
ನವದೆಹಲಿ (ಫೆ.15): ಕೋವಿಡ್ -19 ರ (Covid 19) ಓಮಿಕ್ರಾನ್ (Omicron) ರೂಪಾಂತರವು ಆತಂಕಗಳು ಕಡಿಮೆಯಾಗಿ ಜಗತ್ತು ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಂತೆ, ಇಂಗ್ಲೆಂಡ್ ನಲ್ಲಿ (England) ಹೊಸ ವೈರಸ್ (New Virus) ಆತಂಕವನ್ನು ಉಂಟುಮಾಡಿದೆ. ಲಸ್ಸಾ ಜ್ವರದ (Lassa Fever) ಹಿನ್ನೆಲೆಯಲ್ಲಿ ಕನಿಷ್ಠ ಮೂರು ಪ್ರಕಗಳನ್ನು ದೃಢಪಟ್ಟಿದ್ದು, ಅದರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ವರದಿಗಳ ಪ್ರಕಾರ, ವೈರಸ್‌ನ ಎಲ್ಲಾ ಮೂರು ಪ್ರಕರಣಗಳು ಪಶ್ಚಿಮ ಆಫ್ರಿಕಾದಿಂದ ಪ್ರಯಾಣದ ಇತಿಹಾಸವನ್ನು ಹೊಂದಿವೆ. ಬೆಡ್‌ಫೋರ್ಡ್‌ಶೈರ್‌ನಲ್ಲಿ (Bedfordshire) ವೈರಸ್‌ನಿಂದ ಮೊದಲ ಸಾವು ವರದಿಯಾಗಿದೆ ಮತ್ತು ಇಂಗ್ಲೆಂಡ್ ನಲ್ಲಿ ಅಂದಾಜು ಒಂದು ದಶಕದ ಬಳಿಕ ಲಸ್ಸಾ ವೈರಸ್ ನಿಂದ ಉಂಟಾಗುವ ಸಂಭಾವ್ಯ ಮಾರಣಾಂತಿಕ ಸಾಂಕ್ರಾಮಿಕ ಕಾಯಿಲೆಯ ಪ್ರಕರಣಗಳು ವರದಿಯಾಗಿದೆ ಎಂದು ಯುನೈಟೆಡ್ ಕಿಂಗ್ ಡಮ್ ಹೆಲ್ತ್ ಸೆಕ್ಯೂರಿಟಿ ಏಜೆನ್ಸಿ (UKHSA) ಹೇಳಿದೆ. ಭಾರತದಲ್ಲಿ ಇಲ್ಲಿಯವರೆಗೆ ಲಸ್ಸಾ ವೈರಸ್ ನ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಮತ್ತು ತಜ್ಞರು ಪರಿಸ್ಥಿತಿಯನ್ನು ಅವಲೋಕ ಮಾಡುತ್ತಿದ್ದಾರೆ. ಇಂಗ್ಲೆಂಡ್ ನಲ್ಲಿನ ವಿಶ್ವ ಆರೋಗ್ಯ ಸಂಸ್ಥೆ ಕೂಡ ಪರಿಸ್ಥಿತಿ ಮೇಲ್ವಿಚಾರಣೆ ಮಾಡುತ್ತಿದೆ
ಲಸ್ಸಾ ಜ್ವರ ಎಂದರೇನು?: ಲಸ್ಸಾ ಜ್ವರವು ತೀವ್ರವಾದ ವೈರಲ್ ಸೋಂಕಾಗಿದ್ದು, ಸಿಯೆರಾ ಲಿಯೋನ್, ಲೈಬೀರಿಯಾ, ಗಿನಿಯಾ ಮತ್ತು ನೈಜೀರಿಯಾ ಸೇರಿದಂತೆ ಪಶ್ಚಿಮ ಆಫ್ರಿಕಾದ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಲಸ್ಸಾ ಜ್ವರ-ಉಂಟುಮಾಡುವ ವೈರಸ್ ಪಶ್ಚಿಮ ಆಫ್ರಿಕಾದಲ್ಲಿ ಹೆಚ್ಚಾಗಿದ್ದು, ಇದನ್ನು ಮೊದಲು 1969 ರಲ್ಲಿ ನೈಜೀರಿಯಾದ ಲಸ್ಸಾದಲ್ಲಿ ಕಂಡುಹಿಡಿಯಲಾಯಿತು ಎಂದು ರೋಗ ನಿಯಂತ್ರಣ ಮತ್ತು ಮಾಲಿನ್ಯ ಕೇಂದ್ರಗಳು (CDC) ಟಿಪ್ಪಣಿಗಳಲ್ಲಿ ತಿಳಿಸಲಾಗಿದೆ. ನೈಜೀರಿಯಾದಲ್ಲಿ ಈ ವೈರಸ್ ನಿಂದ ಇಬ್ಬರು ನರ್ಸ್ ಗಳು ಸಾವಿಗೀಡಾದ ಬಳಿಕ ಈ ವೈರಸ್ ಗೆ ಲಸ್ಸಾ ವೈರಸ್ ಎಂದು ಹೆಸರನ್ನು ಇಡಲಾಗಿತ್ತು. ಈ ಜ್ವರವು ಮುಖ್ಯವಾಗಿ ಇಲಿಗಳಿಂದ ಹರಡುತ್ತದೆ.
