
ನವದೆಹಲಿ: ಸಿಕಲ್ ಸೆಲ್ ಅನೀಮಿಯಾ (ಕುಡಗೋಲು ಕಣ ರಕ್ತ ಹೀನತೆ) ಸಮಸ್ಯೆಯನ್ನು ಅತ್ಯಂತ ಸುಲಭ ಮತ್ತು ಕ್ಷಿಪ್ರವಾಗಿ ಪತ್ತೆಹಚ್ಚುವ ವ್ಯವಸ್ಥೆಯನ್ನು ಬೆಂಗಳೂರು ಮೂಲದ ಷಣ್ಮುಕ ಇನ್ನೋವೇಷನ್ ಎಂಬ ಐಐಎಸ್‌ಸಿ ಪೋಷಿತ ಸ್ಟಾರ್ಟಪ್ ಅಭಿವೃದ್ಧಿಪಡಿಸಿದೆ. ಇದು ದೇಶದಲ್ಲೇ ಇಂಥ ಮೊದಲ ಟೆಸ್ಟ್ ಕಿಟ್ ಎಂಬ ಹೆಗ್ಗಳಿಕೆ ಹೊಂದಿದೆ. ಈ ಕಿಟ್ ಅನ್ನು ಸೋಮವಾರ ಅನಾವರಣಗೊಳಿಸಲಾಯಿತು.
ಹೈ ಫರ್ಮಾಮೆನ್ಸ್ ಆಪ್ಟಿಕಲ್ ಸ್ಪೆಕ್ಟ್ರೋಸ್ಕೋಪಿ (ಎಪ್‌ಪಿಒಎಸ್) ಎಂದು ಹೆಸರಿಸಲಾಗಿರುವ ತಂತ್ರಜ್ಞಾನವು, ಒಂದು ಟೆಸ್ಟ್ ಕಿಟ್, ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾದ ಅನಲೈಜರ್ ಅನ್ನು ಒಳಗೊಂಡಿದೆ. ಒಂದು ಸಣ್ಣ ಹನಿ ರಕ್ತದ ಮಾದರಿಯನ್ನು ಬಳಸಿಕೊಂಡು ಕೇವಲ 15 ನಿಮಿಷದಲ್ಲಿ ವ್ಯಕ್ತಿಯೊಬ್ಬ ಸಿಕಲ್ ಸೆಲ್ ಅನೀಮಿಯಕ್ಕೆ ತುತ್ತಾಗಿದ್ದಾನೆಯೇ? ಇಲ್ಲವೇ? ಎಂಬುದನ್ನು ಈ ಕಿಟ್ ಖಚಿತಪಡಿಸುತ್ತದೆ. ಪ್ರತಿ ಕಿಟ್ ಬಳಸಿ ಒಂದು ಗಂಟೆಯಲ್ಲಿ 40 ಜನರ ರಕ್ತ ತಪಾಸಣೆ ಮಾಡಬಹುದಾಗಿದೆ.
ಕೆಮ್ಮು, ಶೀತವಿದ್ದರೆ ಜ್ವರದ ಸೂಚನೆಯೇ ಆಗಿರಬೇಕೆಂದಿಲ್ಲ, ಮತ್ತೇನು ?
ಏನಿದು ಕಾಯಿಲೆ ?
ಸಿಕಲ್ ಸೆಲ್ ಅನೀಮಿಯಾ ಎಂಬುದು ಒಂದು ವಂಶವಾಹಿ ಕಾಯಿಲೆ. ಇದು ಪೋಷಕರಿಂದ ಮಕ್ಕಳಿಗೆ ವರ್ಗಾವಣೆಯಾಗುತ್ತದೆ. ಈ ಸಮಸ್ಯೆಗೆ ತುತ್ತಾದವರ ದೇಹದ ಕೆಂಪು ರಕ್ತ ಕಣಗಳಲ್ಲಿನ ವಂಶವಾಹಿಗಳು ದೋಷಪೂರಿತವಾಗಿರುತ್ತದೆ. ಹೀಗಾಗಿ ಇವು ಬೇಗ ಸಾಯುವ ಕಾರಣ, ಕೆಂಪು ರಕ್ತಕಣಗಳ ಕೊರತೆ ಉಂಟಾಗುತ್ತದೆ. ಹೀಗಾಗಾದ ರಕ್ತಕಣದಲ್ಲಿನ ಹಿಮೋಗ್ಲೋಬಿನ್ ದೇಹದ ಎಲ್ಲಾ ಭಾಗಗಳಿಗೆ ಅಗತ್ಯ ಪ್ರಮಾಣದ ಆಮ್ಲಜನಕ ಪೂರೈಸಲು ಸಾಧ್ಯವಾಗುವುದಿಲ್ಲ.
ಇಂಥ ವೇಳೆ ಕಾಯಿಲೆಗೆ ತುತ್ತಾದ ವ್ಯಕ್ತಿ ನಾನಾ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಜೊತೆಗೆ ಹೀಗೆ ದೋಷ ಪೂರಿತವಾಗಿರುವ ಕೆಂಪು ರಕ್ತ ಕಣಗಳು ರಕ್ತನಾಳದಲ್ಲಿ ಅಲ್ಲಲ್ಲಿ ಗುಂಪುಗೂಡಿ, ರಕ್ತದ ಸರಾಗ ಅರವಿಗೆ ಅಡ್ಡಿ ಮಾಡುತ್ತದೆ. ಇದರಿಂದಲೂ ವ್ಯಕ್ತಿ ಸಮಸ್ಯೆ ಎದುರಿಸಬೇಕಾಗಿ ಬರುತ್ತದೆ. ದೋಷ ಪೂರಿತ ಕೆಂಪು ರಕ್ತ ಕಣಗಳು ಸಿ ಅಂದರೆ ಕುಡಗೋಲಿನ ಆಕಾರ ಪಡೆದುಕೊಳ್ಳುವ ಕಾರಣ, ಇದಕ್ಕೆ ಕುಡಗೋಲು ಕಣ ರಕ್ತಹೀನತೆ ಎಂದು ಕರೆಯಲಾಗುತ್ತದೆ.
ಕೆಮ್ಮಿದಾಗ ಕಫ ಬರೋದು ಕಾಮನ್, ಆದರೆ ಆ ಕಫ ಗಂಭೀರ ಅನಾರೋಗ್ಯದ ಸೂಚಕವಾಗಿರಬಹುದು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.