ಪ್ರತಿ ಭಾರತೀಯ ಊಟದಲ್ಲಿ ಧಾನ್ಯಗಳು (Grains) ಇದ್ದೇ ಇರುತ್ತದೆ ಯಾಕೆ..? ನಾರ್ತ್ ಇಂಡಿಯನ್ ಫುಡ್ ಆಗಿರಲಿ, ಸೌತ್ ಇಂಡಿಯನ್ ಫುಡ್ (Food) ಆಗಿರಲಿ, ಬೇಳೆ ಕಾಳುಗಳಿಗೆ ಅಲ್ಲಿ ಹೆಚ್ಚಿನ ಪ್ರಾಶಸ್ತ್ಯವಿದೆ. ಹಾಗಿದ್ರೆ ಯಾವೆಲ್ಲಾ ಧಾನ್ಯಗಳ ಸೇವನೆಯಿಂದ ಯಾವ ರೀತಿಯ ಪ್ರಯೋಜನವಿದೆ ತಿಳಿಯೋಣ..
ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು ಭಾರತೀಯ ಪಾಕಪದ್ಧತಿಯ ಅವಿಭಾಜ್ಯ ಅಂಗವಾಗಿದೆ, ಆದರೆ ನೀವು ಎಂದಾದರೂ ಯೋಚಿಸಿದ್ದೀರಾ, ಭಾರತೀಯ ಶೈಲಿಯ ಎಲ್ಲಾ ಅಡುಗೆಗಳಲ್ಲಿ ಬೇಳೆ ಯಾಕಿದೆ..? ಎಲ್ಲಾ ವಿಧದ ಸಾಂಬಾರು, ಪಲ್ಯ, ತಿಂಡಿಗಳಲ್ಲಿ ಧಾನ್ಯಗಳನ್ನೇ ಯಾಕೆ ಹೆಚ್ಚಾಗಿ ಬಳಸಲಾಗುತ್ತದೆ. ಯಾಕೆಂದರೆ ಬೇಳೆಕಾಳುಗಳು ಮತ್ತು ದ್ವಿದಳ ಧಾನ್ಯಗಳು ಅತ್ಯುತ್ತಮ ಸಸ್ಯ ಆಧಾರಿತ ಪ್ರೋಟೀನ್ ಮೂಲಗಳಲ್ಲಿ ಒಂದಾಗಿದೆ. ಸಾಕಷ್ಟು ಪೌಷ್ಠಿಕಾಂಶ, ಕಾರ್ಬೋಹೈಡ್ರೇಟ್, ಜೀವಸತ್ವ, ಖನಿಜ, ವಿಟಮಿನ್‌ಗಳನ್ನು ಹೊಂದಿದೆ. ಧಾನ್ಯಗಳಲ್ಲಿರುವ ಪೌಷ್ಠಿಕಾಂಶ ದೇಹ, ಮೆದುಳು, ಮೂಳೆಗಳು ಮತ್ತು ದೇಹದ ಒಟ್ಟಾರೆ ರೋಗನಿರೋಧಕ ಶಕ್ತಿಯ ಬೆಳವಣಿಗೆಗೆ ಉತ್ತಮವಾಗಿದೆ. ಹಾಗಿದ್ರೆ ಯಾವೆಲ್ಲಾ ಧಾನ್ಯಗಳ ಸೇವನೆಯಿಂದ ಯಾವ ರೀತಿಯ ಪ್ರಯೋಜನವಿದೆ ತಿಳಿಯೋಣ.
ತೊಗರಿಬೇಳೆ
ತೊಗರಿಬೇಳೆ, ಪ್ರತಿನಿತ್ಯದ ಅಡುಗೆಯಲ್ಲಿ ಅತಿ ಹೆಚ್ಚಾಗಿ ಬಳಸುವ ಬೇಳೆಯಾಗಿದೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಕಬ್ಬಿಣ ಮತ್ತು ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ. ಸುಮಾರು 100 ಗ್ರಾಂ ತೊಗರಿಬೇಳೆ ಸುಮಾರು 24 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ದೈನಂದಿನ ಆಹಾರದಲ್ಲಿ ದೇಹಕ್ಕೆ ಅಗತ್ಯವಾದ ಪ್ರೋಟೀನ್ ಅಗತ್ಯವನ್ನು ಪೂರೈಸುತ್ತದೆ. ಬೇಳೆಯನ್ನು ಜೀರ್ಣವಾಗುವ ಆಹಾರ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿಯೇ ಪುಟ್ಟ ಮಕ್ಕಳಿಗೆ ಬೇಳೆ ತೊವ್ವೆ ಮಾಡಿ ನೀಡುತ್ತಾರೆ.
undefined
ಕಡಲೇಬೇಳೆ
ಕಡಲೆಬೇಳೆ ಅತ್ಯಂತ ರುಚಿಕರವಾದ ಧಾನ್ಯಗಳಲ್ಲಿ ಒಂದಾಗಿದೆ. 100 ಗ್ರಾಂ ಕಡಲೇಬೇಳೆ ಸುಮಾರು 13 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದಲ್ಲದೆ, ಕಡಲೇಬೇಳೆ ತಾಮ್ರ, ಮ್ಯಾಂಗನೀಸ್ ಮುಂತಾದ ಆರೋಗ್ಯ (Health)ವನ್ನು ಸಮೃದ್ಧಗೊಳಿಸುವ ಖನಿಜಗಳ ಮೂಲವಾಗಿದೆ..
