ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ಸಮಸ್ಯೆಯಿಂದ ಉಂಟಾಗುವ ತಲೆನೋವು ಸಹಿಸಲು ಅಸಾಧ್ಯ. ಗ್ಯಾಸ್ಟ್ರಿಕ್ ತಲೆನೋವು ನಿವಾರಣೆಗೆ ಮನೆಯಲ್ಲೇ ಸುಲಭ ವಿಧಾನಗಳನ್ನು ಅನುಸರಿಸಬಹುದು.
ಹೊಟ್ಟೆಯ ಆರೋಗ್ಯಕ್ಕೂ ತಲೆನೋವಿಗೂ ಭಾರೀ ಸಂಬಂಧವಿದೆ. ತಲೆಯಲ್ಲಿ ಆಗುತ್ತಿರುವ ನೋವಿನ ಮೂಲ ತಲೆಯಲ್ಲೇ ಇರಬೇಕು ಎಂದೇನಿಲ್ಲ. ಅದು ಮುಖ್ಯವಾಗಿ ಹೊಟ್ಟೆಗೆ ಸಂಬಂಧಿಸಿ ಇರುತ್ತದೆ. ಜತೆಗೆ, ಇನ್ನೂ ಅನೇಕ ಕಾರಣಗಳಿರುತ್ತವೆ. ಅನೇಕ ಜನರು ಹೊಟ್ಟೆಯಲ್ಲಿನ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ತಲೆನೋವು ಅನುಭವಿಸುತ್ತಾರೆ. ಗ್ಯಾಸ್ಟ್ರಿಕ್ ತಲೆನೋವು ಅನೇಕ ಕಾರಣಗಳಿಂದ ಉಂಟಾಗುತ್ತದೆ. ಗ್ಯಾಸ್ಟ್ರಿಕ್ ಜತೆಗೆ ಆಸಿಡಿಟಿ ಸಮಸ್ಯೆಯೂ ತಲೆನೋವಿಗೆ ಮತ್ತೊಂದು ಪ್ರಮುಖ ಕಾರಣ. ಗ್ಯಾಸ್ ನಿಂದಾಗಿ ಉಂಟಾಗುವ ತಲೆನೋವು ಸಾಕಷ್ಟು ಹಿಂಸೆ ನೀಡುತ್ತದೆ. ಅತಿಯಾದ ನೋವು ಉಂಟಾಗಿ ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಈ ಸಮಯದಲ್ಲಿ ಏನಾದರೂ ಔಷಧ ಮಾಡಿಕೊಳ್ಳದೆ ಹೋದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ತಜ್ಞರ ಪ್ರಕಾರ, ಗ್ಯಾಸ್ಟ್ರಿಕ್ ತಲೆನೋವು ಆಹಾರ ಪಚನವಾಗದೆ ಇರುವುದು ಮತ್ತು ಇನ್ನಿತರ ಗ್ಯಾಸ್ಟ್ರೊಇಂಟೆಸ್ಟೈನಲ್ ಸಮಸ್ಯೆಗಳಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಈ ಸಮಯದಲ್ಲಿ ನಾವು ಸೇವಿಸುವ ಆಹಾರ ಅಗತ್ಯ ಪ್ರಮಾಣದಲ್ಲಿ ದೇಹಕ್ಕೆ ತಲುಪುವುದಿಲ್ಲ. ಹೆರಿಕೋಬ್ಯಾಕ್ಟರ್ ಪೈಲೇರಿ ಸೋಂಕು, ಇರಿಟೇಬಲ್ ಬಾವೆಲ್ ಸಿಂಡ್ರೋಮ್ -ಐಬಿಎಸ್, ಇನ್ಫಮೇಟರಿ ಬಾವೆಲ್ ಮುಂತಾದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ತಲೆನೋವಿನ ಮೂಲವಾಗಿರುತ್ತವೆ. ಆದರೆ, ಗ್ಯಾಸ್ಟ್ರಿಕ್ ನಿಂದ ಉಂಟಾಗುವ ತಲೆನೋವನ್ನು ಅನೇಕ ಮನೆ ಔಷಧಗಳಿಂದ ಗುಣಪಡಿಸಿಕೊಳ್ಳಬಹುದು.