ಸೋಂಕಿತ ಇಲಿಯ ಮೂತ್ರ ಅಥವಾ ಮಲದಿಂದ ಕಲುಷಿತವಾಗಿರುವ ಆಹಾರವು, ಮನೆಯ ವಸ್ತುಗಳ ಸಂಪರ್ಕಕ್ಕೆ ಬಂದರೆ ಒಬ್ಬ ವ್ಯಕ್ತಿಯು ಸೋಂಕಿಗೆ ಒಳಗಾಗಬಹುದು. ಒಬ್ಬ ವ್ಯಕ್ತಿಯು ಅನಾರೋಗ್ಯದ ವ್ಯಕ್ತಿಯ ಸೋಂಕಿತ ದೈಹಿಕ ದ್ರವಗಳೊಂದಿಗೆ ಸಂಪರ್ಕಕ್ಕೆ ಬಂದರೆ ಅಥವಾ ಕಣ್ಣು, ಮೂಗು ಅಥವಾ ಬಾಯಿಯಂತಹ ಲೋಳೆಯ ಪೊರೆಗಳ ಮೂಲಕ ಅಪರೂಪವಾಗಿ ಆದರೂ ಸಹ ಹರಡಬಹುದು. ವ್ಯಕ್ತಿಯಿಂದ ವ್ಯಕ್ತಿಗೆ ಹರಡುವಿಕೆ ಹೆಚ್ಚು ಸಾಮಾನ್ಯವಾಗಿದೆ. ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮೊದಲು ಜನರು ಸಾಮಾನ್ಯವಾಗಿ ಸಾಂಕ್ರಾಮಿಕವಾಗುವುದಿಲ್ಲ ಮತ್ತು ತಬ್ಬಿಕೊಳ್ಳುವುದು, ಕೈಕುಲುಕುವುದು ಅಥವಾ ಸೋಂಕಿತ ವ್ಯಕ್ತಿಯ ಬಳಿ ಕುಳಿತುಕೊಳ್ಳುವ ಮೂಲಕ ಮೂಲಕ ಸೋಂಕನ್ನು ಹರಡಲು ಸಾಧ್ಯವಿಲ್ಲ.
Covid 19 Pandemic: ವೈರಸ್ ಅಂತ್ಯವಾಗಿಲ್ಲ, ಇನ್ನಷ್ಟು ರೂಪಾಂತರಿ ಸಾಧ್ಯತೆ ಇದ್ದೇ ಇದೆ: WHO
ರೋಗ ಲಕ್ಷಣಗಳು ವೈರಸ್ ದೇಹ ಸೇರಿದ 1-3 ವಾರಗಳ ನಂತರ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಸೌಮ್ಯವಾದ ರೋಗಲಕ್ಷಣಗಳಲ್ಲಿ ಸ್ವಲ್ಪ ಜ್ವರ, ಆಯಾಸ, ದೌರ್ಬಲ್ಯ ಮತ್ತು ತಲೆನೋವು ಮತ್ತು ಹೆಚ್ಚು ಗಂಭೀರವಾದ ರೋಗಲಕ್ಷಣಗಳು ರಕ್ತಸ್ರಾವ, ಉಸಿರಾಟದ ತೊಂದರೆ, ವಾಂತಿ, ಮುಖದ ಊತ, ಎದೆ, ಬೆನ್ನು ಮತ್ತು ಹೊಟ್ಟೆಯ ನೋವನ್ನು ಒಳಗೊಂಡಿರುತ್ತದೆ.
Covid Crisis: 2 ದಿನದಲ್ಲಿ ಪಾಸಿಟಿವಿಟಿ ಭಾರಿ ಇಳಿಕೆ: ಕೋವಿಡ್ ತಹಬದಿಗೆ
ರೋಗಲಕ್ಷಣಗಳ ಪ್ರಾರಂಭದ ಎರಡು ವಾರಗಳ ಬಳಿಕ ಸಾವು ಸಂಭವಿಸಬಹುದು, ಸಾಮಾನ್ಯವಾಗಿ ಬಹು-ಅಂಗಾಂಗ ವೈಫಲ್ಯದ ಪರಿಣಾಮವಾಗಿ ಇದು ಆಗುತ್ತದೆ. ಜ್ವರಕ್ಕೆ ಸಂಬಂಧಿಸಿದ ಅತ್ಯಂತ ಸಾಮಾನ್ಯ ಸಮಸ್ಯೆ ಕಿವುಡುತನ ಎಂದು ಸಿಡಿಡಿ ಹೇಳಿದೆ. ಸೋಂಕಿತರ ಪೈಕಿ ಸುಮಾರು ಮೂರನೇ ಒಂದು ಭಾಗದಷ್ಟು ಜನರು ವಿವಿಧ ಹಂತದ ಕಿವುಡುತನವನ್ನು ವರದಿ ಮಾಡಿದ್ದಾರೆ. ಅಂತಹ ಅನೇಕ ಸಂದರ್ಭಗಳಲ್ಲಿ, ಶ್ರವಣ ನಷ್ಟವು ಶಾಶ್ವತವಾಗಿರುತ್ತದೆ. ಗಮನಾರ್ಹವಾಗಿ, ಕಿವುಡುತನವು ಜ್ವರದ ಸೌಮ್ಯವಾದ ಮತ್ತು ತೀವ್ರ ಸ್ವರೂಪಗಳೆರಡರಲ್ಲೂ ಸಂಭವಿಸಬಹುದು ಎಂದು ಸಿಡಿಸಿ ಹೇಳಿದೆ. ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಇಲಿಗಳ ಸಂಪರ್ಕವನ್ನು ತಪ್ಪಿಸುವುದು ಎಂದು ಸಿಡಿಸಿ ತಿಳಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.