
ಆಧುನಿಕ ತಂತ್ರಜ್ಞಾನ ಬಂತಂತೆಲ್ಲಾ ಸಮಸ್ಯೆಗಳ ಮಹಾಪೂರವೇ ತನ್ನೊಂದಿಗೆ ತರುತ್ತಿದೆ. ಹಿಂದೆಲ್ಲಾ ಸಂಪ್ರದಾಯಬದ್ಧವಾಗಿ ಒಂದಿಷ್ಟು ನಿಯಮಗಳನ್ನು ಅನುಸರಿಸುತ್ತಿದ್ದರು. ಅದೇ ಕಾರಣಕ್ಕೇನೇ ಹಿಂದಿನವರಿಗೆ ನೂರಾರು ವರ್ಷಗಳು ಆರೋಗ್ಯವಂತರಾಗಿಯೇ ಬದುಕುತ್ತಿದ್ದರು. ಆದರೆ ಈಗ ಕಾಲ ಬದಲಾಗುತ್ತಿದ್ದಂತೆಯೇ 30-40ಕ್ಕೇನೇ ವಯಸ್ಸಾಗುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಇಲ್ಲಸಲ್ಲದ ಸಮಸ್ಯೆಗಳು ಬರುತ್ತಿವೆ. ಈಗಂತೂ ಹೃದಯಾಘಾತ ಎನ್ನುವುದು ಮಾಮೂಲಾಗಿಬಿಟ್ಟಿದೆ. ಇವುಗಳಿಗೆ ಬೇರೆ ಬೇರೆ ಕಾರಣಗಳು ಇದ್ದರೂ, ನಾವು ಪ್ರತಿನಿತ್ಯ ಮಾಡುವ ಸ್ನಾನದ ಕ್ರಮದಿಂದ ಹೇಗೆ ನಮ್ಮ ದೇಹಕ್ಕೆ ಸಮಸ್ಯೆ ತಂದೊಡ್ಡುತ್ತಿದ್ದೇವೆ ಎನ್ನುವುದನ್ನು ವೈದ್ಯೆ ಈ ವಿಡಿಯೋದಲ್ಲಿ ವಿವರಿಸಿದ್ದಾರೆ ನೋಡಿ.
ಹಿಂದೆಲ್ಲಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಆ ಸಮಯದಲ್ಲಿ ಮೊದಲಿಗೆ ಕಾಲನ್ನು ನೀರಿಗೆ ಸ್ಪರ್ಶಿಸುತ್ತಿದ್ದರು. ಆಗ ಆ ನೀರು ಕಾಲಿನ ಮೂಲಕ ನಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ಟೆಂಪರೇಚರ್ ಬದಲಿಸಿಕೊಳ್ಳುತ್ತಿತ್ತು. ದೇಹಕ್ಕೆ ಬೇಕಾದ ಟೆಂಪರೇಚರ್ ಸಿಗುತ್ತಿತ್ತು. ಕಾಲಿನ ಬಳಿಕ ನಿಧಾನವಾಗಿ ದೇಹವನ್ನು ನೀರಿನಲ್ಲಿ ಮುಳುಗಿಸಿ, ಕೊನೆಯಲ್ಲಿ ತಲೆಗೆ ನೀರು ಹಾಕಿಕೊಳ್ಳುತ್ತಿದ್ದರು. ಇದೇ ನಿಜವಾದ ಸ್ನಾನ ಎನ್ನುವ ಮೂಲಕ ನೇರವಾಗಿ ಶವರ್ ಕೆಳಗೆ ನಿಂತು ಆರಂಭದಲ್ಲಿ ತಲೆಗೇ ನೀರನ್ನು ಬಿಟ್ಟುಕೊಂಡರೆ ಅದು ಅದೆಷ್ಟು ಅಪಾಯಕಾರಿ ಎನ್ನುವುದನ್ನು ಖ್ಯಾತ ವೈದ್ಯೆ ಹೇಳಿದ್ದಾರೆ. ಆದರೆ ಇದೀಗ ಬಹುತೇಕ ಮನೆಗಳಲ್ಲಿ ಶವರ್ ಬಾತ್ ಮಾಮೂಲಾಗಿದೆ. ಆದರೆ ನೇರವಾಗಿ ಶವರ್ ಕೆಳಗೆ ನಿಂತು ತಲೆಗೆ ಮೊದಲು ನೀರು ಬಿಟ್ಟುಕೊಂಡರೆ ಅದರಿಂದ ಆಗುವ ಅನಾಹುತಗಳೇನು ಎನ್ನುವ ಬಗ್ಗೆ ವೈದ್ಯೆ ಮಾತನಾಡಿದ್ದಾರೆ.
