ಲೈಫ್‌ ಬೋರಿಂಗ್‌ ಅನ್ಬೇಡಿ, ಸೆಲ್ಫ್‌ ಕೇರ್ ಮಾಡಿ, ಖುಷಿಯಾಗಿರಿ

Published : Aug 04, 2022, 04:36 PM IST
ಲೈಫ್‌ ಬೋರಿಂಗ್‌ ಅನ್ಬೇಡಿ,  ಸೆಲ್ಫ್‌ ಕೇರ್ ಮಾಡಿ, ಖುಷಿಯಾಗಿರಿ

ಸಾರಾಂಶ

ಕಾಲ ಬದಲಾಗಿದೆ. ಒತ್ತಡದ ಜೀವನಶೈಲಿ ಪ್ರತಿಯೊಬ್ಬರನ್ನೂ ಕಂಗೆಡಿಸುತ್ತಿದೆ. ಧಾವಂತದ ಈ ಬದುಕಿನಲ್ಲಿ ಕಾಡುತ್ತಿರುವ ಕಾಯಿಲೆಗಳು ಒಂದೆರಡಲ್ಲ. ದೈಹಿಕವಾಗಿಯೂ, ಮಾನಸಿಕವಾಗಿಯೂ ಮನುಷ್ಯ ಕಂಗಾಲಾಗಿ ಹೋಗಿದ್ದಾನೆ. ಹೀಗಿರುವಾಗ ಸೆಲ್ಫ್‌ ಕೇರ್ ಎಂಬುದು ತುಂಬಾ ಮುಖ್ಯ. ಸ್ವಯಂ ಆರೈಕೆಗಾಗಿ ಇಲ್ಲಿದೆ ಕೆಲವೊಂದು ಟಿಪ್ಸ್.

ಬದಲಾದ ಜೀವನಶೈಲಿ, ಕಳಪೆ ಆಹಾರಪದ್ಧತಿ, ವಿಪರೀತ ಒತ್ತಡದಿಂದ ಮನುಷ್ಯನ ಜೀವನ ಕಾಯಿಲೆಗಳ ಗೂಡಾಗಿದೆ. ದುಡ್ಡು ಮಾಡಲು ವ್ಯಯಿಸುತ್ತಿರುವ ದುಪ್ಪಟ್ಟು ಹಣವನ್ನು ಮನುಷ್ಯ ಮತ್ತೆ ರೋಗಗಳಿಗೆ ಚಿಕಿತ್ಸೆ ಪಡೆದುಕೊಳ್ಳಲು ವ್ಯಯಿಸುತ್ತಿದ್ದಾನೆ. ದೈಹಿಕ, ಮಾನಸಿಕ ಸಮಸ್ಯೆಗೆ ಚಿಕಿತ್ಸೆ ನೀಡುವ ಹೆಲ್ತ್ ಸೆಂಟರ್‌ಗಳು ಅಲ್ಲಲ್ಲಿ ಲಭ್ಯವಿದೆ. ಒತ್ತಡದ ಬದುಕಿನಲ್ಲಿ ಮನುಷ್ಯ ಖುಷಿಯಿಂದ ಜೀವನ ನಡೆಸಬೇಕಾದರೆ ಸ್ವಯಂ ಆರೈಕೆ ಮಾಡಿಕೊಳ್ಳುವುದು ತುಂಬಾ ಮುಖ್ಯ, ಹಾಗಂದರೇನು ? ಸೆಲ್ಫ್‌ ಕೇರ್‌ಗಾಗಿ ನಾವೇನು ಮಾಡಬಹುದು. ಇಲ್ಲಿದೆ ಹೆಚ್ಚಿನ ಮಾಹಿತಿ 