ಕಡಲೆ ಕಾಳುಗಳು
ಬಿಳಿ ಕಡಲೆ ಕಾಳುಗಳು ಅಥವಾ ಕಾಬೂಲ್ ಪ್ರೋಟೀನ್ ಮತ್ತು ಫೈಬರ್‌ನ ಆಗರವಾಗಿದೆ. ಸುಮಾರು 1 ಕಪ್ ಕಾಬೂಲ್ ದಾಲ್ ಸುಮಾರು 15 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದಲ್ಲದೆ, ಈ ಬೇಳೆಯ ದೈನಂದಿನ ಸೇವನೆಯು ರಕ್ತ ಪರಿಚಲನೆಯನ್ನು ಹೆಚ್ಚಿಸಲು ಮತ್ತು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಏಕೆಂದರೆ ಇದು ಫೋಲೇಟ್ ಮತ್ತು ಕಬ್ಬಿಣದಲ್ಲಿ ಸಮೃದ್ಧವಾಗಿದೆ.
ಉದ್ದಿನ ಬೇಳೆ
100 ಗ್ರಾಂನಷ್ಟು ಉದ್ದಿನ ಬೇಳೆ 26 ಗ್ರಾಂಗಳಷ್ಟು ಪ್ರೋಟೀನ್‌ನ್ನು ಹೊಂದಿದೆ. ಹೀಗಾಗಿ ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ. ಹೀಗಿದ್ದೂ ಹೊಟ್ಟೆನೋವು, ಅಜೀರ್ಣ ಸಮಸ್ಯೆ ಇರುವವರು ಇದನ್ನು ಸೇವಿಸುವ ಮುನ್ನ ಇದರಲ್ಲಿರುವ ಆಮ್ಲೀಯ ಗುಣವನ್ನು ಕಡಿಮೆ ಮಾಡಲು ಈ ಬೇಳೆಯನ್ನು ರಾತ್ರಿಯಿಡೀ ನೆನೆಸಿ ನಂತರ ಸೇವಿಸುಂತೆ ಸಲಹೆ ನೀಡಲಾಗುತ್ತದೆ. ಉದ್ದಿನಬೇಳೆಯಲ್ಲಿ ಪ್ರೋಟೀನ್ ಮತ್ತು ವಿಟಮಿನ್ (Vitamin) ಬಿ ಸಮೃದ್ಧವಾಗಿದೆ.
Side effects of peas : ಚಳಿಗಾಲದಲ್ಲಿ ಬಟಾಣಿ ಅತಿಯಾದ ಸೇವನೆಯಿಂದ ಅನಾರೋಗ್ಯ
ಅಲಸಂಡೆ ಕಾಳುಗಳು
ಲೋಬಿಯಾ ದಾಲ್ ಎಂದು ಕರೆಯಲ್ಪಡುವ ಕಪ್ಪು ಕಣ್ಣಿನ ಬಟಾಣಿ ಹೆಚ್ಚು ಪ್ರೋಟೀನ್ (Protein) ಹೊಂದಿದೆ. ಅಲಸಂಡೆ ಕಾಳುಗಳು ಎಂದು ಸಹ ಇದನ್ನು ಕರೆಯುತ್ತಾರೆ. ಇದರ ಸೇವನೆ ದೇಹದಲ್ಲಿ ಸ್ನಾಯುವಿಗೆ ಹೆಚ್ಚಿನ ಬಲ ನೀಡುತ್ತದೆ. ಅಲ್ಲದೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಕಾಳುಗಳಲ್ಲಿರುವ ಸತುವು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ.
ಹೆಸರುಕಾಳುಗಳು
ಹೆಸರುಕಾಳುಗಳು ಹೆಚ್ಚಿನ ಪ್ರಮಾಣದಲ್ಲಿ ಫೈಬರ್‌ಗಳಿಂದ ತುಂಬಿರುವುದರಿಂದ ತೂಕ ನಷ್ಟ (Weight Loss)ಕ್ಕೆ ಉತ್ತಮವಾಗಿದೆ. ನಿಮ್ಮ ದಿನನಿತ್ಯದ ಆಹಾರದಲ್ಲಿ ಹೆಸರುಕಾಳುಗಳನ್ನುಸೇರಿಸುವುದು ಉತ್ತಮ ಉಪಾಯವಾಗಿದೆ. ಏಕೆಂದರೆ ಇದು ಕಿಣ್ವಗಳಲ್ಲಿ ಸಮೃದ್ಧವಾಗಿದೆ ಮತ್ತು ಕರುಳಿನ ಚಲನೆಯನ್ನು ಸರಾಗಗೊಳಿಸುವಲ್ಲಿ ಸಹಾಯ ಮಾಡುತ್ತದೆ.
ಸೋಯಾ ಬೀನ್
ಸೋಯಾ (Soya) ಬೀನ್ ವಿಟಮಿನ್ ಡಿಯಲ್ಲಿ ಸಮೃದ್ಧವಾಗಿದೆ. 100 ಗ್ರಾಂ ಸೋಯಾ ಬೀನ್ ಸುಮಾರು 13 ಗ್ರಾಂ ಪ್ರೊಟೀನ್ ಹೊಂದಿರುತ್ತದೆ. ನೈಸರ್ಗಿಕವಾಗಿ ದೇಹದಲ್ಲಿ ಪ್ರೊಟೀನ್ ಮಟ್ಟವನ್ನು ಹೆಚ್ಚಿಸಬೇಕು ಎನ್ನುವವರು ನಿಯಮಿತವಾಗಿ ಆಹಾರಗಳಲ್ಲಿ ಸೋಯಾ ಬೀನ್ ಬಳಸುವುದು ಒಳ್ಳೆಯದು.