World Diabetes Day : ಸಂತಾನೋತ್ಪತ್ತಿ ಕನಸು ಭಗ್ನಗೊಳಿಸುತ್ತೆ ಮಧುಮೇಹ

By Suvarna News  |  First Published Nov 13, 2022, 3:45 PM IST

ನವೆಂಬರ್ 14ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ಕಾಡುವ ಮಧುಮೇಹ ನರಕ್ಕೆ ಹಾನಿಯಾಗುತ್ತದೆ. ಇದ್ರಿಂದ ಹೃದಯ ಸಂಬಂಧಿ ಖಾಯಿಲೆ, ಮೂತ್ರಪಿಂಡಕ್ಕೆ ಹಾನಿ ಮಾತ್ರವಲ್ಲ ವಂಶಾಭಿವೃದ್ಧಿ ಕೂಡ ಸಾಧ್ಯವಾಗೋದಿಲ್ಲ. 
 


ಶುಗರ್ ಲೆಸ್, ಈ ವರ್ಷ ತೆರೆಗೆ ಬಂದ ಕನ್ನಡದ ಚಿತ್ರ. ಸಕ್ಕರೆ ಖಾಯಿಲೆ ಬಂದ ವ್ಯಕ್ತಿಯನ್ನು ಹೇಗೆಲ್ಲ ನೋಡಲಾಗುತ್ತೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಸಕ್ಕರೆ ಖಾಯಿಲೆ, ಮಧುಮೇಹ ಎಂದೆಲ್ಲ ಕರೆಯುವ ಈ ಡಯಾಬಿಟಿಸ್ ಅಂತಿಂತ ಖಾಯಿಲೆಯಲ್ಲ. ಒಮ್ಮೆ ಅಂಟಿಕೊಂಡ್ರೆ ಹೋಗುವ ರೋಗವೂ ಅಲ್ಲ. ಇಂಟರ್ನ್ಯಾಷನಲ್ ಡಯಾಬಿಟಿಸ್ ಫೆಡರೇಷನ್, ಭಾರತವನ್ನು ವಿಶ್ವದ ಮಧುಮೇಹದ ರಾಜಧಾನಿ ಎಂದು ಕರೆದಿದೆ. ವರದಿ ಪ್ರಕಾರ, 2023 ರವರೆಗೆ ಭಾರತದಲ್ಲಿ ಶೇಕಡಾ 9ರಷ್ಟು ಜನಸಂಖ್ಯೆ ಸಕ್ಕರೆ ಖಾಯಿಲೆಯಿಂದ ಬಳಲುತ್ತದೆ ಎನ್ನಲಾಗಿದೆ. 

ಸಕ್ಕರೆ ಖಾಯಿಲೆ (Diabetes) ನರಗಳಿಗೆ ಹಾನಿ ಮಾಡುವ ಖಾಯಿಲೆಯಾಗಿದೆ. ಇದು ಮೂತ್ರಪಿಂಡ (Kidney), ಹೃದಯ ಮತ್ತು ಮೆದುಳಿಗೆ ಹಾನಿಯುಂಟು ಮಾಡುತ್ತದೆ. ಮಧುಮೇಹದಿಂದ ಅನೇಕ ಸಮಸ್ಯೆಗಳು ಶುರುವಾಗುತ್ತವೆ. ಸಕ್ಕರೆ ಖಾಯಿಲೆಯಿರುವ ಹುಡುಗನಿಗೆ ಮದುವೆಯಾಗೋದು ಕನಸು. ಇನ್ನು ಮದುವೆಯಾದ್ಮೇಲೆ ಸಕ್ಕರೆ ಖಾಯಿಲೆ ಒಕ್ಕರಿಸಿಕೊಂಡ್ರೆ ದಾಂಪತ್ಯದ ಸುಂದರ ಕನಸು ಭಗ್ನವಾದಂತೆ. 

