ಈ ನಾಲ್ಕು ಜೀವಸತ್ವಗಳು ಪುರುಷರ ಫಲವತ್ತತೆಯನ್ನು ಹೆಚ್ಚಿಸುವ ಫ್ಯಾಕ್ಟರಿಗಳು!

By Mahmad Rafik  |  First Published Sep 2, 2024, 7:58 PM IST

ಆಧುನಿಕ ಜೀವನಶೈಲಿಯಿಂದಾಗಿ ಪುರುಷರಲ್ಲಿ ಫಲವತ್ತತೆ ಕಡಿಮೆಯಾಗುತ್ತಿದೆ. ಆದರೆ ಕೆಲವು ಜೀವಸತ್ವಗಳು ವೀರ್ಯ ಉತ್ಪಾದನೆ ಹೆಚ್ಚಿಸಿ ಫಲವತ್ತತೆ ಸುಧಾರಿಸಲು ಸಹಾಯ ಮಾಡುತ್ತವೆ.


ಧುನಿಕ ಜೀವನಶೈಲಿಯಿಂದಾಗಿ ಪುರುಷರಲ್ಲಿ ಸಂತಾನೋತ್ಫತ್ತಿಯ ಫಲವತ್ತತೆ ಕಡಿಮೆಯಾಗುತ್ತಿದೆ ಎಂದು ಹಲವು ವೈದ್ಯಕೀಯ ವರದಿಗಳು  ಬಹಿರಂಗಪಡಿಸಿವೆ. ಹಾಗಾಗಿ ಇಂದು ಪುರುಷರಲ್ಲಿ ವೀರ್ಯ ಉತ್ಪಾದನೆ ಕಡಿಮೆಯಾಗಿ ಬಂಜೆತನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಧೂಮಪಾನ, ಮದ್ಯಪಾನ, ಒತ್ತಡದ ಜೀವನಶೈಲಿ ಸೇರಿದಂತೆ ಹಲವು ಕಾರಣಗಳನ್ನು ವೈದ್ಯರು ನೀಡುತ್ತಾರೆ. ಆದ್ರೆ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಪುರುಷರು ಸಾಮಾರ್ಥ್ಯ ಹೆಚ್ಚಳವಾಗುತ್ತದೆ. ಈ ನಾಲ್ಕು ವಿಟಮಿನ್‌ಗಳು ವೀರ್ಯ ಹೆಚ್ಚಿಸುವ ಮಷೀನ್‌ಗಳು ಎಂದು ವೈದ್ಯರು ಹೇಳುತ್ತಾರೆ. ಈ ನಾಲ್ಕು ವಿಟಮಿನ್‌ ಇರೋ ಪದಾರ್ಥಗಳು ನಿಯಮಿತವಾಗಿ ಪ್ರತಿದಿನ ಸೇವನೆ ಮಾಡೋದರಿಂದ ಪುರುಷರಲ್ಲಿ ಸಂತಾನೋತ್ಪತ್ತಿ ಫಲ ಏರಿಕೆಯಾಗುತ್ತದೆ. ಈ ನಾಲ್ಕು ಜೀವಸತ್ವಗಳು ಪುರುಷರಿಗೆ ವಿಶೇಷವಾಗಿ ಪ್ರಯೋಜನಕಾರಿ ಮತ್ತು ಅವು ಫಲವತ್ತತೆಯನ್ನು ಹೇಗೆ ಹೆಚ್ಚಿಸುತ್ತವೆ ಎಂಬುದರ ಮಾಹಿತಿ ಇಲ್ಲಿದೆ. 

1.ವಿಟಮಿನ್ ಇ: 
ವಿಟಮಿನ್ ಇ ಪುರುಷರಿಗೆ ಮುಖ್ಯವಾಗಿದೆ. ವಿಟಮಿನ್ ಇ ವೀರ್ಯ ಚಲನಶೀಲತೆಯನ್ನು ಸುಧಾರಿಸೋದರ ಜೊತೆಯಲ್ಲಿ ಪುರುಷರಲ್ಲಿ ಲೈಂಗಿಕಾಸಕ್ತಿ ಜೊತೆ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಈ ವಿಟಮಿನ್ ಇರೋ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ಪುರುಷ ಫಲವತ್ತತೆಯನ್ನು ಹೆಚ್ಚಿಸಬಹುದು.  ಬಾದಾಮಿ, ವಾಲ್‌ನಟ್ಸ್, ಕುಂಬಳಕಾಯಿ ಬೀಜಗಳು, ಆವಕಾಡೊ, ಪಾಲಕ ಮತ್ತು ಬ್ರೊಕೊಲಿ ಸೇರದಂತೆ ಹಲವು ಆಹಾರ ಪದಾರ್ಥಗಳಲ್ಲಿ ವಿಟಮಿನ್ ಇ ಹೇರಳವಾಗಿರುತ್ತದೆ.

