16 ವರ್ಷ, 275 ಕೆಜಿ! ಸ್ಪೆಷಲ್ ಸರ್ಜರಿ ಮಾಡಿ ಬಾಲಕನಿಗೆ ಮರುಜೀವ ಕೊಟ್ಟ ದೆಹಲಿ ವೈದ್ಯರು

Published : Aug 18, 2026, 04:56 PM IST
bariatric surgery

ಸಾರಾಂಶ

ದೆಹಲಿಯ ಸಿರ್ ಗಂಗಾರಾಮ್ ಆಸ್ಪತ್ರೆಯ ವೈದ್ಯರು ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯೊಂದನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಬರೋಬ್ಬರಿ 275 ಕೆಜಿ ತೂಕವಿದ್ದ 16 ವರ್ಷದ ಬಾಲಕನಿಗೆ 'ಬಾರಿಯಾಟ್ರಿಕ್ ಸರ್ಜರಿ' ಮಾಡುವ ಮೂಲಕ ಆತನ ಜೀವನದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

ನವದೆಹಲಿ: ದೆಹಲಿಯ ಸಿರ್ ಗಂಗಾರಾಮ್ ಆಸ್ಪತ್ರೆಯ ವೈದ್ಯರು ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯೊಂದನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಬರೋಬ್ಬರಿ 275 ಕೆಜಿ ತೂಕವಿದ್ದ 16 ವರ್ಷದ ಬಾಲಕನಿಗೆ 'ಬಾರಿಯಾಟ್ರಿಕ್ ಸರ್ಜರಿ' ಮಾಡುವ ಮೂಲಕ ಆತನ ಜೀವನದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

ಈ ಬಾಲಕನ ಸ್ಥಿತಿ ಎಷ್ಟೊಂದು ಗಂಭೀರವಾಗಿತ್ತೆಂದರೆ.. ಅತಿಯಾದ ಬೊಜ್ಜಿನ ಕಾರಣದಿಂದಾಗಿ ಆತನಿಗೆ ಸಾಮಾನ್ಯ ಕಾರಿನೊಳಗೆ ಕೂರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಆತನನ್ನು ಆಸ್ಪತ್ರೆಗೆ ಕರೆತರಲು 'ಮೆಟಾಡೋರ್' ವಾಹನ ಬಳಸಲಾಗಿತ್ತು. ಆಸ್ಪತ್ರೆಗೆ ದಾಖಲಾಗುವಾಗ ಬಾಲಕ ತೀವ್ರ ಉಸಿರಾಟದ ತೊಂದರೆ ಸ್ಲೀಪ್ ಅಪ್ನಿಯಾ (ನಿದ್ರೆಯಲ್ಲಿ ಉಸಿರು ಕಟ್ಟುವಿಕೆ) ಮತ್ತು ಗಂಭೀರ ಚರ್ಮದ ಸೋಂಕಿನಿಂದ ಬಳಲುತ್ತಿದ್ದ.

ವೈದ್ಯಲೋಕಕ್ಕೆ ಇದೊಂದು ಸವಾಲು

ಬಾಲಕನ ಬಿಎಂಐ (BMI) ಸುಮಾರು 100ರಷ್ಟಿತ್ತು. ಇಷ್ಟು ಸಣ್ಣ ವಯಸ್ಸಿನಲ್ಲಿ ಇಷ್ಟು ದೊಡ್ಡ ಪ್ರಮಾಣದ ತೂಕವಿರುವುದು ವೈದ್ಯರಿಗೂ ಆತಂಕ ತಂದಿತ್ತು. ಶಸ್ತ್ರಚಿಕಿತ್ಸೆಗೂ ಮುನ್ನ ಆತನನ್ನು ಸುಮಾರು ಎರಡು ವಾರಗಳ ಕಾಲ ಮಕ್ಕಳ ತೀವ್ರ ನಿಗಾ ಘಟಕದಲ್ಲಿ (PICU) ಇರಿಸಿ ಚಿಕಿತ್ಸೆ ನೀಡಲಾಯಿತು. ಸುಮಾರು 20 ತಜ್ಞ ವೈದ್ಯರ ತಂಡ (ಹೃದ್ರೋಗ ತಜ್ಞರು, ಶ್ವಾಸಕೋಶ ತಜ್ಞರು, ಅರಿವಳಿಕೆ ತಜ್ಞರು ಸೇರಿದಂತೆ) ಈ ಶಸ್ತ್ರಚಿಕಿತ್ಸೆಯ ಸಾಧಕ-ಬಾಧಕಗಳನ್ನು ಚರ್ಚಿಸಿ ಅಂತಿಮವಾಗಿ 'ಲ್ಯಾಪ್ರೊಸ್ಕೋಪಿಕ್ ಸ್ಲೀವ್ ಗ್ಯಾಸ್ಟ್ರೆಕ್ಟಮಿ' ಮಾಡಲು ನಿರ್ಧರಿಸಿತು.

