ಅರಿವಿಲ್ಲದೆ ನಾವು ಸೇವಿಸುವ ಅನೇಕ ಆಹಾರಗಳಲ್ಲಿ ಎಲ್ ಡಿಎಲ್ ಅಂದರೆ ಕೆಟ್ಟ ಕೊಬ್ಬಿನ ಪ್ರಮಾಣ ಅಧಿಕವಾಗಿರಬಹುದು. ಅವುಗಳನ್ನು ಸೇವಿಸಿದರೆ ದೇಹದಲ್ಲಿ ಕೆಟ್ಟ ಕೊಬ್ಬು ಹೆಚ್ಚಾಗಿ, ವಿವಿಧ ಸಮಸ್ಯೆಗಳು ತಲೆದೋರುತ್ತದೆ. ಅಂತಹ ಅನಾರೋಗ್ಯಕರ ಆಹಾರಗಳ ಬಗ್ಗೆ ಅರಿತುಕೊಳ್ಳಿ.
ಅದು ಹೇಗೋ ನಮ್ಮ ಆಹಾರ ಬದಲಾಗಿ ಹೋಗಿದೆ. ಅರಿವಿಗೆ ಬಾರದಂತೆ ಆಹಾರಶೈಲಿಯಲ್ಲಿ ಬದಲಾವಣೆ ಉಂಟಾಗಿದೆ. ನೀವೇ ಒಮ್ಮೆ ನೆನಪಿಸಿಕೊಳ್ಳಿ. ಬಾಲ್ಯ ಕಾಲದಲ್ಲಿ ತಿನ್ನುವ ಆಹಾರಕ್ಕೂ ಇಂದಿನ ಆಹಾರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹಿಂದೆ ಆಹಾರದಲ್ಲಿ ಎಣ್ಣೆ, ಮಸಾಲೆಗಳ ಬಳಕೆ ಸೀಮಿತವಾಗಿತ್ತು. ದಿನಬೆಳಗಾದರೆ ರೈಸ್ ಬಾತ್ ಮಾಡಿಕೊಂಡು ಯಾರೂ ತಿನ್ನುತ್ತಿರಲಿಲ್ಲ. ಅಕ್ಕಿ, ಜೋಳ, ರಾಗಿ ರೊಟ್ಟಿ, ಚಟ್ನಿ, ಚಟ್ನಿಪುಡಿ, ಗಟ್ಟಿಮೊಸರು ಇಂಥವುಗಳು ಅಂದು ಹೊಟ್ಟೆ ಸೇರುತ್ತಿದ್ದವು. ಇಂದು ಹೇಗೆ ಯೋಚನೆ ಮಾಡಿದರೂ ರೈಸ್ ಬಾತ್, ಗೋಧಿಯ ವಿವಿಧ ತಿಂಡಿಗಳು ಅಥವಾ ಅಕ್ಕಿಯಿಂದ ಮಾಡುವ ವಿವಿಧ ತಿನಿಸುಗಳೇ ನೆನಪಾಗುತ್ತವೆ. ಇದು ತಿನ್ನುವವರಿಗೂ ಮಾಡುವವರಿಗೂ ಅನ್ವಯ. ಹೀಗೆ ಬದಲಾದ ಆಹಾರಶೈಲಿಯಿಂದ ನಾವು ಸೇವಿಸು ಕೊಬ್ಬಿನ ಪ್ರಮಾಣ ಗರಿಷ್ಠ ಮಟ್ಟಕ್ಕೇರಿದೆ.
