ಮಕ್ಕಳಿಗೆ ಮನೆಯಲ್ಲಿರೋ ಔಷಧಿ ನೀಡುವ ಮುನ್ನ ಇರಲಿ ಎಚ್ಚರ

By Suvarna News  |  First Published Nov 18, 2022, 2:54 PM IST

ಮಕ್ಕಳಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಮನ್. ಜ್ವರ, ನೆಗಡಿ, ಕೆಮ್ಮು ಮಕ್ಕಳಿಗೆ ಆಗಾಗ ಕಾಣಿಸಿಕೊಳ್ತಿರುತ್ತದೆ. ಆಗ ಪಾಲಕರು ಮನೆಯಲ್ಲಿರುವ ಔಷಧಿ ನೀಡಲು ಮುಂದಾಗ್ತಾರೆ. ಈ ಔಷಧಿ ನೀಡೋದು ತಪ್ಪಲ್ಲ. ಆದ್ರೆ ಕೆಲ ವಿಷ್ಯ ನಿರ್ಲಕ್ಷ್ಯ ಮಾಡಿದ್ರೆ ಮಕ್ಕಳ ಆರೋಗ್ಯ ಮತ್ತಷ್ಟು ಹದಗೆಡುತ್ತದೆ.
 


ಮನೆಯಲ್ಲಿ ಮಕ್ಕಳಿದ್ಮೇಲೆ ಆಟಿಕೆ ಸಾಮಾನು, ಚಾಕೋಲೇಟ್, ಬಿಸ್ಕತ್ ಇದ್ದಂತೆ ಒಂದಿಷ್ಟು ಔಷಧಿಗಳು ಇರ್ತವೆ. ಜ್ವರ, ನೆಗಡಿ, ವಾಂತಿ, ಬೇಧಿ, ಹೊಟ್ಟೆ ನೋವು ಹೀಗೆ ಸಣ್ಣಪುಟ್ಟ ಖಾಯಿಲೆಗಳ ಔಷಧಿಯನ್ನು ಪಾಲಕರು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಹಾಗಾಗಿ ಋತು ಬದಲಾಗ್ತಿದ್ದಂತೆ ಮಕ್ಕಳು ಅನಾರೋಗ್ಯಕ್ಕೆ ಒಳಗಾಗ್ತಾರೆ. ಶಾಲೆಗೆ ಹೋಗುವ ಮಕ್ಕಳಲ್ಲಿ ಶೀತ ಹಾಗೂ ಕೆಮ್ಮು ಸಾಮಾನ್ಯ ಸಮಸ್ಯೆಯಾಗಿದೆ. ಇನ್ನೇನು ಕಡಿಮೆಯಾಯ್ತು ಎನ್ನುಷ್ಟರಲ್ಲಿ ಇನ್ನೊಬ್ಬ ಮಗುವಿನಿಂದ ಮತ್ತೆ ಕೆಮ್ಮು ಶುರುವಾಗಿರುತ್ತದೆ. ಪದೇ ಪದೇ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುವುದು ಸಾಮಾನ್ಯ ಸಂಗತಿ. ಹಾಗಾಗಿ ಚಿಕ್ಕಪುಟ್ಟ ಸಮಸ್ಯೆಯಾದಾಗ ಪಾಲಕರು, ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋದಿಲ್ಲ. ಮೂರ್ನಾಲ್ಕು ದಿನ ಮನೆಯಲ್ಲಿರುವ ಔಷಧಿ ನೀಡ್ತಾರೆ. ಆಗ್ಲೂ ಮಕ್ಕಳ ಆರೋಗ್ಯ ಸುಧಾರಿಸಿಲ್ಲ ಎಂದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ. ನೀವೂ ನಿಮ್ಮ ಮಕ್ಕಳಿಗೆ ಮನೆಯಲ್ಲಿರುವ ಔಷಧಿ ನೀಡ್ತಿದ್ದೀರಿ ಎಂದಾದ್ರೆ ಕೆಲ ವಿಷ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಇಲ್ಲವೆಂದ್ರೆ ಮಕ್ಕಳ ಆರೋಗ್ಯ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿರುತ್ತದೆ. 

