ರೋಹಿತ್ ಶರ್ಮಾರಂತೆ ಹಣ್ಣು ತಿಂದು ತೂಕ ಇಳಿಸ್ಕೊಳ್ಳಿ

By Suvarna News  |  First Published Jan 12, 2023, 1:18 PM IST

ತೂಕ ಇಳಿಸಿಕೊಳ್ಳುವ ವಿಷ್ಯ ಬಂದಾಗ ನಾವು ವ್ಯಾಯಾಮಕ್ಕೆ ಮಾತ್ರ ಆದ್ಯತೆ ನೀಡ್ತೇವೆ. ನಾವೇನು ತಿನ್ನುತ್ತಿದ್ದೇವೆ ಎಂಬುದನ್ನು ಹೆಚ್ಚಾಗಿ ಗಮನಿಸೋದಿಲ್ಲ. ಹಣ್ಣು ತಿಂದ್ರೆ ತೂಕ ಏರುತ್ತೆ ಎನ್ನುವ ನಂಬಿಕೆಯಲ್ಲಿರೋರು ಇದ್ದಾರೆ. ಆದ್ರೆ ಸಕ್ಕರೆ ಕಡಿಮೆ ಇರುವ ಕೆಲ ಹಣ್ಣು ನಮ್ಮ ಬೊಜ್ಜನ್ನು ಬೇಗ ಕಡಿಮೆ ಮಾಡುತ್ತೆ ಗೊತ್ತಾ?
 


ಕ್ರಿಕೆಟರ್ ರೋಹಿತ್ ಶರ್ಮಾ ಹಳೆ ಸ್ಟೈಲ್ ನಲ್ಲಿ ವಾಪಸ್ ಆಗಿದ್ದಾರೆ. ತೂಕ ಏರಿಸ್ಕೊಂಡು ಟ್ರೋಲ್ ಆಗಿದ್ದ ಶರ್ಮಾ ಸ್ಲಿಮ್ ಹಾಗೂ ಫಿಟ್ ಆಗಿ ಮೈದಾನಕ್ಕಿಳಿದಿದ್ದಾರೆ. ಶರ್ಮಾ ಫಿಟ್ನೆಸ್ ಜನಸಾಮಾನ್ಯರಿಗೆ ಮಾದರಿಯಾಗ್ಬೇಕಿದೆ. ದಪ್ಪಗಿರುವ ಪ್ರತಿಯೊಬ್ಬ ವ್ಯಕ್ತಿ ಕೂಡ ಸಣ್ಣಗಾಗಬೇಕೆಂದ ಆಸೆ ಹೊಂದಿರುತ್ತಾನೆ. ಅತಿ ಶೀಘ್ರದಲ್ಲಿ ಸ್ಥೂಲಕಾಯ ಸಮಸ್ಯೆಯಿಂದ ಹೊರಗೆ ಬರಬೇಕೆಂದು ಬಯಸ್ತಾನೆ. 

