ಈ ಶೀರ್ಷಿಕೆ ನೋಡಿ 'ಎಲ್ಲಿಂದ ಎಲ್ಲಿಗೆ ಲಿಂಕ್ ಇಟ್ಟೆ ಭಗವಂತ' ಅನ್ನೋ ಹಾಡಿನ ಸಾಲು ನೆನಪಾಗಬಹುದು. ಆದರೆ ಹಲ್ಲಿಗೂ ಶಿಶ್ನದ ನಿಮಿರುವಿಕೆಗೂ ಸಂಬಂಧ ಇದೆ! ಅದು ಹೇಗೆ ಅನ್ನೋ ಡೀಟೇಲ್ ಇಲ್ಲಿದೆ.
ವಸಂತ್ ನಲವತ್ತರ ಹರೆಯದ ವ್ಯಕ್ತಿ. ಪತ್ನಿ ಮಗ ಎಲ್ಲ ಆರಾಮಿದ್ದರೂ ಈತನಿಗೆ ತನ್ನ ಒಂದು ಸಮಸ್ಯೆ ಕಿವಿಯೊಳಗೆ ನೀರು ಹೋದಂತೆ ಸದಾ ಗುಂಯ್ ಅಂತ ಕಾಡುತ್ತಲೇ ಇರುತ್ತದೆ. ಅಷ್ಟಕ್ಕೂ ಮನೆಯಲ್ಲಿ ಎಲ್ಲ ಸರಿ ಇದ್ರೆ ಆಫೀಸಲ್ಲೋ ಫ್ರೆಂಡ್ಸ್ ಮಧ್ಯೆನೋ ಸಮಸ್ಯೆ ಇರಬಹುದು, ಎಕ್ಸ್ಟ್ರಾ ಮೆರಿಟಲ್ ರಿಲೇಶನ್ ಶಿಪ್ ವಕ್ಕರಿಸಿಕೊಂಡಿರಬಹುದು ಅಂತೆಲ್ಲ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ವಸಂತ್ ಸಾದಾ ಸೀದಾ ವ್ಯಕ್ತಿ. ಸ್ನೇಹಮಯಿ ವ್ಯಕ್ತಿತ್ವದಿಂದ ಅಂಥಾ ಸಮಸ್ಯೆಗಳೆಲ್ಲ ಇಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಶಿಶ್ನ ನಿಮಿರದೇ ಇದ್ದಾಗ ಈತನೊಳಗೊಂದು ಟೆನ್ಶನ್, ಗಿಲ್ಟ್, ನೋವು, ಆಘಾತ ಎಲ್ಲ ಶುರುವಾಗಿ ಎಲ್ಲದರಲ್ಲೂ ಇಂಟರೆಸ್ಟ್ ಕಳೆದುಕೊಂಡಿದ್ದಾನೆ.
ಶುಗರ್ ಲೆವೆಲ್‌ನಲ್ಲಿ ಏರು ಪೇರು ಆಗಿರಬಹುದು ಅಂತ ಟೆಸ್ಟ್ ಮಾಡಿಸಿಯೂ ಬಂದಿದ್ದಾನೆ. ಆದರೆ ಎಲ್ಲೂ ಏನೂ ಸಮಸ್ಯೆ ಇಲ್ಲ. ಬಹುಶಃ ತನ್ನಲ್ಲಿ ಆಕರ್ಷಣೆ ಹೋಗಿರಬಹುದು ಎಂಬ ಮನಸ್ಥಿತಿ ಈತನ ಹೆಂಡತಿಯಲ್ಲೂ ಬೆಳೆಯಲು ಶುರುವಾಗಿದೆ. ಇದರ ಪರಿಣಾಮ ಫ್ಯಾಮಿಲಿ ಲೈಫು ನಿಧಾನಕ್ಕೆ ವಿಷಾದದ ಕಡೆ ವಾಲುತ್ತಿದೆ. ಆದರೆ ವಸಂತ್ ಗಿದ್ದ ಹಲ್ಲಿನ ಸಮಸ್ಯೆಯೇ ಆತನ ಶಿಶ್ನದ ನಿಮಿರುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿತು ಅನ್ನೋದನ್ನು ಆತ ಕನ್ಸಲ್ಟ್ ಮಾಡಿದ ಸೆಕ್ಸಾಲಜಿಸ್ಟ್ ಹೇಳಿದಾಗ ಆತ ನೋವನ್ನೂ ಮರೆತು ನಕ್ಕಿದ್ದ. ನಿಮಗೂ ನಮಗು ಬರಬಹುದು. ಹಲ್ಲಿಗೂ ಶಿಶ್ನಕ್ಕೂ ಏನ್ ಸಂಬಂಧ ಅಂತ. ಆದರೆ ನಮ್ಮ ದೇಹದ ಪ್ರತಿಯೊಂದು ಅಂಗಕ್ಕೂ ಬೇರೊಂದು ಅಂಗದ ಜೊತೆ ಕನೆಕ್ಷನ್ ಇದ್ದೇ ಇದೆ.
