
ಮುಂಬೈ: ಇತ್ತೀಚೆಗೆ ಶ್ವಾಸಕೋಶ ಕ್ಯಾನ್ಸರ್‌ಗೆ ತುತ್ತಾಗುತ್ತಿರುವ ಜನರ ಸಂಖ್ಯೆ ಏರಿಕೆಯಾಗುತ್ತಿದೆ. ಶ್ವಾಸಕೋಶ ಕ್ಯಾನ್ಸರ್ ರೋಗಿಗಳ ಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ. ಕ್ಯಾನ್ಸರ್ ಗಂಭೀರ ಕಾಯಿಲೆಯಾಗಿದ್ದು, ಪ್ರಾಣವೇ ಹೋಗುವ ಸನ್ನಿವೇಶ ಉಂಟಾಗುತ್ತದೆ. ದೇಹದ ಯಾವುದೇ ಭಾಗ ಕ್ಯಾನ್ಸರ್‌ಗೆ ಒಳಗಾಗಬಹುದು. ಶ್ವಾಸಕೋಶ ಕ್ಯಾನ್ಸರ್‌ಗೆ ಧೂಮಪಾನ ಪ್ರಮುಖ ಕಾರಣ. ಆದ್ರೆ ಈಗ ಬಂದಿರುವ ವರದಿ ಧೂಮಪಾನ ಮಾಡದ ಜನರನ್ನು ಸಹ ಆತಂಕಕ್ಕೀಡು ಮಾಡಿದೆ. ಹೌದು, ಧೂಮಪಾನ ಮಾಡದ ಜನರೇ ಶ್ವಾಸಕೋಶ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಅತಿಯಾಗಿ ಧೂಮಪಾನ ಮಾಡುವ ಪಾಶ್ಚತ್ಯಾ ರಾಷ್ಟ್ರಗಳಿಗಿಂತ ಭಾರತೀಯರು ಹೆಚ್ಚಾಗಿ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎಂದು ಮೆಡಿಕಲ್ ಜನರ್ಲ್ ದಿ ಲಾನ್ಸೆಟ್ ವರದಿ ಬಹಿರಂಗಪಡಿಸಿದೆ.
ಮೆಡಿಕಲ್ ಜನರ್ಲ್ ದಿ ಲಾನ್ಸೆಟ್ ವರದಿಯಲ್ಲಿ ಮಂಬೈನ ಟಾಟಾ ಮೆಮೊರಿಯಲ್ ಸೆಂಟರ್ ಆಸ್ಪತ್ರೆ ವೈದ್ಯರ ತಂಡ ಸಮೀಕ್ಷೆಯಲ್ಲಿ ಭಾಗಿಯಾಗಿತ್ತು. ಈ ವರದಿ ಆಗ್ನೇಯ ಏಷ್ಯಾದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗುತ್ತಿರುವ ರೋಗಿಗಳ ಕುರಿತ ವಿವರವಾದ ಅಧ್ಯಯನವನ್ನು ಸಿದ್ಧಪಡಿಸಿದೆ. ವಿವಿಧ ಭಾಗದ ಕ್ಯಾನ್ಸರ್‌ಗಳಲ್ಲಿ ಶ್ವಾಸಕೋಶ ಕ್ಯಾನ್ಸರ್‌ಗೆ ತುತ್ತಾಗುವರ ಸಂಖ್ಯೆ ಮೂರನೇ ಸ್ಥಾನದಲ್ಲಿದೆ. ಶ್ವಾಸಕೋಶ ಕ್ಯಾನ್ಸರ್‌ಗೆ ಒಳಗಾಗುವ ಬಹುತೇಕ ರೋಗಿಗಳು ಸಾವನ್ನಪ್ಪುತ್ತಿದ್ದಾರೆ ಎಂದು ಈ ಅಧ್ಯಯನದ ವರದಿ ಹೇಳಿದೆ.
ಪಾಶ್ವಿಮಾತ್ಯ ದೇಶಗಳಿಗೆ ಹೋಲಿಕೆ ಮಾಡಿದಾಗ ಭಾರತದಲ್ಲಿ 10 ವರ್ಷಗಳ ಹಿಂದೆಯೇ ಇಲ್ಲಿಯ ಜನರು ಶ್ವಾಸಕೋಶ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಸಾಮಾನ್ಯವಾಗಿ 54 ರಿಂದ 70 ವಯಸ್ಸಿನ ಜನರು ಈ ರೋಗದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 2020ರಲ್ಲಿ ಆಗ್ನೇಯ ಏಷ್ಯಾ ಭಾಗದಲ್ಲಿ 18.5 ಲಕ್ಷ ಶ್ವಾಸಕೋಶ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 16.6 ಲಕ್ಷ ಜನರು ಮೃತಪಟ್ಟಿದ್ದಾರೆ.