Tap to resize

Latest Videos

ಮಕ್ಕಳ (Children) ನ್ನು ಪಡೆಯೋದು ದಂಪತಿಯ ಮೊದಲು ಬಯಕೆ. ಮುದ್ದಾದ ಮಕ್ಕಳು ವಂಶಾಭಿವೃದ್ಧಿ ಮಾಡ್ಬೇಕೆಂದು ದಂಪತಿ ಬಯಸ್ತಾರೆ. ಆದ್ರೆ ಸಕ್ಕರೆ ಖಾಯಿಲೆ ಈ ಮಕ್ಕಳ ಕನಸಿಗೆ ತಡೆಯೊಡ್ಡುತ್ತದೆ. ಮಕ್ಕಳನ್ನು ಪಡೆಯುವ ಪ್ಲಾನ್ ನಲ್ಲಿರುವ ದಂಪತಿ ಮೊದಲನೇಯದಾಗಿ ಮಧುಮೇಹ ಬರದಂತೆ ಆರೋಗ್ಯ ಕಾಪಾಡಿಕೊಳ್ಳಬೇಕು. 

ಮಧುಮೇಹ ಮತ್ತು ಬಂಜೆತನದ ನಡುವಿನ ಸಂಬಂಧ : ಮಧುಮೇಹ ಪುರುಷರು ಮತ್ತು ಮಹಿಳೆಯರಲ್ಲಿ ಫರ್ಟಿಲಿಟಿ ಕಡಿಮೆ ಮಾಡುತ್ತದೆ. ಇದರಿಂದಾಗಿ ಬಂಜೆತನದ ಸಮಸ್ಯೆ ಉಂಟಾಗುತ್ತದೆ. ಸಕ್ಕರೆ ಖಾಯಿಲೆಯಿಂದಾಗಿ  ಪುರುಷರು ಮತ್ತು ಮಹಿಳೆಯರಲ್ಲಿ ಹಾರ್ಮೋನುಗಳು ಅಸಮತೋಲನಗೊಳ್ಳುತ್ತವೆ. ಇದರಿಂದಾಗಿ  ಮಹಿಳೆಯರಲ್ಲಿ ಅಂಡೋತ್ಪತ್ತಿ ಮತ್ತು ಪುರುಷರಲ್ಲಿ ವೀರ್ಯವು ಹಾನಿಗೊಳಗಾಗುತ್ತದೆ. ಇದರಿಂದಾಗಿ ಗರ್ಭಧಾರಣೆ ಕಷ್ಟವಾಗುತ್ತದೆ. ಕೆಲವರಿಗೆ ಗರ್ಭಧರಿಸುವ ಭಾಗ್ಯ ಸಿಗೋದಿಲ್ಲ. ವರದಿಗಳ ಪ್ರಕಾರ, ಪುರುಷರ ಬಂಜೆತನಕ್ಕೆ ಮಧುಮೇಹ ಮುಖ್ಯ ಕಾರಣ. ಇದರ ಹಿಂದಿನ ವೈಜ್ಞಾನಿಕ ಕಾರಣವೆಂದರೆ ಹೆಚ್ಚಿನ ಗ್ಲೂಕೋಸ್ ಮಟ್ಟದಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡವು ವೀರ್ಯದ ಡಿಎನ್‌ಎಗೆ ಹಾನಿ ಮಾಡುತ್ತದೆ. ಇದರಿಂದ ಮಕ್ಕಳನ್ನು ಪಡೆಯುವುದು ಕಷ್ಟವಾಗುತ್ತದೆ. ಮಧುಮೇಹ,  ಪುರುಷರಲ್ಲಿ ಲೈಂಗಿಕ ಬಯಕೆಯನ್ನು ನಿಯಂತ್ರಿಸುವ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಮಧುಮೇಹವು ಅನಿಯಂತ್ರಿತವಾಗಿದ್ದರೆ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗಬಹುದು. ಏಕೆಂದರೆ ಇದು ಸ್ಖಲನಕ್ಕೆ ಕಾರಣವಾಗುವ ನರಗಳು ಮತ್ತು ಸಣ್ಣ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಸರಿಯಾದ ಆರೋಗ್ಯ ತಪಾಸಣೆ ಮತ್ತು ಔಷಧಿಗಳ ಮೂಲಕ ಇದನ್ನು ನಿಯಂತ್ರಿಸಬಹುದು.

ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಯಿಂದ ಗರ್ಭಧರಿಸಲು ಸಾಧ್ಯವಿಲ್ಲವೆ ? : ಮಧುಮೇಹದಿಂದ ಪುರುಷರ ವೀರ್ಯ ಸಂಖ್ಯೆ ಕಡಿಮೆಯಾಗುತ್ತದೆ. ಇದರರ್ಥ ಮನುಷ್ಯ ಬಂಜೆ ಎಂದು ಅರ್ಥವಲ್ಲ. ಆರೋಗ್ಯಕರ ಆಹಾರವನ್ನು ಅನುಸರಿಸುವ ಮೂಲಕ ಗರ್ಭಧಾರಣೆಗೆ ಪ್ಲಾನ್ ಮಾಡಬಹುದು. ಮಧುಮೇಹ ಹೊಂದಿರುವ ಪುರುಷರು ಕಾಮಾಸಕ್ತಿ ಹೊಂದಿರುವುದಿಲ್ಲ. ಇದು ಗರ್ಭಧಾರಣೆಗೆ ಮತ್ತಷ್ಟು ಸಮಸ್ಯೆಯಾಗುತ್ತದೆ. ಮಧುಮೇಹ ರೋಗಿಗಳು ಹೆಚ್ಚು ದಣಿಯುತ್ತಾರೆ. ಅದ್ರಲೂ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಹೆಚ್ಚು ಶಕ್ತಿ ಕಳೆದುಕೊಳ್ತಾರೆ. ಗರ್ಭಧಾರಣೆ ಸಮಸ್ಯೆಯಾಗ್ತಿದೆ ಎನ್ನುವ ಮಧುಮೇಹ ರೋಗಿಗಳು ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ ಪಡೆಯಬೇಕಾಗುತ್ತದೆ. 

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಮೂಲಕ ಮಧುಮೇಹಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕಾಗಿ ನೀವು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಮಧುಮೇಹ ರೋಗಿಯು ಆಹಾರದಲ್ಲಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಇತ್ಯಾದಿಗಳನ್ನು ಸೇವಿಸಬೇಕು. ಆರೋಗ್ಯಕರ ಆಹಾರ ಸೇವನೆಯು ನಿಮ್ಮ ಫರ್ಟಿಲಿಟಿ ಹೆಚ್ಚಿಸುತ್ತದೆ.

ಸಿಕ್ಕಾಪಟ್ಟೆ ಟೀ ಕುಡಿಯೋ ಅಭ್ಯಾಸನಾ ? ಸ್ಪಲ್ಪ ಕಪ್‌ ಬಗ್ಗೆನೂ ಗಮನ ಇರ್ಲಿ

ಇದಲ್ಲದೆ, ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವುದನ್ನು ತಡೆಯಲು ನಿಯಮಿತವಾಗಿ ವ್ಯಾಯಾಮ ಮಾಡಬೇಕು.  ವ್ಯಾಯಾಮ ಮಾಡಲು ದೇಹಕ್ಕೆ ಶಕ್ತಿ ಅಂದರೆ ಗ್ಲೂಕೋಸ್ ಬೇಕು. ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ. ವ್ಯಾಯಾಮವು ಇನ್ಸುಲಿನ್ ಮಟ್ಟವನ್ನು ಸಹ ಹೆಚ್ಚಿಸುತ್ತದೆ. ಪ್ರತಿನಿತ್ಯ ಅರ್ಧ ಗಂಟೆ ವಾಕಿಂಗ್ ಮಾಡುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. 

WORLD DIABETES DAY: ದಿಢೀರ್ ಬ್ಲಡ್ ಶುಗರ್ ಲೆವೆಲ್ ಹೆಚ್ಚಾದಾಗ ಕಡಿಮೆ ಮಾಡಲು ಟಿಪ್ಸ್

ಒತ್ತಡ ಹೆಚ್ಚಾದಾಗ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಒತ್ತಡದಲ್ಲಿರುವ ವ್ಯಕ್ತಿಗೆ ಕಾರ್ಟಿಸೋಲ್ ಹಾರ್ಮೋನ್ ಉತ್ಪಾದನೆ ಹೆಚ್ಚಾಗಲು ಪ್ರಾರಂಭಿಸುತ್ತದೆ. ಈ ಹಾರ್ಮೋನ್ ಸಂತಾನೋತ್ಪತ್ತಿಗೆ ಅಗತ್ಯವಾದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಫರ್ಟಿಲಿಟಿ ಕಡಿಮೆಯಾಗುತ್ತದೆ. 
 

click me!