• ಲಿಂಬೆ ನೀರು (Lemon Water)
ತಲೆನೋವಿಗೆ (Headache) ಅತ್ಯುತ್ತಮ ಪರಿಹಾರ ನೀಡಬಲ್ಲ ಪಾನೀಯವೆಂದರೆ ಲಿಂಬೆರಸ ಬೆರೆಸಿದ ನೀರು. ಇದರಲ್ಲಿ ಆಂಟಿ ಇನ್ ಫ್ಲಮೇಟರಿ (Anti Inflammatory) ಗುಣ ಇರುತ್ತದೆ. ಕುದಿಯುವ ನೀರಿಗೆ ಒಂದು ಲಿಂಬೆಯ ರಸವನ್ನು ಹಿಂಡಿ ಕುಡಿದರೆ ಗ್ಯಾಸ್ (Gas) ನಿಂದ ಉತ್ಪಾದನೆಯಾಗುವ ತಲೆನೋವು ಮಾಯವಾಗುತ್ತದೆ. ವಾಯುಪ್ರಕೋಪದ ಜನ ಇದನ್ನು ಸೇವಿಸಿದರೆ ಅಡ್ಡಿಯಿಲ್ಲ. ಆದರೆ, ಪಿತ್ತದ (Acidity) ಸಮಸ್ಯೆಯುಳ್ಳವರು ಹೆಚ್ಚು ಲಿಂಬೆರಸ ಸೇವಿಸಿದರೆ ಇನ್ನಷ್ಟು ಕಿರಿಕಿರಿಯಾಗುತ್ತದೆ.
• ನೀರುಮಜ್ಜಿಗೆ (Buttermilk)
ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಉಂಟಾಗಿ ಅದರಿಂದಲೇ ತಲೆನೋವು ಬರುತ್ತಿದ್ದರೆ ನೀರು ಮಜ್ಜಿಗೆ ಸೇವನೆ ಮಾಡುವುದು ಉತ್ತಮ ಉಪಾಯ. ದಿನಕ್ಕೆ ಎರಡು ಬಾರಿಯಾದರೂ ನೀರು ಮಜ್ಜಿಗೆ ಸೇವನೆ ಮಾಡಿದರೆ ಸಾಕಷ್ಟು ಪರಿಹಾರ ದೊರೆಯುತ್ತದೆ.
ಇದನ್ನೂ ಓದಿ: ಪ್ರತಿದಿನ ಚಿಕನ್ ತಿಂತೀರಾ? ಹಾಗಿದೆ ಈ ಸುದ್ದಿ ನಿಮಗೆ ಇಷ್ಟ ಆಗಲ್ಲ ಬಿಡಿ
• ಹೆಚ್ಚು ನೀರು ಕುಡಿಯಿರಿ (Hydrate your Body)
ಗ್ಯಾಸ್ ಹೆಚ್ಚಾದಾಗ ದೇಹದಲ್ಲಿ ನಿರ್ಜಲೀಕರಣ (Dehydration) ಉಂಟಾಗದಂತೆ ನೋಡಿಕೊಳ್ಳಬೇಕು. ನಿರ್ಜಲೀಕರಣವಾದರೆ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ದೇಹಕ್ಕೆ ಅಗತ್ಯವಾದ ಪ್ರಮಾಣದಲ್ಲಿ ನೀರು ಕುಡಿಯದೇ ಇದ್ದಾಗ ನಿರ್ಜಲೀಕರಣವಾಗಿಯೂ ತಲೆನೋವು ಬರುತ್ತದೆ. ನಿಮಗೆ ಗ್ಯಾಸ್ಟ್ರಿಕ್, ತಲೆನೋವು ಮತ್ತು ನಿರ್ಜಲೀಕರಣದಿಂದ ಮುಕ್ತಿ ಬೇಕು ಎಂದಾದಲ್ಲಿ ದಿನಕ್ಕೆ ಕನಿಷ್ಠ 3 ಲೀಟರ್ ನೀರು ಕುಡಿಯಬೇಕು.
