ಸೂರ್ಯನ ಬೆಳಕಿನಲ್ಲಿಟ್ಟ ನೀರು ಕುಡಿದ್ರೆ ದುಪ್ಪಟ್ಟಾಗುತ್ತೆ ಆರೋಗ್ಯ

Published : Apr 01, 2022, 03:49 PM ISTUpdated : Apr 01, 2022, 03:50 PM IST
ಸೂರ್ಯನ ಬೆಳಕಿನಲ್ಲಿಟ್ಟ ನೀರು ಕುಡಿದ್ರೆ ದುಪ್ಪಟ್ಟಾಗುತ್ತೆ ಆರೋಗ್ಯ

ಸಾರಾಂಶ

ಸೂರ್ಯ (Sun)ನ ಬೆಳಕಿನಲ್ಲಿ ಗಂಟೆಗಳ ಕಾಲ ಚಾರ್ಜ್ ಮಾಡಿದ ನೀರನ್ನು (Water) ಕುಡಿಯುವುದರಿಂದ ಅನೇಕ ಆರೋಗ್ಯ (Health) ಪ್ರಯೋಜನಗಳಿವೆ. ಇದು ಎದೆಯುರಿ ಮತ್ತು ಹುಣ್ಣುಗಳಂತಹ ಸಮಸ್ಯೆಗಳನ್ನು ಸುಧಾರಿಸುವುದಲ್ಲದೆ, ದೇಹಕ್ಕೆ ಶಕ್ತಿ ಮತ್ತು ಮೂಳೆಗಳ ಆರೋಗ್ಯವನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ.

ಭಾರತೀಯ (Indian) ಸಂಸ್ಕೃತಿಯಲ್ಲಿ ಸೂರ್ಯ (Sun) ನಿಗೆ ವಿಶೇಷ ಸ್ಥಾನವಿದೆ. ಸೂರ್ಯ ದೇವನನ್ನು ಹಿಂದೂ ಧರ್ಮದಲ್ಲಿ ಪೂಜೆ (Worship) ಮಾಡಲಾಗುತ್ತದೆ. ಇದ್ರ ಜೊತೆಗೆ ಸೂರ್ಯನ ಕಿರಣಗಳು ದೇಹದ ಆರೋಗ್ಯವನ್ನು ಸುಧಾರಿಸುತ್ತವೆ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಸೂರ್ಯನ ಕಿರಣಗಳು ದೇಹಕ್ಕೆ ವಿಟಮಿನ್ ಡಿ ನೀಡುವುದು ಮಾತ್ರವಲ್ಲ ಇದ್ರಿಂದ ಅನೇಕ ಪ್ರಯೋಜನವಿದೆ. ಆಯುರ್ವೇದದಲ್ಲೂ ಸೂರ್ಯನಿಗೆ ವಿಶೇಷ ಮಹತ್ವ ನೀಡಲಾಗಿದೆ. ಸೂರ್ಯನ ಕಿರಣಗಳಲ್ಲಿ ಔಷಧಿಯಿದ್ದು ಅದು ಸಣ್ಣಪುಟ್ಟ ಆರೋಗ್ಯ ಸಮಸ್ಯೆಯಿಂದ ಹಿಡಿದು ಅನೇಕ ದೊಡ್ಡ ರೋಗಗಳಿಗೆ ಪರಿಹಾರ ನೀಡುತ್ತದೆ.

ಆಯುರ್ವೇದ (Ayurveda)ದಲ್ಲಿ ಸೂರ್ಯನ ಕಿರಣಗಳಿಂದ ಯಾವ ರೀತಿ ಆರೋಗ್ಯ ಲಾಭಗಳಿವೆ ಎಂಬುದನ್ನು ಹೇಳಲಾಗಿದೆ. ಅದ್ರಲ್ಲಿ ಸನ್ ಲೈಟ್ ಚಾರ್ಜ್ ವಾಟರ್ ಕೂಡ ಒಂದು. ಸನ್ ಲೈಟ್ ಚಾರ್ಜ್ ವಾಟರ್ ಬಗ್ಗೆ ನೀವು ಮೊದಲೇ ಕೇಳಿರಬಹುದು. ಒಂದು ವೇಳೆ ಇದ್ರ ಬಗ್ಗೆ ನೀವು ಕೇಳಿಲ್ಲವೆಂದಾದ್ರೆ ಇಂದು ನಾವು ಸನ್ ಲೈಟ್ ಚಾರ್ಜರ್ ಹಾಗೂ ಅದ್ರ ಆರೋಗ್ಯ ಲಾಭದ ಬಗ್ಗೆ ಹೇಳ್ತೇವೆ.

