ಎಷ್ಟು ಪ್ರಯತ್ನಿಸಿದ್ರೂ Body Weight ಇಳೀತಿಲ್ವಾ? ನೀವು ಈ ತಪ್ಪು ಮಾಡ್ತಿರಬಹುದು!

By Suvarna News  |  First Published Apr 1, 2022, 4:23 PM IST

ತೂಕ (Weight) ಇಳಿಸ್ಕೊಂಡು ಸಣ್ಣಗಾಗ್ಬೇಕು ಅಂತ ತುಂಬಾ ದಿನದಿಂದ ಟ್ರೈ ಮಾಡ್ತಿದ್ದೀರಾ ? ಆದ್ರೂ ಯಾಕೋ ಸಣ್ಣ ಆಗ್ತಾನೇ ಇಲ್ವಾ ? ನಿಮಗರಿವಿಲ್ಲದೇ ಈ ತಪ್ಪುಗಳನ್ನು (Mistakes) ಮಾಡ್ತಿದ್ದೀರಾ ಗಮನಿಸಿಕೊಳ್ಳಿ.


ದೇಹದ ತೂಕ (Weight Loss) ಕಡಿಮೆ ಮಾಡಿಕೊಳ್ಳುವುದು ತುಂಬಾ ಮಂದಿಯ ಕನಸು. ಎಷ್ಟೋ ಮಂದಿ, ಇದಕ್ಕಾಗಿ ತುಂಬಾ ಪ್ರಯತ್ನಿಸುತ್ತಾರೆ; ಆದರೆ ಎಷ್ಟು ಪರಿಶ್ರಮ ಪಟ್ಟರೂ ಕೆಲವೊಮ್ಮೆ ವಿಫಲರಾಗುತ್ತಾರೆ. ನಿಜಕ್ಕೂ ಇದೊಂದು ಟ್ರಿಕೀ ವಿಷಯ. ಮೈತೂಕ ಕಳೆದುಕೊಳ್ಳಲು ಎಲ್ಲ ರೀತಿಯಲ್ಲಿ ಪ್ರಯತ್ನಿಸಿದರೂ ಕಳೆದುಕೊಳ್ಳಲು ಸಾಧ್ಯವಾಗದಿದ್ದರೆ ಬಹಳಷ್ಟು ಅತೃಪ್ತಿ ಮತ್ತು ಡಿಮೋಟಿವೇಶನ್‌ಗೆ ಕಾರಣವಾಗಬಹುದು. ಹಾಗಾಗಿದ್ದರೆ ನೀವು ಕೆಲವು ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದರ್ಥ. ಮೈತೂಕ ಇಳಿಸಲು ನೀವು ಮಾಡುತ್ತಿರುವ ಕೆಲವು ಯತ್ನಗಳೇ ನಿಮ್ಮ ಈ ಪ್ರಯತ್ನದಲ್ಲಿ ಮಾರಕ ಆಗುತ್ತಿರಬಹುದು. ಹೀಗಾಗಿ ನೀವು ಗಮನಿಸಬೇಕಾದ ಸಂಗತಿಗಳು ಇಲ್ಲಿವೆ.

ಹಸಿವಿನಿಂದ ಬಳಲಬೇಡಿ (Starving)
ಮೈತೂಕ ಕಳೆದುಕೊಳ್ಳುವುದು ಎಂದರೆ ಆಹಾರ ಸೇವಿಸದೇ ಇರುವುದು ಎಂದರ್ಥವಲ್ಲ. ಡಯಟ್ ಮತ್ತು ತೂಕ ನಷ್ಟದ ವಿಚಾರ ಬಹಳ ಟ್ರಿಕ್ಕೀ. ಆಹಾರಕ್ರಮದಲ್ಲಿ ಕ್ಯಾಲೋರಿಗಳ ಬ್ಯಾಲೆನ್ಸ್ ಸಾಧಿಸುವುದು ಮುಖ್ಯ. ಹಸಿದುಕೊಂಡು ಇದ್ದರೆ ಮೈಯ ಶಕ್ತಿ ಇಳಿದು ಮೂರ್ಛೆ ಹೋಗಬಹುದೇ ವಿನಃ ತೂಕ ಇಳಿಯಲಾರದು.