ಸ್ವಯಂ ಆರೈಕೆ ಎಂದರೇನು ? 
ಒತ್ತಡದ (Pressure) ಬದುಕಿನಲ್ಲಿ ಮನುಷ್ಯ ಖುಷಿಯಿಂದ ಸಮಯ ಕಳೆಯಲು ಸೆಲ್ಫ್‌ ಕೇರ್ ತುಂಬಾ ಮುಖ್ಯವಾಗಿದೆ. ಸ್ವಯಂ ಆರೈಕೆಯಿದ್ದರಷ್ಟೇ ನಾವು ಯಾವಾಗಲೂ ಖುಷಿಯಿಂದ ಜೀವನ ನಡೆಸಲು ಸಾಧ್ಯ. ಸೆಲ್ಫ್‌ ಕೇರ್ ಎಂಬುದು ನಮ್ಮನ್ನು ನಾವು ಪ್ಯಾಪರಿಂಗ್ ಮಾಡಿಕೊಳ್ಳುವ ಪ್ರಕ್ರಿಯೆಯಾಗಿದೆ. ನಮ್ಮ ಆಹಾರ, ಉಡುಗೆ-ತೊಡುಗೆ, ದೈಹಿಕ, ಮಾನಸಿಕ ಆರೋಗ್ಯದ (Health care) ಕಾಳಜಿ ವಹಿಸುವುದು. ಇದು ವ್ಯಕ್ತಿ ಜೀವನದಲ್ಲಿ ಉತ್ಸುಕನಾಗಿರುವಂತೆ ನೋಡಿಕೊಳ್ಳುತ್ತದೆ. ಹಾಗಾದರೆ ಸ್ವಯಂ ಆರೈಕೆ (Self care) ಮಾಡಿಕೊಳ್ಳಲು ನೀವೇನು ಮಾಡಬೇಕು. ಇಲ್ಲಿದೆ ಕೆಲವೊಂದು ಟಿಪ್ಸ್.  

ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ: ವ್ಯಕ್ತಿಯಿಂದ ವ್ತಕ್ತಿಗೆ ವ್ಯಕ್ತಿತ್ವ (Personality) ಬದಲಾಗುತ್ತಾ ಹೋಗುತ್ತದೆ. ಹೀಗಾಗಿ ಎಲ್ಲರನ್ನೂ ಮೆಚ್ಚಿಸಲು ಖಂಡಿತಾ ಸಾಧ್ಯವಿಲ್ಲ. ಹೀಗಾಗಿ ಇಂಥಾ ವ್ಯರ್ಥ ಪ್ರಯತ್ನಗಳನ್ನು ಮಾಡದಿರಿ. ನಿಮಗಿಷ್ಟವಿಲ್ಲದ ಕೆಲಸವನ್ನು ಮಾಡಿ ಮತ್ತೊಬ್ಬರನ್ನು ಮೆಚ್ಚಿಸುವುದು ಅಗತ್ಯವೂ ಇಲ್ಲ. ಉದಾಹರಣೆಗೆ ಜೀವನಶೈಲಿ (Lifestyle), ಆಹಾರಪದ್ಧತಿ, ಮಾತನಾಡುವ ರೀತಿ ಇದ್ಯಾವುದನ್ನೂ ಇನ್ನೊಬ್ಬರಿಗಾಗಿ ಬದಲಾವಣೆ ಮಾಡಿಕೊಳ್ಳಬೇಕಿಲ್ಲ. ಇನ್ನೊಬ್ಬರಿಗಾಗಿ ಬದಲಾಯಿಸುವ ಅಭ್ಯಾಸ ರೂಢಿಸಿಕೊಂಡರೆ ನಮ್ಮತನ ಉಳಿಯುವುದಿಲ್ಲ. ಜೀವನದಲ್ಲಿ ಖುಷಿಯೂ ಇರುವುದಿಲ್ಲ. 

