ಕೀಟನಾಶಕಗಳ ಬಳಕೆ ಕ್ಯಾನ್ಸರ್ ರಿಸ್ಕ್ 150% ಹೆಚ್ಚಿಸುತ್ತೆ: ಹೊಸ ಅಧ್ಯಯನದಿಂದ ಎಚ್ಚರಿಕೆ

Published : Apr 29, 2026, 07:32 PM IST
Cancer Risk

ಸಾರಾಂಶ

ನಾವು ತಿನ್ನುವ ಆಹಾರ, ಕುಡಿಯುವ ನೀರು ಮತ್ತು ಉಸಿರಾಡುವ ಗಾಳಿಯಲ್ಲಿ ಬೆರೆತುಹೋಗಿರುವ ಈ ಕೀಟನಾಶಕಗಳು ನಮ್ಮ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಈ ಅಧ್ಯಯನ ಹೆಚ್ಚಿಸಿದೆ.

ಕೀಟನಾಶಕಗಳ ನಿರಂತರ ಬಳಕೆಯು ಕ್ಯಾನ್ಸರ್ ಬರುವ ಅಪಾಯವನ್ನು 150% ವರೆಗೆ ಹೆಚ್ಚಿಸಬಹುದು ಎಂದು ಹೊಸ ಅಧ್ಯಯನವೊಂದು ಎಚ್ಚರಿಸಿದೆ. 2014 ರಿಂದ 2019ರ ನಡುವೆ ಈ ರಾಸಾಯನಿಕಗಳು ಹೇಗೆ ಹರಡುತ್ತವೆ ಎಂಬುದನ್ನು ಸಂಶೋಧಕರು ಟ್ರ್ಯಾಕ್ ಮಾಡಿದ್ದಾರೆ. ನಂತರ, 2007 ರಿಂದ 2020ರ ನಡುವಿನ 1.5 ಲಕ್ಷಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳ ಆರೋಗ್ಯ ದಾಖಲೆಗಳೊಂದಿಗೆ ಈ ಡೇಟಾವನ್ನು ಹೋಲಿಸಿದ್ದಾರೆ.

ಕೀಟನಾಶಕಗಳ ಜೊತೆಗಿನ ನಿರಂತರ ಸಂಪರ್ಕವು ಕ್ಯಾನ್ಸರ್ ಬರುವ ಅಪಾಯವನ್ನು 150% ವರೆಗೆ ಹೆಚ್ಚಿಸಬಹುದು ಎಂದು ಹೊಸ ಅಧ್ಯಯನವೊಂದು ಆತಂಕಕಾರಿ ಮಾಹಿತಿ ಬಹಿರಂಗಪಡಿಸಿದೆ. ನಾವು ತಿನ್ನುವ ಆಹಾರ, ಕುಡಿಯುವ ನೀರು ಮತ್ತು ಉಸಿರಾಡುವ ಗಾಳಿಯಲ್ಲಿ ಬೆರೆತುಹೋಗಿರುವ ಈ ಕೀಟನಾಶಕಗಳು ನಮ್ಮ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಈ ಅಧ್ಯಯನ ಹೆಚ್ಚಿಸಿದೆ.

ನೇಚರ್ ಹೆಲ್ತ್ (Nature Health) ಜರ್ನಲ್‌ನಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಕೀಟನಾಶಕಗಳ ಬಳಕೆ ಹೆಚ್ಚಿರುವ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಕೆಲವು ರೀತಿಯ ಕ್ಯಾನ್ಸರ್ ಬರುವ ಸಾಧ್ಯತೆ 150% ವರೆಗೆ ಹೆಚ್ಚು ಎಂದು ಸಂಶೋಧನೆ ಹೇಳಿದೆ. ಸಾಮಾನ್ಯವಾಗಿ ನಾವು ಬಳಸುವ ಆಹಾರ, ನೀರು ಮತ್ತು ಗಾಳಿಯಲ್ಲಿ ಕೀಟನಾಶಕಗಳು ಇದ್ದೇ ಇರುತ್ತವೆ. ಆದರೆ, ಈ ಹಿಂದಿನ ಹೆಚ್ಚಿನ ಅಧ್ಯಯನಗಳು ಕೇವಲ ಒಂದೊಂದು ರಾಸಾಯನಿಕದ ಮೇಲೆ ಮಾತ್ರ ಗಮನ ಹರಿಸಿದ್ದವು.