ಮಕ್ಕಳಿ (Children) ಗೆ ಔಷಧಿ (Medicine) – ಮಾತ್ರೆ ನೀಡುವ ಮುನ್ನ ಇದನ್ನು ಗಮನಿಸಿ : 

Latest Videos

undefined

ಔಷಧಿ ಮೇಲಿರುವ ನಿರ್ದೇಶನವನ್ನು ಅವಶ್ಯಕವಾಗಿ ಓದಿ : ಮಕ್ಕಳಿಗೆ ಔಷಧಿ ನೀಡುವ ಮೊದಲು ಔಷಧಿ ಬಾಟಲಿ (Bottle) ಯಲ್ಲಿ ಏನಿದೆ ಎಂಬುದನ್ನು ಓದಿ. ಅಲ್ಲಿ ಎಷ್ಟು ಬಾರಿ ಔಷಧಿ ನೀಡ್ಬೇಕು, ಎರಡು ಡೋಸ್ ಮಧ್ಯೆ ಎಷ್ಟು ಸಮಯದ ಅಂತರವಿರಬೇಕು ಎಂಬುದು ಬರೆದಿರುತ್ತದೆ. ಹಾಗೆಯೇ ಡೋಸ್ ಎಷ್ಟು ನೀಡ್ಬೇಕು ಎಂಬುದನ್ನು ಓದಿ, ನಂತ್ರ ಔಷಧಿ ನೀಡಿ. 

ವಯಸ್ಸಿ (Age) ಗೆ ತಕ್ಕಂತೆ ಮಕ್ಕಳಿಗೆ ನೀಡಿ ಔಷಧಿ : ವಯಸ್ಸಿಗೆ ತಕ್ಕಂತೆ ಮಕ್ಕಳಿಗೆ ಔಷಧಿ ನೀಡಬೇಕು. ಮಕ್ಕಳ ವಯಸ್ಸಿಗೆ ಅನುಗುಣವಾಗಿ ಔಷಧಿ ತಯಾರಿಸಲಾಗಿರುತ್ತದೆ. ಒಂದು ವರ್ಷದ ಮಗುವಿಗೆ ನೀಡುವ ಔಷಧಿಯನ್ನು 7 ವರ್ಷದ ಮಗುವಿಗೆ ನೀಡಿದ್ರೆ ಪ್ರಯೋಜನವಿಲ್ಲ. ಹಾಗೆ ಒಂದು ವರ್ಷದ ಮಗುವಿಗೆ 10 ವರ್ಷದ ಮಕ್ಕಳಿಗೆ ನೀಡುವ ಮಾತ್ರೆ ನೀಡಿದ್ರೆ ಅಪಾಯ ಹೆಚ್ಚು. ಹಾಗಾಗಿ ವಯಸ್ಸಿಗೆ ತಕ್ಕಂತೆ ಔಷಧಿ ನೀಡಬೇಕು.

ಅವಶ್ಯವಿರುವಷ್ಟು ಔಷಧಿ ಮಾತ್ರ ನೀಡಿ : ಅನೇಕ ಬಾರಿ ಪಾಲಕರು ಅತಿ ಬುದ್ಧಿವಂತರಂತೆ ವರ್ತಿಸುತ್ತಾರೆ. ನೆಗಡಿಯಾದ್ರೆ, ನೆಗಡಿ ಮಾತ್ರೆ ಮಾತ್ರವಲ್ಲ ಜ್ವರ ಹಾಗೂ ಕೆಮ್ಮಿನ ಔಷಧಿ ಕೂಡ ನೀಡಿರುತ್ತಾರೆ. ಮುಂದೆ ಬರಬಾರದು ಎನ್ನುವ ಮುನ್ನೆಚ್ಚರಿಕೆ ಮೇಲೆ ಈ ಕೆಲಸ ಮಾಡಿರುತ್ತಾರೆ. ಆದ್ರೆ ಇದು ಒಳ್ಳೆಯದಲ್ಲ. ಜ್ವರ ಬಂದಲ್ಲಿ ಜ್ವರದ ಮಾತ್ರೆ ಮಾತ್ರ ನೀಡಬೇಕು.

