Reasons to Sweat: ಬೇಸಿಗೆಯಲ್ಲಿ ಕಾಡೋ ಸಮಸ್ಯೆಗೆೇನಿರಬಹುದು ಕಾರಣ?

Published : Apr 05, 2022, 09:14 AM IST
Reasons to Sweat: ಬೇಸಿಗೆಯಲ್ಲಿ ಕಾಡೋ ಸಮಸ್ಯೆಗೆೇನಿರಬಹುದು ಕಾರಣ?

ಸಾರಾಂಶ

ವಿಪರೀತ ಬೆವರು ಬಂದರೆ ಹೊರಗೆ ಹೋದಾಗ ಮುಜುಗರವಾಗುತ್ತದೆ. ಹಾಗೆಯೇ, ಬೆವರು ವಾಸನೆಯಿಂದ ಕೂಡಿದ್ದರೆ ಇನ್ನಷ್ಟು ಮುಜುಗರವಾಗುತ್ತದೆ. ಬೆವರು ದುರ್ಗಂಧ ಬೀರಲು ಹಲವಾರು ಕಾರಣಗಳಿರುತ್ತವೆ. ದೇಹದ ಬೆವರು ಸಹಜಕ್ಕಿಂತ ವಿಭಿನ್ನವಾದ ವಾಸನೆಯಿಂದ ಕೂಡಿದ್ದರೆ ಕೆಲವು ರೋಗಗಳ ಲಕ್ಷಣಗಳೂ ಇರಬಹುದು.  

Summerನಲ್ಲಿ ಹೊರ ಹೊರಟರೆ ಸಾಕು, ಬೆವರಿನಲ್ಲಿ ತೋಯ್ದು ಹೋಗುತ್ತೇವೆ. ಅಷ್ಟು ಬೆವರು (Sweat) ಕಿತ್ತು ಬರುತ್ತದೆ. ಕೇವಲ ಮನೆಗೆಲಸ ಮಾಡಿಕೊಂಡಿದ್ದರೂ ಬೆವರು ಹರಿಯುತ್ತದೆ. ಏಕೆಂದರೆ, ಇದು ಬಿರು ಬೇಸಿಗೆ (Summer). ಬೆವರು ಬರುವುದು ಅತ್ಯಂತ ಸಹಜ. ಆದರೆ, ಆ ಬೆವರು ಕೆಟ್ಟ ವಾಸನೆಯಿಂದ ಕೂಡಿರುವುದು ಸಹಜವಲ್ಲ. 

