* ಮಾದಕ ವ್ಯಸನದಿಂದ ಮೆದುಳಿನ ಮೇಲಾಗುವ ಪರಿಣಾಮ ಗೊತ್ತೇ?
* ಫೋರ್ಟಿಸ್ ಆಸ್ಪತ್ರೆ ನ್ಯೂರಾಲಜಿ ವೈದ್ಯ ಡಾ. ನಿತಿನ್ ಕುಮಾರ್ ಎನ್ ತಿಳಿಸುತ್ತಾರೆ
* ಸಮಾಜವನ್ನು ಕಾಡುತ್ತಿರುವ ಅತಿ ದೊಡ್ಡ ಪಿಡುಗು
* ಮನುಷ್ಯನ ನರವ್ಯೂಹದ ಮೇಲೆ ಪರಿಣಾಮ
* ಡಾ. ನಿತಿನ್ ಕುಮಾರ್ ಎನ್
ಬೆಂಗಳೂರು(ಅ. 27) ಈದಿನಗಳಲ್ಲಿ ಗಾಂಜಾ, ಅಫೀಮಿನಂತಹ ಡ್ರಗ್ ಸೇವನೆ ಹೆಚ್ಚಳವಾಗುತ್ತಿದೆ. ಅದರಲ್ಲೂ ಈಗಿನ ಕಾಲದ ಯುವಕರೇ ಇದಕ್ಕೆ ಟಾರ್ಗೆಟ್ .. ಡ್ರಗ್ ಸೇವನೆಯಿಂದ ಆಗುವ ದುಷ್ಟಪರಿಣಾಮಗಳು ನಿಮಗೆ ಗೊತ್ತೇ? ಅದರಲ್ಲೂ ಮೆದುಳಿನ ಮೇಲೆ ಯಾವೆಲ್ಲಾ ಅಲ್ಪಾವಧಿ ಹಾಗೂ ದೀರ್ಘಾವಧಿ ದುಷ್ಪಪರಿಣಾಮ ಬೀರಲಿದೆ ಎಂದು ತಿಳಿದರೆ ಮತ್ತೆಂದೂ ಡ್ರಗ್ ಸೇವನೆಯ ಚಿಂತೆಯೂ ಮಾಡುವುದಿಲ್ಲ. ಭಾರತದಲ್ಲಿ ಡ್ರಗ್ ಸೇವನೆ ಹಾಗೂ ಮಾರಾಟ ಎರಡೂ ಕಾನೂನು ಬಾಹಿರ ಆದಾಗ್ಯೂ, ಕಳ್ಳದಾರಿಯಿಂದ ಡ್ರಗ್ ಸರಬರಾಜಾಗುತ್ತಿದೆ. ಡ್ರಗ್ ಸೇವನೆಯ ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಸಾವಿಗೀಡಾಗುತ್ತಿದ್ದಾರೆ. ಪ್ರತಿ ವರ್ಷ 7 ದಶಲಕ್ಷಕ್ಕೂ ಹೆಚ್ಚು ಜನರು ಈ ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅಧ್ಯಯನದಿಂದ ದೃಢಪಟ್ಟಿದೆ.
undefined
ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಬಾಲಿವುಡ್ ತಾರೆಗಳು
ಡ್ರಗ್ ಸೇವನೆ ಮೆದುಳಿಗೆ ಮಾರಕ: ಡ್ರಗ್ ಸೇವನೆಯಿಂದ ಮನಸ್ಸು ನಿಯಂತ್ರಣ ಕಳೆದುಕೊಂಡು ಯಾವುದೋ ಪ್ರಪಂಚದಲ್ಲಿ ತೇಲಾಡುವ ಅನುಭವ ನೀಡುತ್ತದೆ. ಇದಕ್ಕೆ ಕಾರಣ ಮೆದುಳಿನಲ್ಲಿ ಡೋಪಮೈನ್ ಎನ್ನುವ ಸಂವಾಹಕ ಬಿಡುಗಡೆಯಾಗುತ್ತದೆ. ಇದರಿಂದ ಮೆದುಳು ತನ್ನ ನಿತ್ಯದ ಕ್ರಿಯೆಯನ್ನು ಮರೆತು, ಸಂತೋಷದತ್ತ ವಾಲುತ್ತದೆ. ಯಾವುದೋ ಲೋಕದಲ್ಲಿ ತೇಲಿದ ಅನುಭವ ಡೋಪಮೈನ್ ಬಿಡುಗಡೆಯಿಂದ ಆಗುತ್ತದೆ. ಹೀಗಾಗಿ ಮೆದುಳಿನ ಇತರೆ ನರಗಳು ಕ್ರಿಯಾಶೀಲತೆ ಕಳೆದುಕೊಳ್ಳುತ್ತಾ, ಡ್ರಗ್ ಸೇವನೆಯನ್ನು ವ್ಯಸವನ್ನಾಗಿಸಲು ಪ್ರೇರೇಪಿಸುತ್ತವೆ. ಕಾಲ ಕ್ರಮೇಣ, ಇದು ನಿತ್ಯದ ಚಟುವಟಿಕೆ ಮೇಲೆ ಪ್ರಭಾವ ಬೀರುತ್ತಾ, ಕತ್ತಲ ಕೂಪಕ್ಕೆ ತಳ್ಳುತ್ತದೆ, ನಂತರ ಅದರಿಂದ ಹೊರ ಬರಬೇಕೆಂದು ಬಯಸಿದರೂ ಸಾಧ್ಯವಾಗುವುದಿಲ್ಲ.
