ಕಲಬೆರಕೆ ಆಹಾರ ಆರೋಗ್ಯಕ್ಕೆ ಒಳ್ಳೆಯದಲ್ಲ, ಇಂತಹ ಪದಾರ್ಥಗಳನ್ನು ಪತ್ತೆ ಹಚ್ಚಿ ಮುಕ್ತಿ ಪಡೆಯಲು ಈ ಸುಲಭ ಮಾರ್ಗಗಳನ್ನು ಅನುಸರಿಸಿ.
ಅಡುಗೆ ಮನೆಯೆಂದರೆ (kitchen) ಇದು ಹೆಣ್ಣುಮಕ್ಕಳ ನೆಚ್ಚಿನ ಕೊಠಡಿ (favorite room). ಇಡೀ ಮನೆಯ ಆರೋಗ್ಯ ಅಡುಗೆ ಮನೆಯಲ್ಲಿದೆ. ಹೊರಗಿನ ಉಟ ತಿನ್ನುವುದನ್ನು ಕಡಿಮೆ ಮಾಡಬೇಕು. ಆಷ್ಟರ ಮಟ್ಟಿಗೆ ಮನೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡುವುದರಿಂದ ಆರೋಗ್ಯ (health) ವೃದ್ಧಿಸುತ್ತದೆ, ಮನೆ ಊಟಕ್ಕೆ ಇಷ್ಟೊಂದು ಪ್ರಮುಖ್ಯತೆ ಇದೆ, ಎಂದಾದರೆ ಅಡುಗೆಗೆ ಬಳಸುವ ಸಾಮಗ್ರಿಗಳ ಗುಣಮಟ್ಟ (quality) ಕೂಡ ಹಾಗೆ ಇರಬೇಕಲ್ಲವೇ? ಇಲ್ಲಿ ಉತ್ತಮ ಗುಣಮಟ್ಟದ ಪದಾರ್ಥಗಳನ್ನು (items) ಬಳಸುವುದು ಬಹಳ ಮುಖ್ಯ. ಅದರಲ್ಲಿಯೂ ಮಸಾಲೆ (spices) ಪದಾರ್ಥಗಳನ್ನು ಬಳಸುವಾಗ ಸರಿಯಾಗಿ ಪರಿಶೀಲನೆ ಮಾಡಿ ಬಳಸುವುದು ಉತ್ತಮ. ಏಕೆಂದರೆ ಇಂತಹ ಪದಾರ್ಥಗಳಿಗೆ ರಾಸಾಯನಿಕಗಳನ್ನು (chemicals) ಕಲಬೆರಕೆ ಮಾಡಿರುತ್ತಾರೆ. ಅಥವಾ ಆರೋಗ್ಯಕ್ಕೆ ಹಾನಿ ಉಂಟುಮಾಡುವ ಕಲ್ಮಶಗಳು ತುಂಬಿಕೊಂಡಿರ ಬಹುದು, ಅದಕ್ಕಾಗಿಯೇ ಇದನ್ನು ಬಳಸುವ ಮುನ್ನ ಸರಿಯಾಗಿ ಪರಿಶೀಲಿಸಬೇಕು. ಈ ಕಲ್ಮಶಗಳನ್ನು ಪತ್ತೆ ಹಚ್ಚುವುದಕ್ಕೆ ಕೆಲವು ಸುಲಭ (easy) ಮಾರ್ಗಗಳಿವೆ. ಇದರಿಂದ ಮನೆಯಲ್ಲಿಯೇ ಪರೀಕ್ಷೆ (test) ಮಾಡಬಹುದು.
ಲವಂಗದ (cloves) ಪರೀಕ್ಷೆ
ನಾವು ಬಳಸುವ ಮಸಾಲೆ ಪದಾರ್ಥಗಳಲ್ಲಿ ಲವಂಗವು ಒಂದು ಪ್ರಮುಖ ಸಾಮಗ್ರಿ ಇದರ ಗುಣಮಟ್ಟವನ್ನು ಪರೀಕ್ಷಿಸಲು ಒಂದು ಸರಳವಾದ ವಿಧಾನ ಇಲ್ಲಿದೆ.
ಇದಕ್ಕಾಗಿ ಎರಡು ಲೋಟ (glass) ನೀರು ಜೊತೆಗೆ ಕೆಲವು ಲವಂಗ ಬೇಕಾಗುತ್ತದೆ, ಈಗ ಎರಡೂ ತೋಟದಲ್ಲಿರುವ ನೀರಿಗೆ ಲವಂಗವನ್ನು ಹಾಕಿ ಬೇರೆ ಬೇರೆಯಾಗಿ ಇಡಬೇಕು ಹೀಗೆ ಮಾಡಿದಾಗ ಕೆಮಿಕಲ್ ಯುಕ್ತವಾದ ಲವಂಗಳು ನೀರಿನ ಮೇಲ್ಬಾಗಕ್ಕೆ ಬರುತ್ತದೆ (floating) ಹಾಗೂ ಕೆಮಿಕಲ್ ಇಲ್ಲದಿರುವ ಲವಂಗವು ಲೋಟದ ಕೆಳಗೆ ಉಳಿದುಕೊಳ್ಳುತ್ತದೆ.
