Gadag; ಗೋಮೂತ್ರ, ಪಂಚಗವ್ಯ ಮೂಲಕ ಕ್ಯಾನ್ಸರ್ ಗೆ ಚಿಕಿತ್ಸೆ

By Suvarna News  |  First Published Jun 23, 2022, 12:23 PM IST

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ನಾಗಾವಿ ಕ್ಯಾಂಪಸ್ ನಲ್ಲಿ ಪಂಚಗವ್ಯ ಮತ್ತು ಸಾಂಪ್ರದಾತಿಕ ಪದ್ಧತಿ ಆಧಾರಿತ ತಪಾಸಣೆ, ಚಿಕಿತ್ಸಾ ಉಚಿತ ಶಿಬಿರ ಏರ್ಪಡಿಸಲಾಗಿತ್ತು. 
 


ಗದಗ (ಜೂನ್ 23) : ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ನಾಗಾವಿ ಕ್ಯಾಂಪಸ್ ನಲ್ಲಿ ಪಂಚಗವ್ಯ ಮತ್ತು ಸಾಂಪ್ರದಾತಿಕ ಪದ್ಧತಿ ಆಧಾರಿತ ತಪಾಸಣೆ, ಚಿಕಿತ್ಸಾ ಉಚಿತ ಶಿಬಿರ ಏರ್ಪಡಿಸಲಾಗಿತ್ತು. ಪಂಚಗವ್ಯದ ಮೂಲಕ ಮಂಡಿ ನೋವು, ಅಸ್ತಮಾ, ಸಕ್ಕರೆ ಕಾಯಿಲೆ, ಥೈರಾಯ್ಡ್, ಮುಟ್ಟಿನ ಸಮಸ್ಯೆ, ಸ್ತನ ಕ್ಯಾನ್ಸರ್ ಸಮಸ್ಯೆಗಳಿಗೆ ಉಚಿತ ತಪಾಸಣೆ, ಪರಿಹಾರ ಸೂಚಿಸಲು ಶಿಬಿರ ನಡೆಸಲಾಗಿದೆ. 

ವಿಶ್ವವಿದ್ಯಾಲಯದ ರೆಡ್ ಕ್ರಾಸ್ ಕೋಶ, ಆಯುಷ್ ಇಲಾಖೆ, ಜಿಮ್ಸ್ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿವಿ ಅಂಗಳದಲ್ಲಿನ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರದಲ್ಲಿ ವಿನೂತನ ಆರೋಗ್ಯ ಶಿಬಿರ ನೆರವೇರಿತು.. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಇಬ್ಬರು ಕ್ಯಾನ್ಸರ್ ರೋಗಿಗಳು ಸೇರಿದಂತೆ ಸುಮಾರು 150 ಜನರು ಶಿಬಿರದಲ್ಲಿ ಚಿಕಿತ್ಸೆ, ಹಾಗೂ ಸಲಹೆ ಪಡೆದ್ರು.

Tap to resize

Latest Videos

undefined

ಪಂಚಗವ್ಯ, ಗೋ ಮೂತ್ರ ಮೂಲಕ ಚಿಕಿತ್ಸೆ: ದೇಸಿ ದೈದ್ಯ ಪದ್ಧತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶಿಬಿರ ಆಯೋಜನೆ ಮಾಡ್ಲಾಯ್ತು.. ಕ್ಯಾನ್ಸರ್ ಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಆಯುರ್ವೇದದಲ್ಲಿ ಅವಕಾಶ ಇದೆ.. ಪಂಚಗವ್ಯ ಬಳಸಿ ನೀಡುವ ಚಿಕಿತ್ಸೆಯ ದಾಖಲಿಕರಣ ಹಾಗೂ ರಿಚರ್ಚ್ ಗೆ ಅನುಕೂಲವಾಗಲು ಶಿಬಿರ ನಡೆಸಲಾಗಿದೆ. 

