
ಮನುಷ್ಯನ ಆರೋಗ್ಯ (Health)ಕ್ಕೆ ನಿರ್ಧಿಷ್ಟ ಗಂಟೆಗಳ ಕಾಲ ಸಮರ್ಪಕವಾಗಿ ನಿದ್ದೆ (Sleep) ಮಾಡುವುದು ಅಗತ್ಯವಾಗಿದೆ. ಸರಿಯಾಗಿ ನಿದ್ದೆಯಾಗದಿದ್ದಾಗ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಧ್ಯಯನದ ಪ್ರಕಾರ ಓರ್ವ ವ್ಯಕ್ತಿಗೆ ದಿನಕ್ಕೆ ಕನಿಷ್ಟ 8ರಿಂದ 9 ಗಂಟೆಗಳ ಕಾಲ ನಿದ್ದೆ ಬೇಕಾಗುತ್ತದೆ. ಆದರೆ, ಕೆಲವರಿಗೆ ರಾತ್ರಿ ನಿದ್ದೆಯೇ ಬರುವುದಿಲ್ಲ. ಸುಮ್ಮನೆ ಏನೇನೋ ಆಲೋಚನೆಗಳನ್ನು ಮಾಡುತ್ತಲೇ ಸಮಯ ಕಳೆಯುತ್ತಿರುತ್ತಾರೆ. ಕೆಲವೊಬ್ಬರು ನಿದ್ದೆ ಮಾಡಿದರೂ ಆಗಾಗ ಬೆಚ್ಚಿ ಬೀಳುವುದು ಮಾಡುತ್ತಿರುತ್ತಾರೆ. ಇನ್ನು ಕೆಲವೊಬ್ಬರಿಗೆ ಎಷ್ಟು ಬಾರಿ ಮಲಗುವ ಜಾಗ ಬದಲಾವಣೆ ಮಾಡಿದರೂ ಕೆಟ್ಟ ಕನಸು ಬೀಳುತ್ತಿರುತ್ತದೆ. ಹೀಗಿದ್ದಾಗ ಏನು ಮಾಡಬಹುದು ? ಸರಿಯಾಗಿ ನಿದ್ದೆ ಬರಲು ಏನು ಮಾಡಬೇಕು ?
ಪ್ರೀತಿಪಾತ್ರರ ಬಳಿ ಮಲಗಿದ್ರೆ ಹಾಯಾಗಿ ನಿದ್ದೆ ಬರುತ್ತಂತೆ
ಹೌದು, ಅಚ್ಚರಿ ಎನಿಸಿದರೂ ಇದು ನಿಜ. ನಿದ್ರಾಹೀನತೆಯಿಂದ ಬಳಲುತ್ತಿರುವವರು ಪ್ರೀತಿಪಾತ್ರದ ಬಳಿ ಮಲಗಿದರೆ ಒತ್ತಡವೆಲ್ಲಾ ಮರೆತು ಹಾಯಾಗಿ ನಿದ್ದೆ ಬರುತ್ತಂತೆ. ಪ್ರೀತಿಪಾತ್ರರ ಹತ್ತಿರ ಮಲಗುವುದು ಸುರಕ್ಷಿತ ಭಾವನೆ ಮೂಡಿಸುತ್ತದೆ. ಹೀಗಾಗಿ ಟೆನ್ಶನ್ (Tension) ಮರೆತು ಹೋಗಿ ಹಾಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತದೆ.
ಹೀಗಾಗಿ ಈ ಪ್ರೇಮಿಗಳ ದಿನದಂದು, ನೀವು ಪ್ರೀತಿಸುವವರ ಪಕ್ಕದಲ್ಲಿ ನಿದ್ರಿಸಲು ಮರೆಯಬೇಡಿ. ಅದು ನಿಮ್ಮ ತಾಯಿಯಾಗಿರಲಿ, ಸ್ನೇಹಿತನಾಗಿರಲಿ, ಸಂಗಾತಿಯಾಗಿರಲಿ ಅಥವಾ ನಿಮ್ಮ ಮಗುವೇ ಆಗಿರಲಿ. ಸಂಶೋಧನೆ ಹೇಳುವಂತೆ ಇದು ನಿಮ್ಮ ನಿದ್ರೆಯ ಆರೋಗ್ಯಕ್ಕೆ ಮಾತ್ರವಲ್ಲದೆ ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ.