ಚಳಿಗಾಲದಲ್ಲಿ ಇಮ್ಯೂನಿಟಿ ಹೆಚ್ಚಿಸಲು ಬೆಸ್ಟ್ ಫುಡ್
ಕಾರಣ (reason):
ಕಲಬೆರಿಕೆ ಯಾದ ಲವಂಗದಲ್ಲಿ ತೈಲದ (oil) ಅಂಶ ಇರುವುದಿಲ್ಲ, ಲವಂಗವನ್ನು ಶದ್ಧೀಕರಿಸುವ ಸಂದರ್ಭದಲ್ಲಿ ಅದರಲ್ಲಿರುವ ಎಣ್ಣೆಯನ್ನು ತೆಗೆದಿರುತ್ತಾರೆ ಈ ಕಾರಣದಿದಾಗಿ ಲವಂಗವು ನೀರಿನ ಮೇಲ್ಬಾಗದಲ್ಲಿ ತೇಲಲು ಪ್ರಾರಂಭಿಸುತ್ತವೆ.
ಅರಿಶಿಣದ (turmeric) ಪರೀಕ್ಷೆ
ಈ ಹಿಂದೆ ಲವಂಗದ ಪರೀಕ್ಷೆ ಮಾಡಿದಂತೆ ಅರಿಶಿನದ ಶುದ್ಧತೆಯ ಪರೀಕ್ಷೆಯನ್ನು ಕೂಡ ಮಾಡಲಾಗುತ್ತದೆ. ಇದಕ್ಕೂ ಕೂಡ 2 ಲೋಟ ನೀರು ಬೇಕಾಗುತ್ತದೆ. ಆ ಎರಡರಲ್ಲೂ ಸ್ವಲ್ಪ ಪ್ರಮಾಣದ ಅರಿಶಿಣವನ್ನು ಹಾಕಬೇಕು. ಈಗ ಕಲಬರಿಕೆ ಇಲ್ಲದ (unadulterated) ಮಾದರಿಯು ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತದೆ, ಹಾಗೂ ಅರಿಶಿನವು ಲೋಟದ ಕೆಳಭಾಗದಲ್ಲಿ ನಿಲ್ಲುತ್ತದೆ. ಇನ್ನೊಂದು ಬದಿಯಲ್ಲಿ ಕಲಬೆರಿಕೆ ಯಾದ (adulterated ) ಅರಿಶಿಣದಲ್ಲಿ ಬಣ್ಣ (color) ಬದಲಾಗುತ್ತ ಹೆಚ್ಚು ಗಾಢವಾದ (strong bright) ಹಳದಿ ಬಣ್ಣಕ್ಕೆ ತಿರುಗುತ್ತದೆ. ಅದರ ಜೊತೆಗೆ ನೀರಿನ ಬಣ್ಣವೂ ಬದಲಾಗುತ್ತದೆ.
ದಕ್ಷಣ Vs ಉತ್ತರ: ನಿಮಗ್ಯಾವ ಫುಡ್ ಬೆಸ್ಟ್?
ಹೀಗೆ ದಿನನಿತ್ಯದಲ್ಲಿ ಉಪಯೋಗಿಸುವ ಅಡುಗೆ ಸಾಮಾಗ್ರಿಗಳಲ್ಲಿ (food items) ಕಲಬೆರಿಕೆ ಉಂಟಾಗಿದೆಯೇ ಎಂದು ಪರೀಕ್ಷಿಸಿಕೊಂಡು ಬಳಿಕ ಉಪಯೋಗಿಸುವುದರಿಂದ (using) ಆರೋಗ್ಯದಲ್ಲಿ ತೊಂದರೆಗಳು (problems) ಕಂಡು ಬರುವ ಪ್ರಮಾಣ ಕಡಿಮೆಯಾಗುತ್ತದೆ (decrease). ಮೊದಲೇ ಎಲ್ಲಾ ಕಡೆಗಳಲ್ಲಿ ರೋಗ ರುಜಿನಗಳು ಹೆಚ್ಚುತ್ತಿವೆ ಹೀಗಿರುವಾಗ ಯಾವೊಂದು ಸಣ್ಣ ವಿಚಾರವನ್ನೂ ಕೂಡ ನಿರ್ಲಕ್ಷಿಸುವ (careless) ಹಾಗಿಲ್ಲ ಮನೆಯಲ್ಲಿ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರೂ ಇರುತ್ತಾರೆ ಇವರ ಆರೋಗ್ಯದಲ್ಲಿ ಬೇಗ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತದೆ. ವಾಂತಿ (vomiting), ಭೇದಿ (dysentery), ಹೊಟ್ಟೆ ನೋವು ಅಥವಾ ಜೀರ್ಣ ಮಾಡಿಕೊಳ್ಳಲು ಕಷ್ಟವಾಗುವುದು ಇಂತಹ ಎಲ್ಲಾ ಸಮಸ್ಯೆಗಳು ಕಲಬೆರಕೆ ಆಹಾರ ಸೇವನೆ ಮಾಡುವುದರಿಂದ ಕಾಣಿಸಿಕೊಳ್ಳುತ್ತದೆ. ಒಟ್ಟಿನಲ್ಲಿ ಕಲಬೆಲಕ ಆಹಾರ ಪದಾರ್ಥಗಳನ್ನು ಪರೀಕ್ಷಿಸಿಯೇ ಕೊಂಡರೆ ಒಳ್ಳೆಯದು.