ಬೆವರು ವಾಸನೆ ಆಗುವುದು ಯಾವಾಗ?
ನೀವು ಗಮನಿಸಿರಬಹುದು. ಕೆಲವರು ಬಳಿ ಅರೆಕ್ಷಣವೂ ನಿಲ್ಲಲು ಸಾಧ್ಯವಾಗುವುದಿಲ್ಲ. ಅವರ ಬೆವರು ಅಷ್ಟು ದುರ್ಗಂಧ (Smell) ಬೀರುತ್ತಿರುತ್ತದೆ. 
ನಮ್ಮ ದೇಹದ ಬೆವರು ಚರ್ಮದಲ್ಲಿರುವ ಬ್ಯಾಕ್ಟೀರಿಯಾದ (Bacteria) ಸಂಪರ್ಕಕ್ಕೆ ಬಂದಾಗ ವಾಸನೆಯಾಗುತ್ತದೆ. ಬೆವರಿಗೆ ಅದರದ್ದೇ ಆದ ವಾಸನೆ ಇರುವುದೇ ಇಲ್ಲ. ಅದರ ವಾಸನೆ ನಿರ್ಧಾರವಾಗುವುದೇ ಚರ್ಮದಲ್ಲಿರುವ ಬ್ಯಾಕ್ಟೀರಿಯಾಗಳಿಂದ. ಬ್ಯಾಕ್ಟೀರಿಯಾದೊಂದಿಗೆ ಸೇರಿದಾಗಲೇ ಬೆವರು ವಾಸನೆಯುಕ್ತವಾಗುತ್ತದೆ. 
ಕೆಲವೊಮ್ಮೆ ದೇಹದಿಂದ ಸಿಹಿಯಾದ (Sweet), ಹುಳಿಯಾದ, ತೀಕ್ಷ್ಣವಾದ ವಾಸನೆ ಬರುತ್ತದೆ. ಏಕೆಂದರೆ, ಆಗ ದೇಹದಿಂದ ಬೆವರು ಬಾರದೆ ಇದ್ದಿರಬಹುದು. ದೇಹದಿಂದ ಬೆವರು ಹೊರಬರದಿದ್ದರೂ ದುರ್ಗಂಧ ಬರುತ್ತದೆ. ಹಾಗೆಯೇ, ಯಾರಿಗಾದರೂ ಅತಿ ಹೆಚ್ಚು ಬೆವರು ಬರುತ್ತದೆ ಎಂದರೆ ಅವರ ದೇಹದಿಂದ ದುರ್ಗಂಧವೂ ಬರುತ್ತದೆ ಎಂದು ತಿಳಿದುಕೊಳ್ಳಬಾರದು. ಏಕೆಂದರೆ, ದೇಹದಿಂದ ಬರುವ ವಾಸನೆ ಅಲ್ಲಿರುವ ಬ್ಯಾಕ್ಟೀರಿಯಾದಿಂದ ಉಂಟಾಗಿರುತ್ತದೆ. ಚರ್ಮದ ಮೇಲೆ ಇರುವ ಬೆವರಿನ ರಂಧ್ರಗಳಿಂದ ಬೆವರು ಹೊರಗೆ ಬರುತ್ತದೆ. ನಮ್ಮ ದೇಹದಲ್ಲಿ ಎರಡು ಬೆವರಿನ ಗ್ರಂಥಿಗಳಿವೆ. ಅವು ಎಕ್ರೈನ್ (Eccrine) ಹಾಗೂ ಎಪೊಕ್ರೈನ್ (Epocrine). ದೇಹದಲ್ಲಿ ವಾಸನೆ ಉತ್ಪಾದಿಸುವಲ್ಲಿ ಎಪೊಕ್ರೈನ್ ಗ್ರಂಥಿಗಳು ಕಾರಣವಾಗಿವೆ. 

ಎಕ್ರೈನ್ ಗ್ರಂಥಿ
ಎಕ್ರೈನ್ ಗ್ರಂಥಿಗಳು ಚರ್ಮದ ಮೇಲೆ ಬೆವರನ್ನು ತರುತ್ತವೆ. ಬೆವರು ಬಂದಾಗ ನಮ್ಮ ಚರ್ಮ ತಣ್ಣಗಾಗುತ್ತದೆ. ಹಾಗೂ ದೇಹದ ತಾಪಮಾನ ನಿಯಂತ್ರಣಕ್ಕೆ ಬರುವಲ್ಲಿ ಸಹಕಾರಿಯಾಗುತ್ತದೆ. ಇದು ದೇಹದಲ್ಲಿ ವಾಸನೆಯನ್ನು ಉತ್ಪಾದಿಸುವುದಿಲ್ಲ. ಯಾವುದೇ ರೀತಿಯ ದೈಹಿಕ ಚಟುವಟಿಕೆ (Activity) ನಡೆಸಿದಾಗಲೂ ಎಕ್ರೈನ್ ಗ್ರಂಥಿಗಳಿಂದಾಗಿ ಬೆವರು ಬರುತ್ತದೆ. ಇವು ಅಂಗ ಹಾಗೂ ಅಡಿಭಾಗ ಸೇರಿದಂತೆ ದೇಹದ ಹಲವಾರು ಭಾಗಗಳನ್ನು ಆವರಿಸಿವೆ.

ಗಂಡಸರಿಗೇಕೆ ಸೆಕೆ ಹೆಚ್ಚು?

