
ಜಗತ್ತಿನಲ್ಲಿ ಕಂಡು ಕೇಳರಿಯದ ಖಾಯಿಲೆಗಳಿವೆ. ಕೆಲವು ಮಾನವ ನಿರ್ಮಿತ ವೈರಸ್ ಗಳಿಂದ ಉಂಟಾದರೆ ಇನ್ಕೆಲವು ಪರಿಸರದಲ್ಲೇ ಹುಟ್ಟಿಕೊಳ್ತವೆ. ಮನುಷ್ಯನ ದುಶ್ಚಟಗಳೂ ಆತನನ್ನು ಅನಾರೋಗ್ಯಕ್ಕೆ ನೂಕುತ್ತದೆ. ದಿನೇ ದಿನೇ ವೈದ್ಯಲೋಕಕ್ಕೇ ಸವಾಲೆನಿಸುವಂತಹ ಹೊಸ ಹೊಸ ಖಾಯಿಲೆಗಳು ಸೃಷ್ಟಿಯಾಗುತ್ತಿವೆ.
ಹೊಸ ಹೊಸ ರೋಗ (Disease) ಗಳು ಹುಟ್ಟಿಕೊಂಡಂತೆ ಮನುಷ್ಯ ಅದಕ್ಕೆ ಪೂರಕವಾಗುವಂತಹ ಔಷಧಗಳನ್ನು ಕಂಡು ಹಿಡಿಯುತ್ತಿದ್ದಾನೆ. ಮನುಷ್ಯನ ದೇಹದ ಅನೇಕ ಭಾಗಗಳನ್ನು ಕೃತಕವಾಗಿ ಜೋಡಿಸಲಾಗುತ್ತದೆ. ಮನುಷ್ಯನಿಗೆ ಕೃತಕವಾಗಿ ಕೈ, ಕಾಲು ಮುಂತಾದವುಗಳನ್ನು ಹಾಕುವುದನ್ನು ಕೂಡ ನಾವು ನೋಡಿದ್ದೇವೆ. ಹಾಗೆಯೇ ಹೃದಯಾಘಾತ (Heart Attack) ಮುಂತಾದ ಸಮಸ್ಯೆಗಳಿಗೆ ಕೂಡ ಸರ್ಜರಿಗಳು ಬಂದಿವೆ. ನಮ್ಮ ಸುತ್ತ ಮುತ್ತಲೇ ಅನೇಕ ಮಂದಿ ಈಗಾಗಲೇ ಹೃದಯದ ಕಸಿ ಮಾಡಿಸಿಕೊಂಡಿದ್ದಾರೆ. ಇಂತಹ ಅನೇಕ ಹೊಸ ಹೊಸ ಚಿಕಿತ್ಸೆ (Treatment) ಗಳು ನಮ್ಮಲ್ಲಿ ಬಂದಿವೆ. ಮನುಷ್ಯನ ಪೂರ್ತಿ ಶರೀರ ಹೃದಯದ ಬಡಿತದ ಮೇಲೆ ಅವಲಂಬಿತವಾಗಿದೆ. ಒಮ್ಮೆ ಹೃದಯದ ಬಡಿತ ನಿಂತರೂ ಸಾಕು ಅದು ಆ ವ್ಯಕ್ತಿಯ ಕೊನೆಯ ಕ್ಷಣವಾಗಿರುತ್ತದೆ. ಆದರೆ ಒಬ್ಬ ವ್ಯಕ್ತಿಯ ಹೃದಯ ಬ್ಯಾಟರಿ ಮೂಲಕ ನಡೆಯುತ್ತದೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಏಕೆಂದರೆ ಅಮೆರಿಕದ ಒಬ್ಬ ಮಹಿಳೆಯ ಹೃದಯ ಬ್ಯಾಟರಿ ಮೂಲಕ ನಡೆಯುತ್ತಿದೆ. ಬ್ಯಾಟರಿಯ ಶಕ್ತಿಯಿಂದಲೇ ಈಕೆಯ ಹೃದಯ ಬಡಿದುಕೊಳ್ತಿದೆ.
ಸುಮಾರು ದಿನದಿಂದ ಗಂಟಲು ನೋಯುತ್ತಿದೆಯೇ?ಇನ್ನು ತಡ ಮಾಡ್ಬೇಡಿ…
ಈಕೆಗಿದೆ ಅಪರೂಪದ ಹೃದಯ ಖಾಯಿಲೆ : ಜಗತ್ತಿನಲ್ಲಿ ಅನೇಕ ಬಗೆಯ ಹೃದಯದ ಖಾಯಿಲೆಗಳಿವೆ. ಈ ಮಹಿಳೆಯ ಖಾಯಿಲೆ ಎಲ್ಲ ಖಾಯಿಲೆಗಳಿಗಿಂತ ಭಿನ್ನವಾಗಿದೆ. ಅಮೆರಿಕದ ಹಾರ್ಟ್ ಬೊಸ್ಟನ್ ನಿವಾಸಿಯಾಗಿರುವ ಸೋಫಿಯಾ ಎಂಬಾಕೆ ಜೀವನ ಈಗ ಬ್ಯಾಟರಿಯಿಂದಲೇ ನಡೆಯುತ್ತಿದೆ. ಬ್ಯಾಟರಿ ಪವರ್ ನಿಂದ ಈಕೆಯ ಪಲ್ಸ್ ಹೊಡೆದುಕೊಳ್ತಿರೋದು.