• ತುಳಸಿ (Basil) ಎಲೆಯನ್ನು ಅಗಿಯುವುದು
ಪ್ರತಿದಿನ ಬೆಳಗ್ಗೆ 7-8 ತುಳಸಿ ಎಲೆಗಳನ್ನು ಅಗಿಯುವುದರಿಂದ ಗ್ಯಾಸ್ಟ್ರಿಕ್ ನಿಂದ ಉಂಟಾಗುವ ತಲೆನೋವು ಬರುವುದಿಲ್ಲ. ತುಳಸಿ ಎಲೆಗಳಲ್ಲಿರುವ ಎನಾಲ್ಜೆಸಿಕ್ (Analgesic) ಅಂಶದಿಂದ ನಮ್ಮ ದೇಹದ ಮಾಂಸಖಂಡಗಳಿಗೆ ವಿಶ್ರಾಂತಿ ದೊರೆಯುತ್ತದೆ. ಇದು ನಮ್ಮ ದೇಹಾರೋಗ್ಯಕ್ಕೆ ಅಗತ್ಯವಾದ ಅತ್ಯುತ್ತಮ ಅಂಶವಾಗಿದೆ.
ಇದನ್ಣೂ ಓದಿ: Unripe Banana Use: ಅರ್ಧ ಗಳಿತ ಬಾಳೆಹಣ್ಣು ತಿನ್ನಿ, ಕ್ಯಾನ್ಸರ್ ದೂರವಿಡಿ
ಗ್ಯಾಸ್ಟ್ರಿಕ್ ಸಮಸ್ಯೆಗೆ (Problem) ಬೈ ಹೇಳಿ
ಗ್ಯಾಸ್ಟ್ರಿಕ್ ನಿಂದ ಉಂಟಾಗುವ ತಲೆನೋವನ್ನು ಮೂಲದಿಂದಲೇ ನಿರ್ಮೂಲನೆ ಮಾಡಬೇಕು. ಅಂದರೆ, ಹೊಟ್ಟೆಯಲ್ಲಿ ನಿರ್ಮಾಣವಾಗುವ ಗ್ಯಾಸ್ ಕಡಿಮೆ ಮಾಡಬೇಕು. ಜೀರಿಗೆ ನೀರು, ಓಮ್ ಕಾಳನ್ನು ಬೆರೆಸಿದ ನೀರು, ಶುಂಠಿ ನೀರು, ಎಳನೀರು ಅಥವಾ ಸೋಂಪು ಕಾಳನ್ನು ಹಾಕಿ ಕುದಿಸಿದ ನೀರನ್ನು ಸೇವನೆ ಮಾಡುವುದರಿಂದ ಗ್ಯಾಸ್ ಜತೆಗೆ ಆಸಿಡಿಟಿ, ಅಜೀರ್ಣದ ಸಮಸ್ಯೆಗಳನ್ನೂ ದೂರ ಮಾಡಬಹುದು. ಹಾಗೆಯೇ, ಆಹಾರದಲ್ಲಿ ಬೆಳ್ಳುಳ್ಳಿ (Garlic) ಬಳಸಬೇಕು. ಬೆಳ್ಳುಳ್ಳಿಯಲ್ಲಿ ಆಂಟಿ ಇನ್ ಫ್ಲಮೇಟರಿ ಗುಣ ಹೊಂದಿರುವುದರಿಂದ ಗ್ಯಾಸ್, ಹೊಟ್ಟೆನುಲಿಯುವ ಮತ್ತು ನೋವಿನ ಸಮಸ್ಯೆ ನಿವಾರಣೆ ಆಗುತ್ತದೆ. ಬೆಳ್ಳುಳ್ಳಿಯ ರಸವನ್ನು ತೆಗೆದು ದಿನವೂ ಅಲ್ಪ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಒಂದೊಮ್ಮೆ ನೀವು ಹೃದ್ರೋಗಿಗಳಾಗಿದ್ದರೂ ಬೆಳ್ಳುಳ್ಳಿ ನಿಮಗೆ ಒಳ್ಳೆಯದು. ಪುದೀನಾ (Mint) ಕೂಡ ಗ್ಯಾಸ್ ಸಮಸ್ಯೆ ನಿವಾರಿಸುವಲ್ಲಿ ಮಹತ್ವವಾಗಿದೆ.