ಮಲಗುವ ಮುನ್ನ ಮ್ಯೂಸಿಕ್ ಕೇಳುತ್ತೀರಾ? ಈ ಅಭ್ಯಾಸ ಈಗಲೇ ಬಿಡಿ!
ಏಕಾಂಗಿಯಾಗಿ ಮಲಗುವುದರಿಂದ ಮನಸ್ಸಿಗೆ ಒತ್ತಡ
ಏಕಾಂಗಿ (Alone)ಯಾಗಿ ಮಲಗಿದಾಗ, ನಾವು ಏನೇನನ್ನೋ ಯೋಚಿಸಲು ಆರಂಭಿಸುತ್ತೇವೆ. ನಮ್ಮ ಮನಸ್ಸು ಅಲೆದಾಡಲು ಪ್ರಾರಂಭಿಸುತ್ತದೆ. ಇದು ಅತಿಯಾಗಿ ಯೋಚಿಸಲು ಕಾರಣವಾಗುತ್ತದೆ. ಅನಾವಶ್ಯಕವಾದ ಯೋಚನೆಗಳು ಮನಸ್ಸಿಗೆ ಹೆಚ್ಚು ಒತ್ತಡವನ್ನುಂಟು ಮಾಡುತ್ತದೆ. ಈ ಮಾನಸಿಕ ಚಟುವಟಿಕೆಯು ನಿದ್ರೆಯನ್ನು ಹೆಚ್ಚು ಕಷ್ಟಕರವಾಗಿಸುತ್ತದೆ. ಆದರೆ ಬಳಿಯಲ್ಲಿ ಪ್ರೀತಿಪಾತ್ರರಿದ್ದಾಗ ನಾವು ಇದೆಲ್ಲವನ್ನೂ ಮರೆತು ಹಾಯಾಗಿರುತ್ತೇವೆ. ಮಾತನಾಡುತ್ತಾ ಸಮಯ ಕಳೆಯುತ್ತೇವೆ. ಇದಕ್ಕಾಗಿಯೇ ನೀವು ಪ್ರೀತಿಸುವವರ ಪಕ್ಕದಲ್ಲಿ ಮಲಗುವುದು ತುಂಬಾ ಪ್ರಯೋಜನಕಾರಿಯಾಗಿದೆ.
ನಿಮ್ಮ ಪ್ರೀತಿಸುವ ವ್ಯಕ್ತಿಯೊಂದಿಗೆ ಮಲಗುವಾಗ ದೇಹದಿಂದ ಅನೇಕ ಹಾರ್ಮೋನು (Hormone)ಗಳು ಬಿಡುಗಡೆಯಾಗುತ್ತವೆ. ನೀವು ಆಕ್ಸಿಟೋಸಿನ್ (ಪ್ರೀತಿಯ ಹಾರ್ಮೋನ್), ಸಿರೊಟೋನಿನ್ (ಕ್ಷೇಮ ಮತ್ತು ಸಂತೋಷಕ್ಕೆ ಕೊಡುಗೆ ನೀಡುತ್ತದೆ), ನೊರ್‌ಪೈನ್ಫ್ರಿನ್ (ನಿದ್ರೆಯನ್ನು ನಿಯಂತ್ರಿಸಲು ಮತ್ತು ಒತ್ತಡ (Pressure)ವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ), ವಾಸೊಪ್ರೆಸಿನ್ (ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕಾರ್ಟಿಸೋಲ್ ಅನ್ನು ಕಡಿಮೆ ಮಾಡುತ್ತದೆ) ಮತ್ತು ಪ್ರೊಲ್ಯಾಕ್ಟಿನ್ (ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಉತ್ತಮ ನಿದ್ರೆಯ ಸುಧಾರಣೆಗೆ ಸಂಬಂಧಿಸಿದೆ) ಎಂಬ ಹಾರ್ಮೋನುಗಳ ಬಿಡುಗಡೆಯಾಗುತ್ತವೆ. ಇದರಿಂದ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ನೀವು ಹೆಚ್ಚು ಉತ್ಸಾಹದಿಂದ ಇರಲು ಸಾಧ್ಯವಾಗುತ್ತದೆ.