ಬೊಜ್ಜು (Obesity) ಹೆಚ್ಚಾಗ್ತಿದೆ ಎಂದ ತಕ್ಷಣ ಅದಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕಾಗುತ್ತದೆ. ಅತಿಯಾದ್ಮೇಲೆ ತೂಕ (Weight) ಇಳಿಸೋದು ಸುಲಭವಲ್ಲ. ಆರಂಭದಲ್ಲಿಯೇ ನೀವು ಆರೋಗ್ಯ (Health) ಮತ್ತು ತೂಕದ ಬಗ್ಗೆ ಗಮನ ನೀಡಿದ್ರೆ ನಂತ್ರ ಸಮಸ್ಯೆ ಕಾಡೋದಿಲ್ಲ. ಆರೋಗ್ಯ ಹದಗೆಡುವುದಿಲ್ಲ. ತೂಕ ನಷ್ಟಕ್ಕೆ ನಿಯಮಿತ ದೈಹಿಕ ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರವು ತುಂಬಾ ಮುಖ್ಯವಾಗಿದೆ. ರಾತ್ರೋರಾತ್ರಿ ಬೊಜ್ಜು ಕಡಿಮೆ ಮಾಡಲು ಯಾವುದೇ ಮಂತ್ರ ಯಾರ ಬಳಿಯೂ ಇಲ್ಲ. ಇದಕ್ಕೆ ಪರಿಶ್ರಮ ಬಹಳ ಮುಖ್ಯ. ಆದ್ರೆ ಕೆಲವೊಂದು  ಮಾರ್ಗಗಗಳಿವೆ. ಅವು ನಿಮ್ಮ ತೂಕವನ್ನು ಇಳಿಸಲು ನಿಮಗೆ ಸಹಾಯ ಮಾಡುತ್ತವೆ. ಅದ್ರಲ್ಲಿ ಹಣ್ಣುಗಳು ಸೇರಿವೆ.  ಕೆಲ ಹಣ್ಣುಗಳು ತೂಕ ನಷ್ಟಕ್ಕೆ ಹೆಚ್ಚು ಪರಿಣಾಮಕಾರಿಯಾಗಿದೆ. ನಾವಿಂದು ರೋಹಿತ್ ಶರ್ಮಾ ಫಿಟ್ನೆಸ್ ಗೆ ಕಾರಣವಾದ ಹಣ್ಣುಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಜಸ್ಟ್ ಒನ್ ಪೆಗ್ ಕುಡಿದ್ರೆ ಏನಾಗಲ್ಲ ಅನ್ಬೇಡಿ, ಕಡಿಮೆ ಅಲ್ಕೋಹಾಲ್ ಸೇವನೆಯೂ ಕ್ಯಾನ್ಸರ್‌ಗೆ ಕಾರಣವಾಗುತ್ತೆ !

Tap to resize

Latest Videos

ರೋಹಿತ್ ಶರ್ಮಾ ಫಿಟ್ನೆಸ್ ರಹಸ್ಯ :

ತೂಕ ಇಳಿಸುತ್ತೆ ಕಿತ್ತಳೆ ಹಣ್ಣು (Orange) : ತೂಕ ಕಡಿಮೆ ಮಾಡಿಕೊಳ್ಳಲು ನೀವು ಕಡಿಮೆ ಕ್ಯಾಲೋರಿ ಆಹಾರ ಸೇವನೆ ಮಾಡ್ಬೇಕು. ಇದ್ರ ಜೊತೆಗೆ ಪ್ರತಿದಿನ 500 ಮಿಲಿ ಕಿತ್ತಳೆ ರಸ ಸೇವಿಸಬೇಕು. ಇದು ತೂಕ ಇಳಿಸಲು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ವರದಿಗಳು ಹೇಳಿವೆ. ಜ್ಯೂಸ್ ಬದಲಿಗೆ ಪ್ರತಿದಿನ ಎರಡು ಕಿತ್ತಳೆ ಹಣ್ಣನ್ನು ಕೂಡ ನೀವು ಸೇವನೆ ಮಾಡ್ಬಹುದು ಎನ್ನುತ್ತಾರೆ ತಜ್ಞರು. ಕಿತ್ತಳೆ ಹಣ್ಣುಗಳಲ್ಲಿ ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ತೂಕವನ್ನು ಇಳಿಸಲು ಸಹಕಾರಿಯಾಗಿದೆ.  

ದಿನಕ್ಕೆರಡು ಸೇಬು (Apple) ತಿನ್ನಿ ತೂಕ ಇಳಿಸ್ಕೊಳ್ಳಿ : ದಿನಕ್ಕೊಂದು ಸೇಬು ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದು ಎಂದು ವೈದ್ಯರೇ ಹೇಳ್ತಾರೆ. ಈ ಸೇಬು ಆರೋಗ್ಯ ವೃದ್ಧಿಸುವ ಜೊತೆಗೆ ನಿಮ್ಮ ತೂಕವನ್ನು ಕೂಡ ಕಡಿಮೆ ಮಾಡುತ್ತದೆ. ಇದು ಬೊಜ್ಜು ವಿರೋಧಿ ಗುಣವನ್ನು ಹೊಂದಿದೆ. ಕಡಿಮೆ ಕ್ಯಾಲೋರಿ ಇರುವ ಸೇಬು ಹೆಚ್ಚಿನ ಫೈಬರ್ ಹೊಂದಿದೆ. ಸೇಬು ಹಣ್ಣಿನಲ್ಲಿ ಪಾಲಿಫಿನಾಲ್‌ಗಳಿವೆ. ದಿನಕ್ಕೆ ನೀವು ಎರಡು ಸೇಬು ಹಣ್ಣನ್ನು ತಿನ್ನುವುದ್ರಿಂದ ನಿಮ್ಮ ತೂಕ ಬೇಗ ಇಳಿಯುತ್ತದೆ ಎನ್ನುತ್ತಾರೆ ತಜ್ಞರು. 