ನಮ್ಮ ದೇಹಕ್ಕೆ ಕೊಬ್ಬು ಬೇಕೇಬೇಕು. ನರಕೋಶಗಳ ರಕ್ಷಣೆಯಲ್ಲಿ, ವಿಟಮಿನ್ ಉತ್ಪಾದನೆ, ಹಾರ್ಮೋನ್ ಸ್ರವಿಕೆಯಲ್ಲಿ ಕೊಬ್ಬಿನ ಪಾತ್ರ ಪ್ರಮುಖ. ದೇಹದ ಎಲ್ಲ ಕ್ರಿಯೆಗೂ ಕೊಬ್ಬಿನ ಅಂಶ ಬೇಕೇ ಬೇಕು. ಆದರೆ, ಅದು ಉತ್ತಮ ಕೊಬ್ಬಾಗಿರಬೇಕು. ನಮ್ಮ ದೇಹದಲ್ಲಿ ಹೈ ಡೆನ್ಸಿಟಿ ಲಿಪೋಪ್ರೊಟೀನ್ (ಎಚ್ ಡಿಎಲ್) ಹಾಗೂ ಲೋ ಡೆನ್ಸಿಟಿ ಲಿಪೋಪ್ರೊಟೀನ್ (ಎಲ್ ಡಿಎಲ್) ಎನ್ನುವ ಎರಡು ಮಾದರಿಯ ಕೊಬ್ಬು ಕಂಡುಬರುತ್ತವೆ. ಇವುಗಳಲ್ಲಿ ಎಲ್‌ಡಿಎಲ್ ಅನ್ನು ಕೆಟ್ಟ ಕೊಬ್ಬು ಎಂದೂ ಕರೆಯಲಾಗುತ್ತದೆ. ಇದು ದೇಹಕ್ಕೆ ಹಾನಿ ಉಂಟುಮಾಡುವಂಥದ್ದು. ಎಚ್ ಡಿಎಲ್ ಉತ್ತಮ ಕೊಬ್ಬಾಗಿದ್ದು, ದೇಹಕ್ಕೆ ಅಗತ್ಯ. ರಕ್ತದಲ್ಲಿ, ಯಕೃತ್ತಿನಲ್ಲಿ ಸೇರಿಕೊಂಡಿರುವ ಕೆಟ್ಟ ಕೊಬ್ಬನ್ನು ಕರಗಿಸುವಲ್ಲೂ ಇದು ಮುಖ್ಯ ಪಾತ್ರ ವಹಿಸುತ್ತದೆ.
ರಕ್ತ ಕಡಿಮೆಯಾಗಿ ಸುಸ್ತಾ? ಆಹಾರದಲ್ಲಾಗಲಿ ಸ್ವಲ್ಪ ಬದಲಾವಣೆ!
ದೇಹಕ್ಕೆ ಅಗತ್ಯವಾಗಿರುವ ಉತ್ತಮ ಕೊಬ್ಬು ಅಥವಾ ಎಚ್ ಡಿಎಲ್ High Density Lipoprotein) ನಮ್ಮನ್ನು ಅನೇಕ ರೀತಿಯಲ್ಲಿ ರಕ್ಷಿಸುತ್ತದೆ. ಹಸುವಿನ ತುಪ್ಪ, ಶುದ್ಧ ತೆಂಗಿನೆಣ್ಣೆ, ಕೊಬ್ಬರಿ ಎಣ್ಣೆ ಸೇರಿದಂತೆ ಹಲವು ಪದಾರ್ಥಗಳಲ್ಲಿ ಈ ಕೊಬ್ಬು ಇರುತ್ತದೆ. ಆದರೆ, ಕೆಲವು ಆಹಾರಗಳಲ್ಲಿ ಕೆಟ್ಟ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅವುಗಳ ಸೇವನೆಯಿಂದ ದೇಹಕ್ಕೆ ಹಾನಿಯಾಗುತ್ತದೆ. ಎಲ್ ಡಿಎಲ್ (Low Density Lipoprotein) ಮಟ್ಟ ಹೆಚ್ಚುವುದರಿಂದ ರಕ್ತನಾಳಗಳಲ್ಲಿ ಕೊಬ್ಬಿನ (Cholesterol) ಅಂಶ ಶೇಖರಣೆ ಆಗಲು ಶುರುವಾಗುತ್ತದೆ. ಇದರಿಂದ ಹೃದಯದವರೆಗೆ ರಕ್ತವನ್ನು ಒಯ್ಯುವ ನಾಳಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಹಾಗೆಯೇ ಧೂಮಪಾನ, ರಕ್ತದೊತ್ತಡ, ಮಧುಮೇಹ ಮತ್ತು ಕೊಬ್ಬಿನ (Fat) ಆಹಾರ ಸೇವನೆಯಿಂದ ಈ ಕೆಟ್ಟ ಕೊಬ್ಬಿನಂಶ ಹೆಚ್ಚುತ್ತದೆ. ಅಂತಹ ಆಹಾರ ಯಾವುದು ಎಂದು ಅರಿತುಕೊಂಡಿರುವುದು ಉತ್ತಮ.
• ಚಾಕೊಲೇಟ್ (Chocolate) ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಇರುತ್ತದೆ. ಸಿಹಿ ತಿನ್ನಬೇಕೆಂದು ಆಸೆಯಾದರೆ ಡಾರ್ಕ್ ಚಾಕೊಲೇಟ್ ಸೇವಿಸಬಹುದು.
