ಡಿಮೆನ್ಷಿಯಾ ಅಥವಾ ಮೆದುಳಿನ ಸ್ವಾಧೀನ ಕಳೆದುಕೊಳ್ಳುವ ಕಾಯಿಲೆ ಇಂದು ಮಧ್ಯವಯಸ್ಸು ದಾಟಿದವರಲ್ಲಿ ಹೆಚ್ಚಾಗುತ್ತಿದೆ. ಆಹಾರ ಸೇವನೆಯೂ ಇದಕ್ಕೆ ಪ್ರಮುಖ ಕಾರಣ. ನೀವು ತ್ಯಜಿಸಬೇಕಾದ ಆಹಾರಗಳು ಯಾವುವು, ನೋಡೋಣ.
ಡಿಮೆನ್ಷಿಯಾ (Dementia) ಕಾಯಿಲೆ ಅಥವಾ ಮೆದುಳಿನ (Brain) ಮರೆಗುಳಿತನದ ಕಾಯಿಲೆ (Memory Loss Disease) ಇಂದು ವೃದ್ಧರಲ್ಲಿ ಮಾತ್ರವಲ್ಲ, ಮಧ್ಯವಯಸ್ಸನ್ನು ಮೀರಿದವರಲ್ಲಿ ಕೂಡ ಕಾಣಿಸಿಕೊಳ್ಳತೊಡಗಿದೆ. ಮೆದುಳಿನ ಕಾರ್ಯಗಳ ದುರ್ಬಲತೆಯಿಂದ ಇದು ಉಂಟಾಗುತ್ತದೆ. ಸ್ಮರಣೆ ನಷ್ಟ, ಮತ್ತು ನಿರ್ಧಾರ ತೆಗೆದುಕೊಳ್ಳಲಾಗದ ದ್ವಂದ್ವಗಳು ಒಂದು ನಿರ್ದಿಷ್ಟ ರೋಗವಲ್ಲ. ಇದು ಹಲವು ಸಮಸ್ಯೆಗಳ ಒಂದು ಗುಂಪು. ಇದು ನೆನಪಿಡುವ, ಯೋಚಿಸುವ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ವಂಶವಾಹಿಗಳು, ವಯಸ್ಸು (Age), ಆಹಾರ ಪದ್ಧತಿ (Food Habit) ಮತ್ತು ಜೀವನಶೈಲಿ (lifestyle) ಸೇರಿದಂತೆ ಹಲವು ಅಂಶಗಳು ಈ ನೆನಪಿನ ಮಾಂದ್ಯತೆಯ ಅಪಾಯವನ್ನು ಹೆಚ್ಚಿಸಬಹುದು. ವಯಸ್ಸು ಮತ್ತು ವಂಶವಾಹಿಯನ್ನು ಬದಲಾಯಿಸಲಾಗದಿದ್ದರೂ, ವೃದ್ಧಾಪ್ಯದಲ್ಲಿ ಈ ರೋಗ ಉಂಟುಮಾಡುವ ಅಪಾಯವನ್ನು ಕಡಿಮೆ ಮಾಡಲು ನಾವು ನಮ್ಮ ಆಹಾರ ಪದ್ಧತಿಯನ್ನು ಖಂಡಿತವಾಗಿ ನಿಯಂತ್ರಿಸಬಹುದು.
ದೈಹಿಕವಾಗಿ ಸದೃಢವಾಗಿರಲು ಆರೋಗ್ಯಕರ ಆಹಾರ ಸೇವನೆ ಅಗತ್ಯ ಎಂಬುದು ಸಾಮಾನ್ಯ ನಂಬಿಕೆ. ವಾಸ್ತವವಾಗಿ, ಇದು ನಮ್ಮ ಮಾನಸಿಕ ಯೋಗಕ್ಷೇಮಕ್ಕೂ ಸಮಾನವಾಗಿ ಮುಖ್ಯವಾಗಿದೆ. ಜಂಕ್ ಫುಡ್ (junk Food) ಮತ್ತು ಕಡಿಮೆ ಪೋಷಕಾಂಶಗಳಿರುವ ಆಹಾರವನ್ನು ಸೇವಿಸುವುದರಿಂದ ಆತಂಕ, ಒತ್ತಡ ಮತ್ತು ಖಿನ್ನತೆಯ ಸ್ಥಿತಿಗತಿ ಉಂಟಾಗಬಹುದಾಗಿದೆ. ಅನಾರೋಗ್ಯಕರ ಆಹಾರ ಪದ್ಧತಿಗಳು ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸಬಹುದು.