ವಯಾಗ್ರ ಸೇವಿಸಿ ಫರ್ಸ್ಟ್ ನೈಟ್‌ನಲ್ಲಿ ಭಾಗಿಯಾದ ಪತಿ, ಸಾವು ಕಂಡ ಪತ್ನಿ!
ಹಲ್ಲುಗಳ ಹಾಗೂ ವಸಡುಗಳ ಸಮಸ್ಯೆ ಇರುವ ಪುರುಷರಿಗೆ ಸಾಮಾನ್ಯವಾಗಿ ಲೈಂಗಿಕ ಸಮಸ್ಯೆಗಳು (Sexual problems) ಹೆಚ್ಚಾಗಿರುತ್ತವೆ. ಮುಖ್ಯವಾಗಿ ನಿಮಿರುವಿಕೆ ಅಪಸಾಮಾನ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.
ಈತನ ಡಾಕ್ಟರ್ ಹೇಳಿರುವ ಪ್ರಕಾರ ನಿಮಿರುವಿಕೆ ಸಮಸ್ಯೆಗೂ ಹಲ್ಲಿನ ಸಮಸ್ಯೆಗೂ ಸಂಬಂಧ ಇದೆ. ಡಾಕ್ಟರ್ ಹೇಳುವಂತೆ ಹಲ್ಲುಗಳ ಹಾಗೂ ವಸಡುಗಳ ಸಮಸ್ಯೆ ಇರುವ ಪುರುಷರಿಗೆ ಸಾಮಾನ್ಯವಾಗಿ ಲೈಂಗಿಕ ಸಮಸ್ಯೆಗಳು ಹೆಚ್ಚಾಗಿರುತ್ತವೆ. ಮುಖ್ಯವಾಗಿ ನಿಮಿರುವಿಕೆ Penile erection) ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಈ ರೀತಿಯ ಸಮಸ್ಯೆ ಇರುವ ಪುರುಷರಲ್ಲಿ ವಸಡುಗಳ ಸಮಸ್ಯೆ ಕೂಡ ಏಳು ಪಟ್ಟು ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ವಸಡುಗಳ ಭಾ ದಲ್ಲಿರುವ ಬ್ಯಾಕ್ಟೀರಿಯಾಗಳು ಪುರುಷರ ಶಿಶ್ನದ ಭಾಗಕ್ಕೆ ಸಂಚರಿಸುತ್ತವೆ ಮತ್ತು ಲೈಂಗಿಕ ತೊಂದರೆ ಉಂಟು ಮಾಡುತ್ತವೆ. ಹೀಗಾದಾಗ ನಿಮಿರುವಿಕೆ ಸಮಸ್ಯೆಯಿಂದ ಪುರುಷ ಒದ್ದಾಡುತ್ತಾನೆ. ಅದಕ್ಕೆ ಎಲ್ಲೆಲ್ಲೋ ಕಾರಣ ಹುಡುಕಲು ಶುರು ಮಾಡುತ್ತಾನೆ. ಆದರೆ ಸಮಸ್ಯೆ ಹಲ್ಲಿನಲ್ಲಿದೆ (teeth) ಅಂತ ಆತನಿಗೆ ತಿಳಿಯೋದು ಲೇಟಾಗಿ.
