ಬೆಳಿಗ್ಗೆ ಟೀ ಅಥವಾ ಕಾಫಿ ಬೇಕೇಬೇಕು. ಆದ್ರೆ ಹಾಲು ತರೋಕೆ ಸೋಮಾರಿತನ. ಹಾಗಾಗಿ ಹಾಲ್ ಪೌಡರ್ ನಲ್ಲಿ ಟೀ ಮಾಡಿ ಕೊಡಿತೇವೆ ಎನ್ನುವ ಜನರಿಗೆ ಕಿವಿ ಮಾತಿದೆ. ಆರೋಗ್ಯ ಹಾಳಾಗಬಾರದು ಅಂದ್ರೆ ಇದನ್ನು ಪಾಲಿಸಿ.
ಭಾರತ (India) ದ ಅನೇಕ ಜನ (People) ರ ದಿನ ಆರಂಭವಾಗುವುದೇ ಟೀ (Tea) ಅಥವಾ ಕಾಫಿ (Coffee) ಯಿಂದ ಅಂದ್ರೆ ತಪ್ಪಲ್ಲ. ಟೀ ಇಲ್ಲದೆ ಹಾಸಿಗೆಯಿಂದ ಏಳಲು ಮೂಡ್ ಬರೋದಿಲ್ಲ ಎನ್ನುವವರಿದ್ದಾರೆ. ಟೀ ಹಾಗೂ ಕಾಫಿಗೆ ಹಾಲು ಮಿಕ್ಸ್ ಮಾಡಿ ಕುಡಿದ್ರೆ ಅದರ ರುಚಿಯೇ ಬೇರೆ. ಅನೇಕರು ಪ್ಯಾಕೆಟ್ ಹಾಲು ಬಳಸಿದ್ರೆ ಮತ್ತೆ ಕೆಲವರು ಹಸುವಿನ ಹಾಲನ್ನು ನೇರವಾಗಿ ಪಡೆದು ಅದನ್ನು ಬಳಸ್ತಾರೆ. ಆದರೆ ಇನ್ನು ಕೆಲವರು ಈ ಹಾಲಿನ ಬದಲು ಹಾಲಿನ ಪೌಡರ್ ಬಳಕೆ ಮಾಡ್ತಾರೆ. ಬೆಳ್ಳಂಬೆಳಿಗ್ಗೆ ಹಾಲು ತರೋದು ಕಷ್ಟ ಎನ್ನುವ ಕಾರಣಕ್ಕೆ ಇಲ್ಲವೆ ಬೇರೆ ಯಾವುದೋ ಕಾರಣಕ್ಕೆ ಹಾಲಿನ ಪುಡಿ ಹಾಕಿ ಟೀ ಅಥವಾ ಕಾಫಿ ಮಾಡ್ತಾರೆ. ನೀವೂ ಹಾಲಿನ ಪುಡಿ ಬೆರೆಸಿ ಟೀ ಅಥವಾ ಕಾಫಿ ಕುಡಿದಿರಬಹುದು. ನಿಮ್ಮ ಈ ಸೋಮಾರಿತನ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಲು ಮತ್ತೆ ಹಾಲಿನ ಪೌಡರ್ ಗೆ ಏನು ವ್ಯತ್ಯಾಸವಿದೆ ? ಎರಡೂ ಒಂದೇ ಅಲ್ವಾ? ಹಾಗಾಗಿ ನಾವು ಇದನ್ನು ಬೆರೆಸ್ತೇವೆ ಎನ್ನುವವರು ನೀವಾಗಿದ್ದರೆ ಈ ತಪ್ಪು ಕಲ್ಪನೆಯಲ್ಲಿ ಖಂಡಿತಾ ಇರಬೇಡಿ. ತಕ್ಷಣ ಹಾಲಿನ ಪೌಡರ್ ನಿಂದ ತಯಾರಿಸುವ ಟೀ ಸೇವನೆ ಬಿಟ್ಬಿಡಿ.
ಹಾಲಿನ ಪುಡಿ ತಯಾರಿಕೆ : ತಜ್ಞರ ಪ್ರಕಾರ, ಹಾಲಿನ ಪುಡಿ ನಮ್ಮ ತೂಕವನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಮ್ಮ ಹೃದಯದ ಆರೋಗ್ಯಕ್ಕೂ ಅಪಾಯಕಾರಿ. ಅದರ ಅನುಕೂಲಗಳು ತಿಳಿದುಕೊಳ್ಳುವ ಮೊದಲು, ಈ ಹಾಲಿನ ಪುಡಿಯನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ತಿಳಿಯಬೇಕು. ಹಾಲಿನ ಪುಡಿಯಲ್ಲಿ ಹಾಲಿನ ಪ್ರಮಾಣ ಸರಿಸುಮಾರು ಶೇಕಡಾ 87.3 ರಷ್ಟಿರುತ್ತದೆ. ನೀರಿನ ಪ್ರಮಾಣ ಶೇಕಡಾ 3.9ರಷ್ಟಿರುತ್ತದೆ. ಶೇಕಡಾ 8.8ರಷ್ಟು ಹಾಲಿನ ಕೊಬ್ಬು ಮತ್ತು ಪ್ರೋಟೀನ್, ಹಾಲಿನ ಸಕ್ಕರೆ, ಖನಿಜ ಇತ್ಯಾದಿಗಳಿರುತ್ತವೆ. ಹಾಲಿನ ಪುಡಿಯನ್ನು ತಯಾರಿಸಲು, ಹಾಲನ್ನು ಕಾಯಿಸಲಾಗುತ್ತದೆ. ವಾಸ್ತವವಾಗಿ ಈ ಹಾಲಿನ ಪುಡಿ ಆವಿಯಾದ ಹಾಲು. ಇದು ಮತ್ತಷ್ಟು ದಪ್ಪವಾಗಿರುತ್ತದೆ ಮತ್ತು ಸಂಸ್ಕರಿಸಲ್ಪಟ್ಟಿರುತ್ತದೆ.
