ಚಳಿಗಾಲದಲ್ಲಿ ಯಾವ ಕ್ರೀಮ್ ಬೇಡ, ಈ 6 ಅಭ್ಯಾಸ ರೂಢಿಸಿಕೊಂಡ್ರೆ ಸಾಕು, ತುಟಿ, ಕೈ ಚರ್ಮ ಹೊಳೆಯುತ್ತೆ!

Published : Nov 11, 2026, 05:02 PM IST
skin care

ಸಾರಾಂಶ

ಚಳಿಗಾಲದಲ್ಲಿ ಚರ್ಮ ಒಣಗುವ ಸಮಸ್ಯೆಗೆ ದುಬಾರಿ ಕ್ರೀಮ್ ಅಗತ್ಯವಿಲ್ಲ. ಆರೋಗ್ಯಕರ ಆಹಾರ, ಸಾಕಷ್ಟು ನೀರು, ಉತ್ತಮ ನಿದ್ದೆ ಮತ್ತು ವ್ಯಾಯಾಮದಂತಹ ನೈಸರ್ಗಿಕ ಅಭ್ಯಾಸಗಳಿಂದ ತ್ವಚೆಯನ್ನು ಕಾಪಾಡಿಕೊಳ್ಳಬಹುದು.

ಚಳಿಗಾಲ ಆರಂಭವಾಗ್ತಿದ್ದಂತೆ ಚರ್ಮದ ಆರೈಕೆಯದ್ದೇ ಚಿಂತೆ. ಇದು ಕೇವಲ ಮಹಿಳೆಯರ ಸಮಸ್ಯೆಯಲ್ಲಿ, ಪುರುಷರು ಮಹಿಳೆಯರೆನ್ನದೆ ಚಳಿಗಾಲದಲ್ಲಿ ಶೀತ ಗಾಳಿ ಚರ್ಮ ಒಣಗುತ್ತದೆ. ತುಟಿಗಳು ಬಿರುಕು ಬಿಟ್ಟು ವಿಕಾರವಾಗಿ ಕಾಣಲಾರಂಭಿಸುತ್ತದೆ, ಕೆಲವು ವೇಳೆ ರಕ್ತಸ್ರಾವವೂ ಆಗಬಹುದು, ಕೈಗಳ ಚರ್ಮ ಬಿರಿದು ಗೀಟುಗಳು ಕಾಣಿಸಿಕೊಳ್ಳುತ್ತವೆ. ಯಾವುದೇ ಕ್ರೀಂ ಹಚ್ಚಿದರೂ ಅದು ತಾತ್ಕಾಲಿಕ. ಆದರೆ ನೈಸರ್ಗಿಕವಾಗಿಯೇ ಚರ್ಮದ ಆರೈಕೆ ಮಾಡುವುದು ಮುಖ್ಯ. ಇದರಿಂದ ಹಣದ ಖರ್ಚು ಇಲ್ಲ. ಸ್ಕಿನ್ ಸೈಡ್ ಎಫೆಕ್ಟ್ ಇರೋದಿಲ್ಲ. ನೀವು ಪ್ರತಿ ಚಳಿಗಾಲದಲ್ಲಿ ಸಾಕಷ್ಟು ಖರ್ಚು ಮಾಡಿರುತ್ತಿರಿ. ಆದ್ರೂ ಈ ಬಾರಿಯ ಚಳಿಗಾಲಕ್ಕೂ ಸ್ಕಿನ್ ಕೇರ್ ಮಾಡುವುದು ಚಿಂತೆ ಅಲ್ಲವೇ?

ಹೌದು ಚರ್ಮದ ಆರೈಕೆ ಮಾಡುವುದು ಒಂದು ಕಲೆ. ಅದಕ್ಕೆ ಹಣ ಖರ್ಚು ಮಾಡಬೇಕಿಲ್ಲ. ದುಬಾರಿ ಕ್ರೀಂ ಖರೀದಿಸಬೇಕಿಲ್ಲ. ಆದರೆ ಪ್ರತಿದಿನ ಕೆಲವು ಅಭ್ಯಾಸಗಳು ರೂಢಿಸಿಕೊಂಡರ ಚಳಿಗಾಲದಲ್ಲೂ ನಿಮ್ಮ ತ್ವೆಚೆ ಹೊಳೆಯುತ್ತದೆ. ಚರ್ಮದ ಆರೈಕೆಗಾಗಿ ಚಳಿಗಾಲದ ಆ ಅಭ್ಯಾಸಗಳು ಏನು ಅನ್ನೋದು ಇಲ್ಲಿ ತಿಳಿಸಲಾಗಿದೆ.