2020ರಲ್ಲಿ ಇಡೀ ವಿಶ್ವದಲ್ಲಿ ಬರೋಬ್ಬರಿ 22 ಲಕ್ಷ (ಶೇ.11.6) ಹೊಸ ಶ್ವಾಸಕೋಸ ಕ್ಯಾನ್ಸರ್ ಪ್ರಕರಣಗಳು ಬೆಳಕಿಗೆ ಬಂದಿವೆ. 22 ಲಕ್ಷ ಹೊಸ ಪ್ರಕರಣದಲ್ಲಿ 17 ಲಕ್ಷ (ಶೇ.18) ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾರತದಲ್ಲಿ 72,510 ಶ್ವಾಸಕೋಶ ಕ್ಯಾನ್ಸರ್ (ಶೇ.5.8) ಪ್ರಕರಣಗಳು ಕಂಡು ಬಂದಿದ್ದು, 66,279 (ಶೇ.7.8) ಮಂದಿ ಸತ್ತಿದ್ದಾರೆ.
ಪೋಷಕರೇ ಎಚ್ಚರ! ಹೆಚ್ಚುತ್ತಿದೆ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಸ್ಮೋಕಿಂಗ್ ಚಟ
ಈ ಸಮೀಕ್ಷೆ ನಡೆಸಿದ ವೈದ್ಯರ ತಂಡದ ಸದಸ್ಯರಾದ ಟಾಟಾ ಮೆಡಿಕಲ್ ಸೆಂಟರ್‌ನ ಮೆಡಿಕಲ್ ಆಂಕೊಲಾಜಿ ವಿಭಾಗದ ಡಾ.ಕುಮಾರ್ ಪ್ರಭಾಷ್, ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸ್ಥಿತಿಗತಿಯ ಬಗ್ಗೆ ಆಘಾತಕಾರಿ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ನಮ್ಮ ದೇಶದಲ್ಲಿ 50% ಕ್ಕಿಂತ ಹೆಚ್ಚು ಶ್ವಾಸಕೋಶದ ಕ್ಯಾನ್ಸರ್ ರೋಗಿಗಳು ಧೂಮಪಾನ ಮಾಡದವರಾಗಿದ್ದಾರೆ. ಧೂಮಪಾನಿಗಳಲ್ಲದವರಲ್ಲಿ ಶ್ವಾಸಕೋಶ ಕ್ಯಾನ್ಸರ್ ಕಂಡು ಬರುತ್ತಿದೆ. ವಾಯುಮಾಲಿನ್ಯದಿಂದಾಗಿ ಜನರು ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. ವಾಯುಮಾಲಿನ್ಯದಲ್ಲಿ ಅಪಾಯಕಾರಿ ಖನಿಜಾಂಶಗಳು (Asbestos) ಕ್ರೋಮಿಯಂ, ಕ್ಯಾಡ್ಮಿಯಂ, ಆರ್ಸೆನಿಕ್ ಅಂಶಗಳು ಶ್ವಾಸಕೋಶಕ್ಕೆ ಸೇರಿ ಹಾನಿಯುಂಟು ಮಾಡುತ್ತಿವೆ. ಧೂಮಪಾನ ಮಾಡುವ ಜನರ ಪಕ್ಕದಲ್ಲಿದ್ರೂ ಈ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಮೇ 13ರಂದು ವಿಶ್ವ ತಂಬಾಕು ರಹಿತ ದಿನ
ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ಧೂಮಪಾನವು ನಿಮ್ಮ ಶ್ವಾಸಕೋಶವನ್ನು ನಿಧಾನವಾಗಿ ಹಾನಿಗೊಳಿಸುತ್ತದೆ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD) ಯಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ಧೂಮಪಾನವು ನಿಮ್ಮ ಹೃದಯ ಮತ್ತು ರಕ್ತನಾಳಗಳ ಮೇಲೆ ಹಾನಿಯನ್ನುಂಟುಮಾಡುತ್ತದೆ, ನಿಮ್ಮ ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.
ಹುಡುಗಿಯರೇ ಸ್ಟ್ರಾಂಗ್ ಅಂತ ಸಿಗರೇಟ್ ಸೇದೋದ್ರಲ್ಲೂ ಪ್ರೂವ್ ಮಾಡಿದ ಹೆಣ್ಮಕ್ಕಳು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.