ಕೊಬ್ಬು (Cholesterol) ಕಡಿಮೆ ಮಾಡುತ್ತೆ ದಾಳಿಂಬೆ : ದಾಳಿಂಬೆ ಹಣ್ಣು ರಕ್ತ ಹೆಚ್ಚಿಸುವ ಗುಣವನ್ನು ಹೊಂದಿದೆ. ಹಾಗೆಯೇ ಇದ್ರ ಸೇವನೆ ಮಾಡೋದ್ರಿಂದ ತೂಕ ಇಳಿಯುತ್ತದೆ. ದಾಳಿಂಬೆ ಹಣ್ಣಿನಲ್ಲಿ ಪಾಲಿಫಿನಾಲ್‌ಗಳು ಮತ್ತು ಫ್ಲೇವನಾಯ್ಡ್  ಇದೆ. ಇದು ಆಂಥೋಸಯಾನಿನ್‌ಗಳು, ಟ್ಯಾನಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.  

ನಿಮ್ಮನ್ನು ಸ್ಲಿಮ್ ಮಾಡುತ್ತೆ ಪಪ್ಪಾಯ (Papaya) : ಪ್ರತಿ ದಿನ ಬೆಳಿಗ್ಗೆ ಒಂದು ಕಪ್ ಪಪ್ಪಾಯ ಸೇವನೆ ಮಾಡಿದ್ರೆ ಸಾಕು. ನಿಮ್ಮ ಡಯಟ್ ನಲ್ಲಿ ಸದಾ ಪಪ್ಪಾಯ ಹಣ್ಣು ಇರುವಂತೆ ನೋಡಿಕೊಳ್ಳಿ. ಪಪ್ಪಾಯ ಜ್ಯೂಸ್ ಕೂಡ ನೀವು ಸೇವನೆ ಮಾಡಬಹುದು. ಇದು ಸ್ಥೂಲಕಾಯ ವಿರೋಧಿ ಗುಣಗಳನ್ನು ಹೊಂದಿದೆ.  ಪಪ್ಪಾಯ, ವಿವಿಧ ಸ್ಥಳಗಳಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತದೆ. 

Skeletal fluorosis : ಚಹಾ ಚಟ ಹೆಚ್ಚಾದ್ರೆ ಈ ಗಂಭೀರ ಕಾಯಿಲೆಗೆ ಬಲಿಯಾಗಬೇಕು ಹುಷಾರ್ !

ತೂಕ ಹೆಚ್ಚು ಮಾಡುತ್ತೆ ಈ ಹಣ್ಣು : ನೈಸರ್ಗಿಕವಾಗಿ ಸಕ್ಕರೆ ಹೊಂದಿರುವ ಹಣ್ಣುಗಳನ್ನು ಯಾವಾಗ್ಲೂ ಸೇವನೆ ಮಾಡ್ಬಾರದು. ಇದು ತೂಕವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಸಕ್ಕರೆ ಹೆಚ್ಚಿರುವ ಚಿಕ್ಕು ಹಣ್ಣು, ಪೇರಲೆ ಹಣ್ಣು ಹಾಗೂ ಮಾವಿನ ಹಣ್ಣನ್ನು ಮಿತವಾಗಿ ಸೇವನೆ ಮಾಡಿ. 
 

click me!