ಯೋಗದಲ್ಲಿ ಯಾವುದು ಈಜಿ ಅಂದ್ರೆ ಶವಾಸನ ಅಂತಾ ಎಲ್ಲರೂ ಹೇಳ್ತಾರೆ. ಯಸ್, ಶವಾಸನ ಸುಲಭ ನಿಜ. ಆದ್ರೆ ಅದ್ರಲ್ಲೂ ಅನೇಕ ಮಿಸ್ಟೆಕ್ ಆಗುತ್ತೆ. ತಪ್ಪಾಗಿ ಶವಾಸನೆ ಮಾಡಿದ್ರೆ ಅದ್ರ ಸಂಪೂರ್ಣ ಲಾಭ ನಮಗೆ ಸಿಗೋದಿಲ್ಲ.
ಶವಾಸನ ಕೂಡ ಒಂದು ಯೋಗ. ಅದನ್ನು ಸಾಮಾನ್ಯವಾಗಿ ಎಲ್ಲ ಯೋಗದ ಆಸನಗಳು ಮುಗಿದ ನಂತ್ರ ಮಾಡಲಾಗುತ್ತದೆ. ಆಸನಗಳನ್ನು ಮಾಡಿ ದಣಿದ ದೇಹಕ್ಕೆ ಶವಾಸನ ತಕ್ಷಣ ವಿಶ್ರಾಂತಿಯನ್ನು ನೀಡುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಶವಾಸನ ಹೆಚ್ಚು ಪರಿಣಾಮಕಾರಿಯಾಗಿದೆ. ಐದೇ ಐದು ನಿಮಿಷ ನೀವು ಶವಾಸನ ಮಾಡಿದ್ರೂ ನಿಮ್ಮ ದೇಹಕ್ಕೆ ವಿಶ್ರಾಂತಿ ಸಿಗುವ ಜೊತೆಗೆ ಹೊಸ ಉಲ್ಲಾಸ ಮೂಡುತ್ತದೆ.
ಯೋಗ (Yoga) ದ ಯಾವುದೇ ಆಸನ (Asana) ವಿರಲಿ ಅದನ್ನು ಸರಿಯಾಗಿ ಮಾಡಬೇಕು. ನೀವು ಆಸನದಲ್ಲಿ ತಪ್ಪು ಮಾಡಿದ್ರೆ ನಿಮಗೆ ಪ್ರಯೋಜನ ಸಿಗುವುದಿಲ್ಲ. ಅದೇ ರೀತಿ ಶವಾಸನ (Shavasana) ವನ್ನು ಸರಿಯಾಗಿ ಮಾಡಿದರೆ ಮಾತ್ರ ನೀವು ಪ್ರಯೋಜನ (Advantage) ಗಳನ್ನು ಪಡೆಯುತ್ತೀರಿ. ಅನೇಕರು ಪ್ರತಿ ದಿನ ಶವಾಸನ ಮಾಡುತ್ತಾರೆ, ಆದರೆ ಸಣ್ಣ ಪುಟ್ಟ ತಪ್ಪುಗಳನ್ನು ಮಾಡ್ತಾರೆ. ನಾವಿಂದು ಶವಾಸನ ಮಾಡುವಾಗ ಯಾವ ತಪ್ಪು ಮಾಡಬಾರದು ಎಂಬುದನ್ನು ನಿಮಗೆ ಹೇಳ್ತೇವೆ.
ಶವಾಸನ ಮಾಡುವಾಗ ಈ ತಪ್ಪು ಮಾಡ್ಬೇಡಿ :
ಇವರು ಶವಾಸನ ಮಾಡಬಾರದು : ಶವಾಸನ ಅಭ್ಯಾಸ ಮಾಡುವುದು ತುಂಬಾ ಸರಳ. ಆದ್ರೆ ಎಲ್ಲರೂ ಶವಾಸನ ಮಾಡುವುದು ಒಳ್ಳೆಯದಲ್ಲ. ಗರ್ಭಿಣಿಯರು ವಿಶೇಷವಾಗಿ ಕೊನೆಯ ತ್ರೈಮಾಸಿಕದಲ್ಲಿರುವ ಗರ್ಭಿಣಿಯರು ಶವಾಸನ ಮಾಡಬಾರದು. ಹಾಗೆಯೇ ಬೆನ್ನು ನೋವಿನಿಂದ ಬಳಲುತ್ತಿರುವ ಅಥವಾ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವವರು ಶವಾಸನ ಮಾಡಬಾರದು.
ಚಳಿಗಾಲದಲ್ಲಿ ಜೀರ್ಣಕ್ರಿಯೆ ಚೆನ್ನಾಗಿರ್ಬೇಕು ಅಂದ್ರೆ ಸೀತಾಫಲ ತಿನ್ನಿ
ಶವಾಸನದ ವೇಳೆ ನಿದ್ರೆ : ಶವಾಸನ ಇಡೀ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಅನೇಕರು ಶವಾಸನ ಮಾಡುವ ಸಂದರ್ಭದಲ್ಲಿ ನಿದ್ರೆ ಮಾಡ್ತಾರೆ. ನಿದ್ರೆ ಮಾಡಿದ್ರೆ ಅದರ ಸಂಪೂರ್ಣ ಲಾಭ ನಿಮಗೆ ಸಿಗುವುದಿಲ್ಲ. ಹಾಗಾಗಿ ಶವಾಸನ ಮಾಡುವ ವೇಳೆ ನೀವು ನಿಮ್ಮ ಉಸಿರಾಟದ ಮೇಲೆ ಗಮನವನ್ನು ಕೇಂದ್ರೀಕರಿಸಿ. ಆಗ ನಿದ್ರೆ ಬರುವುದಿಲ್ಲ.