ಅಂಬೆಗಾಲಿಡುವ ಮಕ್ಕಳಿಗೆ ಮಲ್ಟಿ ವಿಟಮಿನ್ ಮಾತ್ರೆಗಳನ್ನು ಕೊಡಬಹುದಾ ?

ಪುರಾತನ ಕಾಲದಿಂದಲೂ ಗುಪ್ತ ಔಷಧಿಯಾಗಿ ಕೆಲಸ ಮಾಡ್ತಿದೆ ಸನ್ ಲೈಟ್ ಚಾರ್ಜ್ ವಾಟರ್ : ವೈದಿಕ ಸಂಸ್ಕೃತಿಯ ಪ್ರಕಾರ, ಸೂರ್ಯ ನೀರಿನ ಚಿಕಿತ್ಸೆಯು ಪ್ರಾಚೀನ ಚಿಕಿತ್ಸಾ ವಿಧಾನವಾಗಿದೆ. ಸೂರ್ಯನ ಬೆಳಕನ್ನು ಹೊಂದಿರುವ ನೀರನ್ನು ಅನೇಕ ರೋಗಗಳನ್ನು ಗುಣಪಡಿಸಲು ಸೇವಿಸಲಾಗುತ್ತದೆ. ಈ ನೀರು ದೀರ್ಘಾಯುಷ್ಯವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿತ್ತು. ಆಯುರ್ವೇದ ಪುಸ್ತಕಗಳ ಪ್ರಕಾರ, ಸೂರ್ಯನ ಬೆಳಕು, ನೀರಿನ ಮೇಲೆ ಬಿದ್ದಾಗ, ಅದು ನೀರಿನ ಆಣ್ವಿಕ ರಚನೆಯನ್ನು ಹೆಚ್ಚಿಸುತ್ತದೆ. ನೀರನ್ನು ಶಕ್ತಿಯುತಗೊಳಿಸುತ್ತದೆ.

ಸೂರ್ಯನ ಬೆಳಕು ಶಕ್ತಿಯ ಒಂದು ರೂಪವಾಗಿದೆ. ಆಯುರ್ವೇದ ತಜ್ಞರ ಪ್ರಕಾರ, ಸೂರ್ಯನ ಬೆಳಕನ್ನು ಹೊಂದಿರುವ ನೀರಿನ ಸಂಪೂರ್ಣ ಪ್ರಕ್ರಿಯೆಯನ್ನು ಸೂರ್ಯ ಜಲ ಚಿಕಿತ್ಸೆ ಎಂದು ಕರೆಯಲಾಗುತ್ತದೆ. ಸನ್ ಲೈಟ್ ಚಾರ್ಜ್ಡ್ ನೀರು ಕೂಡ ಮೂಲತಃ ನೀರೇ. ನೀರನ್ನು ಸೂರ್ಯನ ಕಿರಣಗಳ ಗುಣಲಕ್ಷಣಗಳನ್ನು ಹೀರಿಕೊಳ್ಳಲು ಸೂರ್ಯನ ಬೆಳಕಿನ ಅಡಿಯಲ್ಲಿ ಇರಿಸಲಾಗುತ್ತದೆ. ಈ ನೀರು ಮಾಂತ್ರಿಕ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ. 

ಸನ್ ಲೈಟ್ ಚಾರ್ಜ್ಡ್ ನೀರಿನ ಪ್ರಯೋಜನಗಳು : ಸೂರ್ಯನ ಬೆಳಕಿನಿಂದ ಚಾರ್ಜ್ ಆಗುವ ನೀರಿನಲ್ಲಿ ಆ್ಯಂಟಿ ವೈರಲ್, ಆ್ಯಂಟಿ ಫಂಗಲ್ ಮತ್ತು ಆ್ಯಂಟಿಬ್ಯಾಕ್ಟೀರಿಯಲ್ ಗುಣಗಳಿದ್ದು, ಇವು ದೇಹ ಮತ್ತು ಚರ್ಮಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಆಯುರ್ವೇದದ ಪುಸ್ತಕಗಳ ಪ್ರಕಾರ, ಪ್ರತಿದಿನ ಈ ನೀರನ್ನು ಕುಡಿಯುವುದು ಎದೆಯುರಿ, ಹುಣ್ಣುಗಳಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆಯಾಗಿದೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸನ್ ಲೈಟ್ ಚಾರ್ಜ್ಡ್ ನೀರು ಶಕ್ತಿ ಮತ್ತು ಮೂಳೆಯ ಆರೋಗ್ಯವನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ.

