ರಾತ್ರಿ 9ಕ್ಕೆ ಊಟ ಮಾಡಿ, ತಕ್ಷಣ ಮಲಗೋ ಬದಲು 6ಕ್ಕೆ ಊಟ ಮಾಡಿದ್ರೆ ಆರೋಗ್ಯದಲ್ಲಿ ಕಮಾಲ್!

By Roopa Hegde  |  First Published Jul 12, 2024, 3:16 PM IST

ಸಾಮಾನ್ಯವಾಗಿ ಒಂಭತ್ತು ಗಂಟೆ ನಂತ್ರ ನಾವು ರಾತ್ರಿ ಊಟ ಮಾಡ್ತೇವೆ. ಹತ್ತು, ಹನ್ನೊಂದು ಗಂಟೆಗೆ ಊಟ ಮಾಡುವವರಿದ್ದಾರೆ. ಈ ನಿಮ್ಮ ಊಟದ ಸಮಯ ನಿಮ್ಮ ದೇಹವನ್ನು ಹಾಳು ಮಾಡುತ್ತೆ. ನಿಮ್ಮ ನಾನಾ ಅನಾರೋಗ್ಯಕ್ಕೆ ಇದು ಕಾರಣ. 
 


ಅನೇಕ ಭಾರತೀಯರ ಮನೆಯಲ್ಲಿ ಸಂಜೆ ಆರು – ಏಳು ಗಂಟೆ ಟೈಂ ಅಂದ್ರೆ ಅದು ಕಾಫಿ ಹೀರುವ ಸಮಯ. ಆಗ ಕಾಫಿ ಕುಡಿದು ರಿಲ್ಯಾಕ್ಸ್ ಆಗುವ ಜನರು ರಾತ್ರಿ 9 – 10 ಗಂಟೆಗೆ ಊಟಕ್ಕೆ ಕುಳಿತುಕೊಳ್ತಾರೆ. ಊಟವಾದ ಅರ್ಧಗಂಟೆ ನಂತ್ರ ಹಾಸಿಗೆ ಮೇಲಿರ್ತಾರೆ. ಭಾರತೀಯರ ಈ ಅಭ್ಯಾಸ ಅವರ ಆರೋಗ್ಯವನ್ನು ಹಾಳು ಮಾಡ್ತಿದೆ. ಈ ಬಗ್ಗೆ ನಡೆದ ಸಂಶೋಧನೆಯು ರಾತ್ರಿ 9 -9.30 ನಂತ್ರ ನೀವು ಮಾಡುವ ಊಟ ಅಪಾಯಕಾರಿ ಎಂದಿದೆ. ಸಂಜೆ 6 ಗಂಟೆಯಾಗ್ತಿದ್ದಂತೆ ಊಟ ಮುಗಿಸಿದ್ರೆ ಸಾಕಷ್ಟು ಪ್ರಯೋಜನಗಳನ್ನು ನೀವು ನೋಡ್ಬಹುದು ಎನ್ನುತ್ತಾರೆ ತಜ್ಞರು.

ನ್ಯೂಟ್ರಿಯೆಂಟ್ಸ್ (Nutrients) ಜರ್ನಲ್‌ನಲ್ಲಿ ಪ್ರಕಟವಾದ 2021 ರ ಅಧ್ಯಯನದ ಪ್ರಕಾರ, ರಾತ್ರಿ (Night) ತಡವಾಗಿ ನೀವು ಊಟ ಮಾಡುವುದರಿಂದ ಗ್ಲೂಕೋಸ್ (Glucose) ಚಯಾಪಚಯ ಸೇರಿದಂತೆ ಚಯಾಪಚಯ ಅನಿಯಂತ್ರಣ ಹೆಚ್ಚಾಗುತ್ತದೆ. ನೀವು ಆ ದಿನದ ಕೊನೆ ಊಟವನ್ನು ಬೇಗನೇ ಮುಗಿಸಿದ್ರೆ ನಿಮಗೆ ಮರುದಿನದ ಆಹಾರ ಸೇವನೆಗೆ ಸಮಯ ಸಿಗುತ್ತದೆ. ರಕ್ತದ ಸಕ್ಕರೆ, ಇನ್ಸುಲಿನ್ ಸಂವೇದನೆ, ರಕ್ತದೊತ್ತಡ ಮತ್ತು ಟ್ರೈಗ್ಲಿಸರೈಡ್‌ಗಳ ಮೇಲೆ ನಿಮ್ಮ ಈ ಊಟ ಧನಾತ್ಮಕ ಪರಿಣಾಮ ಬೀರುತ್ತದೆ. ಅದ್ರಲ್ಲೂ ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಜನರು ಅವಶ್ಯಕವಾಗಿ ರಾತ್ರಿ ಬೇಗ ಊಟ ಮಾಡ್ಬೇಕು ಎನ್ನುತ್ತಾರೆ ತಜ್ಞರು.  