Latest Videos

2.ವಿಟಮಿನ್ ಸಿ:  
ವೀರ್ಯದ ಸಂಖ್ಯೆ ಹೆಚ್ಚಳ, ಚಲನಶೀಲತೆ ಮತ್ತು ರೂಪವಿಜ್ಞಾನವನ್ನು ಹೆಚ್ಚಿಸುವಲ್ಲಿ ವಿಟಮಿನ್ ಸಿ ಕೆಲಸ ಮಾಡುತ್ತದೆ. ವಿಟಮಿನ್ 'ಸಿ'ಯನ್ನು ವೀರ್ಯ ಉತ್ಪಾದನೆಯನ್ನು ಹೆಚ್ಚಿಸುವ ಮಷೀನ್ ಎಂದು ಕರೆಯಲಾಗುತ್ತದೆ. ಕಿವಿ, ಕಿತ್ತಳೆ, ಶತಾವರಿ, ದಾಳಿಂಬೆ, ಟೊಮ್ಯಾಟೊ ಮತ್ತು ದ್ರಾಕ್ಷಿಯಂತಹ ಆಹಾರಗಳು ವಿಟಮಿನ್ ಸಿ ಯ ಅತ್ಯುತ್ತಮ ಮೂಲಗಳಾಗಿವೆ. ಹಾಗಾಗಿ ಈ ಹಣ್ಣುಗಳನ್ನು ಪುರುಷರು ಹೆಚ್ಚಾಗಿ ಸೇವಿಸಬೇಕು. 

ಕಾಂಡೋಮ್ ಬಳಕೆ ಬಗ್ಗೆ ಮಹತ್ವದ ಸರ್ವೇ ನಡೆಸಿದ ಎಚ್ಚರಿಕೆ ಸಂದೇಶ ಕೊಟ್ಟ ವಿಶ್ವ ಆರೋಗ್ಯ ಸಂಸ್ಥೆ!

3.ವಿಟಮಿನ್ ಬಿ 12: 
ವೀರ್ಯದ ಗುಣಮಟ್ಟ ಮತ್ತು ಚಲನಶೀಲತೆಯನ್ನು ಕಾಪಾಡಿಕೊಳ್ಳಲು ಪುರುಷರ ದೇಹದಲ್ಲಿ ವಿಟಮಿನ್ ಬಿ 12 ಮುಖ್ಯವಾಗಿ ಇರಬೇಕಾಗುತ್ತದೆ. ಉರಿಯೂತದಿಂದ ಉಂಟಾಗುವ ವೀರ್ಯ ಹಾನಿಯನ್ನು ಕಡಿಮೆ ಮಾಡಲು ವಿಟಮಿನ್ ಬಿ 12 ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪುರುಷರಲ್ಲಿ ಫಲವತ್ತತೆಯನ್ನು ಸದಾ ಹಸಿರು ಆಗಿರುವಂತೆ ವಿಟಮಿನ್ ಬಿ 12 ನೋಡಿಕೊಳ್ಳುತ್ತದೆ. ಮೊಟ್ಟೆ, ಡೈರಿ ಪದಾರ್ಥ, ಮೀನು ಮತ್ತು ಮಾಂಸಗಳಲ್ಲಿ ವಿಟಮಿನ್ ಬಿ12 ಹೇರಳವಾಗಿರುತ್ತದೆ. 

4.ವಿಟಮಿನ್ ಡಿ: 
ವಿಟಮಿನ್ ಡಿ ವೀರ್ಯದ ಗುಣಮಟ್ಟ ಮತ್ತು ಚಲನಶೀಲತೆಯನ್ನು ಹೆಚ್ಚಿಸಲು ಸಹಾಯ ಮಾಡೋದರ ಜೊತೆಗೆ ವೀರ್ಯದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗೆ ವೀರ್ಯ ಉತ್ಪಾದನೆಯ ವೇಗವನ್ನು ಅಧಿಕಗೊಳಿಸುತ್ತದೆ. ಸೂರ್ಯನ ಬೆಳಕು, ಮೀನಿನ ಎಣ್ಣೆ ಮತ್ತು ಹಾಲು ವಿಟಮಿನ್ ಡಿ ಯ ಅತ್ಯುತ್ತಮ ಮೂಲಗಳಾಗಿವೆ.

ಸೆಕ್ಸ್ ವೇಳೆ ಹೊರ ಬರುವ ವೀರ್ಯವನ್ನು ಮಹಿಳಾ ಸಂಗಾತಿ ಕುಡಿಯಬಹುದೇ? ಏನಿದು ಓರಲ್ ಸೆಕ್ಸ್

click me!