ವಸಂತನಿಗೆ ಮೊದಲಿಂದಲೂ ವಸಡಿನ, ಹಲ್ಲಿನ ಸಮಸ್ಯೆ ಇತ್ತು. ಆ ಬಗ್ಗೆ ಕ್ಷಣಿಕ ಮೆಡಿಸಿನ್‌ಗಳಿಗೆ ಮೊರೆಹೋಗುತ್ತಿದ್ದ. ಆದರೆ ಯಾವಾಗ ಇದರ ವ್ಯಾಪ್ತಿ ಮೇಲಿಂದ ಕೆಳಗಿನವರೆಗೆ ಇದೆ ಅಂತ ಗೊತ್ತಾಯ್ತೋ ಆವಾಗಿಂದ ಟ್ರೀಟ್‌ಮೆಂಟ್ ತೆಗೆದುಕೊಂಡು ಹಲ್ಲನ್ನು ಸರಿಪಡಿಸಿಕೊಂಡ. ಆತನ ಮತ್ತೊಂದು ಸಮಸ್ಯೆಯೂ ಪರಿಹಾರ ಆಯ್ತು ಅನ್ನುವಲ್ಲಿಗೆ ವಸಂತ ಪ್ರಹಸನ ದಿ ಎಂಡ್ ಆಯ್ತು.
ಪ್ರೇಮಿಗಳ ದಿನದಂದು ರಾಮ್‌ನಿಗೆ ಸೀತಾ ಪ್ರಪೋಸ್: ಅರೆರೆ... ಪ್ರಾರ್ಥನಾ ಕಥೆ ಏನು ಕೇಳಿದ ಫ್ಯಾನ್ಸ್!
ಶಿಶ್ನದ ನಿಮಿರುವಿಕೆ ಸಮಸ್ಯೆಗೆ ಬೇರೆ ಬೇರೆ ಕಾರಣಗಳೂ ಇವೆ. ಜಡ ಜೀವನ ಶೈಲಿಯ ಪುರುಷರಿಗೆ ನಿಮಿರುವಿಕೆ ಸಮಸ್ಯೆ ಸಹಜವಾಗಿ ಕಂಡುಬರುತ್ತದೆ. ವ್ಯಾಯಾಮ (exercise) ಇಲ್ಲದೇ ಜಡವಾಗಿರೋದು ಒಳ್ಳೆಯದಲ್ಲ. ಜೊತೆಗೆ ಧೂಮಪಾನ ಮಾಡುವ ಹಲವು ಪುರುಷರು ನಿಮಿರುವಿಕೆ ಸಮಸ್ಯೆಯನ್ನು ಎದುರಿಸುತ್ತಾರೆ. ಸರಿಯಾಗಿ ನಿದ್ರೆ (sleep)ಮಾಡದೇ ಇದ್ದರೆ, ಆ ಸಂದರ್ಭ ದಲ್ಲೂ ಕೂಡ ಲೈಂಗಿಕ ಹಾರ್ಮೋನ್ ಪ್ರಮಾಣ ತಗ್ಗುತ್ತದೆ.
ಇದು ಸುಸ್ತು ಮತ್ತು ಆಯಾಸ ಕಂಡುಬರುವಂತೆ ಮಾಡಿ ದೇಹದ ಮಾಂಸ ಖಂಡಗಳು ಮತ್ತು ಮೂಳೆಗಳ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಸಹಜವಾಗಿ ಶಿಶ್ನದ ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವ ಉಂಟಾಗುತ್ತದೆ. ವಾರದಲ್ಲಿ 20 ಗಂಟೆಗಳಿಗಿಂತ ಹೆಚ್ಚು ಯಾರು ಗ್ಯಾಜೆಟ್ಸ್ ನೋಡುತ್ತಾರೋ ಅಂಥವರಿಗೆ ನಿಮಿರುವಿಕೆ ಸಮಸ್ಯೆ ಜೊತೆ ಫಲವತ್ತತೆ ಸಮಸ್ಯೆಯೂ ಕಾಡುತ್ತದೆ.