ಚಳಿಗಾಲದಲ್ಲಿ ಚರ್ಮದ ಆರೋಗ್ಯಕ್ಕೆ ಏನು ಮಾಡಬೇಕು?

ಮಿತವಾದ ಆಹಾರ

ನಿಮ್ಮ ಹೊಟ್ಟೆ ತುಂಬುವಷ್ಟು ಊಟ ಮಾಡುವುದಕ್ಕಿಂತ ಸ್ವಲ್ಪ ಕಡಿಮೆ ಆಹಾರ ಸೇವಿಸಬೇಕು. ಅಗತ್ಯಕ್ಕಿಂತ ಶೇ. 20ರಷ್ಟು ಕಡಿಮೆ ಕ್ಯಾಲೋರಿ ದೇಹ ಸೇರುವಂತೆ ನೋಡಿಕೊಳ್ಳಿ. ಯಂಗ್ ಆಗಿ ಕಾಣಿಸಬೇಕು ಎಂಬ ಆಸೆಯಿದ್ದರೆ ಜಂಕ್ ಫುಡ್ ತಿನ್ನುವುದು ನಿಲ್ಲಿಸಿಬಿಡಿ. ಇದಲ್ಲದೆ ಪ್ಯಾಕ್ ಮಾಡಿದ ಸ್ನ್ಯಾಕ್‌ಗೆ ಗುಡ್‌ಬೈ ಹೇಳಿ. ಅದರ ಬದಲು ಮನೆಯಲ್ಲಿ ತಯಾರಿಸಿದ ಫ್ರೆಶ್ ಊಟ ಮಾಡಿ.

ಪ್ರೋಟಿನ್‌ಭರಿತ ಆಹಾರ ಸೇವನೆ

ಎರಡನೇಯದಾಗಿ, ಊಟ ಅಂದ್ರೆ ಏನೇನೋ ತಿಂದು ಬರೀ ಹೊಟ್ಟೆ ತುಂಬಿಸಿಕೊಳ್ಳುವುದಲ್ಲ. ಪ್ರೋಟಿನ್ ಹೆಚ್ಚು ಇರುವ ಆಹಾರವನ್ನೇ ತಿನ್ನಲು ಆರಂಭಿಸಿ. ಪ್ರೋಟಿನ್ ಹೆಚ್ಚಳವಿರುವ ದಾನ್ಯಗಳು, ಬೀಜ, ನಟ್ಸ್ ಹಾಲು, ಮೊಟ್ಟೆ, ಚಿಕನ್ ಸೇವಿಸಬಹುದು. ಆದ್ರೆ ಕೆಂಪು ಮಾಂಸ ಸೇವಿಸಬೇಡಿ.

ರಾತ್ರಿ ಬೇಗನೇ ಊಟ ಮಾಡುವುದು

ಮೂರನೆಯದಾಗಿ, ಇದು ಎಲ್ಲರೂ ಮಾಡುವ ಮೊದಲ ತಪ್ಪು, ರಾತ್ರಿ ಹೆಚ್ಚು ಊಟ ಮಾಡಬಾರದು. ಅಲ್ಲದೆ ರಾತ್ರಿ ಊಟ ತಡವಾಗಿ ಮಾಡುವುದು ಕೂಡ ಒಳ್ಳೆಯ ಅಭ್ಯಾಸವಲ್ಲ. ರಾತ್ರಿಯ ಊಟ ಬೇಗನೇ ಮುಗಿಸಬೇಕು. ಆಂದರೆ ಸಂಜೆ ಏಳೂವರೆಗೆ ಹೊತ್ತಿಗೆ ಊಟ ಮುಗಿಸಬೇಕು. ಇದರಿಂದ ಜೀರ್ಣಾಂಗ ವ್ಯವಸ್ಥೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆ. ತಡರಾತ್ರಿ ಹೊಟ್ಟೆ ತುಂಬಾ ತಿಂದು ಅಲ್ಲಿಯೇ ಮಲಗಿದರೆ ಅದು ಜೀರ್ಣವಾಗದೆ ಹೊಟ್ಟೆಯಲ್ಲೇ ಉಳಿದು ನಿದ್ದೆಗೂ ಭಂಗ ಬರುವುದು. ಇದರಿಂದ ಆಸಿಡ್ ರಿಫ್ಲಕ್ಸ್ ಆಗುತ್ತದೆ ಇದರಿಂದ ತೂಕ ಹೆಚ್ಚಳಕ್ಕೆಕ್ಕೆ ಕಾರಣವಾಗುತ್ತದೆ. ಹೀಗಾಗಿ ಬೇಗನೇ ಊಟ ಮಾಡಿ, ಬೇಗನೇ ಎದ್ದೇಳಿ, ತೂಕ ನಿಯಂತ್ರದಲ್ಲಿರಲು ವ್ಯಾಯಾಮವೂ ಮಾಡಿ.

