Health Tips : ಗ್ಯಾಸ್ ಸಮಸ್ಯೆಯಿಂದ ತಲೆನೋವು ಬರ್ತಿದ್ಯಾ? ಇಲ್ಲಿದೆ ಮನೆ ಮದ್ದು

Published : Apr 22, 2022, 04:42 PM IST
Health Tips :  ಗ್ಯಾಸ್ ಸಮಸ್ಯೆಯಿಂದ ತಲೆನೋವು ಬರ್ತಿದ್ಯಾ? ಇಲ್ಲಿದೆ ಮನೆ ಮದ್ದು

ಸಾರಾಂಶ

ಬೆಳಿಗ್ಗೆಯಿಂದ ರಾತ್ರಿಯವರೆಗೆ ಏನೂ ಆಹಾರ ಸೇವನೆ ಮಾಡದೆ ಹೋದ್ರೆ ತಲೆ ನೋವು ಶುರುವಾಗುತ್ತದೆ. ಗ್ಯಾಸ್ಟ್ರಿಕ್ ನಿಂದ ತಲೆನೋವು ಬಂತು ಎಂಬುದು ಬಹುತೇಕರಿಗೆ ತಿಳಿಯುತ್ತದೆ. ಆದ್ರೆ ಅದಕ್ಕೆ ಪರಿಹಾರವೇನು ಎಂಬುದು ಗೊತ್ತಿರುವುದಿಲ್ಲ.   

ನಮ್ಮ ದೇಹ (Body) ದ ಪ್ರತಿಯೊಂದು ಅಂಗವೂ ಒಂದಕ್ಕೊಂದು ಸಂಬಂಧ ಹೊಂದಿದೆ ಎಂಬುದು ನಿಮಗೆಲ್ಲ ಗೊತ್ತು. ಹಾಗೆ ಹೊಟ್ಟೆ (Stomach) ಮತ್ತು ಕರುಳು, ಮೆದುಳಿ (Brain ) ನ ಜೊತೆ ಸಂಬಂಧ ಹೊಂದಿದೆ. ಹೊಟ್ಟೆಯಲ್ಲಿರುವ ಸಮಸ್ಯೆ ತಲೆ (Head)ಯಲ್ಲಿ ಕಾಣಿಸಿಕೊಳ್ಳುವುದಿದೆ. ಅಂದ್ರೆ ಜಠರದಲ್ಲಿರುವ ಸಮಸ್ಯೆ ಕೆಲವರಿಗೆ ತಲೆನೋವಿನ ರೂಪದಲ್ಲಿ ಕಾಣಿಸಿಕೊಳ್ಳುವುದಿದೆ. ಈ ತಲೆ ನೋವನ್ನು ಗ್ಯಾಸ್ಟ್ರಿಕ್ ( gastric )ತಲೆನೋವು ಎಂದು ಕರೆಯುತ್ತಾರೆ. ಹೊಟ್ಟೆಯಲ್ಲಿ ಗ್ಯಾಸ್, ಕರುಳಿನ ಕಾಯಿಲೆ, ಅಲ್ಸರ್, ಮಲಬದ್ಧತೆ, ದೀರ್ಘ ಸಮಯದವರೆಗೆ ಖಾಲಿ ಹೊಟ್ಟೆಯಲ್ಲಿರುವವರಿಗೆ, ಕರುಳಿನಲ್ಲಿ ಬ್ಯಾಕ್ಟೀರಿಯಾದ ಸೋಂಕು ಇರುವವರಿಗೆ ತಲೆ ನೋವು ಕಾಣಿಸಿಕೊಳ್ಳುತ್ತದೆ ಎಂದು ಸಂಶೋಧನೆ ವರದಿಯಲ್ಲಿ ಹೇಳಲಾಗಿದೆ. ಸಾಮಾನ್ಯವಾಗಿ ಹೊಟ್ಟೆ ಸಮಸ್ಯೆಯಿಂದ ಕಾಣಿಸಿಕೊಳ್ಳುವ ತಲೆ ನೋವು ತೀವ್ರವಾಗಿರುತ್ತದೆ. ಮೈಗ್ರೇನ್ ರೂಪದಲ್ಲಿಯೂ ಕಾಣಿಸಿಕೊಳ್ಳುತ್ತದೆ. ವಿಪರೀತ ತಲೆ ನೋವಿನ ಜೊತೆಗೆ ಹೊಟ್ಟೆ ನೋವು, ಮಲಬದ್ಧತೆ, ಕೆಲವೊಮ್ಮೆ ವಾಕರಿಕೆ ಅಥವಾ ವಾಂತಿ ಕಾಣಿಸಿಕೊಳ್ಳುವುದಿದೆ. ಗ್ಯಾಸ್ ನಿಂದ ಕಾಡುವ ತಲೆ ನೋವನ್ನು ಅನುಭವಿಸುವುದು ಕಷ್ಟ. ನಿಮಗೂ ಗ್ಯಾಸ್ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ತಲೆ ನೋವು, ಮೈಗ್ರೇನ್ ಕಾಡಿದ್ರೆ ನೀವು ಮನೆ ಮದ್ದು ಮಾಡಬಹುದು. ಇಂದು ಗ್ಯಾಸ್ ನಿಂದ ಕಾಡುವ ತಲೆನೋವಿಗೆ ಯಾವ ಮನೆ ಮದ್ದು ಸೂಕ್ತ ಎಂಬುದನ್ನು ನಾವು ಹೇಳ್ತೇವೆ.

