* ಬಡ ಜನರಿಗಾಗಿ ಜಮೀನು ಮಾರಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಹಿರಿಯ ನಟಿ
* ಸ್ವಂತ ಜಮೀನು ಮಾರಿ ಜನರ ಆರೋಗ್ಯ ಸುಧಾರಣೆಗೆ ಮುಂದದ ನಟಿ
* 50 ಲಕ್ಷ ರೂಗಳಲ್ಲಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ
* ನೆಲಮಂಗಲ ಶಾಸಕರಿಂದ ಭೂಮಿ ಪೂಜೆ
ಬೆಂಗಳೂರು(ಮಾ. 22) ಒಂದೆಲ್ಲ ಒಂದು ಸಾಮಾಜಿಕ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹಿರಿಯ ನಟಿ ಲೀಲಾವತಿ(Leelavathi) ಮತ್ತು ಪುತ್ರ ನಟ ವಿನೋದ್ ರಾಜ್ (Vionod Raj) ಈಗ ಮತ್ತೊಂದು ಆದರ್ಶಪ್ರಾಯ ಕೆಲಸ ಮಾಡುತ್ತಿದ್ದಾರೆ.
ಈ ಇಳಿ ವಯಸ್ಸಿನಲ್ಲೂ ಗ್ರಾಮೀಣ ಭಾಗದ ಜನರ ಆರೋಗ್ಯ(Health) ಸುಧಾರಿಸುವ ನಿಟ್ಟಿನಲ್ಲಿ ತಮ್ಮ ಸ್ವಂತ ಜಮೀನು ಮಾರಿ, ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಎಂ.ಲೀಲಾವತಿ ಮುಂದಾಗಿದ್ದಾರೆ. ಬೆಂಗಳೂರು ಗ್ರಾಮಾಂತರದ (Bengaluru Rural)ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದಲ್ಲಿ ಸುಮಾರು 10 ವರ್ಷಗಳ ಹಿಂದೆ ಸಣ್ಣದೊಂದು ಆಸ್ಪತ್ರೆ ನಿರ್ಮಾಣ ಮಾಡಿದ್ದ ಡಾ.ಎಂ.ಲೀಲಾವತಿಯವರು, ಮತ್ತೊಂದು ಪ್ರಾಥಮಿಕ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ.
undefined
ತಾಯಿ ಲೀಲಾವತಿ ಅಮ್ಮನವರ ಆಸೆಯಂತೆ ಚೆನೈ ನಲ್ಲಿರುವ ತಮ್ಮ ಸ್ವಂತ ಜಮೀನನ್ನು ಮಾರಾಟ ಮಾಡಿದ ನಟ ವಿನೋದ್ ರಾಜ್ ಸುಮಾರು 50 ಲಕ್ಷ ರೂಗಳಲ್ಲಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಡಾ.ಲೀಲಾವತಿಯವರ ಆರೋಗ್ಯ ಕ್ಷೀಣಿಸಿದ್ದು ಅವರ ಅನುಪಸ್ಥಿತಿಯಲ್ಲಿ, ಮಗ ನಟ ವಿನೋದ್ ರಾಜ್ ಚಾಲನೆ ನೀಡಿದರು.
ಇನ್ನೂ ಭೂಮಿ ಪೂಜೆಗೆ ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸ ಮೂರ್ತಿ ಕೂಡ ಭಾಗಿಯಾಗಿದ್ದರು ಎಲ್ಲಾ ರೀತಿಯ ಸಹಾಯ ನೀಡುವುದಾಗಿ ಹಾಗೂ ಅವರ ಹೆಸರಿನ ಆಸ್ಪತ್ರೆಗೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನ ಒದಗಿಸುವ ಭರವಸೆ ನೀಡಿದರು. ಅಮ್ಮನ ಆಸೆಯಂತೆ ನಿರ್ಮಿಸುತ್ತಿರುವುದಾಗಿ ನಟ ವಿನೋದರಾಜ್ ತಿಳಿಸಿದರು.
ಕ್ರಿಮಿನಾಶಕ ಸಿಂಪಡಿಸಿದ್ದರು: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದ ಬೀದಿ ಬೀದಿಗಳಲ್ಲಿ ಕ್ರಿಮಿನಾಶಕ ಸಿಂಪಡಿಸಿದ್ದರು ವಿನೋದ್ ರಾಜ್,.. ಗ್ರಾಮದ ಜನರಿಗೆ ಯಾವುದೇ ವೈರಸ್ ಬರದಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು.
ಬಡವರಿಗೆ ಆಹಾರ ವಿತರಿಸಿದ್ದ ಹಿರಿಯ ನಟಿ ಈ ಪ್ರಪಂಚದಿಂದ ಕೊರೋನಾ ದೂರವಾಗಲಿ ಎಂದು ಪ್ರಾರ್ಥನೆ ಮಾಡಿದ್ದರು. ದಿನಸಿ ವಿತರಣೆ ಮಾಡಿದ್ದ ಲೀಲಾವತಿ ಜನರಿಗೆ ಎಚ್ಚರಿಕೆ ಪಾಲಿಸಲು ತಿಳಿಸಿದ್ದರು.