Tap to resize

Latest Videos

Miss Universe ಹರ್ನಾಜ್ ಸಂಧುಗೆ ಈ ಕಾಯಿಲೆ ಇದೆಯಂತೆ!

ಹಸಿವಿನಿಂದ ಇರುವುದು ನಿಮ್ಮ ಚಯಾಪಚಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ದೌರ್ಬಲ್ಯ ಮತ್ತು ಆಯಾಸಕ್ಕೆ ಕಾರಣವಾಗಬಹುದು. ಇದು ನಿಮ್ಮ ಕೆಲಸಗಳಿಗೆ ಅಡ್ಡಿಯಾಗುತ್ತದೆ. ಇದು ನಿಮ್ಮ ದೇಹಕ್ಕೆ ಅಗತ್ಯವಾದ ಹೆಚ್ಚುವರಿ ಪೋಷಕಾಂಶಗಳನ್ನು ಮೂಲ ಸಂಗ್ರಹದಿಂದಲೇ ಕಸಿದುಕೊಳ್ಳಬಹುದು. ಇದು ದೇಹದಲ್ಲಿ ಕೊರತೆಯನ್ನು ಉಂಟುಮಾಡುತ್ತದೆ. ಇದನ್ನು ಅನುಭವಿಸಿ ಸಾಕಾಗಿ, ಕೊನೆಗೊಂದು ದಿನ ಜಂಕ್ ಫುಡ್ ಕಂಡದ್ದೇ ಅದರ ಮೇಲೆ ಮುಗಿಬಿದ್ದು ತಿನ್ನಲಾರಂಭಿಸುತ್ತೀರಿ. ಹೀಗಾಗಿ ತೀರಾ ಹಸಿವೂ ತಪ್ಪು.

ಉಪಾಹಾರ ಬಿಟ್ಟುಬಿಡುವುದು ಮಾಡಬೇಡಿ (Breakfast)
ಬೆಳಗಿನ ಉಪಾಹಾರವನ್ನು ತ್ಯಜಿಸುವುದು ಸಾಮಾನ್ಯವಾಗಿ ತೂಕ ಇಳಿಸುವವರು ಮಾಡುವ ತಪ್ಪುಗಳಲ್ಲಿ ಒಂದು. ಇದು ದೈನಂದಿನ ಜೀವನದಲ್ಲಿ ಸಹ ತುಂಬಾ ಮಂದಿಗೆ ಸಾಮಾನ್ಯ ಅಭ್ಯಾಸವಾಗಿಬಿಟ್ಟಿದೆ. ಬೆಳಗಿನ ಉಪಾಹಾರ ದಿನದ ಪ್ರಮುಖ ಪೋಷಕಾಂಶವನ್ನು ನಿಮಗೆ ನೀಡುವ ಮೂಲ. ಉತ್ತಮ ಪ್ರಮಾಣದ ಶಕ್ತಿಯನ್ನು ಹೊಂದಿ ದಿನವನ್ನು ಲವಲವಿಕೆಯಿಂದ ಪ್ರಾರಂಭಿಸಲು ನಿಮಗೆ ಸಹಾಯ ಮಾಡಲು ಇದು ಅತ್ಯಂತ ಮುಖ್ಯ. ಪ್ರೋಟೀನ್‌ಯುಕ್ತ ಉಪಾಹಾರವು ಚಯಾಪಚಯವನ್ನು ಗಣನೀಯವಾಗಿ ಸುಧಾರಿಸಲು ಸಹಾಯ ಮಾಡುತ್ತದೆ.