Latest Videos

undefined

ನಿದ್ದೆ ಮಾಡಿದ ಮೇಲೂ ದಿನವೆಲ್ಲ ನಿದ್ರೆ ಬರುತ್ತಾ? ದೇಹದಲ್ಲಿ ಈ ಸಮಸ್ಯೆ ಇರಬಹುದು, ಎಚ್ಚರ!

ಊಟದ ಸಮಯವನ್ನು ಆರು ಗಂಟೆಗೆ ಬದಲಿಸಿದ್ರೆ ಏನು ಲಾಭ ? : ನಿಮ್ಮ ಊಟದ ಸಮಯವನ್ನು 9- 9.30ರ ಬದಲು 6 ಗಂಟೆಗೆ ಬದಲಿಸಿದಾಗ ಅನೇಕ ಬದಲಾವಣೆಗಳನ್ನು ನೀವು ನೋಡುತ್ತೀರಿ. ಸಂಜೆ ನಿಮ್ಮ ದೇಹಕ್ಕೆ ಅಪಾರ ಶಕ್ತಿ ಸಿಗುತ್ತದೆ. ರಾತ್ರಿ ಮಲಗುವ ಸಮಯದಲ್ಲಿ ನಿಮ್ಮ ದೇಹಕ್ಕೆ ಹೆಚ್ಚಿನ ಆಹಾರವನ್ನು ಜೀರ್ಣಿಸುವ ಭಾರ ಇರೋದಿಲ್ಲ. ಇದಲ್ಲದೆ ರಾತ್ರಿ ನಿಮ್ಮನ್ನು ಕಾಡುವ ಎದೆಯುರಿ, ಅಜೀರ್ಣದಂತಹ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ. 

ಹೆಚ್ಚುವರಿಯಾಗಿ, ಅವರು ಜರ್ನಲ್ ಆಫ್ ಕ್ಲಿನಿಕಲ್ ಎಂಡೋಕ್ರೈನಾಲಜಿ & ಮೆಟಾಬಾಲಿಸಮ್‌ನಲ್ಲಿ ಪ್ರಕಟವಾದ ಸಂಶೋಧನೆ ಪ್ರಕಾರ, ನೀವು ಸಂಜೆ ಬೇಗ ಆಹಾರ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ರಾತ್ರಿಯಿಡೀ ಹೆಚ್ಚು ಸ್ಥಿರವಾಗಿಡಲು ಸಹಾಯ ಮಾಡುತ್ತದೆ.  ನಿಮ್ಮ ನಿದ್ರೆಯ ಗುಣಮಟ್ಟ ಇದು ಸುಧಾರಿಸುತ್ತದೆ. ಇದರಿಂದ ಬೆಳಿಗ್ಗೆ ನೀವು ಫ್ರೆಶ್ ಆಗಿ ಏಳ್ಬಹುದು.