ಹಾಲಿನ ಪುಡಿಯಿಂದ ತಯಾರಿಸಿದ ಟೀ ಅಥವಾ ಕಾಫಿಯ ಅಡ್ಡಪರಿಣಾಮಗಳು :
ಅಧಿಕ ಕೊಲೆಸ್ಟ್ರಾಲ್ ನಿಂದ ತೊಂದರೆ: ಕೊಲೆಸ್ಟ್ರಾಲ್ ಇರುವ ಆಹಾರ ಸೇವೆನ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ನಿಮ್ಮ ಅಪಧಮನಿಗಳಲ್ಲಿ ಸೇರ್ಪಡೆಗೊಳ್ಳುತ್ತದೆ ಮತ್ತು ಅದು ರಕ್ತದ ಹರಿವನ್ನು ನಿರ್ಬಂಧಿಸುತ್ತದೆ.
HEALTH TIPS : ಥೈರಾಯ್ಡ್ ಸಮಸ್ಯೆ ಇರೋರಿಗೆ ಈ ಜ್ಯುಸ್ ಬೆಸ್ಟ್ ಔಷಧಿ
ಮಧುಮೇಹ ರೋಗಿಗಳಿಗೆ ಇದು ಸಲ್ಲದು : ಮಧುಮೇಹ ಸಮಸ್ಯೆ ಇರುವವರು ಹಾಲಿನ ಪುಡಿಯನ್ನು ಬಳಸಬಾರದು ಎಂದು ತಜ್ಞರು ಸಲಹೆ ನೀಡ್ತಾರೆ. ವಾಸ್ತವವಾಗಿ, ಹಾಲಿನ ಪುಡಿಯಲ್ಲಿ ಈಗಾಗಲೇ ಹೆಚ್ಚಿನ ಪ್ರಮಾಣದ ಸಕ್ಕರೆ ಇರುತ್ತದೆ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಇದ್ರಿಂದ ಸಮಸ್ಯೆ ಉಲ್ಪಣಿಸಬಹುದು.
ಡಯಟ್ (Diet) ಮಾಡೋರು ಹಾಲಿನ ಪುಡಿಯಿಂದ ದೂರವಿರಿ : ಡಯಟ್ ಮಾಡುವವರು ಕೊಲೆಸ್ಟ್ರಾಲ್ ಬಗ್ಗೆ ಹೆಚ್ಚಿನ ಗಮನವನ್ನು ನೀಡ್ತಾರೆ. ಹಾಲಿನ ಪುಡಿ ಕೊಲೆಸ್ಟ್ರಾಲ್ ಹಾಲು. ಇದರಲ್ಲಿ ಒಳ್ಳೆಯ ಕೊಬ್ಬು ಇರುವುದಿಲ್ಲ. ಹಾಗಾಗಿ ಇದು ನಿಮ್ಮ ತೂಕವನ್ನು ಹೆಚ್ಚಿಸುವ ಸಾಧ್ಯತೆಯಿರುತ್ತದೆ.
ನಿಮ್ಮನೇಲಿ ಇವತ್ತೂ ಉಪ್ಪಿಟ್ಟಾ, ತಿನ್ನೊ ಮುನ್ನ ಈ ಸುದ್ದಿ ಓದಿ ಬಿಡಿ !
ಹಾಲಿನಂತೆ ಕ್ಯಾಲ್ಸಿಯಂ (Calcium) ಹೊಂದಿರೋದಿಲ್ಲ ಹಾಲಿನ ಪುಡಿ : ಪುಡಿ ಮಾಡಿದ ಹಾಲಿನಲ್ಲಿ ಸಾಮಾನ್ಯ ಹಾಲಿಗಿಂತ ಕಡಿಮೆ ಕ್ಯಾಲ್ಸಿಯಂ ಇರುತ್ತದೆ. ನೀವು ಹಾಲಿನ ಪುಡಿಯನ್ನು ಸರಿಯಾಗಿ ಸಂಗ್ರಹಿಸದಿದ್ದರೆ, ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆಯಿರುತ್ತದೆ. ತಾಜಾ ಹಾಲಿನಲ್ಲಿ ವಿಟಮಿನ್ ಬಿ 5 ಮತ್ತು ಬಿ 12 ನಂತಹ ಪೋಷಕಾಂಶಗಳಿವೆ. ಆದ್ರೆ ಹಾಲಿನ ಪುಡಿಯಲ್ಲಿ ಇದು ಇರುವುದಿಲ್ಲ. ತಾಜಾ ಹಾಲಿನಲ್ಲಿ ರಂಜಕ, ಸೆಲೆನಿಯಮ್ ಪ್ರಮಾಣವು ಹಾಲಿನ ಪುಡಿಗಿಂತ ಹೆಚ್ಚಾಗಿರುತ್ತದೆ.