ಸಹಾಯ ಸ್ವೀಕರಿಸುವುದು: ಸ್ವಆರೈಕೆಯು ಸಾಮಾನ್ಯವಾಗಿ ಜೀವನದಲ್ಲಿ ಯಶಸ್ವಿಯಾಗಲು ನಮ್ಮ ವ್ಯಕ್ತಿತ್ವವನ್ನೇ ಹೊಂದಿಸುವುದು ಎಂದರ್ಥ. ಕೆಲವೊಮ್ಮೆ ನೀವು ಎಲ್ಲವನ್ನೂ ಏಕಾಂಗಿಯಾಗಿ ಮಾಡಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳಬೇಕು. ನಾನು ಸಂಪೂರ್ಣವಾಗಿ ಪರಿಪೂರ್ಣವಾಗಿದ್ದೇನೆ ಎಂದು ಯಾವತ್ತೂ ಭಾವಿಸಬೇಡಿ. ಇನ್ನೊಬ್ಬರ ನೆರವು ಬೇಕೆಂದಾಗ ಕೇಳಲು ಹಿಂಜರಿಯಬೇಡಿ. ಹೀಗೆ ಮಾಡಿದಾಗ ಸಮಸ್ಯೆಗಳು ಎದುರಾಗುವ ಸಾಧ್ಯತೆಯೇ ಹೆಚ್ಚು.

ಸಾಕಷ್ಟು ವಿಶ್ರಾಂತಿ ಪಡೆಯುವುದು: ಸ್ವಯಂ ಆರೈಕೆಯಲ್ಲಿ ಮುಖ್ಯವಾದುದು ಸಾಕಷ್ಟು ವಿಶ್ರಾಂತಿ ಪಡೆಯುವ ಅಭ್ಯಾಸ. ಬಿಡುವಿಲ್ಲದ ದಿನಚರಿಯಲ್ಲಿ ಚಟುವಟಿಕೆಯಿಂದ ಇರಬೇಕಾದರೆ ಸರಿಯಾದ ರೀತಯಲ್ಲಿ ವಿಶ್ರಾಂತಿ ಪಡೆಯುವುದು ತುಂಬಾ ಮುಖ್ಯ. ವಿಶ್ರಾಂತಿ ಸರಿಯಾಗದಿದ್ದಾಗ ದೇಹ ದಣಿಯುತ್ತದೆ. ಇದರಿಂದ ಖುಷಿಯಿಂದ ಇರಲು ಸಾಧ್ಯವಿಲ್ಲ. ಮನುಷ್ಯ ದೇಹವೆಂದರೆ ಯಂತ್ರವಲ್ಲ. ಅದಕ್ಕೆ ದೈಹಿಕವಾಗಿಯೂ, ಮಾನಸಿಕವಾಗಿಯೂ ವಿಶ್ರಾಂತಿ ಬೇಕಾಗುತ್ತದೆ. ಅದನ್ನು ಸರಿಯಾದ ಸಮಯದಲ್ಲಿ ಕೊಡುವುದು ಮುಖ್ಯ.  

ಖುಷಿಯೆನಿಸುವ ರೀತಿ ಡ್ರೆಸ್ ಮಾಡಿಕೊಳ್ಳಿ: ಯಾರು ಮಾಡಬೇಕು, ಯಾರು ಮಾಡಬೇಕು, ನಾನಿರುವುದೇ ಹೀಗೆ ಅನ್ನೋದನ್ನು ಬಿಟ್ಟುಬಿಡಿ. ಉತ್ತಮವಾಗಿ ಡ್ರೆಸ್ ಮಾಡುವ ಅಭ್ಯಾಸ, ಸಹಜವಾಗಿ ನಿಮ್ಮ ಆತ್ಮವಿಶ್ವಾಸ (Confidence)ವನ್ನು ಹೆಚ್ಚಿಸಲು ನೆರವಾಗುತ್ತದೆ. ನೀವು ನಿಮ್ಮನ್ನು ಹೇಗೆ ಪ್ರಸ್ತುತಪಡಿಸುತ್ತೀರಿ ಎಂಬುದು ನಿಮ್ಮ ವ್ಯಕ್ತಿತ್ವವನ್ನು ರೂಪೀಕರಿಸುತ್ತದೆ. ಉತ್ತಮವಾಗಿ ಡ್ರೆಸ್ ಮಾಡುವುದರಿಂದ ಇದು ಸಾಧ್ಯವಾಗುತ್ತದೆ. ಒಳ್ಳೆಯ ಭಾವನೆ ಮತ್ತು ಆತ್ಮವಿಶ್ವಾಸವು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಬಹಳ ಮುಖ್ಯ, ದೈಹಿಕ ಸ್ವ-ಆರೈಕೆಯು ನಿಮ್ಮ ಒಟ್ಟಾರೆ ಸ್ವ-ಆರೈಕೆಯ ಒಂದು ಅಂಶವಾಗಿದೆ, ಇದು ನಿಮ್ಮ ಕಾಳಜಿಯನ್ನು ಒಳಗೊಂಡಿರುತ್ತದೆ. ತಜ್ಞರ ಪ್ರಕಾರ, ಆರೋಗ್ಯಕರ ಸಮತೋಲನವನ್ನು ಕಂಡುಕೊಳ್ಳುವುದು ಉತ್ತಮ ಸ್ವ-ಆರೈಕೆ ತಂತ್ರಗಳಲ್ಲಿ ಒಂದಾಗಿದೆ.