2 ತಿಂಗಳಲ್ಲಿ 50 ಕೆಜಿ ಇಳಿಕೆ!

ಡಾ. ದಕ್ಷ್ ಸೇಥಿ ಮತ್ತು ಡಾ. ಸುಧೀರ್ ಕಲ್ಹಾನ್ ನೇತೃತ್ವದ ತಂಡವು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದೆ. ಶಸ್ತ್ರಚಿಕಿತ್ಸೆ ನಡೆದ ಕೇವಲ ಮೂರೇ ದಿನಗಳಲ್ಲಿ ಬಾಲಕ ಗುಣಮುಖನಾಗಿ ಮನೆಗೆ ಮರಳಿದ್ದ. ಪ್ರಸ್ತುತ, ಶಸ್ತ್ರಚಿಕಿತ್ಸೆ ನಡೆದು ಎರಡು ತಿಂಗಳು ಕಳೆದಿದ್ದು, ಬಾಲಕನ ತೂಕ 275 ಕೆಜಿಯಿಂದ 223 ಕೆಜಿಗೆ ಇಳಿಕೆಯಾಗಿದೆ. ಅಂದರೆ ಕೇವಲ 60 ದಿನಗಳಲ್ಲಿ ಬಾಲಕ ಸುಮಾರು 50 ಕೆಜಿ ತೂಕ ಇಳಿಸಿಕೊಂಡಿದ್ದಾನೆ.

ಇದು ಕೇವಲ ತೂಕ ಇಳಿಸುವ ಉದ್ದೇಶದ ಶಸ್ತ್ರಚಿಕಿತ್ಸೆಯಲ್ಲ. ಬಾಲಕನ ಆರೋಗ್ಯವನ್ನು ಸುಧಾರಿಸಿ, ಆತ ಸಾಮಾನ್ಯ ಜೀವನ ನಡೆಸುವಂತೆ ಮಾಡುವುದು ನಮ್ಮ ಗುರಿಯಾಗಿತ್ತು. ಬಾಲಕನ ಆರೋಗ್ಯದಲ್ಲಿ ಈಗ ಉತ್ತಮ ಚೇತರಿಕೆ ಕಂಡುಬರುತ್ತಿದೆ ಎಂದು ಶಸ್ತ್ರಚಿಕಿತ್ಸಕ ಡಾ. ದಕ್ಷ್ ಸೇಥಿ ತಿಳಿಸಿದ್ದಾರೆ. ಪ್ರಸ್ತುತ ಬಾಲಕ ವೈದ್ಯರ ನಿಗಾ ಹಾಗೂ ಸಮರ್ಪಕ ಆಹಾರ ಕ್ರಮದ ಮಾರ್ಗದರ್ಶನದಲ್ಲಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ತೂಕ ಇಳಿಸಿಕೊಳ್ಳುವ ಭರವಸೆ ಹೊಂದಿದ್ದಾನೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

10000 Steps: 4 ಭಾಗಗಳಾಗಿ ವಿಂಗಡಿಸಿ 10 ಸಾವಿರ ಹೆಜ್ಜೆ ನಡೆದ್ರೆ 10 ಆರೋಗ್ಯಕರ ಲಾಭಗಳು
ನೀರು, ಸೋಡಾ, ಐಸ್ ಕ್ಯೂಬ್ಸ್.. ಡ್ರಿಂಕ್ಸ್ ಜೊತೆ ಯಾವ್ದು ಮಿಕ್ಸ್ ಮಾಡಬೇಕು? ಇಲ್ಲಿದೆ ತಜ್ಞರ ಉತ್ತರ