ಸಂಸ್ಕರಿಸಿದ ಕಾರ್ಬೊಹೈಡ್ರೇಟ್
ಕೆಲವು ಅಧ್ಯಯನಗಳ ಪ್ರಕಾರ, ಅತ್ಯಂತ ಕೆಟ್ಟ ಆಹಾರಗಳಲ್ಲಿ ಒಂದು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು. ಏಕೆಂದರೆ ಇದು ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ನಾವು ಸೇವಿಸುವ ಕಾರ್ಬೋಹೈಡ್ರೇಟ್‌ಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯಿಂದ ಸಕ್ಕರೆಯಾಗಿ ಸಂಸ್ಕರಿಸಲ್ಪಡುತ್ತವೆ ಮತ್ತು ರಕ್ತಪ್ರವಾಹಕ್ಕೆ ವರ್ಗಾಯಿಸಲ್ಪಡುತ್ತವೆ. ಅಲ್ಲಿಂದ ಶಕ್ತಿಯನ್ನು ಉತ್ಪಾದಿಸಲು ಇನ್ಸುಲಿನ್ (Insulin) ಸಹಾಯದಿಂದ ಜೀವಕೋಶಗಳಿಗೆ ಪ್ರವೇಶಿಸುತ್ತದೆ. ಈಗ ನಾವು ತಿನ್ನುವ ಎಲ್ಲಾ ಕಾರ್ಬೋಹೈಡ್ರೇಟ್‌ಗಳನ್ನು (Carbohydrates) ವಿಭಿನ್ನ ವೇಗದಲ್ಲಿ ಸಂಸ್ಕರಿಸಲಾಗುತ್ತದೆ ಮತ್ತು ಸಂಸ್ಕರಿಸಿದ ಕಾರ್ಬ್‌ಗಳು ಇತರ ರೀತಿಯ ಕಾರ್ಬೋಹೈಡ್ರೇಟ್‌ಗಳಿಗಿಂತ ಹೆಚ್ಚು ವೇಗವಾಗಿ ಗ್ಲೂಕೋಸ್ ಆಗಿ ಬದಲಾಗುತ್ತವೆ. ಆದ್ದರಿಂದ, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚು ವೇಗದಲ್ಲಿ ಹೆಚ್ಚಿಸುತ್ತದೆ ಮತ್ತು ಅದರಲ್ಲಿ ತೀವ್ರವಾದ ಏರಿಳಿತಕ್ಕೆ ಕಾರಣವಾಗುತ್ತದೆ. ಕಾಲಾನಂತರದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಆಗಾಗ್ಗೆ ಏರಿಳಿತಗಳು ಬುದ್ಧಿಮಾಂದ್ಯತೆ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ.
ಜಿಲೇಬಿ ಜೊತೆ ಹಾಲು ಕುಡಿದರೆ ತಲೆ ನೋವು ಕಡಿಮೆಯಾಗುತ್ತಾ?
ಅಧ್ಯಯನ ಹೇಳುವುದೇನು?
ನಮ್ಮ ಮಾನಸಿಕ ಯೋಗಕ್ಷೇಮದ (Mental Health) ಮೇಲೆ ಗ್ಲೂಕೋಸ್‌ನ (Glucose) ಪ್ರಭಾವವು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಬಹಿರಂಗವಾಗಿದೆ. ಹೆಚ್ಚಿನ ಮಟ್ಟದ ಗ್ಲೂಕೋಸ್ ಹೊಂದಿರುವ ಜನರಲ್ಲಿ ಡಿಮೆನ್ಷಿಯಾದ ಅಪಾಯವು ಹೆಚ್ಚಾಗುತ್ತದೆ ಎಂದು ಅದು ಸ್ಪಷ್ಟವಾಗಿ ಹೇಳಿದೆ. ಮಧುಮೇಹ ಇರುವವರು ಅಥವಾ ಮಧುಮೇಹವಿಲ್ಲದವರು ಎಲ್ಲರಿಗೂ ಇದು ಸಾಮಾನ್ಯವಾಗಿದೆ. ಮಧುಮೇಹದ ರೋಗನಿರ್ಣಯವು ಡಿಮೆನ್ಷಿಯಾದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹಿಂದಿನ ಅಧ್ಯಯನವು ಸೂಚಿಸುತ್ತದೆ. ಆದರೆ ಹೊಸ ಸಂಶೋಧನೆಯು ಮಧುಮೇಹ ಇಲ್ಲದಿದ್ದರೂ ಸಹ ಆರೋಗ್ಯ ವ್ಯವಸ್ಥೆಯಲ್ಲಿನ ಹೆಚ್ಚಿನ ಸಕ್ಕರೆ ನಿಮ್ಮ ಮೆದುಳಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸ್ಪಷ್ಟಪಡಿಸಿದೆ.