ಮೋದಿ ಭೇಟಿ ಖರ್ಚಿನಲ್ಲಿ ಒಂದು ಗ್ರಾಮ ಉದ್ಧಾರವಾಗ್ತಿತ್ತು: ಕುಮಾರಸ್ವಾಮಿ

ಯೋಗ, ಪಂಚಗವ್ಯ ಔಷಧಿ ಸೇರಿದಂತೆ 11 ಹಂತದಲ್ಲಿ ಚಿಕಿತ್ಸೆ ನೀಡ್ಲಾಗುತ್ತೆ.. ಪ್ರತಿ ಹಂತವನ್ನ ಪಾಲಿಸಿದಲ್ಲಿ ರೋಗ ಮುಕ್ತರಾಗ್ಬಹುದು ಅಂತಾ ಶಿಬಿರದ ವೈದ್ಯರು ವಿಶ್ವಾಸ ವ್ಯಕ್ತ ಪಡೆಸ್ತಾರೆ. ಚಿಕಿತ್ಸೆಯ ಉಸ್ತಯವಾರಿಯನ್ನ ಡಾ. ಡಿಪಿ ರಮೇಶ್ ನೋಡಿಕೊಳ್ತಿದಾರೆ.. ಡಾ. ರಮೇಶ್ ಅವರ 25 ವರ್ಷಗಳ ಅನುಭವದಲ್ಲಿ 2 ಸಾವಿರಕ್ಕೂ ಹೆಚ್ಚು ಜನರಿಗೆ ಆಯುರ್ವೇದ ಮೂಲಕ ಕ್ಯಾನ್ಸರ್ ಗುಣ ಪಡೆಸಿದಾರಂತೆ.. ದೇಸಿ ವೈದ್ಯ ಪದ್ಧತಿಯಿಂದ ದೀರ್ಘ ಕಾಲದ ಹಾಗೂ ಮಾರಣಾಂತಿಕ ರೋಗಗಳನ್ನೂ ಗುಣಪಡೆಸಬಹುದಾಗಿದೆ.. ಗೋ ಮೂತ್ರ, ಪಂಚಗವ್ಯಗಳ ಜೊತೆ ಹದವಾದ ಔಷಧಿ ಪ್ರಮಾಣ ರೋಗಗಳ ವಿರುದ್ಧ ರಾಮಬಾಣವಾಗಲಿದೆ.

ಪ್ರತಿ ತಿಂಗಳೂ ಶಿಬಿರ ನಡೆಸಲು ನಿರ್ಧರಿಸಲಾಗಿದೆ‌‌‌‌.  ಮುಂಬರುವ ದಿನಗಳಲ್ಲಿ ಯೂನಿವರ್ಸಿಟಿಯಲ್ಲೇ ಚಿಕಿತ್ಸೆಗೆ ಬೇಕಾಗುವ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು ಅಂತಾ ವಿಶ್ವ ವಿದ್ಯಾಲಯದ ವೈದ್ಯಾಧಿಕಾರಿ ಡಾ. ಗೂಳಪ್ಪ ತಿಳಿಸಿದ್ರು.. ಆಯುಷ್ ವೈದ್ಯ ಪದ್ಧತಿಯನ್ನ ಮುಖ್ಯವಾಗಿನಿಗೆ ತರಬೇಕಿದೆ. ಶಿಬಿರಗಳ ಮೂಲಕ ದೇಸಿ ವೈದ್ಯಪದ್ಧತಿಯನ್ನ ಜನರ ಬಳಿ ತರಲು ಪ್ರಯತ್ನಿಸಲಾಗಿದೆ ಅಂತಾ ಅವ್ರು ತಿಳಿಸಿದ್ರು.. 

ಆಯುರ್ವೇದ ಅಂದ್ರೆ: ಪಂಚಗವ್ಯದ ಆಧಾರದಲ್ಲಿ ಆಯುರ್ವೇದ ನಿಂತಿದೆ. ಹಾಲು, ತುಪ್ಪ, ಮೊಸರು, ಗೂ ಮೂತ್ರ, ಗೋಮಯ ಎಂಬ ಪಂಚಗೌವ್ಯಗಳ ಮೂಲಕ ಚಿಕಿತ್ಸೆ ನಡೆಸಲಾಗುತ್ತೆ‌. ದೇಸಿ ತಳಿಯ ಗೋವಿನ ಮೂತ್ರದ ಜೊತೆಗೆ ಸರಿಯಾದ ಪ್ರಮಾಣದ ದ್ರವ್ಯ ಸೇರಿಸಿ ಔಷಧಿ ತಯಾರಾಗುತ್ತೆ‌. ಪಂಚಗವ್ಯದ ಔಷಧಿ ಬಳಕೆಯಿಂದ ನೂರು ಪ್ರತಿಶತ ರೋಗ ಗುಣಮುಖವಾಗಿವೆ.