Fertility Clinic: ಯಾರದೋ ವೀರ್ಯ, ಯಾರದೋ ಅಂಡ, ಮಗು ಯಾರದು?

ಪ್ರೋಟೀನ್ ಕೊರತೆ (Proteine)
ಪ್ರೋಟೀನ್‌ಗಳು ಆಹಾರದ ಅತ್ಯಗತ್ಯ ಅಂಶಗಳಾಗಿವೆ. ಇದನ್ನು ದೇಹದ ಬಿಲ್ಡಿಂಗ್ ಬ್ಲಾಕ್ಸ್ ಎಂದೂ ಕರೆಯುತ್ತಾರೆ. ಪ್ರೋಟೀನ್‌ಗಳು ವಿವಿಧ ಕಾರಣಗಳಿಗಾಗಿ ಮುಖ್ಯ. ತೂಕ ಇಳಿಸುವ ವಿಷಯಕ್ಕೆ ಬಂದಾಗ, ನೀವು ಕಾರ್ಬೊಹೈಡ್ರೇಟ್ ಅನ್ನು ಕಡಿಮೆ ಮಾಡಬಹುದು, ಆದರೆ ಪ್ರೋಟೀನ್‌ಗಳನ್ನು ದೇಹಕ್ಕೆ ಸೇರಿಸುವುದು ಮುಖ್ಯವಾಗಿದೆ. ಏಕೆಂದರೆ ಅವುಗಳು ಸ್ನಾಯುವಿನ ನಷ್ಟವನ್ನು ತಡೆಗಟ್ಟುತ್ತವೆ ಮತ್ತು ದೇಹದಿಂದ ಕೊಬ್ಬು ಇಳಿಸಲು ಉತ್ತೇಜಿಸುತ್ತವೆ. ತೂಕ ಇಳಿಕೆಯ ಉತ್ತಮ ಫಲಿತಾಂಶಕ್ಕಾಗಿ ನಿಮ್ಮ ಆಹಾರದಲ್ಲಿ ಆರೋಗ್ಯಕರ ಪ್ರೋಟೀನ್‌ಗಳನ್ನು ಸೇರಿಸಿ.

'ಡಯಟ್' ಲೇಬಲ್‌ ಬೇಡ (Diet)
ತೂಕ ಇಳಿಸಲು ಪ್ರಯತ್ನಿಸುವವರು ಸಾಮಾನ್ಯವಾಗಿ 'ಡಯಟ್' ಎಂಬ ಲೇಬಲ್ ಅಂಟಿಸಿದ ಪ್ರಾಡಕ್ಟ್‌ಗಳ ಕಡೆಗೆ ಆದ್ಯತೆ ನೀಡುತ್ತಾರೆ. ಇವುಗಳಲ್ಲಿ ಕೆಲವು ಪೌಷ್ಟಿಕವಾಗಿದ್ದೂ ಡಯಟ್ ಅಂಶ ಹೊಂದಿರುತ್ತವೆ. ಆದರೆ ಅನೇಕವು, ಉದಾಹರಣೆಗೆ ಡಯಟ್ ಕೋಕ್ (Coke), ಚಿಪ್ಸ್ (Chips) ಮತ್ತು ಇತರ ಅಂತಹ ಆಹಾರ ಪದಾರ್ಥಗಳು ಸಕ್ಕರೆ (Sugar) ಮತ್ತು ಸಂಸ್ಕರಿತ ಪ್ರಿಸರ್ವೇಟಿವ್‌ಗಳನ್ನು (Preservatives) ಸೇರಿಸಿದವಾಗಿರುತ್ತವೆ. ಇದು ಆರೋಗ್ಯಕ್ಕೆ ಹಾನಿಕಾರಕ ಮಾತ್ರವಲ್ಲ ವಾಗಿದೆ ಮೈ ತೂಕವನ್ನು ಹೆಚ್ಚಿಸುತ್ತದೆ. 

click me!