ಡ್ರಗ್ಸ್ ಸೇವನೆ ಹೇಗೆ ಮೆದುಳು ಮತ್ತು ನರವ್ಯೂಹ ಕೊಲ್ಲುತ್ತದೆ?
ತಪ್ಪಿಸಬೇಕಾದ ಆಹಾರಗಳು
ಎಲ್ಲಾ ಪೋಷಕಾಂಶಗಳನ್ನು ಹೊರತೆಗೆಯಲಾದ ಹೆಚ್ಚಿನ ಗ್ಲೈಸೆಮಿಕ್ ಆಹಾರ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ತಿನ್ನುವುದು ಮೆಮೊರಿ ದುರ್ಬಲತೆಗೆ ಕಾರಣವಾಗಬಹುದು. ಆದ್ದರಿಂದ ಬ್ರೆಡ್, ಪಾಸ್ಟಾ, ಪಿಜ್ಜಾ, ಕುಕೀಗಳಂತಹ ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಿದ ಉತ್ಪನ್ನಗಳನ್ನು ಕಡಿಮೆ ಮಾಡಬೇಕಾಗುತ್ತದೆ. ಸಂಪೂರ್ಣ ಮತ್ತು ಫೈಬರ್ ಭರಿತ ಧಾನ್ಯಗಳಿಂದ ಮಾಡಿದ ಆಹಾರಕ್ಕೆ ಶಿಫ್ಟ್ ಆಗಿ. ಇದರೊಂದಿಗೆ ನಿಮ್ಮ ತಟ್ಟೆಗೆ ಹೆಚ್ಚಿನ ತರಕಾರಿಗಳು, ಹಣ್ಣುಗಳು ಮತ್ತು ಕಾಳುಗಳನ್ನು ಸೇರಿಸಿ.
ಸಂಸ್ಕರಿಸಿದ ಹಿಟ್ಟು ನಿಮ್ಮ ಮೆದುಳಿನ ಆರೋಗ್ಯವನ್ನು ಕುಗ್ಗಿಸುವ ಒಂದು ಆಹಾರ ಉತ್ಪನ್ನ. ಕೆಲವು ಇತರ ವಸ್ತುಗಳು ಇವೆ. ಈ ಆಹಾರ ಪದಾರ್ಥಗಳನ್ನು ಅತಿಯಾಗಿ ಸೇವಿಸುವುದರಿಂದ ಮರೆಗುಳಿತನ, ಮನಸ್ಥಿತಿ ಬದಲಾವಣೆ, ಖಿನ್ನತೆ ಮತ್ತು ಆತಂಕದ ಅಪಾಯವನ್ನು ಹೆಚ್ಚಿಸಬಹುದು. ನಿಮ್ಮ ಆಹಾರದಿಂದ ನೀವು ಕಡಿತಗೊಳಿಸಬೇಕಾದ ಇತರ ಕೆಲವು ಆಹಾರಗಳು ಇಲ್ಲಿವೆ.
- ರೆಡ್ ಮೀಟ್ವಾ (Red Meat)ರಕ್ಕೆ ನಾಲ್ಕು ಬಾರಿಗಿಂತ ಕಡಿಮೆ ಇರಲಿ.
- ಕರಿದ, ಹುರಿದ ಅಥವಾ ತ್ವರಿತ ಆಹಾರ ವಾರಕ್ಕೊಮ್ಮೆ ಸಾಕು. (Avoid Fried Food)
- ಚೀಸ್ (Cheese) ಸೇವನೆ ವಾರಕ್ಕೊಮ್ಮೆ ಸಾಕು.
- ಪೇಸ್ಟ್ರಿ ಮತ್ತು ಸಿಹಿತಿಂಡಿಗಳು ವಾರಕ್ಕೆ ಐದು ಮಾತ್ರ ಸಾಕು.
- ದಿನಕ್ಕೆ ಒಮ್ಮೆ, ಒಂದು ಮಿತಿಯಲ್ಲಿ ಆಲ್ಕೊಹಾಲ್ (Alcohol) ಸೇವನೆ ಮಾಡಬಹುದು.