‘ಸಮಾಜ ಕಲ್ಯಾಣ’ದಲ್ಲಿ ಅಗ್ನಿವೀರರಿಗೆ ಮೀಸಲಾತಿ?: ಸಚಿವ ಕೋಟ ಹೇಳಿದ್ದಿಷ್ಟು

ಪಾರಂಪರಿಕ ವ್ಯದ್ಯರಿಂದಲೂ ಚಿಕಿತ್ಸೆ: ನಾಟಿ ವ್ಯದ್ಯರನ್ನ ಗುರುತಿಸಿ ಅವರಿಂದ ಚಿಕಿತ್ಸೆ ಶಿಬಿರ ನಡೆಸಲು ಯೋಜನೆ ರೂಪಿಸಲಾಗಿದೆ.. ವಿಶ್ವವಿದ್ಯಾಲಯದ ಅಂಗಳದಲ್ಲಿ ಔಷಧಿ ವನ ಸಿದ್ಧ ಮಾಡಿದ್ದು 150 ಕ್ಕೂ ಹೆಚ್ಚು ಬಗೆಯ ಔಷಧಿ ಸಸ್ಯ ಬೆಳೆಸಲಾಗಿದೆ.. ದೇಸಿಯ ಪಾರಂಪರಿಕ ವೈದ್ಯರನ್ನೂ ಮುನ್ನೆಲೆಗೆ ತರೋದಕ್ಕೆ ಈ ಯೂಜನೆ ಮಾಡ್ಕೊಂಡಿದಾರೆ.. 

ಸಾರ್ವಜನಿಕ ಆರೋಗ್ಯ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಮರ್ಗ ಮಾಹಿತಿ ನೀಡೋದಕ್ಕೆ ಶಿಬಿರ ಆಯೋಜಿಸಲಾಗಿದೆ.. ಆಧುನಿಕ ಹಾಗೂ ಪಾರಂಪರಿಕ ದೈದ್ಯ ಪದ್ಧತಿ ಬಗೆಯ ಕಲಿಕೆ ಹಾಗೂ ಅರಿವು ಮೂಡಿಸಲು ಶಿಬಿರ ನಡೆಸಲಾಗಿದೆ ಅಂತಾ ವಿವಿ ಕುಲಪತಿಗಳಾದ ವಿಷ್ಣುಕಾಂತ ಚಟಪಲ್ಲಿ ತಿಳಿದ್ರು. 

ದೇಸಿ ಚಿಕಿತ್ಸಾ ಪದ್ಧತಿ ಮರೆಯಾಗ್ತಿರೋ ಸಂಧರ್ಭದಲ್ಲಿ ವಿಶ್ವ ವಿದ್ಯಾಲಯ ಹಮ್ಮಿ ಕೊಂಡಿರುವ ಪಂಚಗವ್ಯ ಚಿಕಿತ್ಸಾ ಶಿಬಿರ ಜನರ ಗಮನ ಸೆಳೀತಿದೆ.. ಅದ್ರಲ್ಲೂ ಮಾರಣಾಂತಿಕ ಕಾಯಿಲೆಗೆ ಪಂಚಗವ್ಯ ಮೂಲಕ ಚಿಕಿತ್ಸೆ ನೀಡ್ತಿದೆ.. ಈ ಮೂಲಕ ನಿರ್ಲಕ್ಷ್ಯಕ್ಕೊಳಗಾದ ವೈದ್ಯ ಪದ್ಧತಿಯನ್ನ ಜನರಿಗೆ ಪರಿಚಯಿಸುವ ಕೆಲಸವನ್ನ ವಿಶ್ವವಿದ್ಯಾಲಯ ಮಾಡ್ತಿದೆ. 
 

click me!