ಮಾತು ಬಲ್ಲವನಿಗೆ ಜಗಳವಿಲ್ಲ ಅನ್ನೋ ಮಾತು ನೂರಕ್ಕೆ ನೂರು ಸತ್ಯ

Published : Apr 27, 2022, 08:03 PM IST
ಮಾತು ಬಲ್ಲವನಿಗೆ ಜಗಳವಿಲ್ಲ ಅನ್ನೋ ಮಾತು ನೂರಕ್ಕೆ ನೂರು ಸತ್ಯ

ಸಾರಾಂಶ

ನಾಲ್ಕು ಜನ ಸೇರಿದಾಗ ಕೈಕಾಲು ನಡುಗುತ್ತದೆ. ಮಾತನಾಡುವಾಗ ಬೆವರುತ್ತದೆ. ಹೇಳಬೇಕಾದ್ದನ್ನು ಹೇಳಲು ಸಾಧ್ಯವಾಗುವುದಿಲ್ಲ. ಅದನ್ನು ಸಾಮಾಜಿಕ ಅನಾರೋಗ್ಯ ಎನ್ನಬಹುದು. ಸಮಾಜದ ಜೊತೆ ಹೊಂದಿಕೊಳ್ಳಲು ನಿರಂತರ ಪ್ರಯತ್ನ ಮುಖ್ಯ. ಒಮ್ಮೆ ಮಾತು ಕಲಿತ್ರೆ ಎಲ್ಲವನ್ನೂ ಜಯಿಸಬಹುದು.  

ಮನುಷ್ಯ (Human) ಸಾಮಾಜಿಕ ಪ್ರಾಣಿ (Animal) . ತನ್ನನ್ನು ಪ್ರೀತಿ (Love) ಸುವ ಹಾಗೂ ತಾನು ಪ್ರೀತಿಸುವ ವ್ಯಕ್ತಿಗಳ ಜೊತೆ ಸದಾ ಇರಲು ಬಯಸ್ತಾನೆ. ಸ್ನೇಹಿತರು (Friends) , ಕುಟುಂಬಸ್ಥರು, ಕಚೇರಿ (Office) ಸಹೋದ್ಯೋಗಿಗಳು, ಮನೆ ಸುತ್ತಮುತ್ತಲಿರುವ ಜನರ ಜೊತೆ ಬೆರೆಯಲು ಬಯಸ್ತಾರೆ. ಸಂಬಂಧದಲ್ಲಿರುವ ಜನರೊಂದಿಗೆ ಸಂವಹನ (Communication) ನಡೆಸುವುದು, ಅವರ ನಡುವೆ ಬದುಕುವುದು ಹಾಗೂ ಅವರ ಜೊತೆ ಹೊಂದಿಕೊಳ್ಳುವುದನ್ನು ಸಾಮಾಜಿಕ ಆರೋಗ್ಯ ಎನ್ನಲಾಗುತ್ತದೆ. ಇದನ್ನು ಸಾಮಾಜಿಕ ಸಂಬಂಧ ಎಂದೂ ಕರೆಯಲಾಗುತ್ತದೆ. ನಾವು ಸಮಾಜದಲ್ಲಿ ಜನರ ಜೊತೆ ಹೇಗೆ ಪ್ರತಿಕ್ರಿಯೆ ನೀಡ್ತೇವೆ, ಹೇಗೆ ಹೊಂದಿಕೊಳ್ತೇವೆ ಎನ್ನುವುದು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

ಕೆಲ ಜನರು ಸಮಾಜದ ಜೊತೆ ಬೆರೆಯಲು ತುಂಬಾ ಕಷ್ಟಪಡುತ್ತಾರೆ. ಕಳಪೆ ಸಾಮಾಜಿಕ ಆರೋಗ್ಯವು ತಲೆನೋವು, ಒತ್ತಡ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ಕೆಲವು ಗಂಭೀರವಾದ ಆರೋಗ್ಯ ಸಂಬಂಧಿತ ಸಮಸ್ಯೆಗಳು ಸಹ ಕಳಪೆ ಸಾಮಾಜಿಕ ಆರೋಗ್ಯಕ್ಕೆ ಕಾರಣವಾಗಿವೆ.  ಖಿನ್ನತೆ, ಆತಂಕ, ತಲೆನೋವು, ಹೃದಯರೋಗ, ಹೆಚ್ಚಾದ ಅಥವಾ ಕಡಿಮೆಯಾದ ಬಿಪಿ, ಹಠಾತ್ ತೂಕ ಹೆಚ್ಚಾಗುವುದು ಅಥವಾ ತೂಕ ಕಡಿಮೆಯಾಗುವುದು ಕೂಡ ಸಮಾಜಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಹಾರ ಸೇವನೆಯಲ್ಲಿ ಅಸ್ವಸ್ಥತೆ, ಹಾರ್ಮೋನಿನ ಅಸಮತೋಲನ ಮತ್ತು ಒತ್ತಡವೂ ಇದಕ್ಕೆ ಕಾರಣವಾಗುತ್ತದೆ. 

