HIV ಸೋಂಕಿಗೆ ಸಿಕ್ತು ಔಷಧಿ?: ಏನಿದು ಲೇಸರ್ ಆರ್ಟ್?

By Web DeskFirst Published Jul 4, 2019, 6:48 PM IST
Highlights

ಮಾರಕ ಏಡ್ಸ್ ರೋಗಕ್ಕೆಔಷಧಿ ಸಿಗುವ ದಿನ ದೂರವಿಲ್ಲ| ಏಡ್ಸ್ ರೋಗಕ್ಕೆ ಮದ್ದು ಸಿಗುವ ಲಕ್ಷಣ ಗೋಚರ| HIV ಸೋಂಕು ಇರುವ ಇಲಿಯ DNAಗೆ ಯಶಸ್ವಿ ಶಸ್ತ್ರ ಚಿಕಿತ್ಸೆ| ಜಾಗತಿಕವಾಗಿ ಸುಮಾರು 37 ಮಿಲಿಯನ್ ಜನರಿಗೆ HIV ಸೋಂಕು| ಲೇಸರ್ ಆರ್ಟ್ ಚಿಕಿತ್ಸೆ ಮೂಲಕ DNAದಿಂದ HIV ಸೋಂಕು ಹೊರ ತೆಗೆದ ಸಂಶೋಧಕರು|

ಬೆಂಗಳೂರು(ಜು.04): ಮಾರಕ ಏಡ್ಸ್ ರೋಗ ಬಂತೆಂದರೆ ಅದು ಮೃತ್ಯುವಿನ ಆಹ್ವಾನ ಎಂತಲೇ ಭಾವಿಸಬೇಕು. ಕಾರಣ HIV ಸೋಂಕಿಗೆ ಇದುವರೆಗೂ ಔಷಧಿ ಕಂಡು ಹಿಡಿಯಲು ವೈದ್ಯ ಲೋಕಕ್ಕೆ ಸಾಧ್ಯವಾಗಿಲ್ಲ.

ಆದರೆ ಇದೀಗ ಮಾರಕ ಏಡ್ಸ್ ರೋಗಕ್ಕೆ ಮದ್ದು ಸಿಗುವ ಲಕ್ಷಣ ಗೋಚರವಾಗುತ್ತಿದ್ದು, HIV ಸೋಂಕು ಇರುವ ಇಲಿಯ DNAದಿಂದ ಸೋಂಕನ್ನು ಯಶಶ್ವಿಯಾಗಿ ತೆಗೆಯುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ.

ವರದಿಯೊಂದರ ಪ್ರಕಾರ ಜಾಗತಿಕವಾಗಿ ಸುಮಾರು 37 ಮಿಲಿಯನ್ ಜನ ಏಡ್ಸ್ ರೋಗದಿಂದ ಬಳಲುತ್ತಿದ್ದು, ಈ ನೂತನ ಸಂಶೋಧನೆಯಿಂದ ಭರವಸೆಯ ಬೆಳಕೊಂದು ಏಡ್ಸ್ ರೋಗಿಗಳಿಗೆ ದೊರಕಿದಂತಾಗಿದೆ. 

ಲೇಸರ್ ಆರ್ಟ್ ಮೂಲಕ HIV ಸೋಂಕಿತ ಇಲಿಯ ಮೇಲೆ ಸಂಶೋಧನೆಯನ್ನು ಪ್ರಯೋಗ ಮಾಡಲಾಗಿದ್ದು, ಇಲಿಯ DNAದಿಂದ HIV ಸೋಂಕನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ.

ಈ ಪ್ರಯೋಗ ಸಂಪೂರ್ಣ ಯಶಸ್ವಿಯಾದರೆ ಮುಮದಿನ ದಿನಗಳಲ್ಲಿ ಮಾನವರ ದೇಹದಿಂದಲೂ HIV ಸೋಂಕನ್ನು ಯಶಸ್ವಿಯಾಗಿ ತೆಗೆಯಬಹುದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
 

click me!