ತೂಕ ಇಳಿಸಲು ವ್ಯಾಯಾಮದ ಜೊತೆ ಡಯಟ್ ಮುಖ್ಯ. ಅದ್ರಲ್ಲೂ ಯಾವ ಆಹಾರ ತೂಕ ಕಡಿಮೆ ಮಾಡಲು ಸಹಾಯಕಾರಿ ಎಂಬುದನ್ನು ತಿಳಿದಿರಬೇಕು. ಪಾಲಕ್ ಹಾಗೂ ಮೆಂತ್ಯ ಸೊಪ್ಪಿನ ವಿಷ್ಯ ಬಂದಾಗ್ಲೂ ಜನರಲ್ಲಿ ಗೊಂದಲ ಕಾಡೋದು ಕಾಮನ್.
ಡಯಟ್ ನಲ್ಲಿ ಹಸಿರು ಸೊಪ್ಪುಗಳಿರಲಿ ಅಂತಾ ವೈದ್ಯರು ಸಲಹೆ ನೀಡ್ತಾರೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜನರು ಹಸಿರು ಸೊಪ್ಪುಗಳನ್ನು ಬಳಕೆ ಮಾಡ್ತಾರೆ. ಮಾರುಕಟ್ಟೆಯಲ್ಲಿ ನಾವು ನಾನಾ ರೀತಿಯ ಸೊಪ್ಪುಗಳನ್ನು ನೋಡ್ಬಹುದು. ಮೆಂತ್ಯ, ಪಾಲಾಕ್, ಸಾಸಿವೆ ಸೊಪ್ಪು,ದಂಟಿನ ಸೊಪ್ಪು ಹೀಗೆ ಅನೇಕ ಸೊಪ್ಪುಗಳು ಕಾಣ್ತವೆ. ಬಹುತೇಕರು ಮೆಂತ್ಯ ಅಥವಾ ಪಾಲಕ್ ಸೊಪ್ಪನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡ್ತಾರೆ. ಮೆಂತ್ಯ ಹಾಗೂ ಪಾಲಕ್ ಎರಡೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ರೆ ಈವೆರಡಲ್ಲಿ ಯಾವುದನ್ನು ಸೇವನೆ ಮಾಡಿದ್ರೆ ತೂಕ ಇಳಿಯುತ್ತೆ ಎನ್ನುವುದು ನಿಮಗೆ ಗೊತ್ತಾ? ನಾವಿಂದು ಪಾಲಾಕ್ ಹಾಗೂ ಮೆಂತ್ಯದಲ್ಲಿ ಯಾವ ಸೊಪ್ಪು ಫಿಟ್ನೆಸ್ ಗೆ ಬೆಸ್ಟ್ ಅನ್ನೋದನ್ನು ಹೇಳ್ತೆವೆ.
ಯಾವ ಸೊಪ್ಪಿನಲ್ಲಿ ಏನೇನು ಪೋಷಕಾಂಶ (Nutrient) ವಿದೆ? :
ಮೆಂತ್ಯ (Fenugreek) ಸೊಪ್ಪಿನಲ್ಲಿರುವ ಪೋಷಕಾಂಶಗಳು : ಮೆಂತ್ಯ ಸೊಪ್ಪನ್ನು ತೂಕ (Weight) ಕಡಿಮೆ ಮಾಡಲು ಪ್ರಯೋಜನಕಾರಿ ಎನ್ನಬಹುದು. ಯಾಕೆಂದ್ರೆ ಮೆಂತ್ಯ ಸೊಪ್ಪು ಕಡಿಮೆ ಕ್ಯಾಲೋರಿ ಆಹಾರ (Food) ವಾಗಿದೆ. ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಕೆ ನಂತಹ ಪೋಷಕಾಂಶಗಳು ಕಂಡುಬರುತ್ತವೆ. ಮೆಂತ್ಯದಲ್ಲಿ ನೈಸರ್ಗಿಕ ಪ್ರೋಟೀನ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಕಬ್ಬಿಣ, ಫೈಬರ್, ಮ್ಯಾಗ್ನೀಸಿಯಂ, ಪೋಟ್ಯಾಶಿಯಂ, ಸೋಡಿಂ, ಜಿಂಕ್, ವಿಟಮಿನ್ ಬಿ 6, ಆಂಟಿ ಆಕ್ಸಿಡೆಂಟ್ ಹಾಗೂ ಆಂಟಿ ಬ್ಯಾಕ್ಟೀರಿಯಲ್ ಗುಣ ಸೇರಿದಂತೆ ಅನೇಕ ಪೋಷಕಾಂಶವಿದೆ.