ಗ್ಯಾಸ್ ನಿಂದ ಕಾಡುವ ತಲೆ ನೋವಿಗೆ ಮದ್ದು : 
ಐಸ್ ಕ್ಯೂಬ್ :
ಗ್ಯಾಸ್‌ನಿಂದಾಗಿ ನಿಮಗೆ ತಲೆನೋವು ಕಾಣಿಸಿಕೊಂಡಿದ್ದರೆ ಅದನ್ನು ಐಸ್ ಕ್ಯೂಬ್ ಗಳು ಕಡಿಮೆ ಮಾಡುವ ಸಾಧ್ಯತೆಯಿದೆ. ಮೊದಲು ಕೆಲವು ಐಸ್ ಕ್ಯೂಬ್‌ಗಳನ್ನು ತೆಗೆದುಕೊಳ್ಳಿ. ಅದನ್ನು ಟವೆಲ್‌ನಲ್ಲಿ ಸುತ್ತಿ 15 ನಿಮಿಷಗಳ ಕಾಲ ತಲೆಯ ಮೇಲೆ ಇರಿಸಿ. ನಂತರ 15 ನಿಮಿಷ ವಿಶ್ರಾಂತಿ ತೆಗೆದುಕೊಂಡು ಮತ್ತೆ ನೋವಿರುವ ಜಾಗಕ್ಕೆ ಐಸ್ ಕ್ಯೂಬ್ ಇಡಿ. ಇದ್ರಿಂದ ನಿಮಗೆ ಹಿತವೆನಿಸುತ್ತದೆ. ನಿಧಾನವಾಗಿ ತಲೆ ನೋವು ಕಡಿಮೆಯಾಗುತ್ತದೆ. 

