Beauty Tips : ಬಾಡಿದ ಗುಲಾಬಿ ಹೂವನ್ನು ಕಸಕ್ಕೆ ಎಸೆಯುವ ಮುನ್ನ ಇದನ್ನೋದಿ

By Suvarna NewsFirst Published Apr 22, 2022, 2:12 PM IST
Highlights

Beauty tips for women: ಬೊಕ್ಕೆ ರೂಪದಲ್ಲಿ ಅನೇಕರು ನಮಗೆ ಗುಲಾಬಿ ಹೂ ನೀಡಿರುತ್ತಾರೆ. ಇಲ್ಲವೆ ಮನೆಯಲ್ಲಿ ದೇವರ ಪೂಜೆಗೆ ರೋಸ್ ತಂದಿರುತ್ತೇವೆ. ಹೂ ಬಾಡಿದ ಮೇಲೆ ಅದನ್ನು ಎಸೆಯುತ್ತೇವೆ. ನೀವು ಪ್ರತಿ ದಿನ ಗುಲಾಬಿ ಹೂವನ್ನು ಕಸಕ್ಕೆ ಹಾಕ್ತಿದ್ದರೆ ಇನ್ಮುಂದೆ ಹಾಗೆ ಮಾಡ್ಬೇಡಿ. ಅದನ್ನು ಸಂಗ್ರಹಿಸಿ, ನಿಮ್ಮ ಸೌಂದರ್ಯ ವೃದ್ಧಿಸಿಕೊಳ್ಳಿ.
 

ಹೂವಿ (Flower) ನ ರಾಜ ಗುಲಾಬಿ (Rose) ಹೂವು. ಗುಲಾಬಿ ಹೂ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಪ್ರತಿಯೊಬ್ಬರೂ ಇಷ್ಟಪಡುವ ಹೂ ಅದು. ಅದ್ರ ಸೌಂದರ್ಯ (Beauty) ಹಾಗೂ ಪರಿಮಳ ಎರಡೂ ಮನಸ್ಸು ಸೆಳೆಯುತ್ತದೆ. ಪ್ರೀತಿಯ ಸಂಕೇತವಾಗಿ ಗುಲಾಬಿ ಹೂವನ್ನು ಬಳಸಲಾಗುತ್ತದೆ.  ಅಲಂಕಾರದ ವಿಷ್ಯಕ್ಕೆ ಬಂದಾಗಲೂ ಹೆಚ್ಚಿನ ಜನರ ಮೊದಲ ಆಯ್ಕೆ ಗುಲಾಬಿ ಹೂವುಗಳು.  ಸಾಮಾನ್ಯವಾಗಿ ಎಲ್ಲರ ಮನೆಯ ತೋಟದಲ್ಲೂ ಒಂದಾದ್ರೂ ಗುಲಾಬಿ ಗಿಡಬಿರುತ್ತದೆ. ಮನೆ ಹೊರಗೆ ಮಾತ್ರವಲ್ಲ ಮನೆ ಒಳಗೆ ಕೂಡ ಗುಲಾಬಿ ಹೂಗಳನ್ನು ಅಲಂಕಾರಕ್ಕೆ ಇಟ್ಟಿರುತ್ತಾರೆ. ಪ್ರತಿಯೊಂದು ಹೂವು ಮೊಗ್ಗೊಡೆದು ಅರಳಿದಾಗ ಸುಂದರವಾಗಿ ಕಾಣುತ್ತದೆ. ಬಾಡಿ, ದಳ ಒಣಗಲು ಶುರುವಾದಾಗ ಅದನ್ನು ಎಸೆಯುತ್ತೇವೆ. ಗುಲಾಬಿ ಹೂವಿನ ಎಸಳುಗಳು ಒಣಗಿದಾಗಲೂ ನಾವದನ್ನು ಎಸೆಯುತ್ತೇವೆ. ಆದ್ರೆ ಇನ್ಮುಂದೆ ಗುಲಾಬಿ ಹೂವಿನ ಎಸಳುಗಳನ್ನು ಕಸಕ್ಕೆ ಹಾಕಬೇಡಿ.  ಒಣಗಿದ ಗುಲಾಬಿ ಹೂವುಗಳನ್ನು ಶೇಖರಿಸಿಡುವ ಮೂಲಕ ಅವುಗಳನ್ನು ನಿಮ್ಮ ತ್ವಚೆಯ ಆರೈಕೆಗೆ ಬಳಸಬಹುದು.