ಮನುಷ್ಯನಲ್ಲಿ ಕಾಡುವ ಈ ಸಮಸ್ಯೆ ದೀರ್ಘಕಾಲವಿದ್ದರೆ ಅದು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರಿಗೂ ಆರೋಗ್ಯಕರ ಸಾಮಾಜಿಕ ಆರೋಗ್ಯ ಬಹಳ ಮುಖ್ಯ. ಯಾವಾಗಲೂ ತಮ್ಮ ಸಾಮಾಜಿಕ ಆರೋಗ್ಯವನ್ನು ಸುಧಾರಿಸಲು ಪ್ರಯತ್ನಿಸಬೇಕು. ಇಂದು ಸಾಮಾಜಿಕ ಆರೋಗ್ಯ ಸುಧಾರಿಸಲು ಅನೇಕ ಮಾರ್ಗಗಳಿವೆ. 

ಸಾಮಾಜಿಕ ಆರೋಗ್ಯ ಸುಧಾರಣೆ ಮಾರ್ಗ : 
ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿ :
ಪ್ರತಿಯೊಬ್ಬರೂ ತಮ್ಮ ಸಾಮಾಜಿಕ ಸಂಪರ್ಕಗಳನ್ನು ಸುಧಾರಿಸಲು, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು.  ಎಲ್ಲರೊಂದಿಗೆ ಸಂವಹನ ನಡೆಸಲು ಪ್ರಯತ್ನಿಸಬೇಕು. ಒಟ್ಟಿಗೆ ಸೇರುವುದು, ನೃತ್ಯ, ಚಿತ್ರಕಲೆ ಮತ್ತು ಕೆಲ ಕಾರ್ಯಾಗಾರದಲ್ಲಿ ಭಾಗವಹಿಸಬೇಕು. ಉದ್ಯಾನವನಕ್ಕೆ ಹೋಗುವುದು, ಸಾಮಾಜಿಕ ಚರ್ಚೆಗಳಲ್ಲಿ ಭಾಗವಹಿಸುವುದು ಅವಶ್ಯಕ. ಹೀಗೆ ಮಾಡಿದ್ರೆ  ಸಾಮಾಜಿಕ ಆರೋಗ್ಯ ಸುಧಾರಿಸುತ್ತದೆ.

ಮಾವಿನ ಹಣ್ಣಲ್ಲ, ಬೀಜದ ಪ್ರಯೋಜನ ತಿಳಿದ್ರೆ ಅಚ್ಚರಿಯಾಗೋದು ಖಂಡಿತಾ

ಆರೋಗ್ಯಕರ ಮತ್ತು ಸಮತೋಲನ ಜೀವನಶೈಲಿ : ಧೂಮಪಾನ, ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆ ನಿಮ್ಮ ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಅಭ್ಯಾಸ, ನರಮಂಡಲದಿಂದ ಸ್ನಾಯುಗಳು ಮತ್ತು ಶ್ವಾಸಕೋಶಗಳು ಮತ್ತು ಯಕೃತ್ತಿನಂತಹ ದೇಹದ ಅನೇಕ ಅಂಗಕ್ಕೆ ಹಾನಿಯುಂಟು ಮಾಡುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಈ ಅಭ್ಯಾಸವನ್ನು ಮುಂದುವರಿಸಬೇಡಿ. ಕೆಟ್ಟ ಚಟವನ್ನು ಬಿಟ್ಟು, ವ್ಯಾಯಾಮ ಅಥವಾ ಯೋಗ, ಉತ್ತಮ ನಿದ್ರೆ, ಆರೋಗ್ಯಕರ ಆಹಾರ, ಉತ್ತಮ ಜೀವನಶೈಲಿಯನ್ನು ಪಾಲನೆ ಮಾಡಿ. ಇದು ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಮೆಂತೆ, ಅರಿಶಿನ, ವಿಟಮಿನ್ ಡಿ ಅತೀಯಾದರೆ ಆರೋಗ್ಯಕ್ಕೆ ಕುತ್ತು

ಒಳ್ಳೆಯ ಸಂವಹನ ಕೌಶಲ್ಯ : ಸಾಮಾಜಿಕ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು.  ನಿಮ್ಮ ಆಲೋಚನೆಗಳನ್ನು ಪದಗಳ ಮೂಲಕ ಹೇಳುವುದನ್ನು ನೀವು ಕಲಿಯಬೇಕು. ಸರಿಯಾದ ಪದ ಬಳಕೆ ಮಾಡ್ತಾ ಮಾತನಾಡ್ತಿದ್ದರೆ ಅಭ್ಯಾಸವಾಗುತ್ತದೆ. ಅನೇಕ ಪುಸ್ತಕಗಳನ್ನು ಓದಬೇಕು. ಹಾಗೆ ಓದಿದ ವಿಷ್ಯವನ್ನು ಹೆಚ್ಚು ಹೆಚ್ಚು ಜನರಿಗೆ ಹೇಳಬೇಕು. ಓದಿನ ಮೂಲಕ ಹೊಸ ಪದಗಳ ಪರಿಚಯವಾಗುತ್ತದೆ. ಈ ಪದಗಳನ್ನು ಪದೇ ಪದೇ ಬಳಕೆ ಮಾಡಿದ್ರೆ ಸಂವಹನ ಕೌಶಲ್ಯ ವೃದ್ಧಿಯಾಗುತ್ತದೆ. ನಕಾರಾತ್ಮಕ ಆಲೋಚನೆ, ಚಿಂತೆ, ಕೆಟ್ಟ ಪದಬಳಕೆ ಸಂವಹನ ಕೌಶಲ್ಯವನ್ನು ಹಾಳು ಮಾಡುತ್ತದೆ ಎಂಬುದು ನಿಮಗೆ ನೆನಪಿರಲಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!