• ಬೆಣ್ಣೆಯಲ್ಲಿ (Cheese) ಕೂಡ ಕೆಟ್ಟ ಕೊಬ್ಬಿನಂಶ ಹೆಚ್ಚಾಗಿರುತ್ತದೆ. ಆದರೆ, ಅಲ್ಪ ಪ್ರಮಾಣದ ಸೇವನೆಯಿಂದ ತೊಂದರೆ ಆಗುವುದಿಲ್ಲ.
• ವಿವಿಧ ಪ್ರಾಣಿಗಳ ಲಿವರ್ (Liver) ಸೇವನೆಯಿಂದ ಕೆಟ್ಟು ಕೊಬ್ಬಿನ ಪ್ರಮಾಣ ದೇಹದಲ್ಲಿ ಹೆಚ್ಚಾಗುತ್ತದೆ.
• ಕರಿದ ಫಾಸ್ಟ್ ಫುಡ್ (Fast Food) ಗಳಲ್ಲಿ ಕೆಟ್ಟ ಕೊಬ್ಬು, ಉಪ್ಪು (Salt) ಹಾಗೂ ಅಧಿಕ ಕ್ಯಾಲರಿ (High Calorie) ಇರುತ್ತದೆ. ಇವುಗಳನ್ನು ತಿನ್ನುವುದರಿಂದ ಎಚ್ ಡಿಎಲ್ ಪ್ರಮಾಣ ಕಡಿಮೆಯಾಗುತ್ತ ಬಂದು ಎಲ್ ಡಿಎಲ್ ಪ್ರಮಾಣ ಹೆಚ್ಚಾಗುತ್ತದೆ. ಇದು ಅಪಾಯಕಾರಿ ಬೆಳವಣಿಗೆ.
ಡಯಾಬಿಟಿಸ್ ಇದ್ರೆ ಚಿಕನ್ ಸೈಡಿಗಿಡಿ, ಮಟನ್ ಟೇಸ್ಟ್ ಮಾಡಿ
• ಪ್ರಾಣಿಗಳ ಚರ್ಬಿ ಸೇವನೆಯಿಂದ ಕೆಟ್ಟ ಕೊಬ್ಬಿನ ಮಟ್ಟ ಹೆಚ್ಚಾಗುತ್ತದೆ.
• ಬೀಫ್ ಮತ್ತು ಆಡಿನ ಮಾಂಸದಂತಹ ಕೆಂಪು ಮಾಂಸದಲ್ಲಿ (Red Meat) ಕೊಬ್ಬಿನ ಪ್ರಮಾಣ ಅತ್ಯಧಿಕ ಮಟ್ಟದಲ್ಲಿ ಇರುತ್ತದೆ. ಕೆಂಪು ಮಾಂಸದ ಬದಲು ಚಿಕನ್ (Chicken) ಸೇವನೆ ಮಾಡಬಹುದು.
• ಸಂಸ್ಕರಿತ ಮಾಂಸದಲ್ಲಿ (Processed Meat) ದೇಹಕ್ಕೆ ಅಪಾಯಕಾರಿಯಾಗಿರುವ ಸ್ಯಾಚುರೇಟೆಡ್ ಫ್ಯಾಟ್ ಅಂದರೆ ಕೆಟ್ಟ ಕೊಬ್ಬು ಅಧಿಕ ಪ್ರಮಾಣದಲ್ಲಿರುತ್ತದೆ.
• ವಿವಿಧ ಕ್ರೀಮ್ (Cream) ಗಳನ್ನು ಬಳಸಿ ಮಾಡುವ ಚಾಕೊಲೇಟ್, ಬಿಸ್ಕತ್ತುಗಳು ಸೇವನೆಗೆ ಯೋಗ್ಯವಲ್ಲ. ಹಾಗೆಯೇ, ಪ್ಯಾಕೇಜ್ಡ್ ಆಹಾರಗಳಾದ (Packaged Food) ಚಿಪ್ಸ್, ಮಿಠಾಯಿ, ಕೇಕ್, ಬಿಸ್ಕತ್ ಗಳಲ್ಲಿ ಕ್ಯಾಲರಿ ಪ್ರಮಾಣ ಗರಿಷ್ಠ ಮಟ್ಟದಲ್ಲಿ ಇರುತ್ತದೆ.