ullein Tea: ನಿದ್ದೆ ಬರ್ತಿಲ್ವಾ ? ಜಸ್ಟ್ ಒಂದು ಕಪ್ ಸ್ಪೆಷಲ್ ಟೀ ಕುಡೀರಿ ಸಾಕು
ಪ್ರೀತಿಸುವವರ ಹತ್ತಿರ ಮಲಗುವುದರಿಂದ ಏನು ಪ್ರಯೋಜನ ?
ಪ್ರೀತಿಪಾತ್ರರ ಜತೆಗೆ ಮಲಗುವುದು ಹೃದಯರಕ್ತನಾಳದ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಅಲ್ಲದೆ, ಚರ್ಮದ ಸಂಪರ್ಕವು ಕಾರ್ಟಿಸೋಲ್ ಅನ್ನು ಉತ್ಪಾದಿಸುವುದನ್ನು ನಿಲ್ಲಿಸಲು ನಿಮ್ಮ ಮೂತ್ರಜನಕಾಂಗದ ಗ್ರಂಥಿಗಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ಇದರರ್ಥ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ನಿದ್ರೆಗೆ ಕಾರಣವಾಗುತ್ತದೆ.
ನೀವು ನಿದ್ರಿಸಲು ಕಡಿಮೆ ಅಥವಾ ಹೆಚ್ಚು ಸಮಯ ತೆಗೆದುಕೊಳ್ಳುತ್ತೀರಾ ?
ನೀವು ತುಂಬಾ ವೇಗವಾಗಿ ಅಥವಾ ತುಂಬಾ ನಿಧಾನವಾಗಿ ನಿದ್ರಿಸಿದರೆ ನೀವು ರಾತ್ರಿಯ ನಿದ್ರೆಯನ್ನು ಆನಂದಿಸದೇ ಇರಬಹುದು. ನಿದ್ದೆ ಮಾಡಲು ತೆಗೆದುಕೊಳ್ಳುವ ಸಮಯ ಮತ್ತು ನಮ್ಮ ಒಟ್ಟಾರೆ ನಿದ್ರೆಯ ಆರೋಗ್ಯದ ನಡುವೆ ಸಂಬಂಧವಿದೆ ಎಂದು ನಾರ್ತಂಬ್ರಿಯಾ ವಿಶ್ವವಿದ್ಯಾಲಯವು ಬಹಿರಂಗಪಡಿಸಿದೆ. ಸಂಶೋಧನೆಯ ಪ್ರಕಾರ 10ರಿಂದ 20 ನಿಮಿಷಗಳು ಉತ್ತಮ ನಿದ್ರೆಯ ಆರೋಗ್ಯಕ್ಕಾಗಿ ನೀವು ನಿದ್ರಿಸಲು ತೆಗೆದುಕೊಳ್ಳುವ ಸಾಮಾನ್ಯ ಸಮಯವಾಗಿದೆ. 30 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡರೆ, ನಿಮ್ಮ ನಿದ್ರೆಯ ದಕ್ಷತೆಯು ಗಣನೀಯವಾಗಿ ಕಡಿಮೆಯಾಗುತ್ತದೆ. ನೀವು ತುಂಬಾ ವೇಗವಾಗಿ ನಿದ್ರಿಸಿದರೂ, ನಿಮ್ಮ ನಿದ್ರೆಯ ಸ್ಕೋರ್ ಕಡಿಮೆ ಇರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.