು ಇಲ್ಲಿವೆ ದೇಸಿ ಮಾರ್ಗಗಳು

ದ್ರವ ಪದಾರ್ಥ : ದೇಹವನ್ನು ಹೈಡ್ರೇಟ್ ಮಾಡಲು, ನೀರು ಮತ್ತು ಎಲೆಕ್ಟ್ರೋಲೈಟ್ ಅಂಶ ಹೆಚ್ಚಿರುವ ಹಣ್ಣುಗಳು, ತರಕಾರಿಗಳನ್ನು ಸೇವಿಸಿ. ಇದು ದಿನವಿಡೀ ದೇಹ ಶಕ್ತಿಯಿಂದಿರಲು ನೆರವಾಗುತ್ತದೆ.   ಹೆಚ್ಚು ಕಾಲೋಚಿತ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಇತರ ಆರೋಗ್ಯಕರ ಬೇಸಿಗೆ ಪಾನೀಯಗಳನ್ನು ತೆಗೆದುಕೊಳ್ಳುವ ಮೂಲಕ ಶಕ್ತಿಯ ಮಟ್ಟವು ಹೆಚ್ಚಾಗಿರುತ್ತದೆ. ಆಫೀಸ್ ನಲ್ಲಿ ಕಿತ್ತಳೆ, ಕಲ್ಲಂಗಡಿ, ಹಲಸಿನ ಹಣ್ಣು, ಸ್ಟ್ರಾಬೆರಿ, ನಿಂಬೆ ಪಾನಕವನ್ನು ಸೇವನೆ ಮಾಡಿ.

ವಾಕಿಂಗ್ : ಕಚೇರಿ ಕೆಲಸದ ಮಧ್ಯೆ ಆಗಾಗ ವಿರಾಮ ತೆಗೆದುಕೊಳ್ಳಿ ಮತ್ತು ಸ್ವಲ್ಪ ಅಲ್ಲಿಯೇ ವಾಕಿಂಗ್ ಮಾಡಿ. ಇದರಿಂದ ಆಲಸ್ಯ ಮತ್ತು ನಿದ್ರೆ ದೂರವಾಗುತ್ತದೆ. ಹೀಗೆ ಮಾಡುವುದರಿಂದ ದೇಹದಲ್ಲಿ ರಕ್ತಸಂಚಾರವೂ ಸರಿಯಾಗಿರುತ್ತದೆ ಮತ್ತು ಮೂಡ್ ಕೂಡ ಫ್ರೆಶ್ ಆಗಿರುತ್ತದೆ.

ಮಸಾಲೆ ಆಹಾರದಿಂದ ದೂರವಿರಿ : ಹೆಚ್ಚು ಎಣ್ಣೆಯುಕ್ತ-ಮಸಾಲೆಯುಕ್ತ, ಹೆಚ್ಚಿನ ಕ್ಯಾಲೋರಿ ಆಹಾರಗಳು, ಮಸಾಲೆಯುಕ್ತ ಆಹಾರ ಸೇವನೆಯಿಂದ ದೂರವಿರಿ. ಕೆಫೀನ್, ಚಹಾ, ಕಾಫಿ, ಮದ್ಯ ಸೇವನೆಯನ್ನು ತಪ್ಪಿಸಿ. ಇದು ನಿರ್ಜಲೀಕರಣದ ಸಮಸ್ಯೆಯನ್ನು ಉಂಟುಮಾಡಬಹುದು. ಸಂಸ್ಕರಿಸಿದ ಆಹಾರ, ಪ್ಯಾಕ್ ಮಾಡಿದ ಹಣ್ಣಿನ ರಸಗಳು, ಸಕ್ಕರೆ ಪಾನೀಯಗಳು, ತಂಪು ಪಾನೀಯಗಳನ್ನು ಸೇವಿಸಬೇಡಿ. 

ಹೊರಗಿನ ತಿಂಡಿ : ಕಚೇರಿಯಲ್ಲಿ ಕೆಲಸ ಮಾಡುವ ವೇಳೆ ಹೊರಗಿನ ಆಹಾರವನ್ನು ತಿನ್ನಬೇಡಿ.  ಮನೆಯಲ್ಲಿ ತಯಾರಿಸಿದ ಆಹಾರವನ್ನು ತೆಗೆದುಕೊಂಡು ಹೋಗಿ. ಬೇಸಿಗೆಯಲ್ಲಿ ಜೀರ್ಣಕ್ರಿಯೆ ನಿಧಾನವಾಗಬಹುದು. ಹಾಗಾಗಿ ಮಿತವಾಗಿ ತಿನ್ನಿರಿ. ಒಂದು ಲೋಟ ನೀರು ಕುಡಿಯುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ. ಹೈಡ್ರೇಟೆಡ್ ಆಗಿರಲು ಆಗಾಗ ನೀರನ್ನು ಕುಡಿಯಿರಿ.  

Beauty Tips: ಚೆಂದ ಕಾಣ್ಬೇಕೆಂಬ ಪುರುಷರು ಇದನ್ನು ಬಳಸಿ ನೋಡಿ

ಧ್ಯಾನ : ಕಚೇರಿಯಲ್ಲಿ ಆಲಸ್ಯ ಕಾಣಿಸಿಕೊಂಡರೆ ಕಣ್ಣುಗಳನ್ನು ಮುಚ್ಚಿ ಕುರ್ಚಿಯ ಮೇಲೆ ಕುಳಿತು ಧ್ಯಾನ ಮಾಡಲು ಪ್ರಯತ್ನಿಸಬಹುದು. ಅಲ್ಲದೆ ಭುಜ, ಕತ್ತುಗಳನ್ನು ತಿರುಗಿಸಿ ಸ್ಟ್ರಚ್ಚಿಂಗ್ ವ್ಯಾಯಾಮ ಮಾಡಿ. ಆಳವಾದ ಉಸಿರನ್ನು ತೆಗೆದುಕೊಳ್ಳಿ. ಎದ್ದುನಿಂತು ಮುಂದಕ್ಕೆ ಬಾಗುವ ವ್ಯಾಯಾಮಗಳನ್ನು ಮಾಡುವುದು. ನಿಮ್ಮ ಬೆರಳುಗಳಿಂದ ನೆಲವನ್ನು ಸ್ಪರ್ಶಿಸಲು ಪ್ರಯತ್ನಿಸಿ. ಇದರಿಂದ ಬೆನ್ನು ನೋವು ಕೂಡ ಕಡಿಮೆಯಾಗುತ್ತದೆ.

ನಿದ್ರೆ :  ದಿನಕ್ಕೆ 7-8 ಗಂಟೆಗಳ ಕಾಲ ನಿದ್ರೆ ಮಾಡಿ.  ಇದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಒಳ್ಳೆಯದು. ನಿದ್ರೆ ಸರಿಯಾದ್ರೆ ಹಗಲಿನಲ್ಲಿ ಉಲ್ಲಾಸದಿಂದಿರಬಹುದು.  
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?
Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