ರೈತ ವಿನೋದ್ ರಾಜ್: ಲಾಕ್ಡೌನ್ ಸಮಯದಲ್ಲಿ ತರಕಾರಿಗಳನ್ನು ಕೊಂಡೊಯ್ದು ಮಾರುತ್ತಿದ್ದೆವು. ಇಲ್ಲಿ ಆ ದಿನಗಳಲ್ಲಿ ಸ್ಥಳೀಯ ವ್ಯಾಪಾರಕ್ಕೆ ಯಾವುದೇ ತೊಂದರೆ ಆಗಿಲ್ಲ. ಬೆಳಿಗ್ಗೆ 6 ಗಂಟೆಗೆ ಎದ್ದು ಅರ್ಧ ಗಂಟೆಯಲ್ಲಿ ಮಾರುಕಟ್ಟೆ ತಲುಪಿದರೆ ಎಲ್ಲಾ ತರಕಾರಿ ಮಾರಾಟವಾಗುತ್ತಿತ್ತು. ತೆಂಗಿನಕಾಯಿ ಮತ್ತು ಅಡಿಕೆ ಮಾತ್ರ ಜಿಲ್ಲೆಯಿಂದ ಜಿಲ್ಲೆಗೆ ಸಾಗಿಸುವುದು ತೊಂದರೆಯಾಯಿತು. ಹಾಗಾಗಿ ಅವುಗಳನ್ನು ವಾಪಾಸು ಕರೆಸಿಕೊಂಡು ಲಾಕ್ಡೌನ್ ಬಳಿಕ ಮತ್ತೆ ಕಳಿಸಬೇಕಾಯಿತು ಹೀಗೆ ಲಾಕ್ ಡೌನ್ ಸಂದರ್ಭದ ಒಬ್ಬ ರೂತನಾಗಿ ಎದುರಿಸಿದ್ದ ಕತೆಯನ್ನು ವಿನೋದ್ ರಾಜ್ ಹೇಳಿಕೊಂಡಿದ್ದರು. ತಮ್ಮ ನಟನೆ ಮತ್ತು ವಿಶೇಷ ನೃತ್ಯ ಕೌಶಲ್ಯದಿಂದಲೇ ಹೆಸರು ಮಾಡಿದವರು ವಿನೋದ್ಗ ರಾಜ್.
ಅಪ್ಪು ಪಿಂಡ ಪ್ರದಾನ: ಹಿರಿಯ ನಟಿ ಲೀಲಾವತಿ ಹಾಗೂ ಅವರ ಪುತ್ರ, ನಟ ವಿನೋದ್‌ರಾಜ್ ಶ್ರಿರಂಗಪಣದ ಗಂಜಾಂನ ಸಂಗಮ ಬಳಿ ನಟ ಪುನೀತ್ ರಾಜ್‌ಕುಮಾರ್ ಅವರ 11ನೇ ದಿನದ ಪುಣ್ಯತಿಥಿ ಅಂಗವಾಗಿ ಪಿಂಡ ಪ್ರದಾನ ಕಾರ್ಯ ನೆರವೇರಿಸಿದ್ದರು. ಪೂಜಾ ಕೈಂಕರ್ಯ ನಡೆಯುವ ವೇಳೆ ಕಾರಿನಲ್ಲೇ ಕುಳಿತಿದ್ದ ಹಿರಿಯ ನಟಿ ತಾಯಿ ಲೀಲಾವತಿ ಎಲ್ಲವನ್ನು ವೀಕ್ಷಿಸುತ್ತಿದ್ದರು.
ಕೆಲವೇ ಕೆಲವು ಆಪ್ತರೊಂದಿಗೆ ಆಗಮಿಸಿದ ಲೀಲಾವತಿ, ವಿನೋದ್ ರಾಜ್ ಸಂಪ್ರದಾಯದಂತೆ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ತಾಯಿಯ ಮಾರ್ಗದರ್ಶನದಂತೆ, ಇದಕ್ಕೂ ಮೊದಲು ವರನಟ ಡಾ.ರಾಜ್ ಕುಮಾರ್ ಸಮಾಧಿ ಮಣ್ಣಿಗೆ ವಿಶೇಷ ಪೂಜೆ ಸಲ್ಲಿಸಿ ಕಾವೇರಿಯಲ್ಲಿ ವಿಸರ್ಜನೆ ನಡೆಸಲಾಯಿತು.
ಶ್ರೀರಂಗಪಟ್ಟಣ ಹೊರವಲಯದ ಕಾವೇರಿ ಸಂಗಮದ ಬಳಿಯ ಕಾವೇರಿ ತಟದಲ್ಲಿ ನಟ ವಿನೋದ್ ರಾಜ್ ಅವರು ಪುನೀತ್ ರಾಜ್‌ಕುಮಾರ್ ಅವರ ಪಿಂಡ ಪ್ರದಾನ ಕಾರ್ಯ ನೆರವೇರಿಸಿದರು.