ಕ್ಯಾನ್ಸರ್‌ ಪೀಡಿತನ ದೇಹದ ಭಾಗ ಬಳಸಿ ಹೊಸ ಜನನಾಂಗ ಸೃಷ್ಟಿ, ಯಶಸ್ವೀ ಅಳವಡಿಕೆ

By Kannadaprabha News  |  First Published Mar 1, 2023, 9:43 AM IST

ವೈದ್ಯಕೀಯ ಲೋಕ ಒಂದು ಅಚ್ಚರಿಯ ಆಗರವೇ ಸರಿ. ಅಸಾಧ್ಯವೆಂದು ಅಂದುಕೊಂಡ ಅದೆಷ್ಟೋ ವಿಚಾರಗಳನ್ನು ವೈದ್ಯರು ಸಾಧಿಸಿಬಿಡುತ್ತಾರೆ. ಹಾಗೆಯೇ ರಾಜಸ್ಥಾನದಲ್ಲಿ ವೈದ್ಯರು ಕ್ಯಾನ್ಸರ್‌ ಪೀಡಿತನ ಜನನಾಂಗ ತೆಗೆದು, ಹೊಸದಾಗಿ ಅಳವಡಿಕೆ ಮಾಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 


ಜೈಪುರ: ಕ್ಯಾನ್ಸರ್‌ಗೆ ತುತ್ತಾಗಿದ್ದ 72 ವರ್ಷದ ವ್ಯಕ್ತಿಯೊಬ್ಬರ ಜನನಾಂಗವನ್ನು ತೆಗೆದುಹಾಕಿರುವ ವೈದ್ಯರ ತಂಡ, ಬಳಿಕ ಕೈನ ಚರ್ಮ, ರಕ್ತನಾಳ ಮತ್ತ ನರವನ್ನು ಬಳಸಿ ಹೊಸ ಜನನಾಂಗ ರೂಪಿಸಿ ಅದನ್ನು ಯಶಸ್ವಿಯಾಗಿ ಅಳವಡಿಸಿದ್ದಾರೆ. 5 ವೈದ್ಯರನ್ನು ಒಳಗೊಂಡ 11 ವೈದ್ಯಕೀಯ ಸಿಬ್ಬಂದಿ ತಂಡ ಸತತ 8 ಗಂಟೆಗಳ ಕಾಲ ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ. ರಾಜಸ್ಥಾನದಲ್ಲಿ ಹೀಗೆ ಕೈನ ಚರ್ಮ, ನರ ಮತ್ತು ರಕ್ತನಾಳ ಬಳಸಿ ಹೊಸ ಜನನಾಂಗ ರಚಿಸಿದ ಮೊದಲ ಉದಾಹರಣೆ ಇದು ವೈದ್ಯರ ತಂಡ ಹೇಳಿದೆ.

72 ವರ್ಷ ವ್ಯಕ್ತಿಯೊಬ್ಬರ ಜನನಾಂಗಕ್ಕೆ ಕ್ಯಾನ್ಸರ್‌ ತಗುಲಿತ್ತು. ಅವರ ಜೀವ ಉಳಿಸಲು ಜನನಾಂಗವನ್ನು (Genital) ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬೇಕಿತ್ತು. ಆದರೆ ಇದರಿಂದ ಸಾಮಾನ್ಯ ಜೀವನಕ್ಕೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಆ ವ್ಯಕ್ತಿ ಶಸ್ತ್ರಚಿಕಿತ್ಸೆಗೆ (Operation) ಒಪ್ಪಿರಲಿಲ್ಲ. ಆದರೆ ಭಗವಾನ್‌ ಮಹಾವೀರ್‌ ಕ್ಯಾನ್ಸರ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರ ಭರವಸೆ ಬಳಿಕ ವೃದ್ಧರು ಚಿಕಿತ್ಸೆಗೆ (Treatment) ಸಮ್ಮತಿಸಿದ್ದರು.

Tap to resize

Latest Videos

ಪೋನ್‌ನಲ್ಲಿ ಮಾತಾಡ್ಬೇಡ ಅಂದಿದ್ದೆ ತಪ್ಪಾಯ್ತು..ಗಂಡನ ಖಾಸಗಿ ಅಂಗವನ್ನೇ ಕತ್ತರಿಸಿದ ಪತ್ನಿ!

