ಆಯುರ್ವೇದ ಸ್ಮೋಕಿಂಗ್ ಎಂದರೇನು: ಸ್ಟಾರ್ ನಟಿ ಬಿಚ್ಚಿಟ್ರು ಧೂಮಪಾನ ಚಿಕಿತ್ಸೆಯ ಗುಟ್ಟು

Published : Sep 01, 2026, 08:38 AM IST
Ayurvedic Smoking

ಸಾರಾಂಶ

ನಟಿ ಶೆನಾಜ್ ಟ್ರೆಜರಿ ಕೇರಳದಲ್ಲಿ ಆಯುರ್ವೇದದ 'ಧೂಮಪಾನ' ಚಿಕಿತ್ಸೆ ಪಡೆದು ಅದರ ಪ್ರಯೋಜನಗಳನ್ನು ಹಂಚಿಕೊಂಡಿದ್ದಾರೆ. ಇದು ತಂಬಾಕು ರಹಿತವಾಗಿದ್ದು, ಔಷಧೀಯ ಗಿಡಮೂಲಿಕೆಗಳನ್ನು ಬಳಸಿ ಉಸಿರಾಟದ ಶುದ್ಧೀಕರಣ ಮತ್ತು ಮಾನಸಿಕ ಶಾಂತಿಗಾಗಿ ಬಳಸುವ ಪುರಾತನ ಚಿಕಿತ್ಸಾ ಪದ್ಧತಿಯಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಕೇರಳ: ನಟಿ ಮತ್ತು ಕಂಟೆಂಟ್ ಕ್ರಿಯೇಟರ್ ಶೆನಾಜ್ ಟ್ರೆಜರಿ (Shenaz Treasurywala) ತಮ್ಮ ವಿಭಿನ್ನ ಪ್ರವಾಸದ ವಿಡಿಯೋಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಕೇರಳದ ಆಯುರ್ವೇದ ರೆಸಾರ್ಟ್‌ಗೆ ಭೇಟಿ ನೀಡಿದ್ದ ಅವರು, ಅಲ್ಲಿ 'ಮೆಡಿಕೇಟೆಡ್ ಸ್ಮೋಕಿಂಗ್' ಅಥವಾ ಆಯುರ್ವೇದ ಧೂಮಪಾನ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಆಯುರ್ವೇದದಲ್ಲಿ ಧೂಮಪಾನ ಇದೆಯೇ?

ಶೆನಾಜ್ ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ತಮ್ಮ ವಿಶೇಷ ಅನುಭವ ಹಂಚಿಕೊಂಡಿದ್ದಾರೆ. ನಜಲ್ ಸ್ಮೋಕಿಂಗ್ (ಮೂಗಿನ ಮೂಲಕ ಧೂಮಪಾನ) ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇದು ಆಯುರ್ವೇದದಲ್ಲಿ ಕಾನೂನುಬದ್ಧವಾಗಿದೆ ಮತ್ತು ತಜ್ಞ ವೈದ್ಯರೇ ಇದನ್ನು ಶಿಫಾರಸು ಮಾಡುತ್ತಾರೆ ಎಂದು ಹೇಳಿದ್ದಾರೆ. ಶೆನಾಜ್ ಅವರ ಈ ಕುತೂಹಲಕ್ಕೆ ಉತ್ತರಿಸಿದ ಅಲ್ಲಿನ ವೈದ್ಯರು, ಈ ಪ್ರಕ್ರಿಯೆಯು ನಿಮ್ಮ ಇಂದ್ರಿಯಗಳನ್ನು ಬಲಪಡಿಸುತ್ತದೆ, ಮೂಗಿನ ಹಾದಿಯಲ್ಲಿರುವ ಅಡೆತಡೆಗಳನ್ನು ನಿವಾರಿಸುತ್ತದೆ ಮತ್ತು ಮನಸ್ಸನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ ಎಂದು ವಿವರಿಸಿದ್ದಾರೆ.

ತಂಬಾಕು ಧೂಮಪಾನಕ್ಕೂ ಇದಕ್ಕೂ ಏನು ವ್ಯತ್ಯಾಸ?

ಶೆನಾಜ್ ಸ್ಪಷ್ಟಪಡಿಸಿರುವಂತೆ.. ಇದು ಸಾಮಾನ್ಯ ಸಿಗರೇಟ್ ಸೇವನೆಯಲ್ಲ. ಆಯುರ್ವೇದದಲ್ಲಿ ಇದನ್ನು 'ಧೂಮಪಾನ' (Dhoompan) ಎಂದು ಕರೆಯಲಾಗುತ್ತದೆ. ಇದು ಉಸಿರಾಟದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ದೇಹದ ವಾತ ಮತ್ತು ಕಫ ದೋಷಗಳನ್ನ

ಸಮತೋಲನಗೊಳಿಸಲು ಬಳಸುವ ಪುರಾತನ ಪದ್ಧತಿ.

ಇದರಲ್ಲಿ ತಂಬಾಕಿನ ಬದಲಿಗೆ ಅರಿಶಿನ, ಗುಗ್ಗುಲ, ಬೇವು ಮತ್ತು ತುಪ್ಪದಂತಹ ಔಷಧೀಯ ಗಿಡಮೂಲಿಕೆಗಳನ್ನು ಬಳಸಿ ತಯಾರಿಸಿದ ವಿಶೇಷ ಬತ್ತಿಯನ್ನು ಸುಡಲಾಗುತ್ತದೆ. ಇದರ ಹೊಗೆಯನ್ನು ಮೂಗಿನ ಮೂಲಕ ಎಳೆದುಕೊಂಡು ಬಾಯಿಯ ಮೂಲಕ ಬಿಡಬೇಕು. ಇದು ಗಂಟಲಿನ ಕಿರಿಕಿರಿ, ನೆಗಡಿ ಮತ್ತು ಸೈನಸ್ ಸಮಸ್ಯೆಗೆ ರಾಮಬಾಣವಾಗಿದೆ. ಆಯುರ್ವೇದ ಚಿಕಿತ್ಸಾಲಯದಲ್ಲಿ ನಾನು ಸ್ಮೋಕಿಂಗ್ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಇದನ್ನು ಮಾಡಿದ ಮೇಲೆ ನನಗೆ ತುಂಬಾ ರಿಲ್ಯಾಕ್ಸ್ ಅನಿಸಿತು ಎಂದು ಶೆನಾಜ್ ಬರೆದುಕೊಂಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಒಂದು ವಡೆ ತಾನೇ ಅಂತ ಪ್ರತಿ ದಿನವೂ ತಿಂತೀರಾ? ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ?
ನಿಮ್ಮ ಹೆಲ್ಮೆಟ್ ಕೆಟ್ಟ ವಾಸನೆ ಬರುತ್ತಿದೆಯೇ? ಹೀಗೆ ಮಾಡಿ, ಆ ಸಮಸ್ಯೆ ಒಂದೇ ದಿನದಲ್ಲಿ ಮಾಯವಾಗುತ್ತೆ!