BEAUTY TIPS : ಬಾಡಿದ ಗುಲಾಬಿ ಹೂವನ್ನು ಕಸಕ್ಕೆ ಎಸೆಯುವ ಮುನ್ನ ಇದನ್ನೋದಿ

ಶುಂಠಿ ಟೀ : ಶುಂಠಿ ಆರೋಗ್ಯಕ್ಕೆ ಒಳ್ಳೆಯದು. ಅದ್ರಲ್ಲಿ ಸಾಕಷ್ಟು ಔಷಧಿ ಗುಣವಿದೆ. ಮನೆ ಮದ್ದು ಎಂದಾಗ ಶುಂಠಿ ಹೆಸರು ಬರಲೇಬೇಕು. ಗ್ಯಾಸ್ ನಿಂದ ಕಾಡುವ ತಲೆ ನೋವಿಗೂ ಶುಂಠಿ ಒಳ್ಳೆಯ ಔಷಧಿ. ಶುಂಠಿಯಲ್ಲಿರುವ ಜಿಂಜರಾಲ್ ಅಂಶವು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ, ಇದು ಗ್ಯಾಸ್ ಸಮಸ್ಯೆಗೆ ಪರಿಹಾರ ನೀಡುತ್ತದೆ. ಒಂದು ಪಾತ್ರೆಗೆ ಸ್ವಲ್ಪ ಶುಂಠಿ ಮತ್ತು ಓಂ ಕಾಳು,ಜೇಷ್ಠಮದ್ದು ಮತ್ತು ತುಳಸಿಯ ಎಲೆಗಳನ್ನು ಹಾಕಿ, ನೀರು ಹಾಕಿ ಕುದಿಸಿ. ಒಂದು ಕಪ್ ನೀರು ಅರ್ಧ ಕಪ್ ಆಗುವವರೆಗೆ ಕುದಿಸಿ. ನಂತ್ರ ಸೋಸಿ ಆ ನೀರನ್ನು ಕುಡಿಯಿರಿ. ಇದು ತಲೆನೋವನ್ನು ಗುಣಪಡಿಸುತ್ತದೆ.

ಸ್ಟ್ರೆಚಿಂಗ್ ವ್ಯಾಯಾಮ ಮಾಡೋದ್ರಿಂದ ಹೃದ್ರೋಗದ ಅಪಾಯ ಕಡಿಮೆಯಾಗುತ್ತದಾ ?

ಸೋಂಪಿನ ನೀರು : ಸೋಂಪು ಕೂಡ ಗ್ಯಾಸ್ ಸಮಸ್ಯೆಗೆ ಪರಿಹಾರ ನೀಡಬಲ್ಲದು. ಗ್ಯಾಸ್ ಕಾರಣಕ್ಕೆ ತಲೆನೋವು ಬಂದಿದ್ದರೆ ನೀವು ಅಡುಗೆ ಮನೆಯಲ್ಲಿರುವ ಸೋಂಪಿನ ಸಹಾಯ ಪಡೆಯಬಹುದು.  ಒಂದು ಲೋಟ ನೀರಿಗೆ ಒಂದು ಟೀ ಚಮಚ ಸೋಂಪನ್ನು ಹಾಕಿ 3-5 ನಿಮಿಷಗಳ ಕಾಲ ಕುದಿಸಿ. ನಂತ್ರ ಅದನ್ನು ಚಹಾದಂತೆ ಕುಡಿಯಿರಿ. ಇದು ಹೊಟ್ಟೆ ಉಬ್ಬರ, ಹೊಟ್ಟೆಯಲ್ಲಿನ ಗ್ಯಾಸ್ ಕಡಿಮೆ ಮಾಡುತ್ತದೆ. 

ತಣ್ಣನೆಯ ಹಾಲು : ಹಾಲು ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ನೀಡಬಲ್ಲದು. ಒಂದು ಲೋಟ ತಣ್ಣನೆಯ ಹಾಲನ್ನು ಕುಡಿಯುವ ಮೂಲಕ ನೀವು ಅಸಿಡಿಟಿ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಹಾಲು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಇದು ಹೊಟ್ಟೆಯಲ್ಲಿರುವ ಆಮ್ಲವನ್ನು ತಟಸ್ಥಗೊಳಿಸುವುದಲ್ಲದೆ ಗ್ಯಾಸ್ ಉತ್ಪತ್ತಿಯನ್ನು ತಡೆಯುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?