ಗುಲಾಬಿ ದಳದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಕಾರ್ಬೋಹೈಡ್ರೇಟ್, ಫೈಬರ್, ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಕೆ  ಅಂಶಗಳು ಗುಲಾಬಿ ದಳಗಳಲ್ಲಿ ಹೇರಳವಾಗಿ ಇರುತ್ತವೆ. ಇವುಗಳನ್ನು ಆಂಟಿ-ಆಕ್ಸಿಡೆಂಟ್‌ಗಳ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಹಾಗಾಗಿಯೇ ಗುಲಾಬಿ ಹೂವು  ಚರ್ಮಕ್ಕೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇಂದು ಚರ್ಮಕ್ಕೆ ಉತ್ತಮವಾಗಿರುವ ಗುಲಾಬಿ ದಳಗಳನ್ನು ಹೇಗೆ ಸಂಗ್ರಹಿಸಬೇಕು ಹಾಗೂ ಹೇಗೆ ಬಳಸಬೇಕು ಎಂಬುದನ್ನು ಹೇಳ್ತೇವೆ.

ಸ್ಟ್ರೆಚಿಂಗ್ ವ್ಯಾಯಾಮ ಮಾಡೋದ್ರಿಂದ ಹೃದ್ರೋಗದ ಅಪಾಯ ಕಡಿಮೆಯಾಗುತ್ತದಾ ?

ಗುಲಾಬಿ ಹೂವಿನ ದಳಗಳನ್ನು ಹೀಗೆ ಸಂಗ್ರಹಿಸಿ : ಗುಲಾಬಿ ಹೂಗಳು ಒಣಗುತ್ತಿದ್ದರೆ  ಅದರ ದಳಗಳನ್ನು ಹಾಗೂ ಕಾಂಡಗಳನ್ನು ಪ್ರತ್ಯೇಕಿಸಿ. ಈಗ ಎಲ್ಲಾ ಹೂವಿನ ದಳಗಳನ್ನು ಶುದ್ಧ ನೀರಿನಲ್ಲಿ ತೊಳೆಯಿದಿ. ನಂತರ ಒಣಗಿಸಲು ಹತ್ತಿ ಬಟ್ಟೆಯ ಮೇಲೆ ಗುಲಾಬಿ  ಹೂವಿನ ದಳಗಳನ್ನು ಇರಿಸಿ. ನಾಲ್ಕೈದು ದಿನಗಳವರೆಗೆ ಗುಲಾಬಿ ಹೂವನ್ನು  ಹತ್ತಿ ಬಟ್ಟೆಯ ಮೇಲೆ ಅಥವಾ ಪ್ಲೇಟ್ ನಲ್ಲಿ ಹರಡಿರಿ. ಇದರಿಂದ ಗುಲಾಬಿ ದಳಗಳು ಗರಿಗರಿಯಾಗುತ್ತದೆ. ಆದರೆ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ನಂತರ ಗುಲಾಬಿ ದಳಗಳು ಒಣಗಿದ ನಂತರ, ಅವುಗಳನ್ನು ಪುಡಿ ಮಾಡಲು ಮತ್ತು ಗಾಜಿನ ಬಾಟಲಿಯಲ್ಲಿ ಹಾಕಿಡಿ. ಇದನ್ನು ಅನೇಕ ದಿನಗಳವರೆಗೆ ಹೀಗೆ ಸಂಗ್ರಹಿಸಬಹುದು.

