ಅಗತ್ಯ ಔಷಧಗಳ ಪಟ್ಟಿಗೆ ಕೊರೊನರಿ ಸ್ಟಂಟ್‌: ಜನರಿಗೆ ಅಗ್ಗದ ದರದಲ್ಲಿ ಹೃದಯದ ಸ್ಟಂಟ್ ಲಭ್ಯ

By Kannadaprabha News  |  First Published Nov 21, 2022, 7:16 AM IST

ಕೇಂದ್ರ ಆರೋಗ್ಯ ಸಚಿವಾಲಯವು ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ 2022ರಲ್ಲಿ ಕೊರೊನರಿ ಸ್ಟಂಟ್‌ಗಳನ್ನು ಸೇರ್ಪಡೆ ಮಾಡಿದೆ. ಇದರಿಂದಾಗಿ ಜೀವ ಉಳಿಸುವ ಈ ವೈದ್ಯಕೀಯ ಸಾಧನಗಳು ಜನರಿಗೆ ಅಗ್ಗದ ದರದಲ್ಲೇ ಲಭ್ಯವಾಗಲಿವೆ. 


ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ2022ರಲ್ಲಿ ಕೊರೊನರಿ ಸ್ಟಂಟ್‌ಗಳನ್ನು ಸೇರ್ಪಡೆ ಮಾಡಿದೆ. ಇದರಿಂದಾಗಿ ಜೀವ ಉಳಿಸುವ ಈ ವೈದ್ಯಕೀಯ ಸಾಧನಗಳು ಜನರಿಗೆ ಅಗ್ಗದ ದರದಲ್ಲೇ ಲಭ್ಯವಾಗಲಿವೆ. 

ಸೆ.13 ರಂದು ಕೇಂದ್ರ ಸರ್ಕಾರ (central government) ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಕ್ಯಾನ್ಸರ್‌ ಔಷಧಿ (cancer drugs), ಆ್ಯಂಟಿ ಬಯಾಟಿಕ್‌ (antibiotics) ಹಾಗೂ ಕೆಲ ಲಸಿಕೆಗಳು ಸೇರಿ 34 ಹೊಸ ಸೇರ್ಪಡೆ ಮಾಡಿದ್ದು, ಔಷಧಿಗಳ ರಾಷ್ಟ್ರೀಯ ಸ್ಥಾಯಿಯ ಸಮಿತಿಯ (National Standing Committee) ಶಿಫಾರಸು ಆಧರಿಸಿ ಈಗ ಜೀವ ರಕ್ಷಕ ಕೊರೊನರಿ ಸ್ಟಂಟ್‌ಗಳನ್ನು ಸೇರ್ಪಡೆ ಮಾಡಲು ಮುಂದಾಗಿದೆ.

Tap to resize

Latest Videos

ಸಮಿತಿಯು ನ. 6ರಂದು ಕೇಂದ್ರ ಸರ್ಕಾರಕ್ಕೆ ಬೇರ್‌ ಮೆಟಲ್‌ ಸ್ಟಂಟ್ಸ್‌ (ಬಿಎಂಎಸ್‌) (metal stents) ಹಾಗೂ ಡ್ರಗ್‌ ಎಲ್ಯುಟಿಂಗ್‌ ಸ್ಟಂಟ್ಸ್‌ (ಎಸ್‌ಎನ್‌ಸಿಎಂ)ಗಳನ್ನು ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡಿತ್ತು. ‘ಹೃದಯ ಸಂಬಂಧಿ ಕಾಯಿಲೆಗಳು (ಕೊರೊನರಿ ಆರ್ಟರಿ ಕಾಯಿಲೆ) ಹೆಚ್ಚುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ಸಾವಿಗೆ ಕಾರಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೊರೊನರಿ ಸ್ಟಂಟ್‌ಗಳ ಅಳವಡಿಕೆಯು ಜೀವ ಉಳಿಸಲು ಅಗತ್ಯವಾಗಿದ್ದಕ್ಕೆ ಇದನ್ನು ಅಗತ್ಯ ವಸ್ತುಗಳ ವಸ್ತುಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು’ ಎಂದು ಸಮಿತಿ ವರದಿ ನೀಡಿತ್ತು. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗುವುದರೊಂದಿಗೆ ಇನ್ನು ಕೊರೊನರಿ ಸ್ಟಂಟ್‌ಗಳ ಬೆಲೆಯನ್ನು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ನಿರ್ಧರಿಸಲಿದೆ. ಹೀಗಾಗಿ ಇನ್ನು ಅಗ್ಗದ ದರದಲ್ಲೇ ಸ್ಟಂಟ್‌ಗಳು ಜನರಿಗೆ ಲಭ್ಯವಾಗಲಿದೆ.

ಔಷಧಿ ತಿನ್ನೋಕೆ ಮಕ್ಕಳು ಅಳ್ತಾರಾ? ಇಲ್ಲಿದೆ ಸಿಂಪಲ್ ಟ್ರಿಕ್

ಮಕ್ಕಳಿಗೆ ಮನೆಯಲ್ಲಿರೋ ಔಷಧಿ ನೀಡುವ ಮುನ್ನ ಇರಲಿ ಎಚ್ಚರ

ಕ್ಯಾನ್ಸರ್‌, ಹೃದ್ರೋಗ ಸಂಬಂಧಿತ ಮೆಡಿಸಿನ್ ಸೇರಿ 384 ಜೀವರಕ್ಷಕ ಔಷಧಗಳು ಅಗ್ಗ


 

click me!