Back Pain Relief Tips: ಬೆನ್ನು ನೋವೇ? ಮನೆಯಲ್ಲೇ ಪರಿಹಾರ ಕಂಡುಕೊಳ್ಳಿ

By Suvarna News  |  First Published Dec 19, 2021, 11:40 AM IST

ಬೆನ್ನು ನೋವಿನಿಂದ ಬಳಲುತ್ತಿದ್ದರೆ ಕಂಗೆಡಬೇಡಿ. ಒಂದು ಬಾರಿ ವೈದ್ಯರ ಔಷಧಿಯಿಂದ ವಾಸಿಯಾಗುವ ನೋವು ಅದಲ್ಲ. ಅದನ್ನು ಹತೋಟಿಯಲ್ಲಿಡಲು ಪ್ರತಿನಿತ್ಯ ಮನೆಯಲ್ಲೂ ಕೆಲವು ವಿಧಾನಗಳನ್ನು ಅನುಸರಿಸುತ್ತಿರಬೇಕಾಗುತ್ತದೆ. ಬೆನ್ನು ನೋವಿಗೆ ಕೆಲವು ತೈಲಗಳ ಮಸಾಜ್ ಅತ್ಯುಪಯುಕ್ತ.


ಎಡೆಬಿಡದೆ ಕಾಡಿಸಿದ ಬೆನ್ನು ನೋವಿ (back pain) ನಿಂದಾಗಿ ಸವಿತಾಳ ಉತ್ಸಾಹವೇ ಬತ್ತಿ ಹೋಗಿತ್ತು. ಕೂತರೂ ನೋವು, ಬಗ್ಗಿದರೂ ನೋವು, ಮೇಲೆದ್ದರೂ ನೋವು. ವೈದ್ಯರ ಬಳಿ ತೋರಿಸಿದರೆ ಅಂತಹ ಸಮಸ್ಯೆಯೇನೂ ಕಂಡಿರಲಿಲ್ಲ. ಕೆಲವು ದಿನಗಳಿಗಾಗುವಷ್ಟು ಔಷಧ (medicine) ನೀಡಿದ್ದರಷ್ಟೆ. ಅದು ಮುಗಿಯುವವರೆಗೆ ಪರವಾಗಿಲ್ಲ ಎನ್ನುವಂತಾಗಿದ್ದ ನೋವು, ಬಳಿಕ ಮತ್ತೆ ಕಾಡಿಸತೊಡಗಿತ್ತು. ಆಗ ಆಕೆ ಪಾರಂಪರಿಕ (ayurveda) ವೈದ್ಯರ ಮೊರೆ ಹೋಗಿದ್ದರು. ಅದೇನೋ ತೈಲ ಲೇಪನ, ಮಸಾಜ್ (massage) ಗಳಿಂದ ಆಕೆಯ ನೋವು ಹಿಡಿತಕ್ಕೆ ಬಂದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕೆಲವು ಫಿಸಿಯೋ ಥೆರಪಿ (Physio Therapy) ಆಸನಗಳಿಂದಾಗಿ ನೋವು ಕಡಿಮೆಯಾಗಿದ್ದುದು ಅವಳ ಅನುಭವಕ್ಕೆ ನಿಲುಕಿತ್ತು.

ಬೆನ್ನುನೋವು ಇತ್ತೀಚಿನ ದಿನಗಳಲ್ಲಿ ಅತಿ ಸಾಮಾನ್ಯ. ಗಾಯ (wound), ಊತ, ಕ್ಯಾನ್ಸರ್ ಸೇರಿದಂತೆ ಜೀವನಶೈಲಿಗೆ ಸಂಬಂಧಿಸಿದ ಹಲವು ಕಾರಣಗಳಿಂದ ಬೆನ್ನು ನೋವು ಉಂಟಾಗುತ್ತದೆ. ಕೆಳಬೆನ್ನಿನಲ್ಲಿ ಅಥವಾ ಸೊಂಟದಲ್ಲಿ ನೋವು ಹೆಚ್ಚಾಗಿರುತ್ತದೆ.

