Shiva Meditation: ಆಲಸ್ಯದಿಂದ ಹಿಡಿದು ಹೃದಯ ಸಮಸ್ಯೆ ದೂರ ಮಾಡುತ್ತೆ ಈ ಧ್ಯಾನ

ಧ್ಯಾನ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಒಳ್ಳೆಯದು. ಸೋಮಾರಿತನದಿಂದ ಹಿಡಿದು ದೊಡ್ಡ ರೋಗವನ್ನು ಗುಣಪಡಿಸುವ ಶಕ್ತಿ ಈ ಧ್ಯಾನಕ್ಕಿದೆ. ನಿತ್ಯ ಧ್ಯಾನ ಮಾಡಿದ್ರೆ ಸಿಗುವ ಲಾಭ ಒಂದೆರಡಲ್ಲ.
 

Shiva Meditation Health Benefits

ಧ್ಯಾನ ಹಾಗೂ ಆಧ್ಯಾತ್ಮಿಕತೆಗೆ ಆಳವಾದ ನಂಟಿದೆ. ಧ್ಯಾನವನ್ನು ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕ ಸಾಧಿಸುವ ಒಂದು ಮಾರ್ಗವೆಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿ ಶಿವನನ್ನು ಆದಿಯೋಗಿ ಎಂದು ಕರೆಯಲಾಗುತ್ತದೆ. ಅಂದರೆ ಯೋಗದ ಮೊದಲ ಗುರು ಶಿವ.  ಧ್ಯಾನ ಭಂಗಿಯಲ್ಲಿ ಇರುವ ಶಿವನನ್ನು ನಾವು ನೋಡ್ತೇವೆ. ಧ್ಯಾನದಲ್ಲೂ ಅನೇಕ ವಿಧಗಳಿದ್ದು, ಶಿವನ ಮುದ್ರೆಯಲ್ಲಿ ಮಾಡುವ ಧ್ಯಾನಕ್ಕೆ ಶಿವಧ್ಯಾನ ಎಂದು ಕರೆಯಲಾಗುತ್ತದೆ. ಶಿವಧ್ಯಾನದಿಂದ ಸಾಕಷ್ಟು ಪ್ರಯೋಜನವಿದೆ. ಇದು ಹೃದಯದ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತದೆ. ನಾವಿಂದ ಶಿವ ಧ್ಯಾನದ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.  

ಶಿವ (Shiva) ಧ್ಯಾನವನ್ನು ಮಾಡೋದು ಹೇಗೆ? : ಶಾಂತವಾದ ಸ್ಥಳದಲ್ಲಿ ಪದ್ಮಾಸನ (Padmasana) ಅಥವಾ  ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಿ. ಕೈಗಳನ್ನು ಆರಾಮದಾಯಕ ಭಂಗಿಯಲ್ಲಿ ಇಟ್ಟುಕೊಳ್ಳಿ. ಕಣ್ಣುಗಳನ್ನು ಮೃದುವಾಗಿ ಮುಚ್ಚಿ. ನಿಮ್ಮ ಉಸಿರಾಟದ ಮೇಲೆ ಸಂಪೂರ್ಣ ಗಮನವಿರಲಿ. ಆರರ ವರೆಗೆ ಎಣಿಕೆ ಮಾಡ್ತಾ ಉಸಿರನ್ನು ತೆಗೆದುಕೊಳ್ಳಿ. ಉಸಿರು (Breath) ದೀರ್ಘವಾಗಿರಲಿ. ಹಾಗೆ ಆಳವಾಗಿರಲಿ. ನಂತ್ರ ಆರು ಕೌಂಟ್ ಮಾಡ್ತಾ ನಿಧಾನವಾಗಿ ಉಸಿರನ್ನು ಬಿಡಿ. ಹತ್ತು ನಿಮಿಷ ಇದನ್ನು ರಿಪಿಟ್ ಮಾಡಿ. ಧ್ಯಾನದ ವೇಳೆ ನಿಮ್ಮ ಬೆನ್ನು ನೇರವಾಗಿರವಂತೆ ನೋಡಿಕೊಳ್ಳಿ. ಧ್ಯಾನ ಮುಗಿದ ನಂತ್ರ ಹಸ್ತವನ್ನು ಮೃದುವಾಗಿ ಉಜ್ಜಿ, ಬಿಸಿ ಶಾಖವನ್ನು ಕಣ್ಣಿನ ಮೇಲಿಟ್ಟು ನಂತ್ರ ನಿಧಾನವಾಗಿ ಕಣ್ಣನ್ನು ಬಿಡಿ. ಆರಂಭದಲ್ಲಿ ಹತ್ತು ನಿಮಿಷ ಇದನ್ನು ಮಾಡಿ. ನಂತ್ರ ಅರ್ಥಗಂಟೆ ನೀವು ಈ ಧ್ಯಾನವನ್ನು ಮಾಡಬಹುದು. ನಿಮ್ಮ ಗಮನ ಸಂಪೂರ್ಣ ಉಸಿರಾಟದ ಮೇಲಿರಬೇಕು.