ಬೇಗ ನೀವು ಊಟ ಮಾಡುವುದ್ರಿಂದ ದೇಹದ ನೈಸರ್ಗಿಕ ಸಿರ್ಕಾಡಿಯನ್ ಲಯದೊಂದಿಗೆ ಹೊಂದಾಣಿಕೆ ಆಗುತ್ತದೆ. ಅದೇ ನೀವು ಲೇಟಾಗಿ ಆಹಾರ ಸೇವನೆ ಮಾಡಿದ್ರೆ ನಿಮ್ಮ ಲಯಕ್ಕೆ ಅಡ್ಡಿಪಡಿಸುತ್ತದೆ. ಇದ್ರಿಂದ ಜೀರ್ಣಕ್ರಿಯೆ ದುರ್ಬಲಗೊಳ್ಳುತ್ತದೆ. ತೂಕ ಹೆಚ್ಚಾಗಲು ಕಾರಣವಾಗುತ್ತದೆ.

ನೀವು ಸಂಜೆ 6 ಗಂಟೆ ಒಳಗೆ ಭೋಜನ ಮಾಡುವ ಜೊತೆಗೆ ಸಮಯ-ನಿರ್ಬಂಧಿತ ಭೋಜನದಿಂದ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯಂತಹ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಸಂಜೆ 6 ಗಂಟೆಗೆ ನೀವು ಊಟ ಮಾಡುವುದರಿಂದ ನಿದ್ರೆಗೆ ಮುಂಚೆ ದೀರ್ಘವಾದ ಸಮಯ ನಿಮ್ಮ ದೇಹಕ್ಕೆ ಸಿಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹದ ಉಷ್ಣತೆ ಮತ್ತು ರಕ್ತದಲ್ಲಿನ ಸಕ್ಕರೆಯ ಏರಿಳಿತಗಳಿಂದಾಗಿ ನಿದ್ರೆಯ ಆಗುವ ಅಡಚಣೆಯನ್ನು ಕಡಿಮೆ ಮಾಡುತ್ತದೆ. ಇದು ಆಳವಾದ ಹಾಗೂ ಶಾಂತ ನಿದ್ರೆಗೆ ಕಾರಣವಾಗುತ್ತದೆ. 

ಧೂಮಪಾನ ಮಾಡದ ಶೇ.50ರಷ್ಟು ಜನರಿಗೆ ಶ್ವಾಸಕೋಶದ ಕ್ಯಾನ್ಸರ್‌: ವರದಿಯಲ್ಲಿ ಬಹಿರಂಗ

ಬೇಗ ಆಹಾರ ಸೇವನೆ ಮಾಡುವುದು ಸರಳ ಆದರೆ ಪರಿಣಾಮಕಾರಿ ತಂತ್ರವಾಗಿದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಒಬೆಸಿಟಿಯಲ್ಲಿನ ಅಧ್ಯಯನ ಕೂಡ ಬೇಗ ಆಹಾರ ಸೇವನೆ ಮಾಡುವುದರಿಂದ ನಿದ್ರೆ ಅವಧಿ ಮತ್ತು ಗುಣಮಟ್ಟದಲ್ಲಿ ಸುಧಾರಣೆಯಾಗಿ ಮರುದಿನ ದೇಹಕ್ಕೆ ಹೆಚ್ಚು ಶಕ್ತಿ ಸಿಗುತ್ತದೆ ಎಂದಿದೆ. ಸಮಯ-ನಿರ್ಬಂಧಿತ ಆಹಾರವು ಹೃದ್ರೋಗ, ಟೈಪ್ 2 ಮಧುಮೇಹ ಮತ್ತು ಕೆಲವು ಕ್ಯಾನ್ಸರ್‌ಗಳಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕೆಲವರಿಗೆ ಇದ್ರಿಂದ ಸಮಸ್ಯೆ ಕಾಡಬಹುದು. ಅಂತವರು ಒಂದೇ ಬಾರಿ ಸಮಯ ಬದಲಿಸುವ ಬದಲು ನಿಧಾನವಾಗಿ ಸಮಯ ಬದಲಾವಣೆ ಮಾಡಬೇಕು. 

click me!