Tap to resize

Latest Videos

undefined

ಕೆಲವೊಮ್ಮೆ ಬೆನ್ನಿನ ಮಾಂಸಖಂಡ (muscles) ಗಳು ದುರ್ಬಲವಾಗುತ್ತವೆ. ವೃದ್ಧಾಪ್ಯವೂ ಬೆನ್ನು ನೋವಿಗೆ ಕಾರಣವಾಗಬಹುದು.  ವಯಸ್ಸಾಗುತ್ತಿರುವಂತೆ ಬೆನ್ನು ಮೂಳೆಯ ಮೇಲೆ ಹೆಚ್ಚಿನ ಭಾರ ಬಿದ್ದು, ನೋವು ಕಾಲುಗಳಿಗೂ ವಿಸ್ತರಿಸಬಹುದು. ಹಿಂಭಾಗದ ಮಾಂಸಖಂಡಗಳಿಗಾಗುವ ಸುಸ್ತಿನಿಂದಲೂ ಹೀಗಾಗುತ್ತದೆ ಎನ್ನುತ್ತಾರೆ ತಜ್ಞರು.
ನಿಮಗೆ ಗೊತ್ತೇ? ನಮ್ಮ ಕೆಳಬೆನ್ನಿನಲ್ಲಿ ಸುಮಾರು 200 ಮಾಂಸಖಂಡಗಳಿರುತ್ತವೆ. ಇದರಿಂದ ಮುಂದೆ ಬಾಗಲು, ಹಿಂದೆ ಬಾಗಲು ನೆರವಾಗುತ್ತದೆ. ಅಧಿಕ ಭಾರ ಹೊರುವುದರಿಂದ, ಅಹಿತಕರ (unwanted) ಭಂಗಿಯಲ್ಲಿ ಬಹುಸಮಯ ಇದ್ದಾಗ ಅಥವಾ ಮಾಂಸಖಂಡಗಳಿಗೆ ಹಾನಿಯಾಗುವಂತೆ ಭಾರ ಎತ್ತುದಾಗ ಬೆನ್ನು ನೋವು ಕಂಡುಬರಬಹುದು.

ಅಂತಹ ಸಮಯದಲ್ಲಿ ಮನೆಯಲ್ಲೇ ಕೆಲವು ಪರಿಹಾರ ಕಂಡುಕೊಳ್ಳಲು ಯತ್ನಿಸಬಹುದು.

ಐಸ್ ಪ್ಯಾಕ್ (Ice pack) ಇರಿಸಿಕೊಳ್ಳಿ

ಬೆನ್ನು ನೋವಿಗೆ ತಕ್ಷಣದ ಪರಿಹಾರವೆಂದರೆ ಐಸ್ ಪ್ಯಾಕ್ ಇಟ್ಟುಕೊಳ್ಳುವುದು. ದಿನಕ್ಕೆ 2-3 ಬಾರಿ ಐಸ್ ಪ್ಯಾಕ್ ಇರಿಸಿಕೊಂಡರೆ ಸ್ವಲ್ಪ ಶಮನವಾಗುತ್ತದೆ. ನೋವಿನಿಂದ ಊತವುಂಟಾಗಿದ್ದರೂ ಕಡಿಮೆಯಾಗುತ್ತದೆ. ಐಸ್ ತುಂಡೊಂದನ್ನು ಟವೆಲ್ ನಲ್ಲಿ ಸುತ್ತಿ ನೋವಿರುವ ಕಡೆ ಇರಿಸಿಕೊಳ್ಳಬಹುದು.

Over Exercising Effect: ಜಿಮ್ ವರ್ಕೌಟ್ ಅತಿ ಬೇಡ, ಪುರುಷತ್ವವೇ ಹೋಗ್ಬೋದು!

ಸರಿಯಾದ ಭಂಗಿ (position) ಯಲ್ಲಿ ಕುಳಿತುಕೊಳ್ಳುವುದು

ದಿನವೂ 8-10 ತಾಸುಗಳ ಕಾಲ ಕುಳಿತುಕೊಂಡು ಕೆಲಸ ಮಾಡುವವರು ತಾವು ಕುಳಿತುಕೊಳ್ಳುವ ಭಂಗಿಯ ಕಡೆಗೆ ಹೆಚ್ಚಿನ ಗಮನವಹಿಸಬೇಕು. ಓಡಾಡುವಾಗಲೂ ಸರಿಯಾದ ಭಂಗಿ ಅನುಸರಿಸುವುದು ಅಗತ್ಯ.  ಸೂಕ್ತವಾದ ರೀತಿಯಲ್ಲಿ ಕುಳಿತಕೊಳ್ಳುವುದರಿಂದ ಹಿಂಭಾಗದ ಮಾಂಸಖಂಡಗಳ ಮೇಲೆ ಹೆಚ್ಚಿನ ಒತ್ತಡವುಂಟಾಗುವುದಿಲ್ಲ. ಕಾಲು ಹಾಗೂ ಬೆನ್ನನ್ನು ನೇರವಾಗಿಟ್ಟುಕೊಳ್ಳಬೇಕು.

