ಮುಂಬಯಿಯ ಕಾಮಾಟಿಪುರ ರೆಡ್‌ಲೈಟ್ ಏರಿಯಾ, ಕೋಲ್ಕತ್ತಾದ ಸೋನಾಗಾಚಿ ಕೆಂಪು ದೀಪ ಪ್ರದೇಶಗಳಲ್ಲೂ ಗಿರಾಕಿಗಳ ಸಂಖ್ಯೆಯಲ್ಲಿ ಊಹಿಸಲಾಗದಷ್ಟು ಇಳಿಕೆಯಾಗಿದೆ. ಇದು ಒಳ್ಳೆಯದಕ್ಕೋ ಕೆಡುಕಿಗೋ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಘರ್‌ವಾಲಿಗಳು. ರೋಗ ಹರಡದಿದ್ದರೆ ಒಳ್ಳೆಯದು. ಹಸಿದು ಸಾಯುವ ಹಾಗಾದರೆ ಕೆಟ್ಟದು!
ಒಡಿಶಾದ ಪಾರಾದೀಪ್ ಎಂಬ ರೆಡ್‌ಲೈಟ್ ಏರಿಯಾದಲ್ಲಿ ಈಗ ಜೀವಕಳೆಯೇ ಇಲ್ಲ. ಮೊದಲಾದರೆ ರಾತ್ರಿ ಏಳು ಗಂಟೆಯಾದರೆ ಸಾಕು ಇಲ್ಲಿ ಬೀದಿಗಳ ತುಂಬೆಲ್ಲ ರಾತ್ರಿ ರಾಣಿಯರೂ ಅವರನ್ನು ಹುಡುಕಿಕೊಂಡು ಬರುವ ಗಂಡಸರೂ ಅವರಿಗೆ ಹಕ್ಕಿ ಒದಗಿಸಿಕೊಡುವ ಪಿಂಪ್‌ಗಳೂ ಅವರನ್ನು ನಂಬಿದ ಸಣ್ಣಪುಟ್ಟ ವ್ಯಾಪಾರಿಗಳೂ ಸಾಕಷ್ಟು ಅಡ್ಡಾಡುತ್ತ ಇಡೀ ಏರಿಯಾ ಲವಲವಿಕೆಯಿಂದ ಇರುತ್ತಿತ್ತು. ಈಗ ಮಾತ್ರ ಅಲ್ಲಿ ಲೈಂಗಿಕ ಕಾರ್ಯಕರ್ತರೇನೋ ಸಾಕಷ್ಟಿದ್ದಾರೆ. ಆದರೆ ಗಿರಾಕಿಗಳೇ ಇಲ್ಲ.
ಇದಕ್ಕೆ ಒಂದು ಹಿನ್ನೆಲೆಯೂ ಇದೆ. ಇದು ಬಂದರು ನಗರ. ಕೆಲವು ದಿನಗಳ ಹಿಂದೆ ಇಲ್ಲಿ ಜಪಾನು, ಸಿಂಗಾಪುರ, ಥಾಯ್ಲೆಂಡು ಮುಂತಾದ ಕಡೆಗಳಿಂದ ಬಂದ ಹಡಗುಗಳು ತಳ ಊರಿದ್ದವು. ಅವುಗಳಿಂದ ಹೊರಬಿದ್ದ ಕೆಲವು ಗಂಡಸರು ಈ ರೆಡ್‌ಲೈಟ್ ಏರಿಯಾಗಳಿಗೆ ಭೇಟಿ ಕೊಟ್ಟಿದ್ದರಂತೆ. ಈಗ ಅದನ್ನು ನೆನಪಿಸಿಕೊಂಡು ಇಲ್ಲಿನ ಜನ ಬೆಚ್ಚಿ ಬೀಳುತ್ತಿದ್ದಾರೆ. ಹೀಗೆ ಬಂದವರಲ್ಲಿ ಕೆಲವರಿಗಾದರೂ ಕೊರೊನಾ ಸೋಂಕು ಇದ್ದಿರಬಹುದು ಎಂಬುದು ಅವರ ಭಯ. ಇದು ಸುಳ್ಳೇನಲ್ಲ. ಈಗಾಗಲೇ ಹಲವು ವೇಶ್ಯೆಯರು ಜ್ವರ, ಕೆಮ್ಮು ನೆಗಡಿ ಇತ್ಯಾದಿ ಲಕ್ಷಣಗಳು ಸಹಿತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಇಡೀ ಏರಿಯಾ ಮಾತ್ರವಲ್ಲ, ಇಲ್ಲಿಗೆ ರೆಗ್ಯುಲರ್ ಆಗಿ ಭೇಟಿ ಕೊಡುವ ಗಿರಾಕಿಗಳಲ್ಲೂ ಪ್ರಾಣಭೀತಿ ತಲೆಯೆತ್ತಿದೆ. ಹೀಗಾಗಿ ಇಡೀ ಸೆಕ್ಸ್ ಉದ್ಯಮ ಡಮಾರ್.