ಸಾಕಷ್ಟು ನೀರು ಕುಡಿಯಿರಿ

ನಾಲ್ಕನೇಯದು ಏನೆಂದರೆ, ನಿಮ್ಮ ಸ್ಕಿನ್ ಯಾವಾಗಲು ಒಣಗಿರುತ್ತದಲ್ಲವೇ? ಇದನ್ನು ತಪ್ಪಿಸಲು ನೀವು ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ, ದ್ರವ ಪದಾರ್ಥಗಳನ್ನೇ ಹೆಚ್ಚು ತಿನ್ನಿರಿ, ಹಣ್ಣುಗಳನ್ನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ

ಚರ್ಮದ ಆರೋಗ್ಯ ನಿದ್ದೆ ತುಂಬಾ ಮುಖ್ಯ

ಐದನೇಯದು, ಚರ್ಮ ಆರೋಗ್ಯವಾಗಿರಬೇಕೆಂದರೆ ನಿದ್ದೆಯೂ ತುಂಬಾ ಮುಖ್ಯ. ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಿ. ತಡರಾತ್ರಿ ಮಲಗುವುದು ಒಳ್ಳೇಯ ಅಭ್ಯಾಸವಲ್ಲ. ಇದರಿಂದ ಕಣ್ಣಿನ ಊತ, ಕಣ್ಣಿನ ಸುತ್ತ ಕಪ್ಪು ಕಲೆಗಳು ಉಂಟಾಗಿ ಮುಖದ ಚರ್ಮ ವಿಕಾರವಾಗುತ್ತದೆ. ಆರೋಗ್ಯರ ಅಭ್ಯಾಸವೆಂದರೆ ಒಂದು ಸರಿಯಾದ ಸಮಯಕ್ಕೆ ಮಲಗುವ ಅಭ್ಯಾಸ ರೂಢಿಸಿಕೊಳ್ಳುವುದು.

ವ್ಯಾಯಾಮ ಮಾಡುವುದು ತಪ್ಪಿಸಬೇಡಿ

ಇನ್ನು ಕೊನೆಯದಾಗಿ, ಊಟದಂತೆ ಪ್ರತಿದಿನ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ. ಇದು ತೂಕ ಇಳಿಸಲು, ಸಿಕ್ಸ್ ಮಾಡಲು ಎಂಬಂತೆ ಮಾಡದೆ, ವ್ಯಾಯಾಮವು ಊಟದಷ್ಟೇ ಮುಖ್ಯವಾಗಲಿ. ನೀವು ಎಷ್ಟು ಹೆಚ್ಚು ಬೆವರುತ್ತೀರೋ ಅಷ್ಟು ನಿಮ್ಮ ಚರ್ಮ ಆರೋಗ್ಯಕರವಾಗಿರುತ್ತದೆ. ಇದು ಚರ್ಮವನ್ನು ಆರೋಗ್ಯಕರ ಮತ್ತು ಸುಂದರವಾಗಿಸುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಾರದಲ್ಲಿ ಎರಡು ದಿನ ವ್ಯಾಯಾಮ ಮಾಡಿದ್ರೂ ನೀವು ಫಿಟ್‌ ಆಗಿರ್ತೀರಾ, ಏನಿದು ವೀಕೆಂಡ್‌ ವಾರಿಯರ್ಸ್‌ ಟ್ರೆಂಡ್
ಆತಂಕ, ಒತ್ತಡ ಕಡಿಮೆ ಮಾಡಲು ಸಹಾಯ ಮಾಡುವ 6 ಆಹಾರಗಳು