ಮಸಾಜ್ ಮ್ಯಾಜಿಕ್ (massage Magic)

ಮಸಾಜ್ ಮಾಡಿಕೊಳ್ಳುವುದರಿಂದ ಬೆನ್ನು ನೋವು ಕಡಿಮೆ ಆಗುವ ಜತೆಗೆ ದೇಹ ಹಾಗೂ ಮನಸ್ಸಿನ ಒತ್ತಡವು ನಿವಾರಣೆಯಾಗುತ್ತದೆ. ಇದಕ್ಕೆ ನೋವು ನಿವಾರಕ ಹಾಗೂ ಶಕ್ತಿದಾಯಕ ತೈಲಗಳನ್ನು ಬಳಸಬಹುದು.

Cancer Treatment : ಪ್ರಾರಂಭಿಕ ಎಚ್ಚರದಿಂದ ಕ್ಯಾನ್ಸರ್‌ ಗುಣಪಡಿಸಲು ಸಾಧ್ಯ

ಬೆಳ್ಳುಳ್ಳಿ (Garlic) ಬಳಕೆ ಸೂಕ್ತ

ನಿತ್ಯವೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 2-3 ಬೆಳ್ಳುಳ್ಳಿ ಎಸಳುಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ನೋವು ಕಡಿಮೆಯಾಗುತ್ತೆ. ಮಸಾಜ್ ಮಾಡಿಕೊಳ್ಳಲು ಬೆಳ್ಳುಳ್ಳಿ ತೈಲವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಬೆಳ್ಳುಳ್ಳಿ ತೈಲವನ್ನು ಬೆನ್ನಿಗೆ ಹಚ್ಚಿ ಸ್ವಲ್ಪ ಸಮಯದ ಬಳಿಕ ಸ್ನಾನ ಮಾಡಬೇಕು.

ದಿನವೂ ವ್ಯಾಯಾಮ (exercise) ಅಗತ್ಯ

ವ್ಯಾಯಾಮ ಅಥವಾ ವೈದ್ಯರು ನಿಮಗೆ ಸೂಚಿಸಿರುವ ಫಿಸಿಯೋ ಥೆರಪಿ ವಿಧಾನಗಳನ್ನು ತಪ್ಪದೇ ದಿನವೂ ಮಾಡಬೇಕು. ಇದರಿಂದ ಬೆನ್ನುನೋವು ನಿಯಂತ್ರಣದಲ್ಲಿರುತ್ತದೆ. ಫಿಸಿಯೋ ಥೆರಪಿ ವಿಧಾನಗಳಿಂದ ಮಾಂಸಖಂಡಗಳು ಬಿಗಿ ಕಳೆದುಕೊಂಡು ಉತ್ಸಾಹ ಪಡೆದುಕೊಳ್ಳುತ್ತವೆ.

ಎಪ್ಸಮ್ ಉಪ್ಪಿ( Epsom salt) ನ ಬಳಕೆ

ಸ್ವಲ್ಪ ಬಿಸಿ ನೀರು ಎಪ್ಸಮ್ ಉಪ್ಪನ್ನು ಬೆರೆಸಿಕೊಂಡು ಸ್ನಾನ ಮಾಡಬಹುದು. ನೋವಿರುವ ಜಾಗಕ್ಕೆ ಇದರಿಂದ ಹೆಚ್ಚು ವಿಶ್ರಾಂತಿ ದೊರೆಯುತ್ತದೆ. ಎಪ್ಸಮ್ ಉಪ್ಪು ನೈಸರ್ಗಿಕ ನೋವು ನಿವಾರಕವೆಂದೇ ಖ್ಯಾತವಾಗಿದೆ.

ಸಾಂಪ್ರದಾಯಿಕ (conventional) ವಿಧಾನ

ಹಾಲಿಗೆ ಅರಿಶಿಣ ಹಾಗೂ ಜೇನುತುಪ್ಪ ಬೆರೆಸಿ ಕುಡಿಯುವುದು ಹಿಂದಿನಿಂದಲೂ ಇದೆ. ಮಂಡಿಗಳ ನೋವಿಗೂ ಇದು ಪರಿಹಾರ. ನೋವು ಕಡಿಮೆ ಮಾಡಿಕೊಳ್ಳಲು ಇಂತಹ ಕ್ರಮಗಳನ್ನು ಅನುಸರಿಸುತ್ತಿದ್ದರೂ ನೋವು ಹೆಚ್ಚಾಗಿದ್ದರೆ ವೈದ್ಯರನ್ನು ಭೇಟಿ ಮಾಡುವುದು ಅಗತ್ಯ. ಯಾವುದೇ ಕಾರಣಕ್ಕೆ ನಿರ್ಲಕ್ಷಿಸಬಾರದು.

 

 

click me!