ಪೋರ್ನ್ ಸೈಟಿಗೆ ತಟ್ಟದ ಕೊರೋನಾ: ಮಾಸ್ಕ್ ಧರಿಸದೇ...
ಮುಂಬಯಿಯ ಕಾಮಾಟಿಪುರ ರೆಡ್‌ಲೈಟ್ ಏರಿಯಾ, ಕೋಲ್ಕತ್ತಾದ ಸೋನಾಗಾಚಿ ಕೆಂಪು ದೀಪ ಪ್ರದೇಶಗಳಲ್ಲೂ ಹೀಗೇ ಆಗಿದೆ. ಅಲ್ಲೂ ಗಿರಾಕಿಗಳ ಸಂಖ್ಯೆಯಲ್ಲಿ ಊಹಿಸಲಾಗದಷ್ಟು ಇಳಿಕೆಯಾಗಿದೆ. ಇದು ಒಳ್ಳೆಯದಕ್ಕೋ ಕೆಡುಕಿಗೋ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಘರ್‌ವಾಲಿಗಳು. ರೋಗ ಹರಡದಿದ್ದರೆ ಒಳ್ಳೆಯದು. ಹಸಿದು ಸಾಯುವ ಹಾಗಾದರೆ ಕೆಟ್ಟದು!
ಮೊದಲೆಲ್ಲ ಇಲ್ಲಿನ ಒಳ್ಳೆ ವಯಸ್ಸಿನ ಕಟ್ಟುಮಸ್ತಾದ ವೇಶ್ಯೆಯರು ದಿನಕ್ಕೆ ನಾಲ್ಕು- ಐದು ಮಂದಿಯ ಜತೆ ಮಲಗಬೇಕಾಗಿ ಬರುತ್ತಿತ್ತು. ಈಗೀಗ ಒಬ್ಬ ಸಿಗುವುದೂ ಕಷ್ಟವಾಗಿದೆ ಎನ್ನುತ್ತಾರೆ ಇಂಡಸ್ಟ್ರಿಯವರು. ಹಾಗಂತ ಬೆಲೆ ಏರಿಸುವ ಹಾಗೂ ಇಲ್ಲ. ಮೊದಲೇ ಗಿರಾಕಿಗಳು ಕಡಿಮೆ ಆಗಿರುವುದರಿಂದ, ಬೆಲೆ ಏರಿಕೆಯೂ ಇನ್ನಷ್ಟು ಹೊಡೆತ ನೀಡುವ ಸಾಧ್ಯತೆ ಇದೆ.
ಕೆಲವು ಒಳ್ಳೆಯ ಬದಲಾವಣೆಗಳೂ ಆಗಿವೆ. ಇಲ್ಲಿ, ಪ್ರತಿ ವೇಶ್ಯೆಗೂ ಕಾಂಡೋಮ್ ಬಳಸುವಂತೆ ಶಿಕ್ಷಣ ನೀಡಲಾಗಿದೆ. ಸೆಕ್ಸ್ ವರ್ಕರ್‌ಗಳು ಅದರ ಪರವಾಗಿಯೇ ಇದ್ದಾರೆ. ಆದರೆ ಗಿರಾಕಿಗಳದು ಮಾತ್ರ ಕಾಂಡೋಮ್ ಬಳಸಲು ಸದಾ ತಕರಾರು. ತಾನು ಅಷ್ಟೊಂದು ಕಾಸ್ ಕೊಡೋದು ಈ ರಬ್ಬರ್ ಹಾಕಿಕೊಳ್ಳಲಿಕ್ಕಾ ಅಂತ ಸಿಟ್ಟು. ಅದರ ಬಳಕೆಯ ಒಳ್ಳೆಯ ಉದ್ದೇಶದ ಬಗ್ಗೆ ಮನವರಿಕೆ ಮಾಡಿಕೊಡುವುದರಲ್ಲಿ ವೇಶ್ಯೆಯರಿಗೆ ಸಾಕು ಬೇಕು ಆಗುತ್ತಿತ್ತು. ಈಗ ಹಾಗೇನಿಲ್ಲ. ಗಿರಾಕಿಗಳೇ ಮುಂದಾಗಿ ಕಾಂಡೋಮ್ ಕೇಳುತ್ತಾರಂತೆ!