ಎಪೊಕ್ರೈನ್ ಗ್ರಂಥಿ
ಎಪೊಕ್ರೈನ್ ಗ್ರಂಥಿಗಳು ಬೆವರನ್ನು ಉತ್ಪಾದನೆ ಮಾಡುತ್ತವೆ ಹಾಗೂ ಅದು ಚರ್ಮದ ಮೇಲಿರುವ ಬ್ಯಾಕ್ಟೀರಿಯಾಗಳೊಂದಿಗೆ ಬೆರೆಯುವಂತೆ ಮಾಡುತ್ತವೆ. ಆಗ ದುರ್ಗಂಧವುಂಟಾಗುತ್ತದೆ. ಯೌವನದವರೆಗೆ ಎಪೊಕ್ರೈನ್ ಗ್ರಂಥಿಗಳು ಕಾರ್ಯನಿರ್ವಹಿಸಲು ಆರಂಭಿಸುವುದಿಲ್ಲ. ಹೀಗಾಗಿಯೇ ಮಕ್ಕಳ ಬೆವರಿನಿಂದ ಯಾವುದೇ ರೀತಿಯ ವಾಸನೆಯುಂಟಾಗುವುದಿಲ್ಲ. 

ಈ ಆಹಾರದಿಂದ (Food) ಬೆವರು ವಾಸನೆ
ಬೆವರು ಬರುವುದು ದೇಹದ ಒಂದು ನೈಸರ್ಗಿಕ ಪ್ರಕ್ರಿಯೆ. ಆದರೆ, ಕೆಲವು ಆಹಾರ ಸೇವನೆಯಿಂದ, ಆನುವಂಶಿಕ ಹಾಗೂ ಸ್ವಚ್ಛತೆಯ ಕೊರತೆಯಿಂದಲೂ ದೇಹದಿಂದ ದುರ್ಗಂಧ ಬರುತ್ತದೆ. ಈರುಳ್ಳಿ (Onion), ಬೆಳ್ಳುಳ್ಳಿ (Garlic), ಹೂಕೋಸು, ಎಲೆಕೋಸು, ಬ್ರೊಕೋಲಿ, ಕೆಂಪು ಮಾಂಸದ (Red Meat) ಸೇವನೆಯಿಂದ ದೇಹ ದುರ್ಗಂಧಮಯವಾಗುತ್ತದೆ. ಹಾಗೂ ಕೆಫೀನ್, ಮಸಾಲೆ ಪದಾರ್ಥಗಳು ಹಾಗೂ ಮದ್ಯಪಾನದಿಂದಾಗಿ ದೇಹದ ವಾಸನೆ ಇನ್ನಷ್ಟು ಹೆಚ್ಚಾಗಬಹುದು. 

ಬೆವರು ವಾಸನೆ ಬರಲು ಮುಖ್ಯ ಕಾರಣ
ಮಧುಮೇಹ, ಸಂಧಿವಾತ, ಅತಿಕ್ರಿಯಾಶೀಲ ಥೈರಾಯ್ಡ್, ಯಕೃತ್ತು, ಕಿಡ್ನಿಯ ಅನಾರೋಗ್ಯ ಹಾಗೂ ಕೆಲವು ಸಾಂಕ್ರಾಮಿಕ ರೋಗಗಳಿಂದ (Disease) ಬೆವರು ದುರ್ಗಂಧದಿಂದ ಕೂಡಿರುತ್ತದೆ. ಮಧುಮೇಹವಿದ್ದಾಗ ಅಧಿಕ ಕೀಟೋನ್ ಗಳಿಂದಾಗಿ ರಕ್ತ ಹೆಚ್ಚು ಆಸಿಡಿಕ್ (Acidic) ಆಗುತ್ತದೆ. ಅದರಿಂದಾಗಿ ಬೆವರು ಫ್ರೂಟಿಯಂತೆ ವಾಸನೆಯಾಗುತ್ತದೆ. ಯಕೃತ್ತು ಹಾಗೂ ಕಿಡ್ನಿ ಸಮಸ್ಯೆಗಳಿಂದಾಗಿ ದೇಹದಲ್ಲಿ ವಿಷಕಾರಿ ಅಂಶ ಹೆಚ್ಚು ಸೇರಿಕೊಳ್ಳುತ್ತದೆ. ಆಗ ಬೆವರು ಬ್ಲೀಚ್ ನಂತೆ ವಾಸನೆ ಬೀರುತ್ತದೆ. 

ಬೆವರಿನ ವಾಸನೆ ಹೋಗಿಸಲು ಸಿಂಪಲ್ ಮನೆ ಮದ್ದು
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?
ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..