ಆರೋಗ್ಯಕರ ನಿದ್ರೆ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದ್ರೆ ನಿದ್ರೆಗಾಗಿ ನಿದ್ರೆ ಮಾತ್ರೆ ಸೇವನೆ ಮಾಡಿದ್ರೆ ಇದು ಆರೋಗ್ಯ ಸುಧಾರಿಸುವ ಬದಲು ಹಾಳು ಮಾಡುತ್ತದೆ. ಪ್ರತಿ ದಿನ ನಿದ್ರೆ ಮಾತ್ರೆ ಸೇವನೆ ಮಾಡುವವರು ಅನೇಕ ಸಮಸ್ಯೆಗಳನ್ನು ಎದುರಿಸ್ತಾರೆ.
ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ ಎನ್ನೋದಕ್ಕೆ ಅನೇಕ ಕಾರಣವಿರುತ್ತೆ. ಒತ್ತಡ, ಕೆಲಸ ಹೀಗೆ ಅನೇಕ ಕಾರಣಕ್ಕೆ ಕೆಲವರಿಗೆ ರಾತ್ರಿ ನಿದ್ರೆ ಬರೋದಿಲ್ಲ. ಒತ್ತಾಯ ಪೂರ್ವಕವಾಗಿ ನಿದ್ರೆ ಮಾಡಲು ಪ್ರಯತ್ನಿಸಿದ್ರೂ ನಿದ್ರೆ ಬರದೆ ಹೋದಾಗ ಕೈ ನಿದ್ರೆ ಮಾತ್ರೆ ಕಡೆ ಹೋಗುತ್ತದೆ. ಆರಂಭದಲ್ಲಿ ಒಂದರಿಂದ ಶುರುವಾಗುವ ಈ ಅಭ್ಯಾಸ ನಂತ್ರ ಚಟವಾಗುತ್ತದೆ. ಕೆಲವರಿಗೆ ನಿದ್ರೆ ಮಾತ್ರೆ ಇಲ್ಲದೆ ನಿದ್ರೆಯೇ ಬರೋದಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ.
ನಿದ್ರೆ (Sleep) ಮಾತ್ರೆ ಆರೋಗ್ಯ (Health) ಕ್ಕೆ ಬಹಳ ಹಾನಿಕರ. ನಿದ್ರೆ ಮಾತ್ರೆಯನ್ನು ನಿಯಮಿತವಾಗಿ ಸೇವನೆ ಮಾಡುವುದ್ರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿದ್ರೆ ಮಾತ್ರೆ (pills) ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಸಂಶೋಧಕರ ಪ್ರಕಾರ ನಿದ್ರೆ ಮಾತ್ರೆಗಳು ಕ್ರಮೇಣ ನಿಮ್ಮ ಸ್ಮರಣ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ನಿದ್ರೆ ಮಾತ್ರೆ ಸೇವನೆ ನಂತ್ರ ನಿಮ್ಮ ಆಲೋಚನಾ ಶಕ್ತಿ ಕಡಿಮೆಯಾಗುತ್ತದೆ. ಒಂದು ವಿಷ್ಯವನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ನಿದ್ರೆ ಮಾತ್ರೆಗಳ ಪರಿಣಾಮ ಬೇಗ ಆಗುತ್ತದೆ. ಒಂದು ತಿಂಗಳಲ್ಲಿಯೇ ನೀವು ನಿದ್ರೆ ಮಾತ್ರೆಯಿಂದಾಗುವ ದುಷ್ಪರಿಣಾಮವನ್ನು ನೋಡಬಹುದಾಗಿದೆ.
ಜಗತ್ತಿನೆಲ್ಲೆಡೆ ನಿದ್ರೆ ಮಾತ್ರೆ ಬಳಸುವವರ ಸಾವಿನ ಪ್ರಮಾಣ ಹೆಚ್ಚಿದೆ. ಈ ನಿದ್ರೆ ಮಾತ್ರೆಗಳು, ಅಧಿಕ ರಕ್ತದೊತ್ತಡ (High Blood Pressure) ಮತ್ತು ಹೃದ್ರೋಗ (Heart Disease ) ದ ಅಪಾಯವನ್ನು ಹೆಚ್ಚಿಸುತ್ತದೆ. ನಿದ್ರೆ ಬಂದಿಲ್ಲ ಎನ್ನುವ ಕಾರಣಕ್ಕೆ ನಿದ್ರೆ ಮಾತ್ರೆ ಸೇವನೆ ಮಾಡಲು ಹೋಗ್ಬೇಡಿ. ನಿದ್ರೆ ಮಾತ್ರೆ ಸೇವನೆ ಮುನ್ನು ವೈದ್ಯರ ಸಲಹೆ ಪಡೆಯಿರಿ.
ಬ್ರೆಡ್ ಜೊತೆ ಟೀ ಕುಡಿಯೋದನ್ನು ಎಂಜಾಯ್ ಮಾಡ್ತೀರಾ? ಬಿಟ್ಟು ಬಿಟ್ಟರೊಳಿತು!