ಚರ್ಮದ ಮೇಲೆ ಕಪ್ಪು ಕಲೆಗಳಾಗುತ್ತಿವೆಯಾ, ಒತ್ತಡವೂ ಆಗಿರಬಹುದು ಕಾರಣ

ಅಳತೆ ಚಮಚವನ್ನು ಉಪಯೋಗಿಸಿ : ಯಾವುದೇ ಕಾರಣಕ್ಕೂ ಅಂದಾಜಿಗೆ ಔಷಧಿ ನೀಡಬೇಡಿ. ಸಾಮಾನ್ಯವಾಗಿ ಮಕ್ಕಳ ಔಷಧಿ ಜೊತೆ ಅಳತೆಗಾಗಿ ಸಣ್ಣ ಕಪ್ ನೀಡಿರುತ್ತಾರೆ. ಅದು ನಿಮ್ಮ ಬಳಿ ಇಲ್ಲವೆಂದ್ರೆ ಚಮಚವನ್ನು ನೀವು ಬಳಸಬಹುದು. ಅಂದಾಜಿಗೆ ಔಷಧಿ ನೀಡಲು ಹೋದಾಗ, ಡೋಸ್ ಹೆಚ್ಚಾಗುವ ಅಪಾಯವಿರುತ್ತದೆ.

ದಿನಾಂಕ ಗಮನಿಸಿ : ಹಿಂದೊಮ್ಮೆ ಜ್ವರ ಎಂಬ ಕಾರಣಕ್ಕೆ ವೈದ್ಯರ ಬಳಿ ಹೋದಾಗ ಮಗುವಿಗೆ ವೈದ್ಯರು ಔಷಧಿ ನೀಡಿರ್ತಾರೆ. ಅದು ಮನೆಯಲ್ಲಿ ಹಾಗೆ ಇರುತ್ತದೆ. ಈಗ ಮತ್ತೆ ಜ್ವರ ಬಂದಾಗ ಮಗುವಿಗೆ ಅದನ್ನೇ ನೀಡಲು ಪಾಲಕರು ಮುಂದಾಗ್ತಾರೆ. ಆದ್ರೆ ಆ ಔಷಧಿ ದಿನಾಂಕ ಮುಗಿದಿದೆಯೇ ಎಂಬುದನ್ನು ಗಮನಿಸುವುದಿಲ್ಲ. ಔಷಧಿ ನೀಡುವ ಮೊದಲು ದಿನಾಂಕವನ್ನು ಪರಿಶೀಲಿಸಬೇಕು. ಎಕ್ಸ್ಪೈರ್ ಆಗಿರುವ ಔಷಧಿ ಅಡ್ಡಪರಿಣಾಮ ಬೀರುತ್ತದೆ.

ಚಳಿಗಾಲದಲ್ಲಿ ಕಾಡೋ ಹಿಮ್ಮಡಿ ಒಡೆತ, ಹೀಗ್ ಮಾಡಿ ಮನೆ ಮದ್ದು

20 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಆಸ್ಪಿರಿನ್ ಯುಕ್ತ ಮಾತ್ರೆಯನ್ನು ನೀಡಬೇಡಿ. ಹಾಗೆಯೇ, ಒಂದು ರೋಗವನ್ನು ಗುಣಪಡಿಸಬಲ್ಲ ಅನೇಕ ಔಷಧಿಗಳನ್ನು ಒಂದೇ ಬಾರಿ ಮಕ್ಕಳಿಗೆ ನೀಡಬೇಡಿ.
 

click me!