ವ್ಯಾಯಾಮಕ್ಕಾಗಿ ಸಮಯ ನಿಗದಿಪಡಿಸುವುದು: ಸ್ವಯಂ ಆರೈಕೆ ಚಟುವಟಿಕೆಗಳ ಬಗ್ಗೆ ಮಾತನಾಡುವಾಗ ದೈಹಿಕ ಆರೋಗ್ಯಕ್ಕೆ ತುಂಬಾ ಮುಖ್ಯ. ಇದು ದೇಹವನ್ನು ಫಿಟ್ ಆಗಿಡುವುದು ಮಾತ್ರವಲ್ಲದೆ ಮಾನಸಿಕವಾಗಿ ನೆಮ್ಮದಿ ನೀಡುತ್ತದೆ. ಹೀಗಾಗಿ ನಿಮ್ಮ ದಿನಚರಿಯಲ್ಲಿ ವ್ಯಾಯಾಮಕ್ಕೆ (Exercise) ಇಂತಿಷ್ಟು ಸಮಯವನ್ನು ಮೀಸಲಿಡುವುದು ಮುಖ್ಯ. ವ್ಯಾಯಾಮವು ನಿಮ್ಮ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ, ಅನೇಕ ಸಂದರ್ಭಗಳಲ್ಲಿ ಇದು ಚಿತ್ತ, ಆತಂಕ ಮತ್ತು ಖಿನ್ನತೆಯನ್ನು ನಿರ್ವಹಿಸುವಲ್ಲಿ ಔಷಧೀಯವಾಗಿ ಪರಿಣಾಮಕಾರಿಯಾಗಿದೆ ಎಂದು ತೋರಿಸಲಾಗಿದೆ. ಓಟ, ಬೈಕಿಂಗ್ ಅಥವಾ ಈಜು ಮುಂತಾದ ಏರೋಬಿಕ್ ಚಟುವಟಿಕೆಗಳನ್ನು ಆಯ್ಕೆಮಾಡಿ. ಅದು ಉತ್ತಮವಾದ ನರರಾಸಾಯನಿಕಗಳ ಬಿಡುಗಡೆಯನ್ನು ಪ್ರಚೋದಿಸುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐದೇ ನಿಮಿಷದಲ್ಲಿ ಹೊಟ್ಟೆಯನ್ನು ಸುಲಭವಾಗಿ ಕ್ಲೀನ್ ಮಾಡುವ ಅದ್ಭುತ ಟಿಪ್ಸ್!
ತೂಕ ಇಳಿಸಿಕೊಳ್ಳಲೆಂದು ಜಿಮ್‌ಗೆ ಹೋದ ಯುವತಿಗೆ ಪಿರಿಯಡ್ಸ್ ಸ್ಟಾಪ್ ಆಯ್ತು!