ನಿದ್ರೆ ಮಾತ್ರೆಯಿಂದಾಗುವ ದುಷ್ಪರಿಣಾಮಗಳು (Side Effect) : ನಿದ್ರೆ ಮಾತ್ರೆಯನ್ನು ನೀವು ನಿಯಮಿತವಾಗಿ ಸೇವನೆ ಮಾಡಿದ್ರೆ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ. ಮಲಬದ್ಧತೆ, ಆಲಸ್ಯ,ನೆನಪಿನ ಶಕ್ತಿ ಕಡಿಮೆಯಾಗುವುದು, ಹೊಟ್ಟೆ ಸಮಸ್ಯೆ, ಹೊಟ್ಟೆ ನೋವು, ದೇಹ ಶಕ್ತಿ ಕಳೆದುಕೊಳ್ಳುವುದು ಹಾಗೂ ರಾತ್ರಿ ತಲೆಸುತ್ತಿ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ.
ನಿದ್ರೆ ಮಾತ್ರೆ ಬಿಡಲು ಇಲ್ಲಿದೆ ಉಪಾಯ :
ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಿ : ನಿದ್ರೆ ಮಾತ್ರೆ ಬಿಡುವುದು ಸಾಮಾನ್ಯ ಕೆಲಸವಲ್ಲ. ಯಾಕೆಂದ್ರೆ ನಿದ್ರೆ ಮಾತ್ರೆ ಸೇವನೆ ಮಾಡಿ ನಿದ್ರೆ ಮಾಡ್ತಿದ್ದವರಿಗೆ ಮಾತ್ರೆ ಬಿಡ್ತಿದ್ದಂತೆ ನಿದ್ರೆ ಬರೋದಿಲ್ಲ. ಇದ್ರಿಂದ ಹಗಲಿನಲ್ಲಿ ಕೆಲಸಕ್ಕೆ ಸಮಸ್ಯೆಯಾಗುತ್ತದೆ. ಅಂಥವರು ಸಮಯಕ್ಕೆ ಮಹತ್ವ ನೀಡಬೇಕು. ಪ್ರತಿ ದಿನ ಒಂದೇ ಸಮಯದಲ್ಲಿ ನಿದ್ರೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
ಗೆಜೆಟ್ ನಿಂದ ದೂರವಿರಿ : ತಡರಾತ್ರಿಯವರೆಗೆ ಮೊಬೈಲ್ (Mobile) ಹಾಗೂ ಟಿವಿ ವೀಕ್ಷಣೆ (Watching TV) ಕೂಡ ನಿದ್ರೆಗೆ ಭಂಗ ತರುತ್ತದೆ. ಹಾಗಾಗಿ ಮಲಗುವ ಕನಿಷ್ಟ ಒಂದು ಗಂಟೆ ಮೊದಲು ಗೆಜೆಟ್ ನಿಂದ ದೂರವಿರಿ. ಮೊಬೈಲ್, ಟಿವಿ, ಲ್ಯಾಪ್ ಟಾಪ್ (Laptop) ಯಾವುದನ್ನೂ ಬಳಸಲು ಹೋಗ್ಬೇಡಿ. ಮಲಗುವ ಸಮಯದಲ್ಲಿ ನಿಮ್ಮ ಆಲೋಚನೆ ಪಾಸಿಟಿವ್ ಆಗಿದ್ರೆ ನಿದ್ರೆ ತಾನಾಗಿಯೇ ಬರುತ್ತದೆ.
ಪಾದಕ್ಕೆ ಮಸಾಜ್ : ಏನು ಮಾಡಿದ್ರೂ ನಿದ್ರೆ ಬರ್ತಿಲ್ಲ ಎನ್ನುವವರು ಪಾದಕ್ಕೆ ಮಸಾಜ್ ಮಾಡಿ. ಸ್ವಲ್ಪ ಬೆಚ್ಚಗಿನ ಎಣ್ಣೆಯನ್ನು ಹಚ್ಚಿ ಕಾಲಕ್ಕೆ ಮಸಾಜ್ ಮಾಡಿದ್ರೆ ನಿದ್ರೆ ಬರುತ್ತದೆ.
ಸ್ಮೋಕ್ ಮಾಡ್ಬೇಕಿಲ್ಲ, ಸಿಗರೇಟ್ ಸೇದೋರ ಬಳಿ ನಿಂತ್ರೂ ಹೊಗೆ ಹಾಕಿಸ್ಕೊಳ್ಳೋ ಚಾನ್ಸಸ್ ಹೆಚ್ಚು
ಟೀ – ಕಾಫಿಯಿಂದ ದೂರವಿರಿ : ಕೆಲವರಿಗೆ ಸಂಜೆ 4 ಗಂಟೆಗೆ ಟೀ ಕುಡಿದ್ರೆ ರಾತ್ರಿ ನಿದ್ರೆ ಬರೋದಿಲ್ಲ. ನಿಮಗೂ ಈ ಸಮಸ್ಯೆಯಿದ್ಯಾ ಎಂಬುದನ್ನು ಪತ್ತೆ ಮಾಡಿ. ಹೌದು ಎನ್ನಿಸಿದ್ರೆ ಟೀ ಹಾಗೂ ಕಾಫಿ ಸೇವನೆ ಮಾಡಲು ಹೋಗ್ಬೇಡಿ. ವಿಶೇಷವಾಗಿ ಸಂಜೆ ಸಮಯದಲ್ಲಿ ಹಾಗೂ ರಾತ್ರಿ ಮಲಗಲು ಹೋಗುವ ಮುನ್ನ ಟೀ ಕಾಫಿ ಸೇವನೆ ಮಾಡ್ಬೇಡಿ.