ಇದು ತೂಕ ನಷ್ಟದ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ತೂಕ ಇಳಿಸಲು ಇದನ್ನು ರಾಮ ಬಾಣ ಎಂದು ಕರೆಯಲಾಗುತ್ತದೆ. ಕ್ಯಾಲೋರಿ ಬರ್ನ್ ಆಗದೆ ತೂಕ ಇಳಿಯಲು ಸಾಧ್ಯವಿಲ್ಲ. ಮೆಂತ್ಯ ಸೊಪ್ಪಿನ ಸೇವನೆಯಿಂದ ಕ್ಯಾಲೋರಿ ಕಡಿಮೆಯಾಗುವ ಜೊತೆಗೆ ದೇಹದಲ್ಲಿರುವ ಫ್ಯಾಟ್ ಕರಗಿಸಲು ಇದು ಸಹಾಯ ಮಾಡುತ್ತದೆ. ಹೃದಯವನ್ನು ಆರೋಗ್ಯವಾಗಿಡುವ ಮೆಂತ್ಯ, ಯಾವುದೇ ಹೃದಯ ಸಮಸ್ಯೆ ಬರದಂತೆ ನಮ್ಮನ್ನು ಕಾಪಾಡುತ್ತದೆ. ಮೆಂತ್ಯ ಸೊಪ್ಪಿನ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುವ ಜೊತೆಗೆ ಜೀರ್ಣಕ್ರಿಯೆ ಸುಲಭವಾಗುತ್ತದೆ. ಕಿಡ್ನಿಯ ಆರೋಗ್ಯಕ್ಕೂ ಇದು ಹೇಳಿ ಮಾಡಿಸಿದ ಸೊಪ್ಪು.
ಎನರ್ಜಿ ಡ್ರಿಂಕ್ಸ್ ಕುಡಿತೀರಾ? ಕೂದಲು ಉದುರೋದು ಹೆಚ್ಚಾಗುತ್ತೆ
ಪಾಲಕದಲ್ಲಿರುವ ಪೋಷಕಾಂಶಗಳು : ಇನ್ನು ಪಾಲಕನಲ್ಲಿ ಕಬ್ಬಿಣ ಸಮೃದ್ಧವಾಗಿದೆ. ಇದರಲ್ಲಿ ಅನೇಕ ಉತ್ಕರ್ಷಣ ನಿರೋಧಕ ಗುಣಗಳೂ ಇವೆ. ಫೈಬರ್, ಕ್ಯಾಲ್ಸಿಯಂ, ವಿಟಮಿನ್ ಎ, ಕೆ, ಸಿ ಮತ್ತು ಕೆ 1 ನಂತಹ ಖನಿಜಗಳು ಸಹ ಇದರಲ್ಲಿವೆ. ಪಾಲಕ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಕಡಿಮೆ ಕ್ಯಾಲೋರಿ ಸೊಪ್ಪಾಗಿದೆ. ಇದು ಕಣ್ಣುಗಳಿಗೆ ಒಳ್ಳೆಯದು. ಮಲಬದ್ಧತೆ ಸಮಸ್ಯೆ ಹೋಗಲಾಡಿಸುವ ಕೆಲಸ ಮಾಡುತ್ತದೆ. ಅನೇಕ ರೀತಿಯ ಕ್ಯಾನ್ಸರ್ ತಡೆಗಟ್ಟುವ ಕೆಲಸವನ್ನು ಇದು ಮಾಡುತ್ತದೆ. ಮೂಳೆ ಆರೋಗ್ಯ ಮತ್ತು ಬೆಳವಣಿಗೆಗೆ ವಿಟಮಿನ್ ಕೆ ಅತ್ಯಗತ್ಯ. ಪಾಲಕನಲ್ಲಿ ವಿಟಮಿನ್ ಕೆ ಹೇರಳವಾಗಿದೆ. ಕೇವಲ ಒಂದು ಕಪ್ ಪಾಲಕ ತಿನ್ನುವುದ್ರಿಂದ ದೇಹಕ್ಕೆ ಬೇಕಾದ ವಿಟಮಿನ್ ಕೆ ಸಿಗುತ್ತದೆ. ಮೆದುಳು ಮತ್ತು ನರಮಂಡಲದ ಆರೋಗ್ಯಕ್ಕೂ ಇದು ಒಳ್ಳೆಯದು.
ಊಟದ ಜೊತೆ ಸಲಾಡ್ ತಿನ್ನೋದು ನಿಜವಾಗಲೂ ಆರೋಗ್ಯಕ್ಕೆ ಒಳ್ಳೆಯದಾ?
ತೂಕ ನಷ್ಟಕ್ಕೆ ಯಾವುದು ಬೆಸ್ಟ್ ? : ಪಾಲಕ್ ಮತ್ತು ಮೆಂತ್ಯ ಎರಡೂ ಸೊಪ್ಪಿನಲ್ಲಿ ಸಾಕಷ್ಟು ಪೋಷಕಾಂಶವಿದೆ. ಇವುಗಳನ್ನು ಆರೋಗ್ಯದ ನಿಧಿ ಎಂದು ಕರೆಯಲಾಗುತ್ತದೆ. ಆದ್ರೆ ತಜ್ಞರ ಪ್ರಕಾರ, ಮೆಂತ್ಯ ಸೊಪ್ಪು ತೂಕ ಇಳಿಸಲು ಪಾಲಕಕ್ಕಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ. ಮೆಂತ್ಯ ಸೊಪ್ಪಿನಲ್ಲಿ ಪಾಲಕಕ್ಕಿಂತ ಹೆಚ್ಚು ಕ್ಯಾಲ್ಸಿಯಂ ಸಿಗುತ್ತದೆ. ಅಲ್ಲದೆ ಇದು ಪಾಲಕ್ ಗೆ ಹೋಲಿಸಿದ್ರೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಹಾಗಾಗಿ ತೂಕ ಇಳಿಸಬೇಕು ಎನ್ನುವವರು ನೀವಾಗಿದ್ದರೆ ಪಾಲಕ್ ಗಿಂತ ಮೆಂತ್ಯ ಸೊಪ್ಪನ್ನು ಹೆಚ್ಚು ಬಳಸಿ.