ಸೋಫಿ ಲೆಫ್ಟ್ ವೆಂಟ್ರಿಕ್ಯುಲರ್ ಅಸಿಸ್ಟ್ ಡಿವೈಸ್ (LVAD)ಗಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾಳೆ. ಆದ್ದರಿಂದ ಅವಳ ಹೃದಯವು ಯಂತ್ರದ ಮೂಲಕ ಬಡಿದುಕೊಳ್ಳುತ್ತದೆ. ಸೋಫಿಯಾ ಇರ್ರಿವರ್ಸಿಬಲ್ ಡೈಲೆಟೆಡ್ ಕಾರ್ಡಿಯೋಮಯೋಪೈಥಿ ಎನ್ನುವ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಇದು ಒಂದು ಬಗೆಯ ಸ್ನಾಯುವಿನ ಖಾಯಿಲೆಯಾಗಿದ್ದು, ಇದರಿಂದಾಗಿ ಅವಳ ಹೃದಯ ಬಡಿತವಾಗುವುದು ಸಾಧ್ಯವಿಲ್ಲ. ಇದಕ್ಕಾಗಿ ಅವಳಿಗೆ ಹೃದಯ ಬಡಿತದ ಸಾಧನವನ್ನು ಅಳವಡಿಸಲಾಗಿದೆ. ಎಲ್ ವಿ ಎ ಡಿ ಸಾಧನದಿಂದ ಅವಳ ಹೃದಯ ಬಡಿದುಕೊಳ್ಳುತ್ತದೆ. ಸೋಫಿಯಾ ತಮಗಿರುವ ಈ ಅಪರೂಪದ ಖಾಯಿಲೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾಳೆ.
ಈ ಎರಡು ಜ್ಯೂಸ್ ಕೇವಲ 15 ದಿನಗಳಲ್ಲಿ ಮುಖದ ಕಲೆ ಮಾಯವಾಗಿಸುತ್ತೆ!
ನನ್ನ ಹೆಸರು ಸೋಫಿಯಾ. ನಾನು ಬ್ಯಾಟರಿ ಮೂಲಕ ಚಲಿಸುತ್ತೇನೆ. ನನ್ನ ಹೃದಯ ಹೊಡೆದುಕೊಳ್ಳುವುದಿಲ್ಲ. ನಾನು ಹೃದಯ ಬಡಿತವೇ ಇಲ್ಲದ ಮಹಿಳೆಯಾಗಿದ್ದೇನೆ. ಬ್ಯಾಟರಿ ಹಾಗೂ ರಿಮೋಟ್ ಈಗ ನನ್ನ ಜೀವನದ ಅತೀ ಮುಖ್ಯ ಭಾಗವಾಗಿದೆ ಎಂದು ತನ್ನನ್ನು ತಾನು ಪರಿಚಯಿಸಿಕೊಂಡಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡ ನಂತರ ಸೋಫಿಯಾಗೆ ಅನೇಕ ಜನರಿಂದ ಬೆಂಬಲ ಸಿಗುತ್ತಿದೆ. ಅನೇಕ ಮಂದಿ ಸೋಫಿಯಾ ಧೈರ್ಯ ಹಾಗೂ ಜೀವನದ ಬಗ್ಗೆ ಆಕೆಗಿರುವ ಉತ್ಸಾಹವನ್ನು ಮೆಚ್ಚಿಕೊಂಡಿದ್ದಾರೆ.
ಹಿಂದಿನ ವರ್ಷವೇ ನಡೆದಿದೆ ಹಾರ್ಟ್ ಸರ್ಜರಿ (Heart Surgery): 2022ರ ನವೆಂಬರ್ ನಲ್ಲಿಯೇ ಸೋಫಿಯಾ ಹೃದಯದ ಸರ್ಜರಿಯಾಗಿದೆ. ಅಂದಿನಿಂದ ಅವಳು ಸತತವಾಗಿ ತಮ್ಮ ಹೃದಯವನ್ನು ಮನೆಯ ಗೋಡೆಯ ಮೇಲಿರುವ ಪವರ್ ಔಟ್ ಲೆಟ್ ಸಾಧನದ ಮೂಲಕ ಚಾರ್ಜ್ ಮಾಡಿಕೊಳ್ಳುತ್ತಿದ್ದಾಳೆ. ಮನೆಯಿಂದ ಹೊರಗಡೆ ಹೋಗುವಾಗ ಎರಡು ಬ್ಯಾಟರಿಗಳನ್ನು ತಮ್ಮ ಜೊತೆ ತೆಗೆದುಕೊಂಡು ಹೋಗುತ್ತಾರೆ. ಆ ಬ್ಯಾಟರಿಯೇ ಅವಳನ್ನು ಇಂದಿಗೂ ಜೀವಂತವಾಗಿರಿಸಿದೆ. ಸೋಫಿಯಾ ಅವಳ ಜೀವನ ಪೂರ್ತಿಯಾಗಿ ಬ್ಯಾಟರಿಯನ್ನೇ ಅವಲಂಬಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.