ಕರೋನಾ ಬಗ್ಗೆ ಗೊತ್ತಿಲ್ಲದ ಕತೆ ಹೇಳ್ತೆವೆ ಕೇಳಿ..ಸದ್ಯಕ್ಕೆ ಇದೊಂದು ಎಪಿಡಮಿಕ್!...
ತಾರಾಬಾಯಿ ಎಂಬ ಲೈಂಗಿಕ ಕಾರ್ಯಕರ್ತೆ ಹೇಳುವುದು ಹೀಗೆ: ಈಗೀಗ ಗಿರಾಕಿಗಳು ಬರುವುದೇ ಕಡಿಮೆ. ಬಂದವರು ನಮ್ಮ ಮುಖಕ್ಕೆ ಮುಖ ಹಚ್ಚುವುದೇ ಇಲ್ಲ! ಅಂದರೆ ತುಟಿಗೆ ತುಟಿ ಮುಟ್ಟಿಸುವುದೇ ಇಲ್ಲವಂತೆ! ಅಷ್ಟೊಂದು ಭಯ ಗಿರಾಕಿಗಳಿಗೆ ಬೇರೂರಿಬಿಟ್ಟಿದೆ. ಮುಖಕ್ಕೆ ಮುಖ ತಾಗಿಸದೆ ಬಂದ ಕೆಲಸ ಎಷ್ಟೋ ಅಷ್ಟನ್ನು ಮುಗಿಸಿಕೊಂಡು ಹೋಗುತ್ತಾರಂತೆ. ಕೊರೊನಾ ಹರಡುವುದು ವ್ಯಕ್ತಿಯ ಸೀನು, ಉಗುಳು, ಜೊಲ್ಲು, ಎಂಜಲು ಇತ್ಯಾದಿಗಳಿಂದ ಅಂತ ಈ ಗಿರಾಕಿಗಳಿಗೂ ಗೊತ್ತಾಗಿಬಿಟ್ಟಿದೆ. ಹೀಗಾಗಿ ಅವರೂ ಹುಷಾರಾಗಿದ್ದಾರೆ. ಮಾಸ್ಕ್ ಹಾಕಿಕೊಂಡು ಬಂದು, ಮಾಸ್ಕ್ ತೆಗೆಯದೆಯೇ ಕೆಲಸ ಮುಗಿಸಿಕೊಂಡು ಹೋಗುವ ಗಿರಾಕಿಗಳೂ ಉಂಟಂತೆ. ಗುರುತು ಸಿಕ್ಕದೆ ಇರೋಲ್ಲ ಎಂಬ ಉದ್ದೇಶವೂ ಇದರೊಂದಿಗೆ ಸೇರಿಕೊಂಡಿರಬಹುದು.
ಕರೋನಾಕ್ಕೆ ಕರ್ನಾಟಕ ಬಂದ್, ಏನ್ ಮಾಡ್ಬೇಕು? ಏನ್ ಮಾಡಬಾರದು?...
ಮುಂಬಯಿ ಹಾಗೂ ಕೋಲ್ಕತಾ ಕೂಡ ಬಂದರು ಪ್ರದೇಶಗಳು, ಇಲ್ಲಿಗೂ ಸಾಕಷ್ಟು ಹಡಗುಗಳ ಬರುತ್ತವೆ. ದೇಶವಿದೇಶಗಳ ಯಾತ್ರಿಗಳೂ ಭೇಟಿ ಕೊಡುತ್ತಾರೆ. ಸ್ವಚ್ಛತೆ ಎಂಬುದು ಇಲ್ಲಿ ಕನಸಿನ ಮಾತು. ಇನ್ನು ಆರೋಗ್ಯದ ಕುರಿತ ಕಾಳಜಿಯೂ ಅಷ್ಟಕ್ಕಷ್ಟೇ. ಇದೀಗ ಕೊರೊನಾದ ನೆವದಿಂಧ ಒಂದೊಂದಾಗಿ ಪಾಠಗಳನ್ನು ಕಲಿಯಬೇಕಾಗಿ ಬಂದಿದೆ.