ಗುಲಾಬಿ ದಳದ ಪುಡಿಯ ಬಳಕೆ : 

ತುಟಿಯ ಸೌಂದರ್ಯ ಹೆಚ್ಚಿಸುತ್ತೆ ಗುಲಾಬಿ ದಳ : ತುಟಿಗಳನ್ನು ಮೃದುಗೊಳಿಸಿ, ಅದ್ರ ಬಣ್ಣ ಗುಲಾಬಿಯಾಗ್ಬೇಕೆಂದ್ರೆ ನೀವು ಗುಲಾಬಿ ಹೂವಿನ ದಳವನ್ನು ತುಟಿಗೆ ಬಳಕೆ ಮಾಡ್ಬೇಕು. ಇದಕ್ಕಾಗಿ ಒಂದು ಚಮಚ ಗುಲಾಬಿ ಪುಡಿಯಲ್ಲಿ ಜೇನುತುಪ್ಪ ಅಥವಾ ಹಾಲಿನ ಕೆನೆಯನ್ನು ಮಿಕ್ಸ್ ಮಾಡಿ. ನಂತ್ರ ಅದನ್ನು ತುಟಿಗಳಿಗೆ ಹಚ್ಚಿಕೊಳ್ಳಿ. ಐದು ನಿಮಿಷಗಳ ಕಾಲ ತುಟಿಯನ್ನು ನಿಧಾನವಾಗಿ ಮಸಾಜ್ ಮಾಡಿ. 15 ನಿಮಿಷ ಹಾಗೆ ಬಿಟ್ಟು, ಶುದ್ಧ ನೀರಿನಿಂದ ಅದನ್ನು ತೊಳೆದುಕೊಳ್ಳಿ.

ಈ ರಕ್ತದ ಗುಂಪಿಗೆ ಹೃದಯಾಘಾತದ ಅಪಾಯ ಹೆಚ್ಚು, ನಿಮ್ಮ ಬ್ಲಡ್ ಗ್ರೂಪ್ ಯಾವುದು ?

ಚರ್ಮಕ್ಕೆ ಹೊಳಪು ನೀಡುತ್ತೆ ಗುಲಾಬಿ ದಳ : ಚರ್ಮಗಳು ಹೊಳೆಯಬೇಕೆಂದ್ರೆ ಗುಲಾಬಿ ಹೂವಿನ ಪುಡಿ ಅತ್ಯಂತ ಪರಿಣಾಮಕಾರಿ. ಒಂದು ಚಮಚ ಗುಲಾಬಿ ಹೂವಿನ ಪುಡಿಗೆ 2 ಚಮಚ ಹಾಲು ಮತ್ತು 1 ಚಮಚ ಕಡಲೆ ಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಇದನ್ನು ಮುಖಕ್ಕೆ ಹಚ್ಚಿ. 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಶುದ್ಧ ನೀರಿನಿಂದ ಮುಖವನ್ನು ತೊಳೆಯಿರಿ.

ಚರ್ಮದ ಸತ್ತ ಜೀವಕೋಶಗಳನ್ನು ತೆಗೆದುಹಾಕುವ ಮೂಲಕ ಚರ್ಮವನ್ನು ಮೃದುಗೊಳಿಸಲು ನೀವು ಗುಲಾಬಿ ಹೂವಿನ ಪುಡಿಯನ್ನು ಬಳಸಬಹುದು. ಇದಕ್ಕಾಗಿ 2 ಚಮಚ ಗುಲಾಬಿ ಹೂವಿನ ಪುಡಿ ಮತ್ತು 2 ಬಾದಾಮಿಯನ್ನು ಹಾಲಿನಲ್ಲಿ ನೆನೆಸಿಡಿ. 2 – 3 ನಿಮಿಷದ ನಂತ್ರ ರುಬ್ಬಿ, ಪೇಸ್ಟನ್ನು ಚರ್ಮಕ್ಕೆ ಹಚ್ಚಿ. 20 ನಿಮಿಷಗಳ ನಂತ್ರ ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ. 

ಕಲೆ ಮಂಗಮಾಯ : ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸಲು 1 ಚಮಚ ಗುಲಾಬಿ ಹೂವಿನ ಪುಡಿಗೆ 2 ಚಮಚ ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ. ಈಗ ಅದನ್ನು ಮುಖಕ್ಕೆ ಹಚ್ಚಿ ಮತ್ತು ಒಣಗಿದ ನಂತರ ಶುದ್ಧ ನೀರಿನಿಂದ ಮುಖವನ್ನು ತೊಳೆಯಿರಿ.  

click me!