ಆರಂಭದಲ್ಲಿಯೇ ಶವರ್ ಕೆಳಗೆ ನಿಂತು ತಲೆಗೆ ನೀರು ಸುರಿದುಕೊಂಡರೆ, ಬಿಪಿ, ಹಾರ್ಟ್ರೇಟ್ ಎಲ್ಲವೂ ಏರುಪೇರಾಗುತ್ತದೆ. ಬಿಸಿನೀರಂತೂ ಇನ್ನೂ ಡೇಂಜರ್. ತಣ್ಣೀರಿನಲ್ಲಿ ಕೂಡ ಮೊದಲು ತಲೆಗೆ ನೀರು ಹಾಕಿಕೊಳ್ಳಬಾರದು. ಅದರಲ್ಲಿಯೂ ಜಿಮ್, ವ್ಯಾಯಾಮ ಅಂತೆಲ್ಲಾ ವರ್ಕ್ಔಟ್ ಮಾಡಿ ನೇರವಾಗಿ ಶವರ್ ನಿಂತು ತಲೆಗೆ ಸ್ನಾನ ಮಾಡ್ತಿದ್ರೆ ದಯವಿಟ್ಟು ಇವತ್ತೇ ನಿಲ್ಲಿಸಿಬಿಡಿ. ಇದು ಅತ್ಯಂತ ಅಪಾಯಕಾರಿ ಎಂದಿದ್ದಾರೆ ವೈದ್ಯೆ. ಆದ್ದರಿಂದ ಬಕೆಟ್ನಲ್ಲಿ ಚೊಂಬಿನ ಮೂಲಕ ಸ್ನಾನ ಮಾಡುವುದೇ ಸೇಫ್ ಎಂದಿದ್ದಾರೆ.
ಮೊದಲಿಗೆ ಯಾವತ್ತಿಗೂ ಕಾಲಿಗೆ ನೀರು ಹಾಕಿಕೊಳ್ಳಿ. ಬಳಿಕ ಸೊಂಟ ಹೀಗೆ ಮೇಲೆ ಬಂದು ಆಮೇಲೆ ತಲೆಗೆ ಸ್ನಾನ ಮಾಡಬೇಕು. ಅಷ್ಟರಲ್ಲಿ ಬ್ರೇನ್ ಸೆಟ್ ಆಗುತ್ತದೆ. ಇದರಿಂದ ಹೃದಯ, ಮಿದುಳು ಯಾವುದಕ್ಕೂ ಸಮಸ್ಯೆಯಾಗುವುದಿಲ್ಲ ಎಂದಿದ್ದಾರೆ. ಇದೇ ವೇಳೆ ತುಂಬಾ ಬಿಸಿನೀರು ಮತ್ತು ತುಂಬಾ ತಣ್ಣಗಿನ ನೀರಿನಿಂದ ಸ್ನಾನ ಮಾಡಬೇಡಿ ಎಂದಿರುವ ವೈದ್ಯೆ, ಪಿತ್ತ ಪ್ರಕೃತಿಯವರು ಸ್ವಲ್ಪ ತಣ್ಣಗಿನ ನೀರಿನಲ್ಲಿ ಹಾಗೂ ಕಫ ಪ್ರಕೃತಿಯವರು ಅರ್ಥಾತ್ ಯಾವಾಗಲೂ ಶೀತ ನೆಗಡಿ ಅಂತೆಲ್ಲಾ ಇರುವವರು ಸ್ವಲ್ಪ ಬಿಸಿ ನೀರಿನಲ್ಲಿ ಸ್ನಾನಮಾಡಿ. ಆದರೆ ಸ್ನಾನ ಮಾಡುವಾಗ ಪ್ರತಿಯೊಬ್ಬರೂ ಕಾಲಿನಿಂದ ಆರಂಭಿಸಿ ಎಂದಿದ್ದಾರೆ. ಡೈರೆಕ್ಟ್ ತಲೆ ಕೊಟ್ಟರೆ ಬ್ರೈನ್ ಶೂಟ್ ಆಗುತ್ತದೆ ಎಂದು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.