ಅಪಾಯಕಾರಿ ಡ್ರಗ್ಸ್ ಇವು: ಮೆಥಾಂಫೆಟೈನ್ ಡ್ರಗ್ಸ್ ಅತಿ ಹೆಚ್ಚು ಅಪಾಯಕಾರಿ. ಕೊಕೇನ್‌ನಿಂದ ಮೆದುಳಿಗೆ ಹೆಚ್ಚು ಅಪಾಯ ಉಂಟು ಮಾಡುತ್ತದೆ. ಕೊಕೇನ್‌ನ ದೀರ್ಘಾವಧಿಯ ಬಳಕೆಯಿಂದ ಹೃದಯದಲ್ಲಿ ರಕ್ತದೊತ್ತಡ ಹೆಚ್ಚಿಸುವ ಜೊತೆಗೆ, ಮೆದುಳಿನಲ್ಲಿ ಡೋಪಮೈನ್ ರಾಸಾಯನಿಕ ಬಿಡುಗಡೆ ಮಾಡುತ್ತದೆ. ಇದರಿಂದ ಅಂಗಾಂಗ ವೈಫಲ್ಯ ಅಥವಾ ಸ್ಟ್ರೋಕ್ ಹೊಡೆಯುವ ಸಾಧ್ಯತೆ ಹೆಚ್ಚು.
ಡ್ರಗ್ ಸೇವನೆಯ ಅಡ್ಡ ಪರಿಣಾಮವೇನು?: ಡ್ರಗ್ ಸೇವನೆಯಿಂದ ಮೊದಲು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ.
* ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದು
* ಕ್ರಿಯಾಶೀಲತೆ ಕಳೆದುಕೊಳ್ಳುವುದು
* ರೋಗನಿರೋಧಕ ಶಕ್ತಿ ಕಡಿಮೆಯಾಗುವುದು
* ವಾಕರಿಕೆ, ಕಿಬ್ಬೊಟ್ಟೆ ನೋವು, ಕಡಿಮೆ ಹಸಿವು, ತೂಕ ನಷ್ಟ
* ಮೆದುಳಿನ ನರಗಳು ದುರ್ಬಲವಾಗುವುದು, ಪಾರ್ಶ್ವವಾಯು ಹೊಡೆಯುವ ಸಾಧ್ಯತೆ
* ಹೃದಯದಲ್ಲಿ ಬೊಜ್ಜು ಬೆಳವಣಿಗೆ ಹಾಗೂ ರಕ್ತನಾಳಗಳು ಸರಾಗವಾಗಿ ರಕ್ತ ಪಂಪ್ ಮಾಡದೇ ಇರುವುದು
* ಹೆಪಟೋಸೆಲ್ಯುಲಾರ್ ಒತ್ತಡದಿಂದ ಯಕೃತ್ತಿನ ಹಾನಿ ಅಥವಾ ವೈಫಲ್ಯ
* ನೆನಪಿನ ಶಕ್ತಿ ಕಳೆದುಕೊಳ್ಳುವುದು
* ಪುರುಷರಲ್ಲಿ ಸ್ತನ ಬೆಳವಣಿಗೆ, ದೇಹದ ಉಷ್ಣತೆಯಲ್ಲಿ ಏರಿಕೆ.
ಡ್ರಗ್ ವ್ಯಸನ ನಿಯಂತ್ರಿಸಲು ಚಿಕಿತ್ಸೆ: ಡ್ರಗ್ ಸೇವನೆಯಿಂದ ಈಗಾಗಲೇ ಮೆದುಳಿನ ಮೇಲೆ ಪರಿಣಾಮ ಬೀರಿದ್ದರೆ, ಅಂಥವರಿಗೆ ಚಿಕಿತ್ಸೆ ಪಡೆಯುವುದು ಅವಶ್ಯಕ. ಬಯೋಫೀಡ್ ಥೆರಪಿ ಮೂಲಕ ಈಗಾಗಲೇ ಜೆಡ್ಡು ಹಿಡಿದಿರುವ ನರಗಳನ್ನು ಸ್ಥಿರಗೊಳಿಸಬಹುದು. ಈ ಥೆರಪಿಯಿಂದ ಕಾಲಕ್ರಮೇಣ ಮೆದುಳನ್ನು ಮೊದಲಿನ ರೀತಿಯಲ್ಲಿ ಕ್ರಿಯಾಶೀಲತೆಗೆ ತರಲು ಸಹಕಾರಿಯಾಗುತ್ತದೆ. ಮೆದುಳಿನ ಬಯೋ ಮತ್ತು ಯೂರೋ ಕ್ರಿಯೆಗಳು ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಒತೆಗೆ, ಧ್ಯಾನ, ಧನಾತ್ಮಕ ವಿಷಯಗಳ ಮೂಲಕ ಅವನ್ನು ಮೊದಲಿನಂತೆ ಮಾಡಲಾಗುತ್ತದೆ. ಈ ಚಿಕಿತ್ಸೆ ನಿರಂತರವಾಗಿ ಸಾಗಬೇಕು, ಇಲ್ಲವಾದರೆ, ಆ ವ್ಯಕ್ತಿ ಮತ್ತದೇ ವ್ಯಸನಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.