ಅದರಂತೆ ಮೊದಲಿಗೆ ವೃದ್ಧರ ಜನನಾಂಗವನ್ನು ಕತ್ತರಿಸಿ ತೆಗೆಯಲಾಯಿತು. ನಂತರ ಪ್ಲಾಸ್ಟಿಕ್‌ ಮತ್ತು ಮರು ನಿರ್ಮಾಣದ ತಜ್ಞ ವೈದ್ಯರ ತಂಡ ಜನನಾಂಗವನ್ನು ಮರುಸೃಷ್ಟಿಸುವ ಕೆಲಸ ಮಾಡಿತು. ಇದಕ್ಕಾಗಿ ವೃದ್ಧ ವ್ಯಕ್ತಿಯ ಕೈನ ಚರ್ಮ, ನರ ಮತ್ತು ರಕ್ತನಾಳವನ್ನು ಬಳಸಿಕೊಳ್ಳಲಾಯಿತು. ಹೀಗೆ ವ್ಯಕ್ತಿಯ ದೇಹದ ಭಾಗವನ್ನೇ (Body part) ಬಳಸಿಕೊಂಡು ಸೃಷ್ಟಿಸಿದ ಜನನಾಂಗವನ್ನು ಕತ್ತರಿಸಿದ ಜಾಗಕ್ಕೆ ಜೋಡಿಸಲಾಯಿತು.

ಶಸ್ತ್ರಚಿಕಿತ್ಸೆ ಬೆನ್ನಲ್ಲೇ ಹೊಸದಾಗಿ ರಚಿಸಿದ ಜನನಾಂಗಕ್ಕೆ ರಕ್ತದ ಹರಿವು ಆರಂಭವಾಯಿತು. ಜನನಾಂಗವು ಸೂಕ್ತ ರೂಪ, ಉದ್ದ ಹೊಂದಿರಲಿ, ಮೂತ್ರನಾಳವು ಸೂಕ್ತ ರೂಪದಲ್ಲಿರಬೇಕು ಮತ್ತು ಅದು ಸಂವೇದನೆ ಹೊಂದಿರಬೇಕು ಎನ್ನುವ ಕಾರಣಕ್ಕಾಗಿ ಅದರ ಮರುರಚನೆ ಮಾಡಲಾಯಿತು ಎಂದು ವೈದ್ಯರ ತಂಡ ಹೇಳಿದೆ.

ಉತ್ತರ ಪ್ರದೇಶದಲ್ಲಿ ಭೀಕರ ಘಟನೆ, ಟೈಲರ್‌ನ ಮರ್ಮಾಂಗವನ್ನೇ ಕತ್ತರಿಸಿದ ತೃತೀಯ ಲಿಂಗಿಗಳು!

‘ಕ್ಯಾನ್ಸರ್‌ಗೆ ತುತ್ತಾದ ಜನನಾಂಗ ತೆಗೆಯುವುದು ಮತ್ತು ಹೊಸ ಜನನಾಂಗ ಅಳವಡಿಸುವ ಎರಡೂ ಪ್ರಕ್ರಿಯೆ ಒಂದೇ ಸಮಯದಲ್ಲಿ ಆಗಬೇಕಿದ್ದ ಕಾರಣ, ಇದು ಕ್ಲಿಷ್ಟಕರವಾಗಿತ್ತು. ಆದರೆ ತಜ್ಞ ವೈದ್ಯರ ತಂಡ ಈ ಪ್ರಕ್ರಿಯೆಯನ್ನು 8 ಗಂಟೆಗಳಲ್ಲಿ ಯಶಸ್ವಿಯಾಗಿ ಪೂರೈಸಿದೆ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಪಟ್ಟವ್ಯಕ್ತಿ ಮುಂದೆ ಸಾಮಾನ್ಯ ಜೀವನ ನಡೆಸಬಹುದು’ ಎಂದು ವೈದ್ಯ ಡಾ.ಪ್ರಶಾಂತ್‌ ಶರ್ಮಾ ತಿಳಿಸಿದ್ದಾರೆ.

click me!