ಇನ್ನೊಂದು ಮಹಾಮಾರಿಗೆ ಜಗತ್ತು ತಯಾರಾಗಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಕೊರೋನಾ ಕೊನೆಯಲ್ಲ ಇನ್ನಷ್ಟು ಬರುವುದಿದೆ ಎಂದು ವಾರ್ನ್ ಮಾಡಿದೆ.
ಜಗತ್ತು ಕೊರೋನಾ ವೈರಸ್‌ನಿಂದ ತತ್ತರಿಸಿದೆ. ಈಗಾಗಲೇ ಸಾಕಪ್ಪಾ ಸಾಕು ಅನ್ನೋವಷ್ಟಾಗಿರುವ ಕೊರೋನಾ ಕೊನೆಯಲ್ಲ. ಮುಂದಿನ ದಿನಗಳಲ್ಲಿ ಇಂತಹ ಮಹಾಮಾರಿ ಇನ್ನಷ್ಟು ಬರಲಿದೆ ಎಂದಿದೆ ವಿಶ್ವ ಆರೋಗ್ಯ ಸಂಸ್ಥೆ.
ಈ ಬಗ್ಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಗೆಬ್ರೀಸಸ್, ಜಗತ್ತು ಮುಂದಿನ ಮಹಾಮಾರಿಗೆ ಸಿದ್ಧವಾಗಬೇಕು. ದೇಶಗಳು ಸಾರ್ವಜನಿಕ ಆರೋಗ್ಯ ಸೇವೆ ನಿಟ್ಟಿನಲ್ಲಿ ಹೆಚ್ಚು ಹೂಡಿಕೆ ಮಾಡಬೇಕಿದೆ ಎಂದಿದ್ದಾರೆ.
ಕೊರೋನಾ ಲಸಿಕೆ ಕದಿಯಲು ಗುಪ್ತಚರ ದಳಗಳ ರೇಸ್!
ಸುಮಾರು 27.19 ಮಿಲಿಯನ್ ಜನರು ಕೊರೋನಾದಿಂದ ಬಾಧಿಸಲ್ಪಟ್ಟಿದ್ದು, 9 ಲಕ್ಷದಷ್ಟು ಜನ ಮೃತಪಟ್ಟಿದ್ದಾರೆ. ಮೊದಲ ಕೊರೋನಾ ಕೇಸು ಚೀನಾದಕ್ಕು 2019 ಡಿಸೆಂಬರ್‌ನಲ್ಲಿ ಪತ್ತೆಯಾಗಿತ್ತು.
ಮಹಾಮಾರಿಗಳು ಹುಟ್ಟಿಕೊಳ್ಳುವುದು ಜನ ಜೀವನದ ಭಾಗ ಎಂಬುದನ್ನು ಚರಿತ್ರೆಯೇ ಸಾಬೀತುಪಡಿಸಿದೆ. ಮುಂದಿನ ಮಹಾಮಾರಿ ವಕ್ಕರಿಸುವಾಗ ಜಗತ್ತು ಸಿದ್ಧವಾಗಿರಬೇಕು. ಈಗ ಆಗಿರುವುದಕ್ಕಿಂತ ಹೆಚ್ಚು ತಯಾರಾಗಿರಬೇಕು ಎಂದಿದ್ದಾರೆ.
ರಷ್ಯಾದ ಕೊರೋನಾ ಲಸಿಕೆ ಸುರಕ್ಷಿತ ಹಾಗೂ ಪರಿಣಾಮಕಾರಿ; ಪ್ರಯೋಗದಿಂದ ಸಾಬೀತು!
ಕೊರೋನಾದಿಂದ ಕ್ರೀಡೆ, ಮನೋರಂಜನೆ, ಪ್ರವಾಸ, ಉದ್ಯಮ, ನಿತ್ಯದ ಜನ ಜೀವನ ಯಾವುದೂ ಕೊರೋನಾ ಮುಷ್ಠಿಯಿಂದ ತಪ್ಪಿಸಿಕೊಂಡಿಲ್ಲ. ಕೊರೋನಾ ಜಗತ್ತನ್ನು ಪೀಡಿಸಿದ ಮೊದಲ ಮಹಾಮಾರಿಯಲ್ಲ, ಹಾಗೆಯೇ ಇದು ಕೊನೆಯದ್ದೂ ಅಲ್ಲ ಅನ್ನುವುದು ನೆನಪಿರಬೇಕು. ಇದೊಂದು ರೀತಿ ಎಚ್ಚರಿಕೆ ಕರೆಗಂಟೆ ಎನಿಸಿದರೂ, ಇದು ಮುಂದಿನ ಸ್ಥಿತಿಗೆ ಜನರು ಸಿದ್ಧವಾಗಬೇಕಾದ ಅನಿವಾರ್ಯತೆಯನ್ನು ತಿಳಿಸುತ್ತದೆ.
ಮೊದಲ ಮಹಾಮಾರಿಗೆ ಮದ್ದು ಹುಡುಕಿ ಗೆದ್ದು ಬಂದಂತೆ ಒಂದು ದಿನ ನಾವು ಕೊರೋನಾವನ್ನೂ ಗೆಲ್ಲಬಹುದು. ಮುಖ್ಯ ವಿಚಾರ ಏನು ಎಂದರೆ ಮುಂದಿನದಕ್ಕೆ ಸಿದ್ಧರಾಗಿರಬೇಕು. ಈ ಸಲದ ತಪ್ಪಿನಿಂದ ಜಗತ್ತು ಕಲಿಯಬೇಕಿದೆ.