ದಿನವಿಡೀ ಸುಸ್ತು, ಶಕ್ತಿಯಿಲ್ಲ ಎನ್ನುವವರು ಸೂರ್ಯನ ಚಾರ್ಜ್ ಮಾಡಿದ ನೀರನ್ನು ಕುಡಿಯಬೇಕು. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಸೂರ್ಯನ ಚಾರ್ಜ್ಡ್ ನೀರು ದೇಹದಲ್ಲಿ ಕಾಣಿಸಿಕೊಳ್ಳುವ ಡಿಹೈಡ್ರೇಟ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಈ ನೀರು ಸಾಕಷ್ಟು ವಿಶ್ರಾಂತಿ ನೀಡುತ್ತದೆ ಮತ್ತು ಉಲ್ಲಾಸವನ್ನು ಹೆಚ್ಚಿಸುತ್ತದೆ.

ವ್ಯಕ್ತಿತ್ವಕ್ಕೆ ಧ್ರುವಗಳನ್ನು ನೀಡುವ Bipolar Disorder

ನಿಮಗೆ ಕಣ್ಣುಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ನೀವು ಸನ್ ಲೈಟ್ ಚಾರ್ಜ್ ನೀರಿನಿಂದ ತೊಳೆಯಬೇಕು. ಈ ನೀರು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿಯಾಗಿರುವುದರಿಂದ, ಇದು ಯಾವುದೇ ಸಾಮಾನ್ಯ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

ದೇಹದಲ್ಲಿನ ಹಾನಿಗೊಳಗಾದ ಜೀವಕೋಶಗಳು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಸೂರ್ಯನ ಚಾರ್ಜ್ಡ್ ನೀರನ್ನು ಕುಡಿಯುವುದು ಸೆಲ್ಯುಲಾರ್ ಮಟ್ಟಕ್ಕೆ ಉಂಟಾಗುವ ಹಾನಿಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ಸನ್ ಚಾರ್ಜ್ ಮಾಡಿದ ನೀರನ್ನು ಹೇಗೆ ತಯಾರಿಸುವುದು ? : ಮನೆಯಲ್ಲಿ ಈ ಮದ್ದು ತಯಾರಿಸಲು, ಗಾಜಿನ ಬಾಟಲಿಗೆ ನೀರು ತುಂಬಿಸಿ ಕನಿಷ್ಠ 8 ಗಂಟೆಗಳ ಕಾಲ ಬಿಸಿಲಿನಲ್ಲಿ ಇರಿಸಿ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ಪ್ರತಿದಿನ ಮಾಡಬಹುದು ಅಥವಾ 8 ಗಂಟೆಗಳ ಕಾಲ 3 ದಿನಗಳವರೆಗೆ ಸೂರ್ಯನಲ್ಲಿ ಇರಿಸಬಹುದು. ಈ ನೀರನ್ನು ಫ್ರಿಜ್ ನಲ್ಲಿ ಇಡಬೇಡಿ. ಇದೇ ನೀರನ್ನು ದಿನವಿಡೀ ಕುಡಿಯಿರಿ. ನೀವು ಎಷ್ಟು ನೀರು ಕುಡಿಯುತ್ತೀರಿ ಎಂಬುದರ ಆಧಾರದ ಮೇಲೆ, ನೀವು ಸೂರ್ಯನ ಕಿರಣದ ಕೆಳಗೆ ಬಾಟಲಿಯನ್ನು ಇಡಬೇಕಾಗುತ್ತದೆ.  

ಸೂರ್ಯನ ಚಾರ್ಜ್ಡ್ ನೀರು ಸಂಪೂರ್ಣವಾಗಿ ನೈಸರ್ಗಿಕವಾಗಿರುತ್ತದೆ. ಇದು ನಿಮ್ಮ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. ನೀವು ಯಾವುದೇ ಔಷಧಿ ಅಥವಾ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿದ್ದರೆ  ಈ ನೀರು ಸೇವನೆ ಮೊದಲು ವೈದ್ಯರನ್ನು ಭೇಟಿಯಾಗಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