HEALTH TIPS: ಈ ಮೂರು ಆಹಾರದಿಂದ ದೂರವಿದ್ರೆ ಹಾರ್ಟ್‌ಅಟ್ಯಾಕ್ ಆಗೋ ಛಾನ್ಸ್‌ ಕಡಿಮೆ

ಶಿವ ಧ್ಯಾನ ಮಾಡೋದ್ರಿಂದ ಆಗುವ ಲಾಭಗಳು : 
• ಶಿವ ಧ್ಯಾನ ಮಾಡುವುದ್ರಿಂದ ದೇಹದ ಶಕ್ತಿ ಹೆಚ್ಚುತ್ತದೆ. 
• ಶಿವ ಧ್ಯಾನದಿಂದ ಒತ್ತಡಕ್ಕೊಳಗಾಗಿದ್ದ ಮನಸ್ಸು ಶಾಂತವಾಗುತ್ತದೆ. 
• ಮಕ್ಕಳು ಕೂಡ ಈ ಧ್ಯಾನವನ್ನು ಮಾಡಬಹುದು. ಇದ್ರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಬಹುದು.
• ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ಶಿವ ಧ್ಯಾನ ಮಾಡುತ್ತದೆ. 
• ಅಧಿಕ ಬಿಪಿ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯಕಾರಿ. 
• ರಾತ್ರಿ ಮಲಗುವ ಮುನ್ನ ನೀವು ಶಿವ ಧ್ಯಾನವನ್ನು ಮಾಡಬಹುದು. ಇದರಿಂದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. 
• ಭಯ, ಆತಂಕ ಮತ್ತು ಖಿನ್ನತೆಯಿಂದ ಬಳಲುವವರು ಶಿವ ಧ್ಯಾನ ಮಾಡೋದು ಹೆಚ್ಚು ಪರಿಣಾಮಕಾರಿಯಾಗಿದೆ. 
• ನಿಮ್ಮ ವಯಸ್ಸನ್ನು ಮುಚ್ಚಿಡಬೇಕು, 40ನೇ ವಯಸ್ಸಿನಲ್ಲೂ 20ರಂತೆ ಕಾಣ್ಬೇಕು ಎನ್ನುವವರು ನೀವಾಗಿದ್ದರೆ ಪ್ರತಿ ನಿತ್ಯ ಶಿವ ಧ್ಯಾನವನ್ನು ಮಾಡಿ.
• ತೂಕ ಕಡಿಮೆ ಮಾಡಲು ಬಯಸುವವರು ಕೂಡ ಧ್ಯಾನ ಮಾಡಬೇಕು. ಶಿವ ಧ್ಯಾನದ ವೇಳೆ ದೀರ್ಘವಾಗಿ ಹಾಗೂ ಆಳವಾಗಿ ಉಸಿರಾಡುತ್ತೇವೆ. ದೀರ್ಘ ಉಸಿರಾಟದಿಂದ ಕೊಬ್ಬು ಕರಗುತ್ತದೆ. 

Health Tips: ಫೋನ್ ಬ್ಯಾಟರಿ ಮೇಲೆ ಸದಾ ಕಣ್ಣಿರುತ್ತಾ? ಹಾಗಿದ್ರೆ ನಿಮಗೂ ಕಾಡ್ತಿರಬಹುದು ಈ ಖಾಯಿಲೆ

ದಿನದಲ್ಲಿ ಎಷ್ಟು ಬಾರಿ ಶಿವ ಧ್ಯಾನ ಮಾಡ್ಬೇಕು? : ಶಿವ ಧ್ಯಾನವನ್ನು ಒಂದು ದಿನ ಬಿಟ್ಟು ಒಂದು ದಿನ ಮಾಡಿದ್ರೆ ಪ್ರಯೋಜನವಿಲ್ಲ. ನೀವು ದಿನಚರಿಯಲ್ಲಿ ಶಿವ ಧ್ಯಾನವನ್ನು ಸೇರಿಸಿಕೊಳ್ಳಬೇಕು. ಬೆಳಿಗ್ಗೆ ಶಿವ ಧ್ಯಾನ ಸಾಧ್ಯವಾಗ್ತಿಲ್ಲ ಎನ್ನುವವರು ರಾತ್ರಿ ಮಾಡಬಹುದು. ದಿನದಲ್ಲಿ ಒಂದು ಬಾರಿ ಇದನ್ನು ಮಾಡೋದ್ರಿಂದ ಸಾಕಷ್ಟು ಲಾಭವಿದೆ. ಪ್ರತಿದಿನ 10 ರಿಂದ 15 ನಿಮಿಷಗಳ ಕಾಲ ಧ್ಯಾನ ಮಾಡಬಹುದು. ಆಹಾರ ಸೇವನೆ ಮಾಡಿದ ತಕ್ಷಣ ಧ್ಯಾನವನ್ನು ಮಾಡಬೇಡಿ.  ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಅಥವಾ ವ್ಯಾಯಾಮ ಮಾಡಿದ ತಕ್ಷಣ ಶಿವ ಧ್ಯಾನ ಮಾಡಬಾರದು ಎಂದು ತಜ್ಞರು ಸಲಹೆ ನೀಡ್ತಾರೆ. 

Latest Videos
Follow Us:
Download App:
  • android
  • ios