
ಸ್ಪರ್ಮ್ ಕೌಂಟ್ ಮತ್ತು ಟೆಸ್ಟೋಸ್ಟೆರಾನ್ ಹೆಚ್ಚಿಸೋಕೆ ಮತ್ತು ಫರ್ಟಿಲಿಟಿ ಸುಧಾರಿಸಿಕೊಳ್ಳೋಕೆ ಈಗ ಕೆಲವರು ವೈದ್ಯರ ಬಳಿ ಹೋಗೋದಕ್ಕಿಂತ ಸೋಷಿಯಲ್ ಮೀಡಿಯಾ ಮೊರೆ ಹೋಗ್ತಿದ್ದಾರೆ. ಇನ್ಸ್ಟಾಗ್ರಾಂ ಮತ್ತು ಯೂಟ್ಯೂಬ್ನಲ್ಲಿ ವೈರಲ್ ಆಗಿರುವ ಈ ಹೊಸ ಟ್ರೆಂಡ್ಗೆ ಫರ್ಟಿಲಿಟಿಮ್ಯಾಕ್ಸಿಂಗ್ (Fertilitymaxxing) ಎಂದು ಕರೆಯಲಾಗ್ತಿದೆ. ಈ ಟ್ರೆಂಡ್ ನಿಜಕ್ಕೂ ಪ್ರಯೋಜನಕಾರಿಯೇ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಫರ್ಟಿಲಿಟಿಮ್ಯಾಕ್ಸಿಂಗ್ ಅಂದ್ರೆ ಆಹಾರ, ವ್ಯಾಯಾಮ, ಸಪ್ಲಿಮೆಂಟ್ಸ್ ಮತ್ತು ದೈನಂದಿನ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಪ್ರಜನನ ಆರೋಗ್ಯವನ್ನು ಸುಧಾರಿಸಲು ಪ್ರಯತ್ನಿಸುವುದು. ಕೆಲವರು ಆನ್ಲೈನ್ನಲ್ಲಿ ಕಂಡುಬರುವ ಸಲಹೆಗಳನ್ನು ಅನುಸರಿಸಿ ಹಲವು ವಿಟಮಿನ್, ಮಿನರಲ್ ಮತ್ತು ಹರ್ಬಲ್ ಸಪ್ಲಿಮೆಂಟ್ಗಳನ್ನು ಒಂದೇ ಸಮಯದಲ್ಲಿ ತೆಗೆದುಕೊಳ್ಳುತ್ತಿದ್ದಾರೆ.
ತಜ್ಞರ ಪ್ರಕಾರ, ನ್ಯಾಚುರಲ್ ಅಥವಾ ಹರ್ಬಲ್ ಎಂದ ಮಾತ್ರಕ್ಕೆ ಎಲ್ಲವೂ ಸುರಕ್ಷಿತ ಎಂದು ಭಾವಿಸೋದು ತಪ್ಪು. ಅಗತ್ಯಕ್ಕಿಂತ ಹೆಚ್ಚು ಸಪ್ಲಿಮೆಂಟ್ಗಳನ್ನು ಸೇವಿಸುವುದರಿಂದ ಲಿವರ್ ಮತ್ತು ಕಿಡ್ನಿಗಳ ಮೇಲೆ ಒತ್ತಡ ಉಂಟಾಗಬಹುದು. ಇನ್ನೂ ದೊಡ್ಡ ಅಪಾಯವೆಂದರೆ ಟೆಸ್ಟೋಸ್ಟೆರಾನ್ ಅನ್ನು ಸ್ವತಃ ತೆಗೆದುಕೊಳ್ಳುವುದು. ಟೆಸ್ಟೋಸ್ಟೆರಾನ್ ಹೆಚ್ಚಾದರೆ ಸ್ಪರ್ಮ್ ಕೌಂಟ್ ಕೂಡ ಹೆಚ್ಚುತ್ತದೆ ಎಂಬುದು ತಪ್ಪು ಕಲ್ಪನೆ. ಹೊರಗಿನಿಂದ ಟೆಸ್ಟೋಸ್ಟೆರಾನ್ ತೆಗೆದುಕೊಂಡರೆ ದೇಹದ ಸ್ವಾಭಾವಿಕ ಹಾರ್ಮೋನ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಇದರಿಂದ ಸ್ಪರ್ಮ್ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆಯೂ ಇದೆ.
ಮಹಿಳೆಯರಿಗೆ ಹಾನಿ
ವರದಿ ಪ್ರಕಾರ, ಮಹಿಳೆಯರೂ ಈ ಟ್ರೆಂಡ್ನಿಂದ ಪ್ರಭಾವಿತರಾಗ್ತಿದ್ದಾರೆ. ಫರ್ಟಿಲಿಟಿ ಹೆಚ್ಚಿಸಿಕೊಳ್ಳುವ ಹೆಸರಿನಲ್ಲಿ ಅತಿಯಾದ ಡಯಟ್ ಅಥವಾ ವ್ಯಾಯಾಮ ಮಾಡಿದ್ರೆ ದೇಹಕ್ಕೆ ಬೇಕಾದ ಶಕ್ತಿ ಕಡಿಮೆಯಾಗ್ಬಹುದು. ಇದರಿಂದ ಪೀರಿಯಡ್ಸ್ ಅನಿಯಮಿತವಾಗುವ ಸಾಧ್ಯತೆ ಇದೆ.
ಫರ್ಟಿಲಿಟಿ ಸುಧಾರಿಸಲು ಏನು ಮಾಡ್ಬೇಕು?
ತಜ್ಞರ ಪ್ರಕಾರ, ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ, ಆರೋಗ್ಯಕರ ತೂಕ ಮತ್ತು ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರುವುದು ಮುಖ್ಯ. ಬಹಳ ದಿನಗಳಿಂದ ಗರ್ಭಧಾರಣೆಗೆ ತೊಂದರೆ ಎದುರಾಗುತ್ತಿದ್ದರೆ, ಸೋಷಿಯಲ್ ಮೀಡಿಯಾ ಹ್ಯಾಕ್ಸ್ಗಳನ್ನು ನಂಬುವುದಕ್ಕಿಂತ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಸುರಕ್ಷಿತ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.