ಶವಾಸನ ಮಾಡುವ ಸ್ಥಳದ ಬಗ್ಗೆ ಗಮನವಿರಲಿ : ಶವಾಸನವನ್ನು ಎಲ್ಲೆಂದರಲ್ಲಿ ಮಾಡುವುದು ಒಳ್ಳೆಯದಲ್ಲ. ನೀವು ಶವಾಸನ ಮಾಡುವ ವೇಳೆ ಶಾಂತ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ತುಂಬಾ ಗದ್ದಲವಿರುವ ಜಾಗದಲ್ಲಿ ನೀವು ಶವಾಸನ ಮಾಡಿದ್ರೆ ನಿಮಗೆ ಇದ್ರಿಂದ ಲಾಭವಾಗುವುದಿಲ್ಲ. ಶವಾಸನವನ್ನು ನೀವು ಮನೆಯ ಪ್ರಶಾಂತ ಸ್ಥಳದಲ್ಲಿ ಅಥವಾ ಟೆರೆಸ್ ಸೇರಿದಂತೆ ತೆರೆದ ಪ್ರದೇಶದಲ್ಲಿ ಮಾಡಬೇಕು.
ಅತ್ತ – ಇತ್ತ ಚಲನೆ : ಅನೇಕರಿಗೆ ಒಂದೇ ಭಂಗಿಯಲ್ಲಿ ಐದು ನಿಮಿಷ ಮಲಗಲು ಸಾಧ್ಯವಾಗುವುದಿಲ್ಲ. ಅಂಥವರು ಶವಾಸನ ಮಾಡುವ ವೇಳೆ ಕೂಡ ಅತ್ತಿಂದಿತ್ತ ಹೊರಳಾಡುತ್ತಿರುತ್ತಾರೆ. ಶವಾಸನ ಮಾಡುವ ವೇಳೆ ಸ್ಥಿರವಾದ ಭಂಗಿಯಲ್ಲಿ ಇರುವುದು ಮುಖ್ಯ. ಕೈ ಮೇಲೆ ಮಾಡುವುದು, ದೇಹವನ್ನು ಅಲುಗಾಡಿಸುವುದು ಒಳ್ಳೆಯದಲ್ಲ. ಹತ್ತು ನಿಮಿಷಗಳ ಕಾಲ ನೀವು ಶವಾಸನದಲ್ಲಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಶವಾಸನ ಮುಗಿದ ನಂತ್ರ ಈ ತಪ್ಪು ಮಾಡ್ಬೇಡಿ : ಶವಾಸನವನ್ನು 10 ನಿಮಿಷ ಅಭ್ಯಾಸ ಮಾಡಿದ್ರೆ ಒಳ್ಳೆಯದು. ಇದ್ರಿಂದ ಹೊರಬರುವ ವೇಳೆ ಅನೇಕರು ದಿಢೀರನೆ ಏಳುತ್ತಾರೆ. ಇದು ತಪ್ಪು. ಶವಾಸನದಿಂದ ಹೊರ ಬರುವ ವೇಳೆ ನಿಧಾನವಾಗಿ ಕಾಲು ಹಾಗೂ ಕೈಗಳಿಗೆ ಚಲನೆ ನೀಡಿ, ನಂತ್ರ ಬಲ ಮಗ್ಗಲಿಗೆ ಹೊರಳಿ ಆ ನಂತ್ರ ಕುಳಿತುಕೊಳ್ಳಬೇಕು.
ಅಗತ್ಯ ಔಷಧಗಳ ಪಟ್ಟಿಗೆ ಕೊರೊನರಿ ಸ್ಟಂಟ್: ಜನರಿಗೆ ಅಗ್ಗದ ದರದಲ್ಲಿ ಹೃದಯದ ಸ್ಟಂಟ್ ಲಭ್ಯ
ಶವಾಸನ ಮಾಡುವ ವೇಳೆ ಚಾಪೆ ಮುಖ್ಯ : ಯೋಗವನ್ನು ಯಾವಾಗ್ಲೂ ಯೋಗಕ್ಕಾಗಿಯೇ ಸಿದ್ಧವಾಗಿರುವ ಮ್ಯಾಟ್ ಮೇಲೆ ಮಾಡಬೇಕು. ಕೆಲವರು ಮೃದುವಾದ ಹಾಸಿಗೆ ಬಳಸ್ತಾರೆ. ಮತ್ತೆ ಕೆಲವರು ನೆಲದ ಮೇಲೆಯೇ ಶವಾಸನ ಮಾಡ್ತಾರೆ. ಇವೆರಡೂ ತಪ್ಪು. ಶವಾಸನ ಮಾಡುವ ವೇಳೆ ನೀವು ಸೂಕ್ತ ಮ್ಯಾಟ್ ಬಳಕೆ ಮಾಡಿದ್ರೆ ಹೆಚ್ಚು ಪ್ರಯೋಜನ ಪಡೆಯುತ್ತೀರಿ.