ಹೆಚ್ಚು ನಿಖರ

ಆದರೆ ಈ ಹೊಸ ಅಧ್ಯಯನವು ವಿಭಿನ್ನವಾದ ಮಾರ್ಗವನ್ನು ಅನುಸರಿಸಿದೆ. ಒಂದಕ್ಕಿಂತ ಹೆಚ್ಚು ಕೀಟನಾಶಕಗಳು ಒಟ್ಟಿಗೆ ಸೇರಿದಾಗ ನಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ವಿಶ್ಲೇಷಿಸಿದೆ. ಇದು ನಿಜ ಜೀವನದ ಸನ್ನಿವೇಶವನ್ನು ಹೆಚ್ಚು ನಿಖರವಾಗಿ ತೋರಿಸುತ್ತದೆ. ವಿಜ್ಞಾನಿಗಳು ದೇಶದಾದ್ಯಂತ ಸಾಮಾನ್ಯವಾಗಿ ಬಳಸಲಾಗುವ 31 ಬಗೆಯ ಕೀಟನಾಶಕಗಳನ್ನು ವಿಶ್ಲೇಷಿಸಿದ್ದಾರೆ. ವಿಶೇಷ ಅಂದರೆ, ವಿಶ್ವ ಆರೋಗ್ಯ ಸಂಸ್ಥೆ (WHO) ಈ ಪೈಕಿ ಯಾವುದನ್ನೂ ಕ್ಯಾನ್ಸರ್ ಕಾರಕ ಎಂದು ಇನ್ನೂ ವರ್ಗೀಕರಿಸಿಲ್ಲ.

2014 ರಿಂದ 2019 ರ ನಡುವೆ ಈ ರಾಸಾಯನಿಕಗಳು ಹೇಗೆ ಹರಡುತ್ತವೆ ಎಂಬುದನ್ನು ಸಂಶೋಧಕರ ತಂಡವು ಆಧುನಿಕ ಮಾಡೆಲಿಂಗ್ ತಂತ್ರಜ್ಞಾನ ಬಳಸಿ ಟ್ರ್ಯಾಕ್ ಮಾಡಿದೆ. ನಂತರ, 2007 ರಿಂದ 2020 ರ ನಡುವಿನ 1,50,000 ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳ ಆರೋಗ್ಯ ದಾಖಲೆಗಳೊಂದಿಗೆ ಈ ಡೇಟಾವನ್ನು ಹೋಲಿಕೆ ಮಾಡಿದೆ. ಕೀಟನಾಶಕಗಳ ಬಳಕೆ ಹೆಚ್ಚಿರುವ ಪ್ರದೇಶಗಳಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿರುವುದನ್ನು ಈ ಅಂಕಿಅಂಶಗಳು ಸ್ಪಷ್ಟಪಡಿಸಿವೆ.

ಈ ಅಧ್ಯಯನದಲ್ಲಿನ ಅತ್ಯಂತ ಆತಂಕಕಾರಿ ವಿಷಯವೆಂದರೆ, ಕೀಟನಾಶಕಗಳ ಪರಿಣಾಮ ಎಷ್ಟು ಬೇಗನೆ ಶುರುವಾಗಬಹುದು ಎಂಬುದು. ಕ್ಯಾನ್ಸರ್ ಕಾಣಿಸಿಕೊಳ್ಳುವ ಬಹಳ ಸಮಯಕ್ಕೂ ಮುಂಚೆಯೇ ಈ ರಾಸಾಯನಿಕಗಳು ದೇಹದ ಸಾಮಾನ್ಯ ಜೀವಕೋಶಗಳ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ನಿಜ ಜೀವನದ ಪರಿಸ್ಥಿತಿಗಳಲ್ಲಿ ಕೀಟನಾಶಕಗಳ ಬಳಕೆಯು ಕ್ಯಾನ್ಸರ್ ಅಪಾಯವನ್ನು ಗಣನೀಯವಾಗಿ ಹೆಚ್ಚಿಸಬಹುದು ಎಂದು ಈ ಅಧ್ಯಯನವು ಒತ್ತಿ ಹೇಳಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅತ್ಯಂತ ವೇಗದ ಪ್ರಾಣಿ ಚೀತಾ ಜೀವಿತಾವಧಿಯ ಶೇಕಡಾ 90ರಷ್ಟು ಕಾಲ ವಿಶ್ರಾಂತಿಯಲ್ಲೇ ಕಳೆಯುವುದೇಕೆ?
ಮುದ್ದೇನಹಳ್ಳಿಯ ಉಚಿತ ವೈದ್ಯಕೀಯ ಕಾಲೇಜಿಗೆ ರಾಷ್ಟ್ರೀಯ ಗುಣಮಟ್ಟದ ಗರಿ; ಶ್ರೀ ಮಧುಸೂದನ ಸಾಯಿ ಸಂಸ್ಥೆಗೆ NABH ಮಾನ್ಯತೆ